ಅಧ್ಯಯನ- ಮಾಲಿನ್ಯ ತಡೆಯಲು ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರು ಉತ್ತಮವಂತೆ..!

Written By:

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ವಿಶ್ವಾದ್ಯಂತ ಹತ್ತು ಹಲವು ಸಂಶೋಧನೆ ನಡೆಯುತ್ತಿದ್ದು, ಇದಕ್ಕೆ ಪೂರಕ ಎಂಬುವಂತೆ ಇತ್ತೀಚೆಗೆ ನಡೆದ ಸಂಶೋಧನೆ ಒಂದರ ಪ್ರಕಾರ ಹೊಸ ತಲೆಮಾರಿನ ಕಾರುಗಳಲ್ಲಿ ಪೆಟ್ರೋಲ್ ಆವೃತ್ತಿಗಿಂತ ಡೀಸೆಲ್ ಆವೃತ್ತಿಗಳು ಉತ್ತಮ ಎಂಬ ಅಂಶ ಬಹಿರಂಗವಾಗಿದೆ.

 ಅಧ್ಯಯನ- ಮಾಲಿನ್ಯ ತಡೆಯಲು ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರು ಉತ್ತಮವಂತೆ..!

ಕೆನಾಡ ಮೂಲದ ಮಾಂಟೆರಿಲ್ ವಿಶ್ವವಿದ್ಯಾಲಯದ ಪ್ರೋಫೆಸರ್ ಪ್ಯಾಟ್ರಿಕ್ ಹೆಲ್ಸ್ ನಡೆದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದ್ದು, ಡೀಸೆಲ್ ಕಾರುಗಳು ಹೊರಸೂಸುವ ಇಂಗಾಲದ ಪ್ರಮಾಣದ ಪೆಟ್ರೋಲ್ ಕಾರುಗಳಲ್ಲಿ ಹೆಚ್ಚಿದೆ ಎನ್ನಲಾಗಿದೆ.

 ಅಧ್ಯಯನ- ಮಾಲಿನ್ಯ ತಡೆಯಲು ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರು ಉತ್ತಮವಂತೆ..!

ಅದಲ್ಲದೇ ಇತ್ತೀಚೆಗೆ ವಿಶ್ವದ್ಯಾಂತ ಶ್ವಾಸಕೋಸಕ್ಕೆ ಸಂಬಂಧಿತ ರೋಗಗಳು ಹೆಚ್ಚುತ್ತಿದ್ದು, ಯುರೋಪ್ ಮತ್ತು ಅಮೆರಿಕದಲ್ಲಿ ಮೀತಿಮಿರುತ್ತಿರುವ ಪೆಟ್ರೋಲ್ ಕಾರು ಮಾದರಿಗಳಿಂದ ಅತಿಹೆಚ್ಚು ಅಪಾಯವಿದೆ ಎನ್ನಲಾಗಿದೆ.

 ಅಧ್ಯಯನ- ಮಾಲಿನ್ಯ ತಡೆಯಲು ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರು ಉತ್ತಮವಂತೆ..!

ಸಂಶೋಧಕರ ಪ್ರಕಾರ ಡೀಸೆಲ್ ಕಾರು ಮಾದರಿಗಳಿಂದ ಮಾಲಿನ್ಯ ತಗ್ಗಿಸಬಹುದಾಗಿದ್ದು, ಶೀತ ಪ್ರದೇಶಗಳಲ್ಲಿ ಪೆಟ್ರೋಲ್ ಕಾರುಗಳು ಡಿಸೇಲ್ ಕಾರುಗಳಿಂತ 10 ಪಟ್ಟು ಹೆಚ್ಚು ಇಂಗಾಲ ಬಿಡುಗಡೆ ಮಾಡುತ್ತವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

 ಅಧ್ಯಯನ- ಮಾಲಿನ್ಯ ತಡೆಯಲು ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರು ಉತ್ತಮವಂತೆ..!

ಇದು ಇನ್ನು ಮುಂದುವರಿದು ಪೆಟ್ರೋಲ್ ಕಾರುಗಳು 7 ಡಿಗ್ರಿಗಿಂತ ಕಡಿಮೆ ಉಷ್ಣಾಂಶದ ಪ್ರದೇಶಗಳಲ್ಲಿ ಡೀಸೆಲ್ ಕಾರುಗಳಿಂತ 62 ಪಟ್ಟು ಹೆಚ್ಚು ಮಾಲಿನ್ಯ ಹೊರಸೂಸುವಿಕೆ ಪ್ರಕ್ರಿಯೆ ನಡೆಯುತ್ತದೆ ಎಂಬ ಮಹತ್ಪದ ಅಂಶವನ್ನು ಸಂಶೋಧಕರು ಹೊರಹಾಕಿದ್ದಾರೆ.

 ಅಧ್ಯಯನ- ಮಾಲಿನ್ಯ ತಡೆಯಲು ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರು ಉತ್ತಮವಂತೆ..!

ಹೀಗಾಗಿ ಅತಿ ಶೀತ ವಲಯವನ್ನು ಹೊಂದಿರುವ ಹೊಂದಿರುವ ಮುಂದುವರಿದ ದೇಶಗಳಲ್ಲಿ ಪೆಟ್ರೋಲ್ ಕಾರುಗಳಿಂದ ಹೆಚ್ಚು ಪರಿಣಾಮ ಬೀರುತ್ತವೆ ಎಂಬುವುದು ಸಾಬೀತಾಗಿದ್ದು, ಇದು ಇಂಗಾಲದ ಮಳೆ ಮತ್ತು ಶ್ವಾಸಕೋಶದ ರೋಗಗಳಿಗೆ ಪ್ರಮುಖ ಕಾರಣವಾಗುತ್ತಿದೆ.

 ಅಧ್ಯಯನ- ಮಾಲಿನ್ಯ ತಡೆಯಲು ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರು ಉತ್ತಮವಂತೆ..!

ಇನ್ನು ಇತ್ತೀಚೆಗೆ ಮಾಲಿನ್ಯ ತಡೆ ಉದ್ದೇಶ ಹಿನ್ನೆಲೆ ಪ್ರಮುಖ ಆಟೋಮೊಬೈಲ್ ಉತ್ಪಾದಕರು ಮಾಲಿನ್ಯ ತಡೆಯಬಲ್ಲ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಎಂಜಿನ್‌ಗಳಿಂತ ಡೀಸೆಲ್ ಎಂಜಿನ್ ಉತ್ತಮ ಎಂಬುವುದನ್ನು ಸಂಶೋಧದನೆಗಳು ದೃಡಪಡಿಸಿವೆ.

English summary
Read in Kannada about Study Reveals New Diesel Cars Are Better For Environment.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark