121 ಟನ್ ತೂಕದ ರೋಡ್ ಟ್ರೈನ್ ಎಳೆಯಬಲ್ಲ ಶಕ್ತಿ ಹೊಂದಿದೆ ಲ್ಯಾಂಡ್ ರೋವರ್ ಡಿಸ್ಕವರಿ

Written By:

ಐಷಾರಾಮಿ ಎಸ್‌ಯುವಿಗಳಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಲ್ಯಾಂಡ್ ರೋವರ್ ಡಿಸ್ಕವರಿಯು ಹೊಸ ದಾಖಲೆಯೊಂದನ್ನು ಹುಟ್ಟುಹಾಕಿದ್ದು, ಆಸ್ಟ್ರೇಲಿಯಾದಲ್ಲಿ ನಡೆದ ಆಪ್ ರೋಡಿಂಗ್ ಕಾರ್ಯಗಾರದಲ್ಲಿ 121 ಟನ್ ತೂಕದ ರೋಡ್ ಟ್ರೈನ್ ಮಾದರಿಯನ್ನು ಸಲೀಸಾಗಿ ಎಳೆಯುವ ಮೂಲಕ ಹೊಸ ಸಾಧನೆ ಮಾಡಿದೆ.

121 ಟನ್ ತೂಕದ ರೋಡ್ ಟ್ರೈನ್ ಎಳೆಯಬಲ್ಲ ಶಕ್ತಿ ಹೊಂದಿದೆ ಡಿಸ್ಕವರಿ

2015ರಲ್ಲಿ 100 ಟನ್ ತೂಕದ ವಾಣಿಜ್ಯ ರೈಲು ಮಾದರಿಯನ್ನು ಎಳೆಯುವ ಮೂಲಕ ಎಸ್‌ಯುವಿ ಮಾದರಿಗಳಲ್ಲಿನ ಶಕ್ತಿ ಪ್ರದರ್ಶನ ಮಾಡಿದ್ದ ಲ್ಯಾಂಡ್ ರೋವರ್ ಡಿಸ್ಕವರಿ, ಈ ಬಾರಿ 121 ಟನ್ ತೂಕದ ರೋಡ್ ಟ್ರೈನ್ ಮಾದರಿಯನ್ನು ಯಾವುದೇ ಅಡೆತಡೆ ಇಲ್ಲದೇ ಎಳೆಯುವ ಮೂಲಕ ಮತ್ತೊಂದು ದೈತ್ಯಾಕಾರದ ದಾಖಲೆಗೆ ಸಾಕ್ಷಿಯಾಗಿದೆ.

121 ಟನ್ ತೂಕದ ರೋಡ್ ಟ್ರೈನ್ ಎಳೆಯಬಲ್ಲ ಶಕ್ತಿ ಹೊಂದಿದೆ ಡಿಸ್ಕವರಿ

ಇನ್ನು ಆಸ್ಟ್ರೇಲಿಯಾದಲ್ಲಿ ಗಣಿ ಕೈಗಾರಿಕೆಗಳ ಚಟುವಟಿಕೆಗಾಗಿ ರೋಡ್ ಟ್ರೈನ್ ಎಂಬ ವಿಶೇಷ ವಾಹನಗಳನ್ನು ಬಳಸಲಾಗುತ್ತಿದ್ದು, ಈ ಹಿನ್ನೆಲೆ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದ ಲ್ಯಾಂಡ್ ರೋವರ್ ಸಂಸ್ಥೆಯು ರೋಡ್ ಟ್ರೈನ್‌ಗಳನ್ನು ಎಳೆಯುವ ಕುರಿತು ಚಿಂತನೆ ಮಾಡಿತ್ತು.

121 ಟನ್ ತೂಕದ ರೋಡ್ ಟ್ರೈನ್ ಎಳೆಯಬಲ್ಲ ಶಕ್ತಿ ಹೊಂದಿದೆ ಡಿಸ್ಕವರಿ

ಈ ಹಿನ್ನೆಲೆ ಆಸ್ಟ್ರೇಲಿಯಾ ಸಾರಿಗೆ ಇಲಾಖೆಯಿಂದ ವಿಶೇಷ ಪರವಾನಿಗೆ ಪಡೆದುಕೊಳ್ಳುವ ಮೂಲಕ ರೋಡ್ ಟ್ರೈನ್ ಎಳೆಯುವ ಸಾಹಸ ಪ್ರದರ್ಶನ ಏರ್ಪಡಿಸಿದ್ದ ಲ್ಯಾಂಡ್ ರೋವರ್, ಪೂರ್ವ ಸಿದ್ಧತೆಗಳೊಂದಿಗೆ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

121 ಟನ್ ತೂಕದ ರೋಡ್ ಟ್ರೈನ್ ಎಳೆಯಬಲ್ಲ ಶಕ್ತಿ ಹೊಂದಿದೆ ಡಿಸ್ಕವರಿ

ಅದರಂತೆ ರೋಡ್ ಟ್ರೈನ್ ಎಳೆಯುವ ಸಾಹಸ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದ ಲ್ಯಾಂಡ್ ರೋವರ್ ಡಿಸ್ಕವರಿಯೂ 121 ಟನ್ ತೂಕದ ವಾಹನವನ್ನು 15.9 ಕಿಮಿ ವೇಗದಲ್ಲಿ 43 ಕಿಮಿ ದೂರ ಕ್ರಮಿಸಿ ಹೊಸ ಸಾಧನೆಯನ್ನು ಮಾಡಿತು.

121 ಟನ್ ತೂಕದ ರೋಡ್ ಟ್ರೈನ್ ಎಳೆಯಬಲ್ಲ ಶಕ್ತಿ ಹೊಂದಿದೆ ಡಿಸ್ಕವರಿ

ಇನ್ನು ಎಸ್‌ಯುವಿ ವಿಭಾಗಕ್ಕೆ ಹೊಸ ಮಾದರಿಯನ್ನು ಪರಿಚಯಿಸುತ್ತಿರುವ ಲ್ಯಾಂಡ್ ರೋವರ್ 2018ರ ಡಿಸ್ಕವರಿ ಆವೃತ್ತಿಯನ್ನು ಹೊರತರುತ್ತಿದ್ದು, ಇದೇ ಉದ್ದೇಶದಿಂದಲೇ ಹೊಸ ಕಾರಿನ ಎಂಜಿನ್ ಸಾಮರ್ಥ್ಯ ಕುರಿತು ಪರೀಕ್ಷೆ ಕೈಗೊಂಡಿದೆ.

121 ಟನ್ ತೂಕದ ರೋಡ್ ಟ್ರೈನ್ ಎಳೆಯಬಲ್ಲ ಶಕ್ತಿ ಹೊಂದಿದೆ ಡಿಸ್ಕವರಿ

2018ರ ಲ್ಯಾಂಡ್ ರೋವರ್ ಡಿಸ್ಕವರಿ ಆವೃತ್ತಿಯು 3.0-ಲೀಟರ್ ವಿ6 ಎಂಜಿನ್ ಹೊಂದಿದ್ದು, 254-ಬಿಎಚ್‌ಪಿ ಮತ್ತು 600-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಹೀಗಾಗಿ ಇದು ಕ್ರಿಡಾ ಆವೃತ್ತಿಯ ವಾಹನಗಳಲ್ಲೇ ಅತ್ಯುತ್ತಮ ಐಷಾರಾಮಿ ಕಾರು ಎನ್ನಬಹುದು.

ಆಪ್ ರೋಡಿಂಗ್ ಕಾರ್ಯಗಾರದಲ್ಲಿ 121 ಟನ್ ತೂಕದ ರೋಡ್ ಟ್ರೈನ್ ಎಳೆದ ಲ್ಯಾಂಡ್ ರೋವರ್ ಡಿಸ್ಕವರಿ ಸಾಹಸ ಪ್ರದರ್ಶನದ ವಿಡಿಯೋ ಇಲ್ಲಿದೆ ನೋಡಿ.

English summary
New Land Rover Discovery tows 121-ton Aussie road train.
Story first published: Thursday, September 21, 2017, 19:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark