ಬಿಡುಗಡೆಗೆ ಸಜ್ಜಾದ ಹೋಂಡಾ ಸಿಟಿ ನೂತನ ಆವೃತ್ತಿ- ಸೋರಿಕೆಯಾದ ಕಾರಿನ ವೈಶಿಷ್ಟ್ಯತೆಗಳು

Written By:

ಇನ್ನೇನು ಬಿಡುಗಡೆಯ ಹೊಸ್ತಿನಲ್ಲಿರುವ ಹೋಂಡಾ ಸಂಸ್ಥೆಯ ನೂತನ ಸೆಡಾನ್ ಮಾದರಿಯ ಕಾರಿನ ವೈಶಿಷ್ಟ್ಯತೆಗಳು ಸೋರಿಕೆಯಾಗಿದ್ದು, ಕಾರಿನ ಮಾದರಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. 2017 ರ ನೂತನ ಆವೃತ್ತಿ ಇದೇ ಫೆಬ್ರವರಿ 14ಕ್ಕೆ ಬಿಡುಗಡೆಗೊಳ್ಳಬೇಕಿದ್ದು, ಸುಧಾರಿಸಲ್ಪಟ್ಟ ತಂತ್ರಜ್ಞಾನಗಳ ಬಗೆಗೆ ಕುತೂಹಲ ಹುಟ್ಟಿಸಿದೆ.

ಬಿಡುಗಡೆಗೂ ಮುನ್ನವೇ 2017 ಹೋಂಡಾ ಸಿಟಿ ವೈಶಿಷ್ಟ್ಯ ತೆಗಳು ಸೋರಿಕೆ

ಸೋರಿಕೆಯಾದ ಕೈಪಿಡಿ ಪ್ರಕಾರ, ಹೋಂಡಾ ಸಿಟಿ ಸಂಪೂರ್ಣ ರೂಪಾಂತರ ಹೊಂದಿದೆಯಂತೆ. VX ಹಾಗೂ ZX ಮಾದರಿಗಳಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌, ಮಂಜು ದೀಪಗಳು, 16-ಇಂಚಿನ ಡೈಮಂಡ್ ಕಟ್ ಮಿಶ್ರ ಲೋಹದ ಚಕ್ರಗಳನ್ನು ಹೊಂದಿದೆ. ಜೊತೆಗೆ ವಿದ್ಯುತ್ ಚಾಲಿತ ಮೇಲ್ಛಾವಣೆ ಅಳವಡಿಸಲಾಗಿದೆ.

ಬಿಡುಗಡೆಗೂ ಮುನ್ನವೇ 2017 ಹೋಂಡಾ ಸಿಟಿ ವೈಶಿಷ್ಟ್ಯ ತೆಗಳು ಸೋರಿಕೆ

ZX ಮಾದರಿಯ ಹೋಂಡಾ ಸಿಟಿ ಕಾರಿನಲ್ಲಿ ಎಲ್ಇಡಿ ಟೇಲ್ ಲ್ಯಾಂಪ್ ವ್ಯವಸ್ಥೆ ಕೂಡಾ ಇದೆ. ನೂತನ ಮಾದರಿಯಲ್ಲಿ ಡಿಕ್ಕಿ ಮೇಲ್ಭಾಗದಲ್ಲಿ ಸ್ಪಾಯ್ಲರ್ ಅಳವಡಿಸಲಾಗಿದ್ದು, ಹಿಂದಿನ ಕೆಲವು ವಿನ್ಯಾಸಗಳನ್ನು ಇಲ್ಲಿ ಮುಂದುವರಿಸಲಾಗಿದೆ.

ಬಿಡುಗಡೆಗೂ ಮುನ್ನವೇ 2017 ಹೋಂಡಾ ಸಿಟಿ ವೈಶಿಷ್ಟ್ಯ ತೆಗಳು ಸೋರಿಕೆ

ಬಿಡುಗಡೆಗೆ ಸಜ್ಜುಗೊಂಡಿರುವ ಹೋಂಡಾ ಸಿಟಿ ನೂತನ ಮಾದರಿ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ವೈಟ್ ಆರ್ಚಿಡ್ ಪರ್ಲ್, ಕ್ಯಾರ್ನಲಿನ್ ರೆಡ್ ಪರ್ಲ್, ಮಾರ್ಡನ್ ಸ್ಟೀಲ್ ಮೆಟಾಲಿಕ್, ಗೋಲ್ಡನ್ ಬ್ರೌನ್ ಮೆಟಾಲಿಕ್ ಹಾಗೂ ಅಲ್‌ಬಾಸ್ಟರ್ ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ಗ್ರಾಹಕರ ಕೈ ಸೇರಲಿದೆ.

ಬಿಡುಗಡೆಗೂ ಮುನ್ನವೇ 2017 ಹೋಂಡಾ ಸಿಟಿ ವೈಶಿಷ್ಟ್ಯ ತೆಗಳು ಸೋರಿಕೆ

ನೂತನ ಮಾದರಿಯ ಹೋಂಡಾ ಸಿಟಿ ಆವೃತ್ತಿಯಲ್ಲಿ ಇಂಟಿರಿಯರ್ ವಿನ್ಯಾಸ ಅದ್ಭುತವಾಗಿದೆ. ಕಾರಿನ ಸೀಟು, ಸ್ಟೇರಿಂಗ್, ಡೋರ್ ಲೈನಿಂಗ್‌ಗಳ ಮೇಲೆ ಫ್ಯಾಬ್ರಿಕ್ ಹೊದಿಕೆ ಹೊದಿಸಲಾಗಿದೆ. ಅಲ್ಲದೇ ವೀಲ್ಹ್, ಸಾಮಗ್ರಿ ಬಾಕ್ಸ್, ಡೋರ್ ಆರ್ಮ್ ರೆಸ್ಟ್‌ಗಳ ಮೇಲೂ ಫ್ಯಾಬ್ರಿಕ್ ಹೊದಿಕೆ ಮಾಡಲಾಗಿದೆ.

ಬಿಡುಗಡೆಗೂ ಮುನ್ನವೇ 2017 ಹೋಂಡಾ ಸಿಟಿ ವೈಶಿಷ್ಟ್ಯ ತೆಗಳು ಸೋರಿಕೆ

ಹೊಸ ಮಾದರಿಯ ಕಾರಿನಲ್ಲಿ ವಿನೂತನ ತಂತ್ರಜ್ಞಾನಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಾರಿನಲ್ಲಿ ಎಲ್ಲ ಮಾಹಿತಿ ನೀಡಬಲ್ಲ 7 ಇಂಚಿನ ಟಚ್ ಸ್ಕ್ರೀನ್ ನ್ಯಾವಿಗೆಶನ್ ವ್ಯವಸ್ಥೆ ಇದ್ದು, 1.5 ಜಿಬಿ ಮೆಡಿಯಾ ಮೆಮೊರಿ, ಮಿರರ್ ಲಿಂಕ್ ಸ್ಮಾರ್ಟ್‌ಪೋನ್ ಸಂಪರ್ಕ, ಧ್ವನಿ ಗುರುತಿಸುವಿಕೆ ವ್ಯವಸ್ಥೆಯಿದೆ. ಅಲ್ಲದೇ HDMI‌ನಲ್ಲಿ ಪೋರ್ಟ್ ಮತ್ತು ಮೈಕ್ರೋ ಕಾರ್ಡ್ ಸ್ಲಾಟ್ ಹಾಗೂ ಹಿನ್ನೋಟದ ಕ್ಯಾಮೆರಾ ಹೊಂದಿದೆ.

ಬಿಡುಗಡೆಗೂ ಮುನ್ನವೇ 2017 ಹೋಂಡಾ ಸಿಟಿ ವೈಶಿಷ್ಟ್ಯ ತೆಗಳು ಸೋರಿಕೆ

ಬಿಡುಗಡೆಯಾಗಲಿರುವ ಹೋಂಡಾ ಸಿಟಿಯ ಎಲ್ಲಾ ಮಾದರಿಗಳಲ್ಲೂ ವಿದ್ಯುತ್ ಚಾಲಿತ ORVMs ವ್ಯವಸ್ಥೆಯಿದ್ದು, ಸ್ವಯಂ ನಿಯಂತ್ರಿತ ಸೀಟುಗಳನ್ನು ಅಳವಡಿಸಲಾಗಿದೆ. ವೇಗ ನಿಯಂತ್ರಣ, ಟಚ್ ಸ್ಕ್ರೀನ್ ಪ್ಯಾನಲ್ ಮತ್ತು ಹಿಂಭಾಗದ ಎಸಿ, ಸ್ವಯಂಚಾಲಿತ ಹವಾಮಾನ ನಿಯಂತ್ರಣ ವ್ಯವಸ್ಥೆಯಿದೆ.

ಬಿಡುಗಡೆಗೂ ಮುನ್ನವೇ 2017 ಹೋಂಡಾ ಸಿಟಿ ವೈಶಿಷ್ಟ್ಯ ತೆಗಳು ಸೋರಿಕೆ

ಇನ್ನೊಂದು ಪ್ರಮುಖ ಅಂಶವೇನೆಂದರೆ, ಹೋಂಡಾ ನೂತನ ಆವೃತ್ತಿಯಲ್ಲಿ ಡ್ಯುಯಲ್ ಏರ್‌ಬ್ಯಾಗ್ ಪರಿಚಯಸಲಾಗಿದೆ. ಎಬಿಎಸ್, ಇಡಿಬಿ ಮತ್ತು ಹಿಂದಿನ ಸೀಟುಗಳ ಮೇಲೆ ISOFIX ಅಳವಡಿಸಲಾಗಿದ್ದು, ZX ಮಾದರಿಯಲ್ಲಿ ಹೆಚ್ಚುವರಿ ಏರ್‌ಬ್ಯಾಗ್ ಅಳವಡಿಸಲಾಗಿದೆ.

ಬಿಡುಗಡೆಗೂ ಮುನ್ನವೇ 2017 ಹೋಂಡಾ ಸಿಟಿ ವೈಶಿಷ್ಟ್ಯ ತೆಗಳು ಸೋರಿಕೆ

ಸೋರಿಕೆಯಾದ ಹೋಂಡಾ ಕಂಪನಿ ಕೈಪಿಡಿ ಪ್ರಕಾರ, ಹೊಸ ಆವೃತ್ತಿ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಲಭ್ಯವಿದೆ. 1.5 ಲೀಟರ್ iVTEC ಪೆಟ್ರೋಲ್ ಎಂಜಿನ್ 118ಬಿಎಚ್‌ಪಿ 145 ಎನ್‌ಎಂ ಟಾರ್ಕ್ ಉತ್ವಾದಿತ ಮತ್ತು 1.5 ಲೀಟರ್ iDTEC ಡಿಸೇಲ್ ಎಂಜಿನ್ 99 ಬಿಎಚ್‌ಪಿ ಮತ್ತು 200ಎನ್ಎಂ ಟಾರ್ಕ್ ಉತ್ವಾದನಾ ಸಾಮರ್ಥ್ಯವಿದೆ.

ಬಿಡುಗಡೆಗೂ ಮುನ್ನವೇ 2017 ಹೋಂಡಾ ಸಿಟಿ ವೈಶಿಷ್ಟ್ಯ ತೆಗಳು ಸೋರಿಕೆ

ಡೀಸೆಲ್ ಚಾಲಿತ ಕಾರುಗಳಲ್ಲಿ 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ವ್ಯವಸ್ಥೆಯಿದೆ. ಇನ್ನೂ ಪೆಟ್ರೋಲ್ ಘಟಕದಲ್ಲಿ 5 ಸ್ಪೀಡ್ ಮ್ಯಾನ್ಯುವಲ್ ಜೊತೆಗೆ ಪ್ಯಾಡಲ್ ಶಿಫ್ಟರ್ ಗೇರ್ ಬಾಕ್ಸ್ ಸಿವಿಟಿ ಎರಡೂ ವ್ಯವಸ್ಥೆ ಮಾಡಲಾಗಿದೆ.

ಬಿಡುಗಡೆಗೂ ಮುನ್ನವೇ 2017 ಹೋಂಡಾ ಸಿಟಿ ವೈಶಿಷ್ಟ್ಯ ತೆಗಳು ಸೋರಿಕೆ

ಇನ್ನು ಕಂಪನಿ ಹೇಳಿಕೊಂಡಿರುವ ಪ್ರಕಾರ ಪೆಟ್ರೋಲ್ ಆವೃತ್ತಿ ಪ್ರತಿ ಲೀಟರ್‌ಗೆ 17.4 ಕಿಮೀ ಮೈಲೇಜ್ ನೀಡಲಿದೆ. ಅಂತೆಯೇ ಡೀಸೆಲ್ ಘಟಕದ ಕಾರು ಪ್ರತಿ ಲೀಟರ್‌ಗೆ 25.6 ಕಿಮೀ / ಲೀ ಮೈಲೇಜ್ ನೀಡಲಿದೆ ಎಂದು ಸೋರಿಕೆ ಕೈಪಿಡಿಯಲ್ಲಿ ಮಾಹಿತಿ ಲಭ್ಯವಾಗಿದೆ.

ಎಕ್ಸಿಕ್ಯುಟಿವ್ ಸೆಡಾನ್ ಖರೀದಿಗೆ ಎದುರು ನೋಡುತ್ತಿದ್ದೀರಾ ? ಹಾಗಾದ್ರೆ ಹೋಂಡಾ ಸಿಟಿಗೆ ಪ್ರತಿಸ್ಪರ್ಧಿಯಾಗಿರುವ ಸ್ಕೋಡಾ ರ‍್ಯಾಪಿಡ್ ಫೋಟೋ ಗ್ಯಾಲರಿ ವೀಕ್ಷಿಸಲು ಕ್ಲಿಕ್ ಮಾಡಿ.

English summary
Ahead of the launch of the 2017 Honda City facelift, leaked details of variants, features and specs reveal two engine options.
Story first published: Monday, February 13, 2017, 15:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark