ಕಾರು ಅಪಘಾತದಲ್ಲಿ ಸಚಿವರ ಪುತ್ರ ಸೇರಿ ಇಬ್ಬರು ದುರ್ಮರಣ

Written By:

ಹೈದ್ರಾಬಾದಿನ ಜ್ಯುಬಿಲಿ ಹಿಲ್ಸ್ ಬಳಿಯೇ ಈ ಭೀಕರ ಅಪಘಾತ ನಡೆದಿದ್ದು, ಆಂಧ್ರಪ್ರದೇಶದ ಸಚಿವ ಪಿ.ನಾರಾಯಣ್ ಪುತ್ರ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪೌರಾಡಳಿತ ಹಾಗೂ ನಗರಾಭಿವೃದ್ಧಿ ಖಾತೆ ಸಚಿವ ಡಾ. ಪಿ. ನಾರಾಯಣ್ ಅವರ ಪುತ್ರ ನಿಶಿತ್ ನಾರಾಯಣ್(23) ಹಾಗೂ ನಿಶಿತ್ ನಾರಾಯಣ್ ಸ್ನೇಹಿತ ರಾಜಾ ರವಿವರ್ಮಾ ಸಾವನ್ನಪ್ಪಿದ್ದಾರೆ.

ಮರ್ಸಿಡೆಸ್ ಬೆಂಜ್ ಎಸ್.ಯು.ವಿ. ಕಾರಿನಲ್ಲಿ ಅತಿವೇಗವಾಗಿ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದ್ದಾಗಿ ತಿಳಿದುಬಂದಿದೆ.

ಅತಿವೇಗದ ಚಾಲನೆಯಿಂದಲೇ ನಡೆದ ದುರಂತ

ಅತಿವೇಗವಾಗಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಮೆಟ್ರೋ ರೈಲಿನ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ.

ತಡರಾತ್ರಿ ಪಾರ್ಟಿ ತಂದ ಆಪತ್ತು

ತಡರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ದುರಂತ ಘಟನೆ ನಡೆದಿದೆ.

ಜ್ಯುಬಿಲಿ ಹಿಲ್ಸ್‌ನ ಮಾದಾಪುರ ರಸ್ತೆಯಲ್ಲಿರುವ ಪೆದ್ದಮ್ಮ ದೇವಸ್ಥಾನ ಬಳಿ ಮೆಟ್ರೋ ಮಾರ್ಗ ಹಾಯ್ದು ಹೊಗಿದ್ದು, ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್‌ಗೆ ರಭಸವಾಗಿ ಗುದ್ದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು,ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಈ ವೇಳೆಗಾಗಲೇ ಇಬ್ಬರು ಮೃತಪಟ್ಟಿದ್ದರು ಎನ್ನಲಾಗಿದೆ.

ಇನ್ನು ಘಟನೆ ಕುರಿತಂತೆ ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸಚಿವ ಪಿ.ನಾರಾಯಣ್ ಪುತ್ರನ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಆದ್ರೆ ಕುಡಿದು ರಾತ್ರಿ ವೇಳೆ ಅತಿವೇಗವಾಗಿ ಚಾಲನೆ ಮಾಡುವುದು ಪ್ರಾಣಕ್ಕೆ ಕುತ್ತು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಸುದ್ದಿ ಮೂಲ- V6 NEWS

Read more on ಅಪಘಾತ accident
English summary
Son of Andhra Pradesh minister P Narayana has been killed in a car crash in Hyderabad.
Please Wait while comments are loading...

Latest Photos