ಜಿಪ್ಸಿ ಹೊಯ್ತು ಸಫಾರಿ ಬಂತು !! ಡುಂ ಡುಂ

Written By:

ಭಾರತ ಸೇನೆ ಕಂಡ ಅತ್ಯುನ್ನತ ಮಟ್ಟದ ಮತ್ತು ಎಲ್ಲರ ಪ್ರೀತಿಯ ಜಿಪ್ಸಿ ವಾಹನವನ್ನು ಇನ್ನು ಮುಂದೆ ಉತ್ಪಾದನೆ ಮಾಡದಿರಲು ಮಾರುತಿ ಕಂಪನಿ ನಿರ್ಧರಿಸಿದೆ. ಎಲ್ಲಾ ರೀತಿಯ ಹವಾಮಾನಗಳಲ್ಲಿಯೂ ಸಹ ಕಾರ್ಯ ನಿರ್ವಹಿಸುವ ತಾಕತ್ತು ಹೊಂದಿದ್ದ ಜಿಪ್ಸಿ ಇನ್ನು ಮುಂದೆ ಸೇನೆ ಇಂದ ದೂರ ಸರಿಯಲಿದೆ.

ಜಿಪ್ಸಿ ಹೊಯ್ತು ಸಫಾರಿ ಬಂತು !! ಡುಂ ಡುಂ

ಕೆಲವು ತಿಂಗಳ ಹಿಂದೆ ಸಫಾರಿ ಸ್ಟಾರ್ಮ್ ಕಾರು ಕೊಳ್ಳಲು ಟಾಟಾ ಮೋಟರ್ಸ್ ನೊಂದಿಗೆ ಭಾರತೀಯ ಸೇನೆ ಒಪ್ಪಂದಕ್ಕೆ ಬಂದಿತ್ತು, ಸೇನೆ ಹೊರತುಪಡಿಸಿ ಬೇರೆಲ್ಲೂ ಅಷ್ಟಾಗಿ ಬಳಕೆಯಾಗದ ಜಿಪ್ಸಿ ವಾಹನವನ್ನು ತಯಾರು ಮಾಡದಿರಲು ಮಾರುತಿ ತೀರ್ಮಾನಿಸಿದೆ.

ಜಿಪ್ಸಿ ಹೊಯ್ತು ಸಫಾರಿ ಬಂತು !! ಡುಂ ಡುಂ

ಮಾರುತಿ ಕಾರಿನ ಈ ಉತ್ಪಾದನೆ ಮಾಡದಿರುವ ನಿರ್ಧಾರದಿಂದಾಗಿ ಇನ್ನು ಮುಂದೆ ಭಾರತೀಯ ಸೇನೆಯಲ್ಲಿ ಜಿಪ್ಸಿ ವಾಹನ ಕಾಣಿಸುವುದು ಅನುಮಾನ ಎನ್ನಲಾಗಿದೆ.

ಜಿಪ್ಸಿ ಹೊಯ್ತು ಸಫಾರಿ ಬಂತು !! ಡುಂ ಡುಂ

ಅತಿ ಕಡಿಮೆ ಖರ್ಚು ವೆಚ್ಚ ಬೇಡುವ ವಾಹನ ಇದಾಗಿದ್ದು, ರಸ್ತೆ ಹೊರತುಪಡಿಸಿ ಕಲ್ಲು, ಮಣ್ಣಿನ ಭಾರಿ ಯಾವುದೇ ಇರಲಿ ಸರಾಗವಾಗಿ ಸಾಗುತ್ತಿದ್ದ ಈ ಜಿಪ್ಸಿ ಭಾರತೀಯ ಸೇನೆಯ ಆಪ್ತಮಿತ್ರ ಎನ್ನಬಹುದು.

ಜಿಪ್ಸಿ ಹೊಯ್ತು ಸಫಾರಿ ಬಂತು !! ಡುಂ ಡುಂ

ಈಗಾಗಲೇ ಭಾರತೀಯ ಸೇನೆ 3,200 ಟಾಟಾ ಕಂಪನಿಯ ಸಫಾರಿ ಸ್ಟಾರ್ಮ್ ಕಾರನ್ನು ಖರೀದಿಸಲು ಮುಂದಾಗಿದ್ದು, ಇನ್ನು ಮುಂದೆ ಜಿಪ್ಸಿ ಜಾಗಕ್ಕೆ ಸಫಾರಿ ಕಾರು ಬರಲಿದೆ ಎನ್ನಲಾಗಿದೆ.

ಜಿಪ್ಸಿ ಹೊಯ್ತು ಸಫಾರಿ ಬಂತು !! ಡುಂ ಡುಂ

ಮಾರುತಿ ತನ್ನ ಜಿಪ್ಸಿ ಕಾರನ್ನು ಪರಿಷ್ಕರಿಸದೇ ಇರುವುದು ಅಥವಾ ಆಧುನಿಕಗೊಳಿಸದೇ ಇರುವುದು ಭಾರತೀಯ ಸೈನ್ಯ ಈ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ. ಅತಿ ಹೆಚ್ಚಿನ ಮಟ್ಟದ ಆದ್ಯತೆಗಳನ್ನು ಪೂರೈಸಲು ಮಾರುತಿ ಕಂಪನಿ ವಿಫಲಗೊಂಡ ಕಾರಣ ಭಾರತೀಯ ಸೈನ್ಯ ಸಫಾರಿ ಸ್ಟಾರ್ಮ್ ಮೊರೆ ಹೋಗಿದೆ ಎಂಬ ವಿಚಾರ ತಿಳಿದುಬಂದಿದೆ.

ಜಿಪ್ಸಿ ಹೊಯ್ತು ಸಫಾರಿ ಬಂತು !! ಡುಂ ಡುಂ

ಸದ್ಯ ಇರುವ ಮಾರುತಿ ಜಿಪ್ಸಿ ಬಿಎಸ್ IV ಕಂಪ್ಲೇಂಟ್ 1.3-ಲೀಟರ್ಸ್ ಡೀಸೆಲ್ ಎಂಜಿನ್ ಹೊಂದಿದ್ದು ಹೆಚ್ಚಿನ ಮಟ್ಟದ ತಂತ್ರಜ್ಞಾನವಿಲ್ಲದ ಕಾರು ಇದಾಗಿದೆ.

ಜಿಪ್ಸಿ ಹೊಯ್ತು ಸಫಾರಿ ಬಂತು !! ಡುಂ ಡುಂ

ಇನ್ನು ಜಿಪ್ಸಿ ಕಾರು 103 ಏನ್ಎಂ ತಿರುಗುಬಲದಲ್ಲಿ 80 ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತಿ ಹೊಂದಿದ್ದು ಉತ್ಪಾದನೆಯಾದ ಶಕ್ತಿ ಎಲ್ಲಾ ನಾಲ್ಕು ಚಕ್ರಗಳಿಗೆ ಸಮನಾಗಿ ತಲುಪಲಿದೆ.

ಜಿಪ್ಸಿ ಹೊಯ್ತು ಸಫಾರಿ ಬಂತು !! ಡುಂ ಡುಂ

ಇನ್ನು ಸಫಾರಿ ವಿಚಾರಕ್ಕೆ ಬರುವುದಾದರೆ ಈ ಕಾರು 2.2-ಲೀಟರ್ಸ್ ಡೀಸೆಲ್ ಎಂಜಿನ್ ಹೊಂದಿದ್ದು 400 ಏನ್ಎಂ ತಿರುಗುಬಲದಲ್ಲಿ 156 ಅಶ್ವಶಕ್ತಿ ಉತ್ಪಾದಿಸಲಿದೆ. ಈ ಕ್ರೀಡಾ ಬಳಕೆಯ ವಾಹನ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಹೊಂದಿದ್ದು, ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸಹ ಯಾವುದೇ ಅಡಚಣೆ ಇಲ್ಲದೆ ಕಾರ್ಯ ನಿರ್ವಹಿಸಲಿದೆ.

ಟಾಟಾ ಮೋಟರ್ಸ್ ಸಫಾರಿ ಸ್ಟಾರ್ಮ್ ಚಿತ್ರಗಳು...

Read more on ಮಾರುತಿ maruti
English summary
The Gypsy has been the preferred choice of the Indian Army due to its ability to work in all weather conditions and off-road capability along with easy and low-cost maintenance.
Story first published: Friday, March 3, 2017, 17:32 [IST]
Please Wait while comments are loading...

Latest Photos