ಅಪಘಾತದಲ್ಲಿ ಜಖಂಗೊಂಡ ಬಾಡಿಗೆಗಾಗಿ ತಂದಿದ್ದ ಮೆಕ್‌ಲರೇನ್ 650ಎಸ್ ಕಾರು

Written By:

ಸೂಪರ್ ಕಾರುಗಳ ಚಾಲನೆಗೂ ಮುನ್ನ ಅದರಲ್ಲಿರುವ ಹೊಸ ತಂತ್ರಜ್ಞಾನಗಳ ಬಗೆಗೆ ಸರಿಯಾದ ತಿಳುವಳಿಕೆ ಬೇಕು. ಇಲ್ಲವಾದ್ರೆ ಅನಾಹುತ ಕಟ್ಟಿಟ್ಟ ಬುತ್ತಿ. ಯಾಕೇಂದ್ರೆ ಇಲ್ಲೊಬ್ಬ ಮಹಾಶಯ ಕೂಡಾ ಸೂಪರ್ ಕಾರು ಓಡಿಸುವ ಭರಾಟೆಯಲ್ಲಿ ಭಾರೀ ಅನಾಹುತ ಸೃಷ್ಠಿಸಿದ್ದಾನೆ.

To Follow DriveSpark On Facebook, Click The Like Button
ಅಪಘಾತದಲ್ಲಿ ಜಖಂಗೊಂಡ ಬಾಡಿಗೆಗಾಗಿ ತಂದಿದ್ದ ಮೆಕ್‌ಲರೇನ್ 650ಎಸ್ ಕಾರು

ಆ ಯುವಕನಿಗೆ ಸೂಪರ್ ಕಾರುಗಳನ್ನು ಓಡಿಸುವುದೆಂದರೇ ಎಲ್ಲಿಲ್ಲದ ಹುಚ್ಚು. ಹೀಗಾಗಿಯೇ ದುಬಾರಿ ಶುಲ್ಕು ತೆತ್ತು ಬಾಡಿಗೆಗಾಗಿ ಮೆಕ್‌ಲರೇನ್ 650ಎಸ್ ಕಾರ್‌ನ್ನು ತೆಗೆದುಕೊಂಡು ಬಂದಿದ್ದ. ಆದ್ರೆ ಕಾರಿನಲ್ಲಿದ್ದ ಹೊಸ ಬಗೆಯ ಚಾಲನಾ ತಂತ್ರಜ್ಞಾನಗಳನ್ನು ಅರಿಯದೇ ಅನಾಹುತಕ್ಕೆ ಕಾರಣನಾಗಿದ್ದಾನೆ.

ಅಪಘಾತದಲ್ಲಿ ಜಖಂಗೊಂಡ ಬಾಡಿಗೆಗಾಗಿ ತಂದಿದ್ದ ಮೆಕ್‌ಲರೇನ್ 650ಎಸ್ ಕಾರು

ಅಂದಹಾಗೆ ಇದೆಲ್ಲಾ ನಡೆದಿರುವುದು ಯುಕೆನಲ್ಲಿ. ಕಾರು ಚಾಲನೆ ಮಾಡುತ್ತಿದ್ದ ಡೈಲಾನ್ ಎಂಬಾತನೇ ಇಷ್ಟೇಲ್ಲಾ ರದ್ದಾಂತಕ್ಕೆ ಕಾರಣನಾಗಿದ್ದು, ಕಾರು ಪಾರ್ಕಿಂಗ್ ಜಾಗದಲ್ಲಿ ವೇಗದ ಚಾಲನೆಗೆ ಮುಂದಾದಾಗ ನಿಯಂತ್ರಣ ತಪ್ಪಿದೆ.

Recommended Video
Ferrari GTC4Lusso And GTC4Lusso T Launched In India - DriveSpark
ಅಪಘಾತದಲ್ಲಿ ಜಖಂಗೊಂಡ ಬಾಡಿಗೆಗಾಗಿ ತಂದಿದ್ದ ಮೆಕ್‌ಲರೇನ್ 650ಎಸ್ ಕಾರು

ನಿಯಂತ್ರಣ ತಪ್ಪಿದ ಪರಿಣಾಮ ಕಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದು, 6 ಕೋಟಿಗೂ ಅಧಿಕ ಬೆಲೆ ಬಾಳುವ ಕಾರು ಸಂಪೂರ್ಣ ಜಖಂಗೊಂಡಿದೆ. ಆದ್ರೆ ಕಾರು ಚಾಲನೆ ಮಾಡುತ್ತಿದ್ದ ಡೈಲಾನ್‌ ಕಾರಿನಲ್ಲಿದ್ದ ಡ್ಯುಯಲ್ ಏರ್‌ಬ್ಯಾಗ್‌‌ನಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಅಪಘಾತದಲ್ಲಿ ಜಖಂಗೊಂಡ ಬಾಡಿಗೆಗಾಗಿ ತಂದಿದ್ದ ಮೆಕ್‌ಲರೇನ್ 650ಎಸ್ ಕಾರು

ಸದ್ಯ ಮೆಕ್‌ಲರೇನ್ 650ಎಸ್ ಕಾರು ಗುಜುರಿಗೆ ಸೇರಿದ್ದು, ಮತ್ತೆ ಹೊಸತನ ಪಡೆಯಲು 2 ರಿಂದ 3 ಕೋಟಿಗೂ ಅಧಿಕ ಖರ್ಚು ಮಾಡಲೇಬೇಕಿದೆ ಎಂದರೇ ನಂಬಲೇಬೇಕು. ಯಾಕೇಂದ್ರೆ ಸೂಪರ್ ಕಾರುಗಳ ಬಿಡಿಭಾಗಗಳ ಖರೀದಿ ಅಷ್ಟು ಸುಲಭವಲ್ಲ.

ಅಪಘಾತದಲ್ಲಿ ಜಖಂಗೊಂಡ ಬಾಡಿಗೆಗಾಗಿ ತಂದಿದ್ದ ಮೆಕ್‌ಲರೇನ್ 650ಎಸ್ ಕಾರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸೂಪರ್ ಕಾರುಗಳ ಚಾಲನೆ ಮಾಡುವುದು ಅಂದ್ರೆ ಪ್ರತಿಯೊಬ್ಬರಿಗೂ ಎಲ್ಲಿಲ್ಲದ ಕ್ರೇಜ್. ಆದ್ರೆ ಕಾರು ಚಾಲನೆಗೂ ಮುನ್ನ ಹೊಸ ಕಾರುಗಳಲ್ಲಿ ಒದಗಿಸಲಾಗಿರುವ ವಿವಿಧ ತಂತ್ರಜ್ಞಾನಗಳ ಬಗ್ಗೆ ಕುಲಂಕೂಶವಾಗಿ ತಿಳಿಯುವುದು ಒಳಿತು. ಇಲ್ಲವಾದ್ರೆ ಇಂತಹ ಅನಾಹುತಕ್ಕೆ ಕಾರಣವಾಗಬಹುದು.

English summary
Read in Kannada about Driver Crashes Rented McLaren 650S in UK.
Please Wait while comments are loading...

Latest Photos