ಹೊಚ್ಚ ಹೊಸ ದಟ್ಸನ್ ರೆಡಿ ಗೊ ಬಿಡುಗಡೆಗೆ ದಿನಗಣನೆ- ಇಂದಿನಿಂದಲೇ ಬುಕ್ಕಿಂಗ್ ಶುರು..!

ಹೊಸ ಮಾದರಿಯ 1-ಲೀಟರ್ ದಟ್ಸನ್ ರೆಡಿ ಗೊ ಕಾರು ಇದೇ ತಿಂಗಳು 26ಕ್ಕೆ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು, ಇಂದಿನಿಂದಲೇ ಹೊಸ ಕಾರು ಖರೀದಿಗೆ ಬುಕ್ಕಿಂಗ್ ಮಾಡಬಹುದಾಗಿದೆ.

By Praveen

ಹೊಸ ಮಾದರಿಯ 1-ಲೀಟರ್ ದಟ್ಸನ್ ರೆಡಿ ಗೊ ಕಾರು ಇದೇ ತಿಂಗಳು 26ಕ್ಕೆ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು, ಇಂದಿನಿಂದಲೇ ಹೊಸ ಕಾರು ಖರೀದಿಗೆ ಬುಕ್ಕಿಂಗ್ ಶುರುವಾಗಿದೆ.

ದಟ್ಸನ್ ರೆಡಿ ಗೊ ಬಿಡುಗಡೆಗೆ ದಿನಗಣನೆ- ಇಂದಿನಿಂದಲೇ ಬುಕ್ಕಿಂಗ್ ಶುರು

ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಗೊಳಿಸಲಾಗಿರುವ ದಟ್ಸನ್ ರೆಡಿ ಗೊ 1-ಲೀಟರ್ ಪೆಟ್ರೋಲ್ ಆವೃತ್ತಿಯು ಇದೇ ತಿಂಗಳು 26ರಂದು ಬಿಡುಗಡೆಯಾಗುತಿದ್ದು, ರೂ.10 ಸಾವಿರ ಮುಂಗಡದೊಂದಿಗೆ ಇಂದಿನಿಂದಲೇ ಬುಕ್ಕಿಂಗ್ ಮಾಡಬಹುದಾಗಿದೆ.

ದಟ್ಸನ್ ರೆಡಿ ಗೊ ಬಿಡುಗಡೆಗೆ ದಿನಗಣನೆ- ಇಂದಿನಿಂದಲೇ ಬುಕ್ಕಿಂಗ್ ಶುರು

ಬಹುತೇಕ ರೆನಾಲ್ಟ್ ಕ್ವಿಡ್ ಆವೃತ್ತಿಯ ವೈಶಿಷ್ಟ್ಯತೆಗಳನ್ನೇ ಹೊಂದಿರುವ ದಟ್ಸನ್ ರೆಡಿ ಗೊ ಕಾರು ಆವೃತ್ತಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಹೀಗಾಗಿ ರೆಡಿ ಗೊ ಮಾದರಿ ಸಣ್ಣ ಕಾರು ಆವೃತ್ತಿಯಾಗಿದೆ.

ದಟ್ಸನ್ ರೆಡಿ ಗೊ ಬಿಡುಗಡೆಗೆ ದಿನಗಣನೆ- ಇಂದಿನಿಂದಲೇ ಬುಕ್ಕಿಂಗ್ ಶುರು

ಸದ್ಯಕ್ಕೆ ರೆಡಿ ಗೊ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದು, ತದನಂತರವಷ್ಟೇ ಡೀಸೆಲ್ ಆವೃತ್ತಿ ಕೂಡಾ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ದಟ್ಸನ್ ರೆಡಿ ಗೊ ಬಿಡುಗಡೆಗೆ ದಿನಗಣನೆ- ಇಂದಿನಿಂದಲೇ ಬುಕ್ಕಿಂಗ್ ಶುರು

ಮೈಲೇಜ್

ರೆಡಿ ಗೊ ಆವೃತ್ತಿಯಲ್ಲಿ ಇಂಟಲಿಜೆಂಟ್ ಸ್ಪಾರ್ಕ್ ಆಟೋಮೇಟೆಡ್ ತಂತ್ರಜ್ಞಾನ ವ್ಯವಸ್ಥೆಯಿದ್ದು, ಈ ಹಿನ್ನೆಲೆ ಉತ್ತಮ ಕಾರ್ಯಕ್ಷಮತೆ ಜೊತೆ ಪ್ರತಿ ಲೀಟರ್‌ಗೆ 22.04 ಕಿ.ಮಿ ಮೈಲೇಜ್ ನೀಡುವ ನೀರಿಕ್ಷೆಯಿದೆ.

ದಟ್ಸನ್ ರೆಡಿ ಗೊ ಬಿಡುಗಡೆಗೆ ದಿನಗಣನೆ- ಇಂದಿನಿಂದಲೇ ಬುಕ್ಕಿಂಗ್ ಶುರು

ರೆಡಿ ಗೊ ಬೆಲೆ

ಮಧ್ಯಮ ವರ್ಗಗಳಿಗಾಗಿಯೇ ರೆಡಿ ಗೊ ಸಿದ್ದಗೊಂಡಿದ್ದು, ಹೊಸ ಕಾರಿನ ಬೆಲೆಯು ರೂ.3.75 ಲಕ್ಷದಿಂದ ರೂ.4 ಲಕ್ಷದ ತನಕ ಇರಬಹುದೆಂದು ಅಂದಾಜು ಮಾಡಲಾಗಿದೆ.

ದಟ್ಸನ್ ರೆಡಿ ಗೊ ಬಿಡುಗಡೆಗೆ ದಿನಗಣನೆ- ಇಂದಿನಿಂದಲೇ ಬುಕ್ಕಿಂಗ್ ಶುರು

ಒಳ ಮತ್ತು ಹೊರ ವಿನ್ಯಾಸಗಳು

ಎಲ್‌ಇಡಿ ಡಿಆರ್‌ಎಲ್ ಹಾಗೂ ಹೊಸ ನಮೂನೆಯ ವಿನ್ಯಾಸಗಳನ್ನು ಪಡೆದುಕೊಂಡಿರುವ ದಟ್ಸನ್ ರೆಡಿ ಗೊ ಮಾದರಿಯೂ, ಪ್ರಸ್ತುತ ಮಾರುಕಟ್ಟೆಯಲ್ಲಿನ ರೆನಾಲ್ಟ್ ಕ್ವಿಡ್ ಹಾಗೂ ಮಾರುತಿ ಸುಜುಕಿ ಆಲ್ಟೋ ಮಾದರಿಗಳಿಗೆ ಪ್ರತಿ ಸ್ಪರ್ಧಿಯಾಗುವ ನೀರಿಕ್ಷೆಯಿದೆ.

ದಟ್ಸನ್ ರೆಡಿ ಗೊ ಬಿಡುಗಡೆಗೆ ದಿನಗಣನೆ- ಇಂದಿನಿಂದಲೇ ಬುಕ್ಕಿಂಗ್ ಶುರು

ಎಂಜಿನ್ ಸಾಮರ್ಥ್ಯ

ಬಿಡುಗಡೆಯಾಗಲಿರುವ ಡಟ್ಸನ್ ರೆಡಿ ಗೊ ಕಾರು 800 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, 67ಬಿಎಚ್‌ಪಿ ಮತ್ತು 91ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ದಟ್ಸನ್ ರೆಡಿ ಗೊ ಬಿಡುಗಡೆಗೆ ದಿನಗಣನೆ- ಇಂದಿನಿಂದಲೇ ಬುಕ್ಕಿಂಗ್ ಶುರು

ರೆಡಿ ಗೊ ಬಗೆಗೆ ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ದಟ್ಸನ್, ರೆಡಿ ಗೊ ಆವೃತ್ತಿ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

Most Read Articles

Kannada
English summary
Read in Kannada about Datsun India is all set to launch the redi-GO 1-litre in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X