ಹಿರಿಯ ನಾಗರಿಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಓಲಾ ಕ್ಯಾಬ್..!

Written By:

ಆ್ಯಪ್ ಆಧರಿತ ಕ್ಯಾಬ್ ಸೇವೆಗಳನ್ನು ಒದಗಿಸುವುದಲ್ಲಿ ಮುಂಚೂಣಿಯಲ್ಲಿರುವ ಓಲಾ ಸಂಸ್ಥೆಯು, ಹಿರಿಯ ನಾಗರಿಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಹಿರಿಯ ನಾಗರಿಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಓಲಾ ಕ್ಯಾಬ್..!

ಇಷ್ಟು ದಿನಗಳ ಕಾಲ ನಾವು ಸರ್ಕಾರಿ ಬಸ್, ರೈಲ್ಪೆಗಳಲ್ಲಿ ಮಾತ್ರ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ಡಿಸ್ಕೌಂಟ್ ನೀಡುತ್ತಿರುವುದನ್ನು ಕೇಳಿದ್ದೇವೆ. ಆದ್ರೆ ಆ್ಯಪ್ ಆಧರಿತ ಕ್ಯಾಬ್ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಓಲಾ ಸಂಸ್ಥೆ ಕೂಡಾ ಡಿಸ್ಕೌಂಟ್ ಘೋಷಣೆ ಮಾಡಿದೆ.

ಹಿರಿಯ ನಾಗರಿಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಓಲಾ ಕ್ಯಾಬ್..!

60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರಯಾಣದ ದರದಲ್ಲಿ ಶೇ.20ರಷ್ಟು ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಓಲಾ ಕ್ಯಾಬ್ ಸೇವೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಹಿರಿಯ ನಾಗರಿಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಓಲಾ ಕ್ಯಾಬ್..!

ಆದ್ರೆ ಹೊಸ ಯೋಜನೆಯನ್ನು ಮೊದಲ ಹಂತದಲ್ಲಿ ನಾಗ್ಪುರ್ ಸೇರಿದಂತೆ ದೆಹಲಿ, ಅಹಮ್ಮದಾಬಾದ್ ಮಾತ್ರ ಜಾರಿಗೊಳಿಸಲಾಗಿದ್ದು, ತದನಂತರವಷ್ಟೇ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜಾರಿಗೆ ತರಲಾಗುತ್ತಿದೆ.

ಹಿರಿಯ ನಾಗರಿಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಓಲಾ ಕ್ಯಾಬ್..!

ಒಂದು ತಿಂಗಳ ಅವಧಿಯಲ್ಲಿ ಹತ್ತು ಬಾರಿ ಮಾತ್ರ ಈ ಡಿಸ್ಕೌಂಟ್ ಅನ್ವಯವಾಗಲಿದ್ದು, ತದನಂತರ ಬುಕ್ ಮಾಡುವ ಕ್ಯಾಬ್ ಸೇವೆಗಳಿಗೆ ಸಾಮನ್ಯ ದರಗಳನ್ನು ಪಾವತಿಸಬೇಕಾಗುತ್ತದೆ.

ಹಿರಿಯ ನಾಗರಿಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಓಲಾ ಕ್ಯಾಬ್..!

ಸದ್ಯ ಓಲಾ ಆಟೋಗಳಲ್ಲಿ ಈ ಡಿಸ್ಕೌಂಟ್ ಯೋಜನೆ ಜಾರಿಯಲ್ಲಿದ್ದು, ಹಿರಿಯ ನಾಗರಿಕರಿಗೆ ಪ್ರಯಾಣದ ದರದಲ್ಲಿ ಶೇ.15 ರಿಯಾಯ್ತಿ ದೊರೆಯುತ್ತಿವೆ. ಆದ್ರೆ ಈ ಯೋಜನೆ ಕೂಡಾ ಬೆಂಗಳೂರಿನಲ್ಲಿ ಲಭ್ಯವಿಲ್ಲ.

ಹಿರಿಯ ನಾಗರಿಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಓಲಾ ಕ್ಯಾಬ್..!

ಮುಂಬೈ, ಪುಣೆ, ಅಹಮ್ಮದಬಾದ್, ನಾಗ್ಪುರ್, ಇಂಧೋರ್ ಮತ್ತು ಭೂಪಾಲ್‌ನಲ್ಲಿ ಮಾತ್ರ ಡಿಸ್ಕೌಂಟ್ ಆಟೋ ಸೇವೆಗಳು ಲಭ್ಯವಿದ್ದು, ಬೆಂಗಳೂರಿನಲ್ಲೂ ಹಿರಿಯರ ನಾಗರಿಕರಿಗೆ ಡಿಸ್ಕೌಂಟ್ ಸೇವೆಗಳು ಸದ್ಯದ್ಲಲೇ ಲಭ್ಯವಾಗುವ ಸಾಧ್ಯತೆಗಳಿವೆ.

ಹಿರಿಯ ನಾಗರಿಕರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಓಲಾ ಕ್ಯಾಬ್..!

ಒಟ್ಟಿನಲ್ಲಿ ದೇಶಿಯಾಗಿ ಕ್ಯಾಬ್ ಸೇವೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆ ಕೈಗೊಂಡಿರುವ ಓಲಾ, ಹಿರಿಯ ನಾಗರಿಕರಿಗೆ ಡಿಸ್ಕೌಂಟ್ ನೀಡುತ್ತಿರುವುದು ಒಳ್ಳೆಯ ವಿಚಾರ.

Read more on ಕ್ಯಾಬ್ cab
English summary
Read in Kannada about Ola To Offer 20 Percent Discount To Senior Citizens.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark