ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

Written By:

ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಹತ್ತು ಹಲವು ಸೇವೆಗಳನ್ನು ನೀಡುತ್ತಿರುವ ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ಮುಂದೆ ಉಚಿತ ವೈಫೈ ಸೇವೆ ನೀಡಲಿದೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

18 ಸಾವಿರ ಬಸ್‌ಗಳಲ್ಲಿ ಉಚಿತ ವೈಫೈ

ಹೊಸ ಯೋಜನೆಯಿಂದ ಕೆಎಸ್‌ಆರ್‌ಟಿಸಿ, ಈಶಾನ್ಯ ಹಾಗೂ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸುಮಾರು 18 ಸಾವಿರ ಬಸ್‌ಗಳಲ್ಲಿ ವೈಫೈ ಸೇವೆ ದೊರೆಯಲಿದೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ಉಚಿತ ವೈ-ಫೈ ನೀಡಿದ ಹೆಗ್ಗಳಿಕೆ

ಸಾರಿಗೆ ಬಸ್‌ಗಳಲ್ಲಿ ಉಚಿತ ವೈಫೈ ಸೇವೆ ನೀಡುವ ಮೂಲಕ ಸರ್ಕಾರಿ ಬಸ್‌ಗಳಲ್ಲಿ ಉಚಿತ ವೈಫೈ ಸೇವೆ ನೀಡುವ ದೇಶದ ಮೊದಲ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ಯೋಜನೆ ಯಾವಾಗ ಆರಂಭ

ಸದ್ಯ ಪುಣೆ ಮೂಲದ ಕೆಪಿಐಟಿ ಟೆಕ್ನಾಲಜಿಸ್ ಸಂಸ್ಥೆಯು ಉಚಿತ ವೈಫೈ ವ್ಯವಸ್ಥೆ ಅಳವಡಿಸುವ ಗುತ್ತಿಗೆ ಪಡೆದಿದ್ದು, ಮುಂದಿನ ತಿಂಗಳಿನಿಂದಲೇ ಹೊಸ ಯೋಜನೆ ಜಾರಿಗೆ ಬರಲಿದೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ಕೇವಲ ಹವಾನಿಯಂತ್ರಿತ ಬಸ್‌ಗಳಲ್ಲಿ ಅಷ್ಟೇ ಅಲ್ಲದೇ ಸಾಮಾನ್ಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಈ ಸೌಲಭ್ಯ ದೊರೆಯಲಿದ್ದು, ಪ್ರಯಾಣಿಕರ ಸಂಖ್ಯೆ ಕೂಡಾ ಹೆಚ್ಚುವ ನಿರೀಕ್ಷೆಯಿದೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ಆದಾಯದಲ್ಲೂ ಹೆಚ್ಚಳ ನೀರಿಕ್ಷೆ

ಖಾಸಗಿ ಬಸ್‌ಗಳ ಮೇಲೆ ಅವಲಂಬಿತ ಪ್ರಯಾಣಿಕರನ್ನು ಸರ್ಕಾರಿ ಬಸ್‌ಗಳತ್ತ ಸೇಳೆಯುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ವೈಫೈ ವ್ಯವಸ್ಥೆ ನೀಡಲಾಗುತ್ತಿದೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ದೂರದ ಪ್ರಯಾಣದ ವೇಳೆ ಬಸ್‌ಗಳಲ್ಲಿ ಮನರಂಜನೆ ಅವಶ್ಯಕತೆಯಿದ್ದು, ಇದನ್ನು ಗಮನದಲ್ಲಿರಿಸಿಕೊಂಡು ಉಚಿತ ವೈಫೈ ಯೋಜನೆ ಜಾರಿಗೆ ತರಲಾಗುತ್ತಿದೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ವೈಫೈ ಬಳಕೆಯ ಮೇಲೆ ಮೀತಿ

ಒಂದು ಬಾರಿ ನೀವು ಬಸ್‌ನಲ್ಲಿ ಪ್ರಯಾಣಿಸುವಾಗ ಉಚಿತವಾಗಿ 20 ಎಂಬಿಯಷ್ಟು ಇಂಟರ್‌ನೆಟ್ ಬಳಸಲು ಮಾತ್ರ ಅವಕಾಶವಿದೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ಬಂಡವಾಳ ರಹಿತ ಆದಾಯ

ಹೌದು.. ಹೊಸ ಯೋಜನೆಗಾಗಿ ಕೆಎಸ್‌ಆರ್‌ಟಿಸಿ ಯಾವುದೇ ಬಂಡವಾಳ ಹೂಡುತ್ತಿಲ್ಲ. ಬದಲಾಗಿ ಕೆಪಿಐಟಿ ಸಂಸ್ಥೆಯೇ ಇದರ ವೆಚ್ಚವನ್ನು ಭರಿಸಲಿದ್ದು, ಮಾಸಿಕವಾಗಿ 20 ಲಕ್ಷ ರೂಪಾಯಿ ಆದಾಯ ನೀರಿಕ್ಷೆ ಮಾಡಲಾಗಿದೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ಬಸ್ ನಿಲ್ದಾಣಗಳಲ್ಲೂ ಉಚಿತ ವೈಫೈ

ಈಗಾಗಲೇ ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ವೈಫೈ ಸೇವೆ ಒದಗಿಸಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಶೀಘ್ರದಲ್ಲೇ 450 ಬಸ್ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ಹೊಸ ಯೋಜನೆ ಅನುಷ್ಠಾನಕ್ಕೆ ತರಲು ಉತ್ಸುಕವಾಗಿರುವ ಕೆಎಸ್‌ಆರ್‌ಟಿಸಿ, ಇದೇ ತಿಂಗಳು ಕೊನೆಯಲ್ಲಿ ಟೆಂಡರ್ ಕರೆಯುವ ಸಾಧ್ಯತೆಯಿದೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ಇನ್ನು ಹೊಸ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ರಾಮಲಿಂಗಾರೆಡ್ಡಿ, ಬಂಡವಾಳ ರಹಿತ ಯೋಜನೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಆದಾಯ ಕೂಡಾ ಹರಿದು ಬರಲಿದೆ ಎಂದಿದ್ದಾರೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ಆದ್ರೆ ಹೊಸ ಯೋಜನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಪರ-ವಿರೋಧ ವ್ಯಕ್ತವಾಗುತ್ತಿದ್ದು, ವೈಫೈ ವ್ಯವಸ್ಥೆಗಿಂತ ಸದ್ಯ ಇರುವ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆಯನ್ನು ಸರಿಪಡಿಸಿ ಎಂಬ ಮಾತುಗಳು ಕೂಡಾ ಕೇಳಿಬರುತ್ತಿವೆ.

ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈಫೈ ಸೌಲಭ್ಯ- ಇದರಿಂದ ಯಾರಿಗೆ ಲಾಭ..?

ಆದ್ರೆ ಅದೇನೇ ಇರಲಿ ಹೊಸ ಯೋಜನೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಆದಾಯದಲ್ಲೂ ಏರಿಕೆಯಾಗಲಿದೆ.

English summary
KSRTC Implementing free wi-fi system by june.
Story first published: Monday, May 22, 2017, 10:40 [IST]
Please Wait while comments are loading...

Latest Photos