ಇನ್ಮುಂದೆ ಫೆರಾರಿ ಸಂಸ್ಥೆ 'ಟೆಸ್ಟರೊಸ್ಸ' ಹೆಸರನ್ನು ಬಳಸುವಂತಿಲ್ಲ : ಕೋರ್ಟ್ ತೀರ್ಪು

ಫೆರಾರಿ ಸಂಸ್ಥೆ 'ಟೆಸ್ಟರೊಸ್ಸ' ಹೆಸರಿನ ಮೇಲೆ ಇದ್ದ ಹಕ್ಕುಗಳನ್ನು ಕಳೆದುಕೊಂಡಿದ್ದು, ಇನ್ನು ಮುಂದೆ ಯಾವುದೇ ರೀತಿಯ ವಿಶೇಷ ಹಕ್ಕುಗಳನ್ನು ಈ ಕಂಪನಿ ಹೊಂದಿಲ್ಲ ಎಂಬ ವಿಚಾರ ಹೊರಬಿದ್ದಿದೆ.

By Girish

ಇಟಾಲಿಯನ್ ಕಾರು ತಯಾರಿಕಾ ಕಂಪನಿಯಾದ ಫೆರಾರಿಯು, 'ಟೆಸ್ಟರೊಸ್ಸ' ಹೆಸರಿಗಾಗಿ ಜರ್ಮನ್ ವಾಹನ ತಯಾರಕ ಸಂಸ್ಥೆಯ ವಿರುದ್ಧ ನೆಡೆಸಿದ ಕಾನೂನು ಸಮರದಲ್ಲಿ ಸೋತಿದ್ದು, ಇದರ ಪರಿಣಾಮ ಮುಂಬರುವ ದಿನಗಳಲ್ಲಿ ಈ ಹೆಸರನ್ನು ಬಳಸದಿರುವಂತೆ ನ್ಯಾಯಾಲಯ ಸೂಚಿಸಿದೆ.

ಇನ್ಮುಂದೆ ಫೆರಾರಿ ಸಂಸ್ಥೆ 'ಟೆಸ್ಟರೊಸ್ಸ' ಹೆಸರನ್ನು ಬಳಸುವಂತಿಲ್ಲ : ಕೋರ್ಟ್ ತೀರ್ಪು

ಇನ್ನು ಮುಂದೆ ಆಟಕ್ ಎಜಿ ಎಂಬ ಜರ್ಮನ್ ಸಂಸ್ಥೆ ತನ್ನ ಬೈಕ್ ಹಾಗು ಶೇವರ್ಸ್‌ನಲ್ಲಿ ಟೆಸ್ಟರೊಸ್ಸ ಹೆಸರನ್ನು ಬಳಸಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇನ್ಮುಂದೆ ಫೆರಾರಿ ಸಂಸ್ಥೆ 'ಟೆಸ್ಟರೊಸ್ಸ' ಹೆಸರನ್ನು ಬಳಸುವಂತಿಲ್ಲ : ಕೋರ್ಟ್ ತೀರ್ಪು

ಫೆರಾರಿ ತನ್ನ 1957, 250, ಟೆಸ್ಟ, ರೋಸ್ಸ ಮತ್ತು 1984 ಮಾದರಿಗಳಲ್ಲಿ ಟೆಸ್ಟರೊಸ್ಸ ಹೆಸರನ್ನು ಬಳಸುತ್ತಿತ್ತು. ಆದರೆ, ಕಳೆದ 20 ವರ್ಷಗಳಿಂದ ಕಾರಣಾಂತರಗಳಿಂದ ಈ ಹೆಸರನ್ನು ತನ್ನ ಉತ್ಪನ್ನಗಳಲ್ಲಿ ಬಳಸುವುದನ್ನು ನಿಲ್ಲಿಸಿತ್ತು.

ಇನ್ಮುಂದೆ ಫೆರಾರಿ ಸಂಸ್ಥೆ 'ಟೆಸ್ಟರೊಸ್ಸ' ಹೆಸರನ್ನು ಬಳಸುವಂತಿಲ್ಲ : ಕೋರ್ಟ್ ತೀರ್ಪು

ಕಾನೂನಿನ ಪ್ರಕಾರ, ಯಾವುದೇ ಹೆಸರಾಗಲಿ ಕಳೆದ 5 ವರ್ಷಗಳಲ್ಲಿ ಹೆಸರನ್ನು ಪಡೆದುಕೊಂಡ ಸಂಸ್ಥೆ ಆ ಹೆಸರನ್ನು ಸಂರಕ್ಷಣೆ ಮಾಡಲು ವಿಫಲವಾದಲ್ಲಿ, ಅಂತಹ ಸಂದರ್ಭದಲ್ಲಿ ಹೆಸರಿನ ಮೇಲಿರುವ ತನ್ನ ಹಕ್ಕನ್ನು ಆಯಾ ಕಂಪನಿಯು ಕಳೆದುಕೊಳ್ಳಲಿದೆ. ಕಳೆದ 20 ವರ್ಷಗಳಿಂದ ಫೆರಾರಿ ಹೆಸರನ್ನು ಬಳಕೆ ಮಾಡದೆ ಇರುವುದು ಇಷ್ಟೆಲ್ಲಾ ತೊಂದರೆಗೆ ಕಾರಣ ಎನ್ನಬಹುದು.

ಇನ್ಮುಂದೆ ಫೆರಾರಿ ಸಂಸ್ಥೆ 'ಟೆಸ್ಟರೊಸ್ಸ' ಹೆಸರನ್ನು ಬಳಸುವಂತಿಲ್ಲ : ಕೋರ್ಟ್ ತೀರ್ಪು

ಟೆಸ್ಟರೊಸ್ಸ ಬ್ರಾಂಡ್ ಅಡಿಯಲ್ಲಿ ಈಗಲೂ ಸಹ ವಾಹನ ರಿಪೈರಿ ಮತ್ತು ನಿರ್ವಹಣೆ ಮಾಡುತ್ತಿದ್ದೇವೆ ಎಂದು ವಾದ ಮಂಡಿಸಿದರೂ ಸಹ ಫೆರಾರಿ ವಾದವನ್ನು ಪುರಸ್ಕರಿಸದ ಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ.

ಇನ್ಮುಂದೆ ಫೆರಾರಿ ಸಂಸ್ಥೆ 'ಟೆಸ್ಟರೊಸ್ಸ' ಹೆಸರನ್ನು ಬಳಸುವಂತಿಲ್ಲ : ಕೋರ್ಟ್ ತೀರ್ಪು

ಅನಿರೀಕ್ಷಿತ ಸಂದರ್ಭದಲ್ಲಿ 'ಟೆಸ್ಟರೊಸ್ಸ' ಬ್ರಾಂಡ್ ಹೆಸರನ್ನು ಕಳೆದುಕೊಂಡಿರುವ ಫೆರಾರಿ, ಇನ್ನು ಮುಂದಾದರು ಈ ರೀತಿಯ ತಪ್ಪನ್ನು ಮಾಡಬಾರದು ಎಂಬ ವಿಚಾರ ವಾಹನೋದ್ಯಮದಲ್ಲಿ ಕೇಳಿ ಬರುತ್ತಿದೆ. ಸದ್ಯ ಏನೂ ಮಾಡಲಾಗದ ಸ್ಥಿತಿಯಲ್ಲಿರುವ ಫೆರಾರಿ, ಟೆಸ್ಟರೊಸ್ಸ ಹೆಸರು ಇಲ್ಲದೆ ತನ್ನ ಮುಂದಿನ ಯೋಜನೆಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

Most Read Articles

Kannada
English summary
Ferrari has lost the rights to the 'Testarossa' name and no more holds the exclusive rights. The Italian carmaker has lost the name in a legal battle to a German toymaker.
Story first published: Tuesday, August 8, 2017, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X