ಮಾರುತಿ ಸ್ವಿಫ್ಟ್ ಕಾರಿಗೆ ಟಕ್ಕರ್ ಕೊಡಲು ಬರಲಿದೆ ಪ್ಯೂಜೊ ಸಂಸ್ಥೆಯ ಹೊಸ ಕಾರು

Written By:

2020ರ ಹೊತ್ತಿಗೆ ಪ್ಯೂಜೊ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವುದರ ಬಗ್ಗೆ ನಾವು ಈಗಾಗಲೇ ವರದಿ ಮಾಡಿದ್ದೆವು. ಈಗ ಕಂಪನಿಯ ಕಾರುಗಳು ದೇಶದಲ್ಲಿ ಬಿಡುಗಡೆಯಾಗುವ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿದೆ.

ಮಾರುತಿ ಸ್ವಿಫ್ಟ್ ಕಾರಿಗೆ ಟಕ್ಕರ್ ಕೊಡಲು ಬರಲಿದೆ ಪ್ಯೂಜೊ ಸಂಸ್ಥೆಯ ಹೊಸ ಕಾರು

ಹೌದು, ಪ್ಯೂಜೊ ಸಂಸ್ಥೆಯು 2020ರಲ್ಲಿ ತನ್ನ ಮೊದಲ ಹ್ಯಾಚ್‌ಬ್ಯಾಕ್ ಕಾರನ್ನು ಬಹಿರಂಗಪಡಿಸಲಿದೆ ಎಂಬ ಮಾಹಿತಿ ಡ್ರೈವ್ ಸ್ಪಾರ್ಕ್‌ಗೆ ಸಿಕ್ಕಿದ್ದು, ಬಿಡುಗಡೆಯಾಗುವ ಕಾರು ಪ್ರಖ್ಯಾತ ಮಾರುತಿ ಸ್ವಿಫ್ಟ್ ಕಾರಿನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡುತ್ತದೆ. ಬಿಡುಗಡೆಯಾಗುವ ಕಾರು ತಾತ್ಕಾಲಿಕವಾಗಿ SC21 ಎಂದು ಸಂಕೇತನಾಮ ಪಡೆದುಕೊಂಡಿದೆ.

ಮಾರುತಿ ಸ್ವಿಫ್ಟ್ ಕಾರಿಗೆ ಟಕ್ಕರ್ ಕೊಡಲು ಬರಲಿದೆ ಪ್ಯೂಜೊ ಸಂಸ್ಥೆಯ ಹೊಸ ಕಾರು

ಕಾರಿನ ಖರ್ಚನ್ನು ಕಡಿಮೆ ಮಾಡಲು, ವಾಹನ ತಯಾರಕ ಕಂಪನಿಯು ಮಾಡ್ಸನ್ ಸುಮಿ, ಯುನೋ ಮಿಂಡಾ, ಸ್ಪಾರ್ಕ್ ಮಿಂಡಾ ಮತ್ತು ರಾನ್ ಗ್ರೂಪ್‌ ಸಹಾಯ ಹರಸುತ್ತಿದೆ. ಈ ಕಂಪನಿಗಳು ಹ್ಯಾಚ್‌ಬ್ಯಾಕ್ ಕಾರಿಗೆ ಮೂಲ ಘಟಕಗಳನ್ನು ಪೂರೈಸಲಿವೆ.

ಮಾರುತಿ ಸ್ವಿಫ್ಟ್ ಕಾರಿಗೆ ಟಕ್ಕರ್ ಕೊಡಲು ಬರಲಿದೆ ಪ್ಯೂಜೊ ಸಂಸ್ಥೆಯ ಹೊಸ ಕಾರು

ಸದ್ಯದ ಮಾಹಿತಿ ಪ್ರಕಾರ ಪ್ಯೂಜೊ ಸಂಸ್ಥೆಯು 2020ರ ವೇಳೆಗೆ ಎರಡು ಅಥವಾ ಮೂರು ಹ್ಯಾಚ್‌ಬ್ಯಾಕ್ ರೂಪಾಂತರಗಳನ್ನು ಪ್ರಾರಂಭಿಸುತ್ತದೆ ಎಂದು ವರದಿಯಾಗಿದೆ. ಈ ಬಗ್ಗೆ ಕಂಪನಿಯ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

ಮಾರುತಿ ಸ್ವಿಫ್ಟ್ ಕಾರಿಗೆ ಟಕ್ಕರ್ ಕೊಡಲು ಬರಲಿದೆ ಪ್ಯೂಜೊ ಸಂಸ್ಥೆಯ ಹೊಸ ಕಾರು

ಪ್ಯೂಜೊ ಕಂಪನಿಯು ಪೂರೈಕೆದಾರರೊಂದಿಗೆ ಸುಮಾರು 4 ಲಕ್ಷ ಕಾರುಗಳ ಸರಬರಾಜು ಮಾಡುವ ಒಪ್ಪಂದಕ್ಕೆ ಸಹಿ ಹಾಕಲಿದ್ದು, ಕಾರುಗಳನ್ನು ಚೆನ್ನೈನಲ್ಲಿರುವ ಹಿಂದೂಸ್ಥಾನ್ ಮೋಟಾರ್ಸ್‌ನ ಉತ್ಪಾದನಾ ಘಟಕದಲ್ಲಿ ತಯಾರಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಘಟಕದಿಂದ 1 ಲಕ್ಷ ಕಾರುಗಳನ್ನು ಹೊರತರಲು ಕಂಪನಿಯು ಉದ್ದೇಶಿಸಿದೆ.

ಮಾರುತಿ ಸ್ವಿಫ್ಟ್ ಕಾರಿಗೆ ಟಕ್ಕರ್ ಕೊಡಲು ಬರಲಿದೆ ಪ್ಯೂಜೊ ಸಂಸ್ಥೆಯ ಹೊಸ ಕಾರು

ಎಸ್‌ಯುವಿ ವಿಭಾಗದ ನಂತರ ಭಾರತದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಎರಡನೆಯ ವಿಭಾಗವಾಗಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗ ಗುರುತಿಸಿಕೊಂಡಿದೆ. ಈ ಎರಡು ವಿಭಾಗದ ಕಡೆ ಪ್ಯೂಜೊ ಕಂಪನಿ ಹೆಚ್ಚು ಗಮನ ಹರಿಸಿದೆ.

ಮಾರುತಿ ಸ್ವಿಫ್ಟ್ ಕಾರಿಗೆ ಟಕ್ಕರ್ ಕೊಡಲು ಬರಲಿದೆ ಪ್ಯೂಜೊ ಸಂಸ್ಥೆಯ ಹೊಸ ಕಾರು

ಮಾರುತಿ ಕಂಪನಿಯ ಸ್ವಿಫ್ಟ್ ಕಾರಿನ ಪ್ರತಿಸ್ಪರ್ಧಿಯನ್ನು ಹೊರತುಪಡಿಸಿ, ಪ್ಯೂಜೊ ಕಂಪನಿ ಇನ್ನೂ ಮೂರು ಹೊಸ ಮಾದರಿಗಳನ್ನು ವಿವಿಧ ವಿಭಾಗದಲ್ಲಿ ಪರಿಚಯಿಸಲು ಯೋಜಿಸಿದೆ. ಈ ಲೆಕ್ಕಾಚಾರದ ಪ್ರಕಾರ ಹಲವು ಕಾರುಗಳಿಗೆ ಸ್ಪರ್ಧೆ ನೀಡುವ ಕಾರು ಬರಬಹುದು ಅಲ್ಲವೇ ?

English summary
Peugeot’s Maruti Swift Rival Is Coming To India

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark