ಇನ್ಮೇಲೆ 'ಷೆವರ್ಲೆ' ಕಾರುಗಳ ಖರೀದಿ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ?

Written By:

ಅಮೆರಿಕದ ಆಟೋಮೊಬೈಲ್ ದೈತ್ಯ ಜನರಲ್ ಮೋಟಾರ್ಸ್ ಸಂಸ್ಥೆಯು ಇನ್ಮುಂದೆ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡದೆ ಇರುವ ನಿರ್ಧಾರ ತೆಗೆದುಕೊಂಡಿದ್ದು, ಬದಲಿಗೆ ಭಾರತ ರಾಷ್ಟ್ರವನ್ನು ರಫ್ತು ಕೇಂದ್ರವನ್ನಾಗಿ ಬಳಸಿಕೊಳ್ಳುಲಿದೆ.

To Follow DriveSpark On Facebook, Click The Like Button
ಇನ್ಮೇಲೆ 'ಷೆವರ್ಲೆ' ಕಾರುಗಳ ಖರೀದಿ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ?

ಸ್ಪರ್ಧಾತ್ಮಕ ಮಾರುಕಟ್ಟೆಗಳಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿರುವ ಭಾರತದಲ್ಲಿ ಪ್ರಸ್ತುತ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ ಪಾಲನ್ನು ಜನರಲ್ ಮೋಟರ್ಸ್ ಹೊಂದಿದ್ದು, ಕಳೆದ ಎರಡು ದಶಕಗಳಿಂದ ಭಾರತದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಪ್ರಯತ್ನ ಮಾಡಿತ್ತು.

ಇನ್ಮೇಲೆ 'ಷೆವರ್ಲೆ' ಕಾರುಗಳ ಖರೀದಿ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ?

ಜನರಲ್ ಮೋಟಾರ್ಸ್ ಕಂಪನಿಯು ತನ್ನ 'ಷೆವರ್ಲೆ' ಬ್ರಾಂಡಿನ ಕಾರುಗಳನ್ನು ದೇಶದಲ್ಲಿ ಮಾರಾಟ ಮಾಡುವುದಿಲ್ಲ ಎಂದು ಪ್ರಕಟಣೆ ನೀಡಿದ್ದು, ಆದರೆ ತಾನು ಸಂಪೂರ್ಣವಾಗಿ ಭಾರತವನ್ನು ತೊರೆಯುವುದಿಲ್ಲ ಎಂದಿದೆ.

ಇನ್ಮೇಲೆ 'ಷೆವರ್ಲೆ' ಕಾರುಗಳ ಖರೀದಿ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ?

ಹೌದು, ಜನರಲ್ ಮೋಟಾರ್ಸ್ ಸಂಪೂರ್ಣವಾಗಿ ಭಾರತದಿಂದ ನಿರ್ಗಮಿಸದೆ ಇರಲು ನಿರ್ಧರಿಸಿದ್ದು, ಭಾರತವನ್ನು ತನ್ನ ರಫ್ತು ಕೇಂದ್ರವನ್ನಾಗಿ ಬಳಸಲು ಯೋಜಿಸಿದೆ.

ಇನ್ಮೇಲೆ 'ಷೆವರ್ಲೆ' ಕಾರುಗಳ ಖರೀದಿ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ?

ಭಾರತದಲ್ಲಿ ಎರಡು ಉತ್ಪಾದನಾ ಘಟಕಗಳನ್ನು ಹೊಂದಿರುವ ಜನರಲ್ ಮೋಟಾರ್ಸ್ ಸಂಸ್ಥೆ, ಬೆಂಗಳೂರಿನಲ್ಲಿರುವ ತನ್ನ ತಂತ್ರಜ್ಞಾನ ಕೇಂದ್ರವನ್ನು ಹಾಗೆಯೇ ಮುಂದುವರೆಸಲು ನಿರ್ಧರಿಸಿದೆ.

ಇನ್ಮೇಲೆ 'ಷೆವರ್ಲೆ' ಕಾರುಗಳ ಖರೀದಿ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ?

ಜನರಲ್ ಮೋಟಾರ್ಸ್ ಸಂಸ್ಥೆ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ತನ್ನ ಉತ್ಪಾದನಾ ಕೇಂದ್ರಗಳನ್ನು ಹೊಂದಿದ್ದು, ಗುಜರಾತ್ ಘಟಕವನ್ನು ಮಾರಾಟ ಮಾಡಲಿದ್ದು, ಮಹಾರಾಷ್ಟ್ರ ಘಟಕವನ್ನು ರಫ್ತು ಕೇಂದ್ರವನ್ನಾಗಿ ಬಳಸಲಿದೆ.

ಇನ್ಮೇಲೆ 'ಷೆವರ್ಲೆ' ಕಾರುಗಳ ಖರೀದಿ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ?

ಪ್ರಧಾನಿ ಮೋದಿಯವರ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಜನರಲ್ ಮೋಟರ್ಸ್ ರಫ್ತು ಕೇಂದ್ರದ ನಿರ್ಧಾರ ಕೈಗೊಂಡಿದೆ.

ಇನ್ಮೇಲೆ 'ಷೆವರ್ಲೆ' ಕಾರುಗಳ ಖರೀದಿ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ?

"ಭಾರತವು ನೀಡುತ್ತಿರುವ ಪ್ರಯೋಜನಗಳನ್ನು ನಾವು ಬಳಸಿಕೊಳ್ಳಲು ಮುಂದಾಗಿದ್ದು, ಅತ್ಯುತ್ತಮವಾದ ಪೂರೈಕೆಯ ತಳಹದಿಯನ್ನು ಹೊಂದಿರಲು ನಿರ್ಧರಿಸಲಾಗಿದೆ" ಎಂದು ಸ್ಟೀವನ್ ಜಾಕೋಬೈ ತಿಳಿಸಿದ್ದಾರೆ.

ಇನ್ಮೇಲೆ 'ಷೆವರ್ಲೆ' ಕಾರುಗಳ ಖರೀದಿ ಮಾಡಲು ಸಾಧ್ಯವಿಲ್ಲ ಯಾಕೆ ಗೊತ್ತಾ ?

ಕಳೆದ 2015-16ರಲ್ಲಿ ಜನರಲ್ ಮೋಟರ್ಸ್ 70,969 ವಾಹನಗಳನ್ನು ಮಹಾರಾಷ್ಟ್ರ ಘಟಕದಿಂದ ರಫ್ತು ಮಾಡಿದ್ದು, ಮುಂಬರುವ ವರ್ಷದಲ್ಲಿ ಈ ಸಂಖ್ಯೆಯನ್ನು ದ್ವಿಗುಣಗೊಳಿಸಲು ಯೋಜನೆ ರೂಪಿಸಿದೆ.

English summary
Read in Kannada about general motors to stop selling cars in india. Know more about GM's decissions, reason behind this decission and more
Story first published: Thursday, May 18, 2017, 18:58 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark