ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ 77 ಸಾವಿರ ಡಿಸ್ಕೌಂಟ್..!

By Praveen

ದೇಶದ ಅತಿ ದೊಡ್ಡ ಕಾರು ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ನಿಸ್ಸಾನ್ ತನ್ನ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ ನೀಡುತಿದ್ದು, ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಸ್‌ಯುವಿ ಕಾರು ಖರೀದಿಸುವ ಗ್ರಾಹಕರಿಗೆ ಇದೊಂದು ಅತ್ಯತ್ತಮ ಅವಕಾಶ ಎನ್ನಬಹುದು.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ 77 ಸಾವಿರ ಡಿಸ್ಕೌಂಟ್..!

ನಿಸ್ಸಾನ್ ಸಂಸ್ಥೆಯು ವಿವಿಧ ಕಾರು ಮಾದರಿಗಳಿಗೆ ಅನುಗಣವಾಗಿ ಸುಮಾರು 26,000 ರೂ.ಗಳಿಂದ 77,000 ರೂ.ಗಳ ವರೆಗೆ ಡಿಸ್ಕೌಂಟ್ ಒದಗಿಸುತ್ತಿದ್ದು, ವರ್ಷಾಂತ್ಯದಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳನ್ನು ಮಾರಾಟ ಮಾಡುವ ಗುರಿಯೊಂದಿಗೆ ಭಾರೀ ಪ್ರಮಾಣದ ಡಿಸ್ಕೌಂಟ್ ಘೋಷಿಸಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ 77 ಸಾವಿರ ಡಿಸ್ಕೌಂಟ್..!

ಸಂಸ್ಥೆಯ ಪ್ರಮುಖ ಕಾರು ಮಾದರಿಗಳಾದ ಮೈಕ್ರಾ, ಮೈಕ್ರಾ ಆಕ್ಟಿವಾ, ಟೆರಾನೋ, ಸನ್ನಿ, ದಟ್ಸನ್ ಗೊ, ದಟ್ಸನ್ ಗೊ ಪ್ಲಸ್, ದಟ್ಸನ್ ರೆಡಿ ಗೊ(800 ಸಿಸಿ) ಮತ್ತು ದಟ್ಸನ್ ರೆಡಿ ಗೊ(1 ಲೀಟರ್) ಕಾರುಗಳ ಮೇಲೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ.

Recommended Video - Watch Now!
India-Bound Nissan Kicks Gets 4-Star Rating In Latin NCAP Safety Test - DriveSpark
ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ 77 ಸಾವಿರ ಡಿಸ್ಕೌಂಟ್..!

ವಿಶೇಷವಾಗಿ ನಿಸ್ಸಾನ್ ಟೆರಾನೋ ಎಸ್‌ಯುವಿ ಖರೀದಿಸುವ ಗ್ರಾಹಕರಿಗೆ 77 ಸಾವಿರ ಹಾಗೂ ನಿಸ್ಸಾನ್ ಸನ್ನಿ ಸೆಡಾನ್ ಖರೀದಿಸುವ ಗ್ರಾಹಕರಿಗೆ 65 ಸಾವಿರ ರೂ.ಗಳ ಡಿಸ್ಕೌಂಟ್ ಲಭ್ಯವಿದೆ ಎಂದು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ 77 ಸಾವಿರ ಡಿಸ್ಕೌಂಟ್..!

ಇನ್ನು ಮೈಕ್ರಾ, ಮೈಕ್ರಾ ಆಕ್ಟಿವಾ, ಟೆರಾನೋ, ಸನ್ನಿ, ದಟ್ಸನ್ ಗೊ, ದಟ್ಸನ್ ಗೊ ಪ್ಲಸ್, ದಟ್ಸನ್ ರೆಡಿ ಗೊ(800 ಸಿಸಿ) ಮತ್ತು ದಟ್ಸನ್ ರೆಡಿ ಗೊ(1 ಲೀಟರ್) ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಉಚಿತ ಇನ್ಸುರೆನ್ಸ್, ಕ್ಯಾಶ್ ಡಿಸ್ಕೌಂಟ್, ಸರ್ಕಾರಿ ನೌಕರರಿಗೆ ವಿಶೇಷ ಆಫರ್ ಮತ್ತು 7.9 ವಾರ್ಷಿಕ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕೂಡಾ ದೊರೆಯಲಿದೆ.

ತಪ್ಪದೇ ಓದಿ-ಬಿಡುಗಡೆಗೂ ಮುನ್ನವೇ ಸೆಡಾನ್ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಟೊಯೊಟಾ ವಿಯೋಸ್

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ 77 ಸಾವಿರ ಡಿಸ್ಕೌಂಟ್..!

ಹೀಗಾಗಿ ಮೈಕ್ರಾ ಖರೀದಿ ಮೇಲೆ 63 ಸಾವಿರ ಡಿಸ್ಕೌಂಟ್, ಮೈಕ್ರಾ ಆಕ್ಟಿವಾ ಖರೀದಿ ಮೇಲೆ 56 ಸಾವಿರ ಡಿಸ್ಕೌಂಟ್, ಟೆರಾನೋ ಖರೀದಿ ಮೇಲೆ 77 ಸಾವಿರ ಡಿಸ್ಕೌಂಟ್, ಸನ್ನಿ ಸೆಡಾನ್ ಖರೀದಿ ಮೇಲೆ 65 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, ಭರ್ಜರಿ ಆಫರ್‌ಗಳಿಂದಾಗಿ ಕಾರು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದಾರೆ.

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ 77 ಸಾವಿರ ಡಿಸ್ಕೌಂಟ್..!

ಹಾಗೆಯೇ ದಟ್ಸನ್ ಗೊ ಖರೀದಿ ಮೇಲೆ 27 ಸಾವಿರ ಡಿಸ್ಕೌಂಟ್, ದಟ್ಸನ್ ಗೊ ಪ್ಲಸ್ ಖರೀದಿ ಮೇಲೆ 29 ಸಾವಿರ ಡಿಸ್ಕೌಂಟ್, ದಟ್ಸನ್ ರೆಡಿ ಗೊ(800 ಸಿಸಿ) ಖರೀದಿ ಮೇಲೆ 26 ಸಾವಿರ ಡಿಸ್ಕೌಂಟ್ ಮತ್ತು ದಟ್ಸನ್ ರೆಡಿ ಗೊ(1 ಲೀಟರ್) ಕಾರುಗಳ ಖರೀದಿ ಮೇಲೆ 34 ಸಾವಿರ ಡಿಸ್ಕೌಂಟ್ ಲಭ್ಯವಿದೆ.

ತಪ್ಪದೇ ಓದಿ-2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ....

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲೆ 77 ಸಾವಿರ ಡಿಸ್ಕೌಂಟ್..!

ಒಟ್ಟಿನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುವ ಮೂಲಕ ಗರಿಷ್ಠ ಮಾರಾಟ ಉದ್ದೇಶ ಹೊಂದಿರುವ ನಿಸ್ಸಾನ್ ಸಂಸ್ಥೆಯು ಡಿಸ್ಕೌಂಟ್ ಜೊತೆ ಜೊತೆಗೆ ಗ್ರಾಹಕ ಸ್ನೇಹಿ ಸೇವೆಗಳನ್ನು ಕೂಡಾ ನೀಡುತ್ತಿದ್ದು, ಜನವರಿ 1 ರಿಂದ ಕಾರುಗಳ ಬೆಲೆ ಹೆಚ್ಚಳ ಹಿನ್ನೆಲೆ ಖರೀದಿಗೆ ಇದು ಉತ್ತಮ ಸಮಯ ಎನ್ನಬಹುದು.

Trending DriveSpark YouTube Videos

Subscribe To DriveSpark Kannada YouTube Channel - Click Here

Kannada
Read more on nissan datsun
English summary
Nissan & Datsun India Announces Year-End Discounts & Offers — Benefits Up To Rs 77,000
ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more