ಹೊಸ ಹೋಂಡಾ ಸಿಟಿ 'ಫೇಸ್ ಲಿಫ್ಟ್' ಬಿಡುಗಡೆ : ಕಾರಿನ ವಿವರ

ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಹೋಂಡಾ, ಮಗದೊಂದು ಆಕರ್ಷಕ ‘2017 ಹೋಂಡಾ ಸಿಟಿ ಫೇಸ್ ಲಿಫ್ಟ್’ ಕಾರನ್ನು ಭಾರತಕ್ಕೆ ಪರಿಚಯಿಸಿದೆ.

By Girish

ಈಗಾಗಲೇ ಹೋಂಡಾ ಸಿಟಿ ಕಾರು ಭಾರತೀಯ ಮಾರುಕಟ್ಟೆಯಲ್ಲಿದ್ದರೂ ಹೊಚ್ಚ ಹೊಸ ಹೋಂಡಾ ಸಿಟಿ ಕಾರು ಬಿಡುಗಡೆಯಾಗಿರುವುದು ಸದ್ಯ ಬಂದಿರುವ ಹಾಟ್ ಸುದ್ದಿ.

ಹೊಸ ಹೋಂಡಾ ಸಿಟಿ 'ಫೇಸ್ ಲಿಫ್ಟ್' ಕಾರಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಇಲ್ಲಿವೆ

ಹೊಸದಾಗಿ ಬಂದಿರುವ ಫೇಸ್ ಲಿಫ್ಟ್ ಹೋಂಡಾ ಸಿಟಿ ಕಾರಿನಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದ್ದು, ಹೊಸ ವಿನ್ಯಾಸದೊಂದಿಗೆ ಸಿಟಿ ಕಾರು ಮಧುಮಗಳಂತೆ ಕಂಗೊಳಿಸುತ್ತಿದೆ. ಆರಂಭಿಕ ಬೆಲೆ 8.5 ಲಕ್ಷ ರೂಪಾಯಿ(ದೆಹಲಿ ಎಕ್ಸ್ ಶೋ ರೂಂ) ನಿಗದಿಪಡಿಸಲಾಗಿದೆ.

ಹೊಸ ಹೋಂಡಾ ಸಿಟಿ 'ಫೇಸ್ ಲಿಫ್ಟ್' ಕಾರಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಇಲ್ಲಿವೆ

ಎಸ್, ಎಸ್ ವಿ, ವಿ, ವಿಎಕ್ಸ್‌, ಝೆಡ್ಎಕ್ಸ್‌ ಎಂಬ ವಿವಿಧ ಮಾದರಿಗಳಲ್ಲಿ ಬಿಡುಗಡೆಗೊಂಡಿದ್ದು, ದೆಹಲಿಯಲ್ಲಿ ಈ ಕಾರಿನ ಆನ್ ರೋಡ್ ಬೆಲೆ 9.55 ಲಕ್ಷ ರೂ. ಆಗಲಿದೆ.

ಹೊಸ ಹೋಂಡಾ ಸಿಟಿ 'ಫೇಸ್ ಲಿಫ್ಟ್' ಕಾರಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಇಲ್ಲಿವೆ

ಎಸ್ ಮಾದರಿಯ ಕಾರುಗಳು ಪೆಟ್ರೋಲ್ ಆವೃತಿಯಲ್ಲಿ ಮಾತ್ರ ಬರಲಿದ್ದು, ಉಳಿದಂತೆ ಡೀಸೆಲ್ ಕಾರುಗಳು ಮಾನ್ಯುಯಲ್ ಗೇರ್ ಬಾಕ್ಸ್ ಮಾತ್ರ ಹೊಂದಿರಲಿವೆ.

ಹೊಸ ಹೋಂಡಾ ಸಿಟಿ 'ಫೇಸ್ ಲಿಫ್ಟ್' ಕಾರಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಇಲ್ಲಿವೆ

2014ರ ನಂತರ ಇದೇ ಮೊದಲ ಬಾರಿಗೆ ಆಧುನಿಕಗೊಳಿಸಿರುವ ಹೋಂಡಾ ಸಿಟಿಯ ಆವೃತಿಯ ಕಾರು ರಸ್ತೆಗಿಳಿಯುತ್ತಿದೆ. ಇನ್ನು ಮೈಲೇಜ್ ವಿಚಾರಕ್ಕೆ ಬರುವುದಾದರೆ ಈ ಫೇಸ್ ಲಿಫ್ಟ್ ಕಾರು ಪ್ರತಿ ಲೀಟರ್ ಗೆ 17.4(ಪೆಟ್ರೋಲ್) ಕಿಲೋಮೀಟರ್ ಮತ್ತು 25.6(ಡೀಸೆಲ್) ಕಿಲೋಮೀಟರ್ ಮೈಲೇಜ್ ನೀಡಲಿದೆ.

ಹೊಸ ಹೋಂಡಾ ಸಿಟಿ 'ಫೇಸ್ ಲಿಫ್ಟ್' ಕಾರಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಇಲ್ಲಿವೆ

ಕಾರಿನ ಮುಂಭಾಗದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೆಡ್ ಲ್ಯಾಂಪ್ ಕ್ಲಸ್ಟರ್ ಗೆ ಎಲ್ಇಡಿ ಲ್ಯಾಂಪ್ ಅಳವಡಿಸಲಾಗಿದೆ.

ಹೊಸ ಹೋಂಡಾ ಸಿಟಿ 'ಫೇಸ್ ಲಿಫ್ಟ್' ಕಾರಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಇಲ್ಲಿವೆ

ಕಾರಿನ ಮುಂಭಾಗದ ಬಂಪರ್ ಗೆ ಕೂಡ ಫಾಗ್ ಲ್ಯಾಂಪ್ ಇರಿಸಲಾಗಿದ್ದು, ಹಿಂಭಾಗದ ಕ್ಯಾಮರಾ ಮತ್ತು ಎಲೆಕ್ಟ್ರಿಕ್ ಸನ್ ರೂಫ್ ಈ ಕಾರಿಗೆ ಹೊಸ ಮೆರುಗು ತಂದುಕೊಟ್ಟಿವೆ.

ಹೊಸ ಹೋಂಡಾ ಸಿಟಿ 'ಫೇಸ್ ಲಿಫ್ಟ್' ಕಾರಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಇಲ್ಲಿವೆ

ಪೆಟ್ರೋಲ್ ಆವೃತ್ತಿ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ) :

ಎಸ್ (ಎಂಟಿ): 8.5 ಲಕ್ಷ ರೂ.

ಎಸ್‌ವಿ (ಎಂಟಿ): 9.54 ಲಕ್ಷ ರೂ.

ವಿ (ಎಂಟಿ): 10 ಲಕ್ಷ ರೂ.

ವಿ (ಸಿವಿಟಿ): 11.54 ಲಕ್ಷ ರೂ.

ವಿಎಕ್ಸ್ (ಎಂಟಿ): 11.65 ಲಕ್ಷ ರೂ.

ವಿಎಕ್ಸ್ (ಸಿವಿಟಿ): 12.85 ಲಕ್ಷ ರೂ.

ಝಡ್‌ಎಕ್ಸ್ (ಸಿವಿಟಿ): 13.53 ಲಕ್ಷ ರೂ.

ಹೊಸ ಹೋಂಡಾ ಸಿಟಿ 'ಫೇಸ್ ಲಿಫ್ಟ್' ಕಾರಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಇಲ್ಲಿವೆ

ಫೇಸ್ ಲಿಫ್ಟ್ ಕಾರಿನಲ್ಲಿ ಬೃಹಧಾಕಾರದ 7 ಇಂಚಿನ ಟಚ್ ಸ್ಕ್ರೀನ್ ಆಡಿಯೋ ವಿಶುವಲ್ ನೇವಿಗೇಶನ್ ಪರದೆ ಇರಿಸಲಾಗಿದ್ದು ಇದರ ಜೊತೆಗೆ ಆ್ಯಂಡ್ರಾಯ್ಡ್ ಇಂಟರ್ ಫೇಸ್ ತಂತ್ರಜ್ಞಾನ ಅಳವಡಿಸಲಾಗಿದೆ.

ಹೊಸ ಹೋಂಡಾ ಸಿಟಿ 'ಫೇಸ್ ಲಿಫ್ಟ್' ಕಾರಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಇಲ್ಲಿವೆ

ಕಾರಿಗೆ ಎರಡು ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ. ಮಳೆ ಬಂದಾಗ ಆಟೋಮ್ಯಾಟಿಕ್ ಆಗಿ ಕೆಲಸ ಮಾಡಬಲ್ಲ, ರೇನ್ ಸೆನ್ಸಿಂಗ್ ವೈಪರ್ ಕೂಡ ಇದೆ.

ಹೊಸ ಹೋಂಡಾ ಸಿಟಿ 'ಫೇಸ್ ಲಿಫ್ಟ್' ಕಾರಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಇಲ್ಲಿವೆ

ಡೀಸೆಲ್ ಆವೃತ್ತಿ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ) :

ಎಸ್‌ವಿ (ಎಂಟಿ): 10.76 ಲಕ್ಷ ರೂ.

ವಿ (ಎಂಟಿ): 11.56 ಲಕ್ಷ ರೂ.

ವಿಎಕ್ಸ್ (ಎಂಟಿ): 12.87 ಲಕ್ಷ ರೂ.

ಝಡ್‌ಎಕ್ಸ್ (ಎಂಟಿ): 13.57 ಲಕ್ಷ ರೂ.

ಹೊಸ ಹೋಂಡಾ ಸಿಟಿ ಕಾರಿನ ಫೋಟೋಗಳನ್ನು ಈಗಲೇ ವೀಕ್ಷಿಸಿ.

Most Read Articles

Kannada
English summary
New Honda City Launched In India. The facelifted City gets a whole new look and is a lot safer for those driving the new Honda sedan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X