ಜಿನೆವಾದಲ್ಲಿ ಪ್ರದರ್ಶನಗೊಂಡ ಹೊಸ ಸ್ವಿಫ್ಟ್: ಭಾರತಕ್ಕೆ ಯಾವಾಗ ಬರುತ್ತೆ ಗೊತ್ತಾ ?

Written By:

ಜಿನೆವಾ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ ಬಹುನಿರೀಕ್ಷಿತ ಮಾರುತಿ ಸ್ವಿಫ್ಟ್ 2017 ಅನಾವರಣಗೊಂಡಿದೆ. ಪ್ರಸ್ತುತ ಕಾರು ಸದ್ಯದಲ್ಲೇ ಸ್ವಿಜರ್ಲೆಂಡ್ ಮಾರುಕಟ್ಟೆಯನ್ನು ಪ್ರವೇಶಸಲಿದ್ದು, ನಿಕಟ ಭವಿಷ್ಯದಲ್ಲಿ ಭಾರತಕ್ಕೂ ಕಾಲಿಡುವ ನಿರೀಕ್ಷೆಯಿದೆ.

ಜಿನೆವಾದಲ್ಲಿ ಪ್ರದರ್ಶನಗೊಂಡ ಹೊಸ ಸ್ವಿಫ್ಟ್: ಭಾರತಕ್ಕೆ ಯಾವಾಗ ಬರುತ್ತೆ ಗೊತ್ತಾ ?

ಕೆಲವೊಂದು ಪ್ರಮುಖ ಬದಲಾವಣೆಯೊಂದಿಗೆ 2017 ಮಾರುತಿ ಸ್ವಿಫ್ಟ್ ಕಾರು ಜನರ ಮುಂದೆ ಬರುತ್ತಿದ್ದು, ಇದರ ಉತ್ಪಾದಕ ವರ್ಷನ್ ರೆಡಿಯಾಗಿರುವುದು ಕಾರು ಪ್ರೇಮಿಗಳಿಗೆ ಇನ್ನಷ್ಟು ಖುಷಿಪಡುವಂತಾಗಿದ್ದು, ಹೆಚ್ಚಿನ ಮಟ್ಟದ ನೀರಿಕ್ಷೆ ಇರುವ ಕಾರು ಜನರ ಆಶೋತ್ತರಗಳನ್ನು ಈಡೇರಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಜಿನೆವಾದಲ್ಲಿ ಪ್ರದರ್ಶನಗೊಂಡ ಹೊಸ ಸ್ವಿಫ್ಟ್: ಭಾರತಕ್ಕೆ ಯಾವಾಗ ಬರುತ್ತೆ ಗೊತ್ತಾ ?

ಪ್ರಸಕ್ತ ವರ್ಷದಲ್ಲೇ ಯುರೋಪ್ ಮಾರುಕಟ್ಟೆಯನ್ನು ಕಾಲಿರಿಸಲಿರುವ ಮಾರುತಿ ಸ್ವಿಫ್ಟ್ 2017 ಮಾದರಿಯ ಕಾರು ಭಾರತಕ್ಕೆ ಯಾವಾಗ ಪ್ರವೇಶ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಜಿನೆವಾದಲ್ಲಿ ಪ್ರದರ್ಶನಗೊಂಡ ಹೊಸ ಸ್ವಿಫ್ಟ್: ಭಾರತಕ್ಕೆ ಯಾವಾಗ ಬರುತ್ತೆ ಗೊತ್ತಾ ?

ಈಗಾಗಲೇ ಕಳೆದ ವರ್ಷದ ಕೊನೆಯಲ್ಲಿ ಹೊಸ ಸ್ವಿಫ್ಟ್ ಜಪಾನಿನಲ್ಲಿ ಬಿಡುಗಡೆಗೊಂಡಿದ್ದು, ಹೆಚ್ಚಿನ ಮಟ್ಟದ ಜನಪ್ರಿಯತೆ ಪಡೆದುಕೊಂಡಿದೆ.

ಜಿನೆವಾದಲ್ಲಿ ಪ್ರದರ್ಶನಗೊಂಡ ಹೊಸ ಸ್ವಿಫ್ಟ್: ಭಾರತಕ್ಕೆ ಯಾವಾಗ ಬರುತ್ತೆ ಗೊತ್ತಾ ?

ವಿನ್ಯಾಸ ವಿಚಾರಕ್ಕೆ ಬಂದರೆ ಜಪಾನಿನಲ್ಲಿ ಬಿಡುಗಡೆಗೊಂಡಿರುವ ಸ್ವಿಫ್ಟಿನಂತೆಯೇ ಹೊಸದಾಗಿ ಬಿಡುಗಡೆಗೊಳ್ಳುತ್ತಿರುವ ಸ್ವಿಫ್ಟ್ ಇರಲಿದೆ.

ಜಿನೆವಾದಲ್ಲಿ ಪ್ರದರ್ಶನಗೊಂಡ ಹೊಸ ಸ್ವಿಫ್ಟ್: ಭಾರತಕ್ಕೆ ಯಾವಾಗ ಬರುತ್ತೆ ಗೊತ್ತಾ ?

ಹೊಚ್ಚ ಹೊಸ ಸ್ವಿಫ್ಟ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಮತ್ತೊಂದು ಮಾದರಿಯಲ್ಲಿ ಸದ್ಯ ಬಲೆನೊ ಆರ್.ಎಸ್ ಹೊಂದಿರುವ 1.0-ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ ಪೆಟ್ರೋಲ್ ಮಾದರಿ ಎಂಜಿನ್ನನ್ನು ಹೊಸ ಸ್ವಿಫ್ಟ್ ಪಡೆದುಕೊಳ್ಳಲಿದೆ.

ಜಿನೆವಾದಲ್ಲಿ ಪ್ರದರ್ಶನಗೊಂಡ ಹೊಸ ಸ್ವಿಫ್ಟ್: ಭಾರತಕ್ಕೆ ಯಾವಾಗ ಬರುತ್ತೆ ಗೊತ್ತಾ ?

1.2-ಲೀಟರ್ ಎಂಜಿನ್ 110 ಏನ್ಎಂ ತಿರುಗುಬಲದಲ್ಲಿ 90 ರಷ್ಟು ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಬಿಡುಗಡೆಗೊಂಡ ಎಲ್ಲಾ ಶಕ್ತಿಯನ್ನು 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅಥವಾ ಎಎಂಟಿ ಮುಕಾಂತರ ಚಕ್ರಗಳಿಗೆ ಕಳಿಸಿಕೊಡುತ್ತದೆ.

ಜಿನೆವಾದಲ್ಲಿ ಪ್ರದರ್ಶನಗೊಂಡ ಹೊಸ ಸ್ವಿಫ್ಟ್: ಭಾರತಕ್ಕೆ ಯಾವಾಗ ಬರುತ್ತೆ ಗೊತ್ತಾ ?

ಇನ್ನು, ಚಿಕ್ಕ ಟರ್ಬೊ ಚಾರ್ಜ್ ಹೊಂದಿರುವ 1.0 ಎಂಜಿನ್ 150ಏನ್ಎಂ ತಿರುಗುಬಲದಲ್ಲಿ 102ರಷ್ಟು ಅಶ್ವಶಕ್ತಿಯನ್ನು ಬಿಡುಗಡೆಗೊಳ್ಸಲಿದ್ದು, 6-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಹೊಂದಿರಲಿದೆ.

ಜಿನೆವಾದಲ್ಲಿ ಪ್ರದರ್ಶನಗೊಂಡ ಹೊಸ ಸ್ವಿಫ್ಟ್: ಭಾರತಕ್ಕೆ ಯಾವಾಗ ಬರುತ್ತೆ ಗೊತ್ತಾ ?

ಹೊಸ ಕಾರು ಮುಂಭಾಗದಲ್ಲಿ ದೊಡ್ಡದಾದ ಗ್ರಿಲ್ ಹೊಂದಿದ್ದು, ಹೊಸ ಎಲ್ಇಡಿ ಹೆಡ್ ಲ್ಯಾಂಪ್ಸ್ ಪಡೆದುಕೊಳ್ಳಲಿದೆ. ಹಿಂದಗಡೆ ಇರುವ ಟೈಲ್ ದೀಪಗಳಲ್ಲಿ ಕೂಡ ಎಲ್ಇಡಿ ದೀಪ ಅಳವಡಿಸಲಾಗಿದೆ.

ಜಿನೆವಾದಲ್ಲಿ ಪ್ರದರ್ಶನಗೊಂಡ ಹೊಸ ಸ್ವಿಫ್ಟ್: ಭಾರತಕ್ಕೆ ಯಾವಾಗ ಬರುತ್ತೆ ಗೊತ್ತಾ ?

ಹೊಸದಾಗಿ ಬರುತ್ತಿರುವ ಮಾರುತಿ ಸ್ವಿಫ್ಟ್ ಕಾರಿನ ಬೆಲೆ ಸರಿ ಸುಮಾರು 5 ಲಕ್ಷ ರೂಪಾಯಿಯಿಂದ ಶುರುವಾಗಲಿದೆ ಎನ್ನಲಾಗಿದೆ.

ಸ್ವಿಫ್ಟ್ ಕಾರಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ.

Read more on ಮಾರುತಿ maruti
English summary
The 2017 Maruti Swift has made its European debut at the Geneva Motor Show in Switzerland.
Story first published: Wednesday, March 8, 2017, 13:33 [IST]
Please Wait while comments are loading...

Latest Photos