ಎಕ್ಸ್3 3.0-ಲೀಟರ್ ಡೀಸೆಲ್ ಕಾರಿನ ಉತ್ಪಾದನೆ ನಿಲ್ಲಿಸಿದ ಬಿಎಂಡಬ್ಲ್ಯೂ

ಬಿಎಂಡಬ್ಲ್ಯೂ ಇಂಡಿಯಾ ತನ್ನ ಎಕ್ಸ್3 ಮಾದರಿಯಲ್ಲಿ ಡೀಸೆಲ್ 2.0 ಲೀಟರ್ ಎಸ್‌ಯುವಿ ಕಾರನ್ನು ಮಾತ್ರ ಮಾರಾಟ ಮಾಡಲಿದೆ

By Girish

ಐಷಾರಾಮಿ ಕಾರು ಉತ್ಪಾದಕ ಬಿಎಂಡಬ್ಲ್ಯೂ ಇಂಡಿಯಾ 3.0-ಲೀಟರ್ ಡೀಸೆಲ್ ಕಾರನ್ನು ತನ್ನ ಎಕ್ಸ್3 ಸರಣಿಯಿಂದ ಕೈಬಿಟ್ಟಿದ್ದು, ಈ ವಿಚಾರವನ್ನು ದೈತ್ಯ ಕಾರು ತಯಾರಕ ಬಿಎಂಡಬ್ಲ್ಯೂ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಎಕ್ಸ್3 3.0-ಲೀಟರ್ ಡೀಸೆಲ್ ಕಾರಿನ ಉತ್ಪಾದನೆ ನಿಲ್ಲಿಸಿದ ಬಿಎಂಡಬ್ಲ್ಯೂ

ಬವೇರಿಯನ್ ರಾಜ್ಯದ ಐಷಾರಾಮಿ ಕಾರು ತಯಾರಕ ಸಂಸ್ಥೆ ಎಂದೇ ಖ್ಯಾತಿ ಗಳಿಸಿರುವ ಬಿಎಂಡಬ್ಲ್ಯೂ ಭಾರತದಲ್ಲಿ ಪೆಟ್ರೋಲ್ ಕಾರುಗಳ ಬಗ್ಗೆ ಹೆಚ್ಚು ಒಲವು ಹೊಂದಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತನ್ನ ಎಕ್ಸ್3 ಸರಣಿಯ ಎಸ್‌ಯುವಿ ಟಾಪ್ ಎಂಡ್ ಡೀಸೆಲ್ ಮಾದರಿಯ ಉತ್ಪಾದನೆ ಸ್ಥಗಿತಗೊಳಿಸಿದೆ.

ಎಕ್ಸ್3 3.0-ಲೀಟರ್ ಡೀಸೆಲ್ ಕಾರಿನ ಉತ್ಪಾದನೆ ನಿಲ್ಲಿಸಿದ ಬಿಎಂಡಬ್ಲ್ಯೂ

ಸದ್ಯ ಸ್ಥಗಿತಗೊಳಿಸಲಾಗಿರುವ ಬಿಎಂಡಬ್ಲ್ಯೂ ಎಕ್ಸ್3 3.0-ಲೀಟರ್ ಕಾರು, ಇನ್‌ಲೈನ್ ಆರು-ಸಿಲಿಂಡರ್ ಘಟಕವನ್ನು ಹೊಂದಿದ್ದು, ಎಂ-ಸ್ಪೋರ್ಟ್ ಟ್ರಿಮ್‌ನ ಮೇಲ್ದರ್ಜೆಯ ಸೌಲಭ್ಯ ನೀಡಲಾಯಿತು.

ಎಕ್ಸ್3 3.0-ಲೀಟರ್ ಡೀಸೆಲ್ ಕಾರಿನ ಉತ್ಪಾದನೆ ನಿಲ್ಲಿಸಿದ ಬಿಎಂಡಬ್ಲ್ಯೂ

30ಡಿ ವೇಷದಲ್ಲಿ ಅನಾವರಣಗೊಂಡಿದ್ದ ಈ ಎಕ್ಸ್3 3.0-ಲೀಟರ್ ಕಾರು, 580 ಏನ್ಎಂ ತಿರುಗುಬಲದಲ್ಲಿ 255 ಅಶ್ವಶಕ್ತಿ ಉತ್ಪಾದಿಸಲಿದೆ.

ಎಕ್ಸ್3 3.0-ಲೀಟರ್ ಡೀಸೆಲ್ ಕಾರಿನ ಉತ್ಪಾದನೆ ನಿಲ್ಲಿಸಿದ ಬಿಎಂಡಬ್ಲ್ಯೂ

8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಈ ಕಾರು ಪ್ಯಾಡಲ್ ಶಿಫ್ಟ್ ಆಯ್ಕೆಯನ್ನು ಹೊಂದಿದ್ದು, ಈ ಎರಡು ಆಯ್ಕೆಗಳನ್ನು ಹೊಂದಿರುವ ಏಕೈಕ ಕಾರು ಎಕ್ಸ್3 3.0-ಲೀಟರ್ ಕಾರು ಎನ್ನಬಹುದು.

ಎಕ್ಸ್3 3.0-ಲೀಟರ್ ಡೀಸೆಲ್ ಕಾರಿನ ಉತ್ಪಾದನೆ ನಿಲ್ಲಿಸಿದ ಬಿಎಂಡಬ್ಲ್ಯೂ

3.0-ಲೀಟರ್ ಮಾದರಿಯ ಸ್ಥಗಿತಗೊಳಿಸುವಿಕೆಯೊಂದಿಗೆ, ಬಿಎಂಡಬ್ಲ್ಯೂ ಎಕ್ಸ್3 ಈಗ 2.0-ಲೀಟರ್ ನಾಲ್ಕು-ಸಿಲಿಂಡರ್ ಡೀಸೆಲ್ ಎಂಜಿನ್ನೊಂದಿಗೆ ಮಾತ್ರ ಲಭ್ಯವಿದೆ.

ಎಕ್ಸ್3 3.0-ಲೀಟರ್ ಡೀಸೆಲ್ ಕಾರಿನ ಉತ್ಪಾದನೆ ನಿಲ್ಲಿಸಿದ ಬಿಎಂಡಬ್ಲ್ಯೂ

2.0 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರುವ ಎಕ್ಸ್3 ಕಾರು 400 ಏನ್ಎಂ ತಿರುಗುಬಲದಲ್ಲಿ 188 ಅಶ್ವಶಕ್ತಿ ಉತ್ಪಾದಿಸಲಿದೆ.

ಎಕ್ಸ್3 3.0-ಲೀಟರ್ ಡೀಸೆಲ್ ಕಾರಿನ ಉತ್ಪಾದನೆ ನಿಲ್ಲಿಸಿದ ಬಿಎಂಡಬ್ಲ್ಯೂ

ಬಿಎಂಡಬ್ಲ್ಯು ಇಂಡಿಯಾ 2.0 ಲೀಟರ್ ಹೊಂದಿರುವ ನಾಲ್ಕು ಸಿಲಿಂಡರ್ ಪೆಟ್ರೋಲ್ ಘಟಕ ಹೊಂದಿರುವ ಕಾರನ್ನು ತನ್ನ ಸರಣಿಯಲ್ಲಿ ಹೊಂದಿದ್ದು, ಈ ಕಾರು 350 ಏನ್ಎಂ ತಿರುಗುಬಲದಲ್ಲಿ 241 ಅಶ್ವಶಕ್ತಿ ಉತ್ಪಾದಿಸಲಿದೆ.

ಎಕ್ಸ್3 3.0-ಲೀಟರ್ ಡೀಸೆಲ್ ಕಾರಿನ ಉತ್ಪಾದನೆ ನಿಲ್ಲಿಸಿದ ಬಿಎಂಡಬ್ಲ್ಯೂ

241 ಬಿಎಚ್ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಮೋಟಾರ್ಗಳು ಎರಡೂ 8-ಸ್ಪೀಡ್ ಸ್ಟೆಪ್ಟೋರನ್ ಸ್ವಯಂಚಾಲಿತ ಗೇರ್ ಬಾಕ್ಸ್ಗೆ ಜೋಡಿಯಾಗಿವೆ.

ಎಕ್ಸ್3 3.0-ಲೀಟರ್ ಡೀಸೆಲ್ ಕಾರಿನ ಉತ್ಪಾದನೆ ನಿಲ್ಲಿಸಿದ ಬಿಎಂಡಬ್ಲ್ಯೂ

ಎಕ್ಸ್3 2.0 ಲೀಟರ್ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಕಾರುಗಳು 8-ಸ್ಪೀಡ್ ಸ್ಟೆಪ್‌ಟ್ರೊನಿಕ್ ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿವೆ.

Most Read Articles

Kannada
English summary
Read in Kannada about BMW India dropped 3.0-litre in-line six-cylinder diesel unit from its X3 line-up in the country. know reason and more
Story first published: Wednesday, May 24, 2017, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X