ನಿರ್ಮಾಣ ಹಂತದ ಫೈ ಓವರ್‌ನಿಂದ ಬಿದ್ದ ಕಾರು- ಘಟನೆಯಲ್ಲಿ ಮೂವರು ದುರ್ಮರಣ

Written By:

ನಿರ್ಮಾಣ ಹಂತದ ಫೈ ಓವರ್‌ ಮೇಲೆ ಚಲಿಸುತ್ತಿದ್ದ ಟೊಯೊಟಾ ಇನೋವಾ ಕಾರೊಂದು ನಿಯಂತ್ರಣ ತಪ್ಪಿದ ಪರಿಣಾಮ ಮೊಗಚಿ ಬಿದ್ದಿದ್ದು, ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

To Follow DriveSpark On Facebook, Click The Like Button
ನಿರ್ಮಾಣ ಹಂತದ ಫೈ ಓವರ್‌ನಿಂದ ಬಿದ್ದ ಕಾರು- ಘಟನೆಯಲ್ಲಿ ಮೂವರು ಸಾವು

ವಾಣಿಜ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಚೆನ್ನೈನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಪ್ರಮುಖ ಕಡೆಗಳಲ್ಲಿ ಫೈ ಓವರ್ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಿರುವಾಗ ಟೊಯೊಟಾ ಇನೋವಾ ಕಾರೊಂದು ಫೈ ಓವರ್ ಮೇಲೆ ಚಾಲನೆ ಮಾಡಿರುವುದು ದುರಂತಕ್ಕೆ ಕಾರಣವಾಗಿದೆ.

ನಿರ್ಮಾಣ ಹಂತದ ಫೈ ಓವರ್‌ನಿಂದ ಬಿದ್ದ ಕಾರು- ಘಟನೆಯಲ್ಲಿ ಮೂವರು ಸಾವು

ನಿನ್ನೇ ತಡರಾತ್ರಿ ಈ ಘಟನೆ ನಡೆದಿದ್ದು, ಪ್ರಗತಿ ಹಂತದಲ್ಲಿದ್ದ ಫೈ ಓವರ್ ಅನ್ನು ಗಮನಿಸದ ಹಿನ್ನೆಲೆ ಈ ಘಟನೆ ನಡೆದಿದೆ. ಸುಮಾರು 30 ಅಡಿಗಳಷ್ಟು ಎತ್ತರವಾಗಿರುವ ಹಿನ್ನೆಲೆ ಕಾರಿನಲ್ಲಿದ್ದ ಮೂವರು ತೀವ್ರ ರಕ್ತ ಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಿರ್ಮಾಣ ಹಂತದ ಫೈ ಓವರ್‌ನಿಂದ ಬಿದ್ದ ಕಾರು- ಘಟನೆಯಲ್ಲಿ ಮೂವರು ಸಾವು

ಆದ್ರೆ ನಿರ್ಮಾಣದ ಹಂತದ ಫೈ ಓವರ್ ಮೇಲೆ ವಾಹನಗಳ ನುಗ್ಗದಂತೆ ಬಾರಿಕೇಡ್ ಬಳಕೆ ಮಾಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಿರ್ಮಾಣ ಹಂತದ ಫೈ ಓವರ್‌ನಿಂದ ಬಿದ್ದ ಕಾರು- ಘಟನೆಯಲ್ಲಿ ಮೂವರು ಸಾವು

ಇನ್ನು ಸಾವಪ್ಪಿದವರನ್ನು ದಂಪತಿಗಳಾದ ಪಳನಿ(65), ನವನಿತಂ(65) ಮತ್ತು ಪುತ್ರಿ ಪವಿತ್ರ(26) ಎಂದು ಗುರುತಿಸಲಾಗಿದ್ದು, ಸಂಬಂಧಿಕರೊಬ್ಬರು ಮದುವೆ ಸಂಭ್ರಮ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ಈ ದುರಂತ ನಡೆದಿದೆ.

ತಪ್ಪದೇ ಓದಿ- ಗ್ರಾಹಕರೇ ಎಚ್ಚರ !! ಮೋಸ ಮಾಡ್ತಾರೆ ಪೆಟ್ರೋಲ್ ಬಂಕ್ ಸಿಬ್ಬಂದಿ...

ನಿರ್ಮಾಣ ಹಂತದ ಫೈ ಓವರ್‌ನಿಂದ ಬಿದ್ದ ಕಾರು- ಘಟನೆಯಲ್ಲಿ ಮೂವರು ಸಾವು

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಅಪಘಾತಕ್ಕೆ ಇಡಾದ ಕಾರಿನ ಹಿಂದೆಯೇ ಮತ್ತೊಂದು ಕಾರು ಕೂಡಾ ಬರುತ್ತಿತ್ತು ಎನ್ನಲಾಗಿದ್ದು, ಅದೃಷ್ಟವಷಾತ್ ಫೈ ಓವರ್ ಎಡ್ಜ್‌ನಲ್ಲೇ ಕಾರು ನಿಲ್ಲಿಸಿದ್ದರಿಂದ ಹಲವರ ಪ್ರಾಣ ಉಳಿದಿದೆ.

ನಿರ್ಮಾಣ ಹಂತದ ಫೈ ಓವರ್‌ನಿಂದ ಬಿದ್ದ ಕಾರು- ಘಟನೆಯಲ್ಲಿ ಮೂವರು ಸಾವು

ಇದರಿಂದಾಗಿ ಯಾವುದೇ ಕಾರಣಕ್ಕೂ ನಿರ್ಮಾಣದ ಹಂತ ರಸ್ತೆ ಕಾಮಗಾರಿಗಳ ಸ್ಥಳದಲ್ಲಿ ಕಾರು ಚಾಲಕರು ಆದಷ್ಟು ಎಚ್ಚರ ವಹಿಸುವುದು ಒಳ್ಳೆಯದು. ಒಂದು ವೇಳೆ ಸ್ವಲ್ಪವೇ ಎಚ್ಚರ ತಪ್ಪಿದ್ರೂ ಇಂತಹ ಅನಾಹುತಗಳು ತಪ್ಪಿದ್ದಲ್ಲ ಎನ್ನಬಹುದು.

ತಪ್ಪದೇ ಓದಿ-ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಅನುಷ್ಕಾ ಶೆಟ್ಟಿ ಬರ್ತ್ ಡೇ ಗೆ ಪ್ರಭಾಸ್ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು?

Read more on accident ಅಪಘಾತ
English summary
Read in Kannada about Three killed after car falls from incomplete flyover near Chennai.
Story first published: Saturday, November 25, 2017, 13:30 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark