ನಿನ್ನೆಯಷ್ಟೇ ಬಿಡುಗಡೆಯಾದ ಹೊಚ್ಚ ಹೊಸ ಹೋಂಡಾ ಸಿಟಿ ಖರೀದಿ ಬಲುಜೋರು

Written By:

ನಿನ್ನೆಯಷ್ಟೇ ಬಿಡುಗಡೆಗೊಂಡಿರುವ 4ನೇ ತಲೆಮಾರಿನ ಹೋಂಡಾ ಸಿಟಿ ಖರೀದಿ ಭರಾಟೆ ಭರ್ಜರಿಯಾಗಿಯೇ ಸಾಗಿದೆ. ಇದುವರೆಗೆ ಸುಮಾರು 5 ಸಾವಿರ ಗ್ರಾಹಕರು ಮುಂಗಡ ದಾಖಲಿಸಿದ್ದು, ಪೆಟ್ರೋಲ್ ಮಾದರಿಯ ಕಾರುಗಳಿಗಾಗಿ ಹೆಚ್ಚಿನ ಬೇಡಿಕೆಯಿಟ್ಟಿದ್ದಾರೆ.

ನಿನ್ನೆಯಷ್ಟೇ ಬಿಡುಗಡೆಯಾದ ಹೊಚ್ಚ ಹೊಸ ಹೋಂಡಾ ಸಿಟಿ ಖರೀದಿ ಬಲುಜೋರು

2017ರ ವಿನೂತನ ಹೋಂಡಾ ಸಿಟಿ ಖರೀದಿಗೆ ಫೆಬ್ರವರಿ 3 ರಿಂದಲೇ ಬುಕ್ಕಿಂಗ್ ಆರಂಭವಾಗಿತ್ತು. 21 ಸಾವಿರ ರೂಪಾಯಿ ಮುಂಗಡದೊಂದಿಗೆ ಕಾರು ಖರೀದಿಗೆ ಹೆಸರು ನೊಂದಾಯಿಸಿದ್ದ ಗ್ರಾಹಕರು, ಪೆಟ್ರೋಲ್ ಕಾರುಗಳಿಗೆ ಹೆಚ್ಚಿನ ಒಲವು ತೊರಿದ್ದಾರೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ಹೋಂಡಾ ಸಿಟಿ ಕಾರಿನ ಬೆಲೆ ರೂ. 8,49,999 ಮಾತ್ರ.

ನಿನ್ನೆಯಷ್ಟೇ ಬಿಡುಗಡೆಯಾದ ಹೊಚ್ಚ ಹೊಸ ಹೋಂಡಾ ಸಿಟಿ ಖರೀದಿ ಬಲುಜೋರು

2017 ಮಾದರಿಯ ಹೋಂಡಾ ಸಿಟಿ ಒಟ್ಟು ಐದು ನಮೂನೆಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಮಾದರಿಯಲ್ಲಿ S, SV, V ಮತ್ತು VX ಆವೃತ್ತಿಗಳು ಮಾರಾಟಕ್ಕಿವೆ.

ನಿನ್ನೆಯಷ್ಟೇ ಬಿಡುಗಡೆಯಾದ ಹೊಚ್ಚ ಹೊಸ ಹೋಂಡಾ ಸಿಟಿ ಖರೀದಿ ಬಲುಜೋರು

ಇನ್ನು ಪೆಟ್ರೋಲ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಕಾರುಗಳಲ್ಲಿ V, VX, ZX ಆವೃತ್ತಿಗಳು ಲಭ್ಯವಿವೆ. ಇದರ ಜೊತೆಗೆ ಡೀಸೆಲ್ ಮಾದರಿಯ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಕಾರುಗಳಲ್ಲಿ SV, V, VX ಮತ್ತು ZX ಆವೃತ್ತಿಗಳು ದೊರೆಯಲಿವೆ.

ನಿನ್ನೆಯಷ್ಟೇ ಬಿಡುಗಡೆಯಾದ ಹೊಚ್ಚ ಹೊಸ ಹೋಂಡಾ ಸಿಟಿ ಖರೀದಿ ಬಲುಜೋರು

ವಿನೂತನ ಮಾದರಿಯ ಹೋಂಡಾ ಸಿಟಿ ಒಟ್ಟು ಐದು ಬಣ್ಣಗಳಲ್ಲಿ ಲಭ್ಯವಿದ್ದು, ಮಾರ್ಡನ್ ಸ್ಪೀಲ್ ಮೆಟಾಲಿಕ್, ವೈಟ್ ಆರ್ಚಿಡ್ ಪರ್ಲ್, ಕಾರ್ಲೆಲಿಯನ್ ರೆಡ್ ಪರ್ಲ್, ಆಲ್‌ಬಾಸ್ಟರ್ ಸಿಲ್ವರ್ ಮೆಟಾಲಿಕ್ ಮತ್ತು ಗೋಲ್ಡನ್ ಬ್ರೌನ್ ಮೆಟಾಲಿಕ್‌‌ನಲ್ಲಿ ದೊರಕಲಿದೆ.

ನಿನ್ನೆಯಷ್ಟೇ ಬಿಡುಗಡೆಯಾದ ಹೊಚ್ಚ ಹೊಸ ಹೋಂಡಾ ಸಿಟಿ ಖರೀದಿ ಬಲುಜೋರು

ಹೋಂಡಾ ಸಿಟಿ ನೂತನ ಮಾದರಿಯ ಡೀಸೆಲ್ ಕಾರು 1.5 ಲೀಟರ್ i-DTEC ಎಂಜಿನ್ ಒಳಗೊಂಡಿದ್ದು, 99 ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ಪಾದಿಸುವ ಗುಣಹೊಂದಿದೆ. ಅಂತಯೇ ಪೆಟ್ರೋಲ್ ಮಾದರಿ ಕಾರು 1.5 ಲೀಟರ್ i-VTEC ಎಂಜಿನ್ ಹೊಂದಿದ್ದು, 177 ಬಿಎಚ್‌ಪಿ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸುವ ಗುಣ ಹೊಂದಿದೆ.

ನಿನ್ನೆಯಷ್ಟೇ ಬಿಡುಗಡೆಯಾದ ಹೊಚ್ಚ ಹೊಸ ಹೋಂಡಾ ಸಿಟಿ ಖರೀದಿ ಬಲುಜೋರು

ಪ್ರಸ್ತುತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಯಾಗಿರುವ ನೂತನ ಹೋಂಡಾ ಸಿಟಿ, ಸದ್ಯದ ಸೆಡಾನ್ ಮಾದರಿಯ ಮಾರುತಿ ಸುಜುಕಿ ಸಿಯಾಜ್‌ಗೆ ತೀವ್ರ ಸ್ಪರ್ಧೆ ಒಡ್ಡಲಿದೆ. ಜೊತೆಗೆ ಸ್ಕೋಡಾ ರ‍್ಯಾಪಿಡ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೋ ಕಾರು ಖರೀದಿಯ ಗ್ರಾಹಕರನ್ನು ಸೆಳೆಯುವ ಸಾಧ್ಯತೆಗಳಿವೆ.

ನಿನ್ನೆಯಷ್ಟೇ ಬಿಡುಗಡೆಯಾದ ಹೊಚ್ಚ ಹೊಸ ಹೋಂಡಾ ಸಿಟಿ ಖರೀದಿ ಬಲುಜೋರು

ಬಿಡುಗಡೆಯಾಗಿ ಭರ್ಜರಿ ಮಾರಾಟಗೊಳ್ಳುತ್ತಿರುವ ನೂತನ ಹೋಂಡಾ ಸಿಟಿ ಕಾರುಗಳ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
The bookings for the new Honda City started from February 3, 2017, with an amount of Rs 21,000. The 2017 Honda City launched on February 14, 2017, with a price tag of Rs 849,990 ex-showroom (Delhi).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark