ವಿಡಿಯೋ- ಬಸ್ ಮತ್ತು ಕಾರು ನಡುವೆ ಡಿಕ್ಕಿ- ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

Written By:

ರಸ್ತೆ ದಾಟುವ ಮುನ್ನ ಒಂದಲ್ಲ ಹತ್ತು ಬಾರಿ ಎಚ್ಚರಿಕೆ ವಹಿಸಿದ್ರು ತಪ್ಪಲ್ಲ. ಯಾಕೇಂದ್ರೆ ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳು ಯಾವ ವೇಗದಲ್ಲಿ ಚಲಿಸುತ್ತಿರುತ್ತವೆ ಎಂಬುವುದು ನಮಗೆ ತಿಳಿದಿವುದಿಲ್ಲ. ಹೀಗಾಗಿ ಸ್ವಲ್ಪವೇ ಎಚ್ಚರ ತಪ್ಪಿದ್ರು ಅನಾಹುತ ತಪ್ಪಿದ್ದಲ್ಲ.

ಬಸ್ ಮತ್ತು ಕಾರು ನಡುವೆ ಡಿಕ್ಕಿ- ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಇಂತದೆ ಒಂದು ಘಟನೆ ಕೇರಳದಲ್ಲೂ ನಡೆದಿದ್ದು, ಪೆಟ್ರೋಲ್ ಬಂಕ್‌ ಒಂದರ ಬಳಿ ಕಾರು ಮತ್ತು ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಬಸ್ ಮತ್ತು ಕಾರು ನಡುವೆ ಡಿಕ್ಕಿ- ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಕೇರಳದ ಕೊಟ್ಟಾಯಂನ ಎಂಜಿ ರೋಡ್‌ನಲ್ಲಿ ಈ ಘಟನೆ ನಡೆದಿದ್ದು, ಮರ್ಸಿಡಿಸ್ ಬೆಂಝ್ ಕಾರು ಚಾಲಕ ಮಾಡಿದ ಒಂದು ತಪ್ಪಿನಿಂದಾಗಿ ಇಂತದೊಂದು ಭೀಕರ ಅಪಘಾತಕ್ಕೆ ಕಾರಣವಾಗಿದೆ.

ಬಸ್ ಮತ್ತು ಕಾರು ನಡುವೆ ಡಿಕ್ಕಿ- ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮರ್ಸಿಡಿಸ್ ಬೆಂಝ್ ಕಾರು ಚಾಲಕ ಪೆಟ್ರೋಲ್ ಬಂಕ್‌ಗೆ ಹೊಗುವ ಉದ್ದೇಶದಿಂದ ತಿರುವು ಪಡೆದುಕೊಂಡಿದ್ದಾನೆ. ಆದ್ರೆ ಇದೇ ವೇಳೆ ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಕೆಎಸ್ಆರ್‌ಟಿಸಿ(ಕೇರಳ ರಾಜ್ಯ ಸಾರಿಗೆ ಸಂಸ್ಥೆ)ಯ ಬಸ್ ಕಾರಿಗೆ ರಭಸವಾಗಿ ಗುದ್ದಿದೆ.

ಬಸ್ ಮತ್ತು ಕಾರು ನಡುವೆ ಡಿಕ್ಕಿ- ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಕಾರಿಗೆ ಬಸ್ ಗುದ್ದಿದ ಪರಿಣಾಮ ಬೆಂಝ್ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿ ಚಾಲಕನನ್ನು ಹೊರತು ಪಡಿಸಿ ಯಾರು ಇಲ್ಲದ ಪರಿಣಾಮ ಯಾವುದೇ ದೊಡ್ಡ ಅನುಹಾತು ನಡೆದಿಲ್ಲ. ಇದಲ್ಲದೇ ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬಸ್ ಮತ್ತು ಕಾರು ನಡುವೆ ಡಿಕ್ಕಿ- ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಇನ್ನು ಘಟನೆ ನಂತರ ಅಪಘಾತಗೊಂಡಿದ್ದ ಬಸ್ ಮತ್ತು ಕಾರನ್ನು ತೆರವುಗೊಳಿಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪೆಟ್ರೋಲ್ ಬಂಕ್‌ನಲ್ಲಿದ್ದ ಸಿಸಿಟಿವಿ ಪರಿಶೀಲಿಸಿದ ನಂತರ ಮೇಲ್ನೋಟಕ್ಕೆ ಇದು ಕಾರು ಚಾಲಕನದ್ದೇ ತಪ್ಪು ಎಂದು ಗುರುತಿಸಲಾಗಿದ್ದು, ಯಾವುದೇ ಮುಂಜಾಗ್ರತಾ ಸೂಚನೆ ನೀಡದೆ ರಸ್ತೆ ತಿರುವು ಪಡೆದುಕೊಳ್ಳುತ್ತಿರುವುದೇ ಅನಾಹುತಕ್ಕೆ ಕಾರಣವಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಕೇರಳ ಸಾರಿಗೆ ಬಸ್ ಮತ್ತು ಮರ್ಸಿಡಿಸ್ ಬೆಂಝ್ ಕಾರಿನ ನಡುವೆ ನಡೆದ ಅಪಘಾತ ದೃಶ್ಯಗಳು ಇಲ್ಲಿದೆ ನೋಡಿ.

English summary
Read in Kannada about KSRTC Bus Crashed Into Mercedes Benz In Kerala.
Story first published: Friday, September 15, 2017, 15:11 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark