ಕಾರು ಡಿಲರ್ಸ್‌ಗಳ ಪರಿಹಾರ ವಿಚಾರದಲ್ಲಿ ಹಗ್ಗಜಗ್ಗಾಟ- ಸಂಕಷ್ಟಕ್ಕೆ ಸಿಲುಕಿದ ಜನರಲ್ ಮೋಟಾರ್ಸ್?

Written By:

ಭಾರತೀಯ ಆಟೋಉದ್ಯಮದಿಂದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಜನರಲ್ ಮೋಟಾರ್ ಹೊರಬಿದ್ದಿದ್ದು, ಕಾರು ವಿತರಕರಿಗೆ ನೀಡುವ ಪರಿಹಾರ ನೀಡುವ ವಿಚಾರವಾಗಿ ಕಾನೂನು ಸಮರ ಶುರುವಾಗಿದೆ.

To Follow DriveSpark On Facebook, Click The Like Button
ಪರಿಹಾರ ವಿಚಾರದಲ್ಲಿ ಹಗ್ಗಜಗ್ಗಾಟ- ಸಂಕಷ್ಟದಲ್ಲಿ ಜನರಲ್ ಮೋಟಾರ್?

ಭಾರತೀಯ ಆಟೋ ಉದ್ಯಮದಿಂದ ಪೂರ್ಣ ಪ್ರಮಾಣದಲ್ಲಿ ಹೊರ ನಡೆಯುತ್ತಿರುವ ಜನರಲ್ ಮೋಟಾರ್ ಸಂಸ್ಥೆಯು, ದೇಶ್ಯಾದ್ಯಂತ ಜನರಲ್ ಮೋಟಾರ್ ಕಾರು ವಿತರಕರಿಗೆ ಪರಿಹಾರ ಹಂಚಿಕೆ ಮಾಡುತ್ತಿದೆ.

ಪರಿಹಾರ ವಿಚಾರದಲ್ಲಿ ಹಗ್ಗಜಗ್ಗಾಟ- ಸಂಕಷ್ಟದಲ್ಲಿ ಜನರಲ್ ಮೋಟಾರ್?

ಜನರಲ್ ಮೋಟಾರ್ ಭಾರತದಿಂದ ಹೊರಹೋಗುತ್ತಿರುವುದು ಕಾರು ಡಿಲರ್ಸ್‌ಗಳನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದು, ತಾವು ತೊಡಗಿಸುರುವ ಬಂಡವಾಳಕ್ಕೆ ಸೂಕ್ತ ಪರಿಹಾರ ನೀಡುವಂತೆ ಪಟ್ಟು ಹಿಡಿದ್ದಾರೆ.

ಪರಿಹಾರ ವಿಚಾರದಲ್ಲಿ ಹಗ್ಗಜಗ್ಗಾಟ- ಸಂಕಷ್ಟದಲ್ಲಿ ಜನರಲ್ ಮೋಟಾರ್?

ಭಾರತದಲ್ಲಿ ಸುಮಾರು 800ಕ್ಕೂ ಹೆಚ್ಚು ಜಿಎಂ ಕಾರು ಡಿಲರ್ಸ್‌ಗಳಿದ್ದು, ಶೇ.30ರಷ್ಟು ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

ಪರಿಹಾರ ವಿಚಾರದಲ್ಲಿ ಹಗ್ಗಜಗ್ಗಾಟ- ಸಂಕಷ್ಟದಲ್ಲಿ ಜನರಲ್ ಮೋಟಾರ್?

ಆದ್ರೆ ಡಿಲರ್ಸ್‌ಗಳ ಬೇಡಿಕೆಗೆ ಒಪ್ಪದ ಜನರಲ್ ಮೋಟಾರ್ಸ್, ಕೆೇವಲ ಶೇ.10ರಷ್ಟು ಪರಿಹಾರ ನೀಡಲು ಮುಂದಾಗಿದೆ.

ಪರಿಹಾರ ವಿಚಾರದಲ್ಲಿ ಹಗ್ಗಜಗ್ಗಾಟ- ಸಂಕಷ್ಟದಲ್ಲಿ ಜನರಲ್ ಮೋಟಾರ್?

ಹೀಗಾಗಿ ಜನರಲ್ ಮೋಟಾರ್ಸ್ ನಡೆ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿರುವ ಕಾರು ಡೀಲರ್ಸ್‌ಗಳು, ಸೂಕ್ತ ಪ್ರಮಾಣದ ಪರಿಹಾರ ವಸೂಲಿ ಮಾಡಿಕೊಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಲು ಸಜ್ಜಾಗಿದ್ದಾರೆ.

ಪರಿಹಾರ ವಿಚಾರದಲ್ಲಿ ಹಗ್ಗಜಗ್ಗಾಟ- ಸಂಕಷ್ಟದಲ್ಲಿ ಜನರಲ್ ಮೋಟಾರ್?

ಈ ಹಿನ್ನೆಲೆ ಕಾರು ಡೀಲರ್ಸ್‌ಗಳ ಮೇಲೆ ಮತ್ತೊಂದು ಬಾಣ ಪ್ರಯೋಗಿಸಿರುವ ಜಿಎಂ, ಭಾರತದಲ್ಲಿ ಮಾರಾಟವಾಗದೇ ಉಳಿದ ಜಿಎಂ ನಿರ್ಮಾಣದ 2 ಸಾವಿರ ಕಾರುಗಳನ್ನು ಮಾರಾಟ ಮಾಡಿದರೇ ಮಾತ್ರ ಶೇ.30 ಪರಿಹಾರ ಪಡೆಯಲು ಸಾಧ್ಯವೆಂದಿದೆ.

ಪರಿಹಾರ ವಿಚಾರದಲ್ಲಿ ಹಗ್ಗಜಗ್ಗಾಟ- ಸಂಕಷ್ಟದಲ್ಲಿ ಜನರಲ್ ಮೋಟಾರ್?

ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಜಿಎಂ ವಾಹನಗಳ ಖರೀದಿಗೆ ಗ್ರಾಹಕರು ಮೂಗು ಮುರಿಯುತ್ತಿದ್ದು, ಡಿಲರ್ಸ್‌ಗಳಿಗೆ ಶೇ.30 ರಷ್ಟು ಪರಿಹಾರ ಕಷ್ಟು ಸಾಧ್ಯ ಎನ್ನಲಾಗುತ್ತಿದೆ.

English summary
Read in Kannada about General Motors car dealers in India could move court against the US carmaker.
Story first published: Monday, June 12, 2017, 19:11 [IST]
Please Wait while comments are loading...

Latest Photos