ಪೋರ್ಷೆ 911 ಜಿಟಿ3 ಕಾರಿನ ಬಿಡುಗಡೆ ದಿನಾಂಕ ನಿಗದಿ

ಜರ್ಮನ್ ವಾಹನ ತಯಾರಕ ಪೋರ್ಷೆ ತನ್ನ ಹೊಸ 911 GT3 ಕಾರನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧವಾಗಿದೆ. ಅಕ್ಟೋಬರ್ 9 ರಂದು ಈ ಹೊಸ ಮಾದರಿಯನ್ನು ದೇಶದಲ್ಲಿ ಬಿಡುಗಡೆ ಮಾಡಲಾಗುತ್ತದೆ.

By Girish

ಜರ್ಮನ್ ವಾಹನ ತಯಾರಕ ಪೋರ್ಷೆ ತನ್ನ ಹೊಸ 911 GT3 ಕಾರನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧವಾಗಿದೆ. ಅಕ್ಟೋಬರ್ 9 ರಂದು ಈ ಹೊಸ ಮಾದರಿಯನ್ನು ದೇಶದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಪೋರ್ಷೆ 911 ಜಿಟಿ3 ಕಾರಿನ ಬಿಡುಗಡೆ ದಿನಾಂಕ ನಿಗದಿ

2017ರಲ್ಲಿ ನೆಡೆದ ಜಿನೆವಾ ಮೋಟಾರ್ ಪ್ರದರ್ಶನದಲ್ಲಿ ಹೊಸ 911 GT3 ಕಾರನ್ನು ಪೋರ್ಷೆ ಪ್ರದರ್ಶನ ಮಾಡಿತ್ತು. ಈ ಕಾರು ಐಷಾರಾಮಿ ಸಂಯೋಜನೆಯನ್ನು ಪಡೆದುಕೊಂಡಿದೆ ಹಾಗು ಕ್ರೀಡಾ ಕಾರಿನ ಹೊಸ ಪುನರಾವರ್ತನೆಯನ್ನು ಮರಳಿ ಈ ಕಾರಿನ ಮೂಲಕ ಪರಿಚಯಿಸಲು ಕಂಪನಿ ಬಯಸಿದೆ.

ಪೋರ್ಷೆ 911 ಜಿಟಿ3 ಕಾರಿನ ಬಿಡುಗಡೆ ದಿನಾಂಕ ನಿಗದಿ

911 GT3 ಕಾರು 4-ಲೀಟರ್ ಆರು-ಸಿಲಿಂಡರ್ ಹೊಂದಿರುವ ಬಾಕ್ಸರ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 540 ಎನ್‌ಎಂ ತಿರುಗುಬಲದಲ್ಲಿ 493 ಬಿಎಚ್‌ಪಿ ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಪೋರ್ಷೆ 911 ಜಿಟಿ3 ಕಾರಿನ ಬಿಡುಗಡೆ ದಿನಾಂಕ ನಿಗದಿ

7 ಸ್ಪೀಡ್ ಸ್ವಯಂಚಾಲಿತ ಆಯ್ಕೆ ಪಡೆದುಕೊಂಡಿರುವ ಮಾದರಿಯು ಕೇವಲ 3.4 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವಷ್ಟು ಬಲಿಷ್ಠವಾಗಿದೆ ಮತ್ತು ಗಂಟೆಗೆ ಗರಿಷ್ಠ 318 ವೇಗ ಮಿತಿ ಹೊಂದಿದೆ.

ಪೋರ್ಷೆ 911 ಜಿಟಿ3 ಕಾರಿನ ಬಿಡುಗಡೆ ದಿನಾಂಕ ನಿಗದಿ

ಇನ್ನು, 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಆಯ್ಕೆಯ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರು ಕೇವಲ 4.1 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಹೊಂದಲಿದೆ ಎನ್ನಬಹುದು ಹಾಗು ಗಂಟೆಗೆ ಗರಿಷ್ಠ 320 ಕಿ.ಮೀ ವೇಗ ಮಿತಿ ಪಡೆದುಕೊಳ್ಳಲಿದೆ.

ಪೋರ್ಷೆ 911 ಜಿಟಿ3 ಕಾರಿನ ಬಿಡುಗಡೆ ದಿನಾಂಕ ನಿಗದಿ

ಹೊಸ ಜನರೇಶನ್ 911 GT3 ಮಾದರಿಯು ಹಿಂದಿನ ಆವೃತ್ತಿಗಿಂತ ಸಾಕಷ್ಟು ವಿರುದ್ಧವಾದ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ. ಎಕ್ಸೆಲ್ ಸ್ಟಿಯರಿಂಗ್ ಜೊತೆ ಪರಿಷ್ಕರಿಸಲ್ಪಟ್ಟಿರುವ ಚಾರ್ಸಿಯನ್ನು ಈ ಕಾರು ಪಡೆಯಲಿದ್ದು, ಹಗುರವಾದ ನಿರ್ಮಾಣದ ಕಾರಣ ಸುಧಾರಿತ ನಿರ್ವಹಣೆಯನ್ನು ಈ ಕಾರು ಪಡೆಯಲಿದೆ.

ಪೋರ್ಷೆ 911 ಜಿಟಿ3 ಕಾರಿನ ಬಿಡುಗಡೆ ದಿನಾಂಕ ನಿಗದಿ

ಹೊರಭಾಗದಲ್ಲಿ ಹೊಸ ಮಾದರಿಯು ಸ್ಟ್ಯಾಂಡರ್ಡ್ ಏರೋ ಪ್ಯಾಕೇಜ್, ದೊಡ್ಡದಾದ ಚಕ್ರಗಳು ಮತ್ತು ನಾಲ್ಕು ಪಾಯಿಂಟ್ ಪಡೆದ ಹಗಲು ಹೊತ್ತು ಬೆಳಗುವ ಎಲ್ಇಡಿ ದೀಪಗಳು ಹಾಗು ಹೊಗೆಯಾಕಾರದ ಹೆಡ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.

Most Read Articles

Kannada
English summary
German automaker Porsche is all set to introduce the new 911 GT3 in India. The new model will be launched in the country on October 9, 2017.
Story first published: Tuesday, October 3, 2017, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X