ಗ್ರಾಹಕರ ಸುರಕ್ಷತೆಗೆ ಧಕ್ಕೆ- ಉಬರ್ ಸಂಸ್ಥೆಯ ಲೈಸೆನ್ಸ್‌ಗೆ ಬಿತ್ತು ಬ್ರೇಕ್..!!

Written By:

ಆ್ಯಪ್ ಆಧರಿತ ಕ್ಯಾಬ್ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಉಬರ್ ಸಂಸ್ಥೆಗೆ ಇದೀಗ ಸಂಕಷ್ಟ ದಿನಗಳು ಎದುರಾಗಿವೆ. ಗ್ರಾಹಕರ ಸುರಕ್ಷಾ ವಿಚಾರದಲ್ಲಿ ನಿರಾಸಕ್ತಿ ಹೊಂದಿರುವ ಉಬರ್ ಕ್ರಮಕ್ಕೆ ಲಂಡನ್ ಸಾರಿಗೆ ಇಲಾಖೆ ಶಾಕ್ ನೀಡಿದೆ.

ಗ್ರಾಹಕರ ಸುರಕ್ಷತೆಗೆ ಧಕ್ಕೆ- ಉಬರ್ ಸಂಸ್ಥೆಯ ಲೈಸೆನ್ಸ್‌ಗೆ ಬಿತ್ತು ಬ್ರೇಕ್..!!

ಕಳೆದ 5- 6 ತಿಂಗಳು ಅವಧಿಯಲ್ಲಿ ಗ್ರಾಹಕರ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಉಬರ್ ವಿರುದ್ಧ ಲಂಡನ್ ನಗರ ಒಂದರಲ್ಲೇ 2 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಉಬರ್ ಹಿಂದೇಟು ಹಾಕುತ್ತಿದೆ. ಈ ಹಿನ್ನೆಲೆ ಲೈಸೆನ್ಸ್ ನವೀಕರಣ ಅರ್ಜಿಯನ್ನು ತಿರಸ್ಕೃತ ಮಾಡಿರುವ ಲಂಡನ್ ಸಾರಿಗೆ ಇಲಾಖೆಯು ಉಬರ್ ಕ್ರಮಕ್ಕೆ ತಕ್ಕ ಶಾಸ್ತಿ ಮಾಡಿದೆ.

ಗ್ರಾಹಕರ ಸುರಕ್ಷತೆಗೆ ಧಕ್ಕೆ- ಉಬರ್ ಸಂಸ್ಥೆಯ ಲೈಸೆನ್ಸ್‌ಗೆ ಬಿತ್ತು ಬ್ರೇಕ್..!!

ಅಕ್ಟೋಬರ್ 1ಕ್ಕೆ 2016ರ ಉಬರ್ ಲೈಸೆನ್ಸ್ ಅವಧಿ ಕೊನೆಗೊಳ್ಳಲಿದ್ದು, ಅ.1 ರ ನಂತರ ಆ್ಯಪ್ ಆಧರಿತ ಕ್ಯಾಬ್‌ಗಳು ತಮ್ಮ ಸೇವಾ ಕಾರ್ಯಚರಣೆಯನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಬಂದೊಗಿದೆ.

ಗ್ರಾಹಕರ ಸುರಕ್ಷತೆಗೆ ಧಕ್ಕೆ- ಉಬರ್ ಸಂಸ್ಥೆಯ ಲೈಸೆನ್ಸ್‌ಗೆ ಬಿತ್ತು ಬ್ರೇಕ್..!!

ಈ ಸಂಬಂಧ ಲಂಡನ್ ಸಾರಿಗೆ ಇಲಾಖೆಯ ಜೊತೆ ಚರ್ಚೆ ನಡೆಸಿರುವ ಉಬರ್ ಸಂಸ್ಥೆಯು ಗ್ರಾಹಕರ ದೂರುಗಳ ಅನ್ವಯ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಇದಕ್ಕೂ ಅಲ್ಲಿನ ಅಧಿಕಾರಿಗಳು ಕ್ಯಾರೆ ಎಂದಿಲ್ಲಾ ಎನ್ನಲಾಗಿದೆ.

ಗ್ರಾಹಕರ ಸುರಕ್ಷತೆಗೆ ಧಕ್ಕೆ- ಉಬರ್ ಸಂಸ್ಥೆಯ ಲೈಸೆನ್ಸ್‌ಗೆ ಬಿತ್ತು ಬ್ರೇಕ್..!!

ಇನ್ನು ಲೈಸೆನ್ಸ್ ನವೀಕರಣ ಅಸಾಧ್ಯ ಎಂದಾದಲ್ಲಿ ಲಂಡನ್ ಸಿಟಿ ಒಂದರಲ್ಲಿ 40 ಸಾವಿರ ಕ್ಯಾಬ್‌ಗಳು ತಮ್ಮ ಸೇವೆಯನ್ನು ನಿಲ್ಲಿಸಬೇಕಾದ ಪರಿಸ್ಥಿತಿಯಿದ್ದು, ಉಬರ್ ನಂಬಿರುವ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಗ್ರಾಹಕರ ಸುರಕ್ಷತೆಗೆ ಧಕ್ಕೆ- ಉಬರ್ ಸಂಸ್ಥೆಯ ಲೈಸೆನ್ಸ್‌ಗೆ ಬಿತ್ತು ಬ್ರೇಕ್..!!

ಆದ್ರೆ ಲೆಸೆನ್ಸ್ ನವೀಕರಣ ತಿರಸ್ಕೃತವನ್ನು ಪ್ರಶ್ನಿಸಿರುವ ಉಬರ್ ಸಂಸ್ಥೆಯು ಲಂಡನ್ ಸಾರಿಗೆ ಇಲಾಖೆಯ ಕ್ರಮದ ವಿರುದ್ದ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಜುಡಿಷಲ್ ಕಮಿಟಿ ಆಫ್ ದಿ ಪ್ರಿವಿ ಕೌನ್ಸಿಲ್ ಮೊರೆ ಹೋಗಿದೆ.

ಗ್ರಾಹಕರ ಸುರಕ್ಷತೆಗೆ ಧಕ್ಕೆ- ಉಬರ್ ಸಂಸ್ಥೆಯ ಲೈಸೆನ್ಸ್‌ಗೆ ಬಿತ್ತು ಬ್ರೇಕ್..!!

ಹೀಗಾಗಿ ಉಬರ್ ಸಂಸ್ಥೆಯ ಲೆಸೆನ್ಸ್ ನವೀಕರಣಕ್ಕೆ ಅವಕಾಶ ಸಿಗುವ ಸಾಧ್ಯತೆಗಳಿದ್ದು, ಈ ಹಿಂದೆ ಬಂದಿರುವ ಗ್ರಾಹಕರ ದೂರುಗಳು ಮತ್ತು ಆ್ಯಪ್ ಅಳವಡಿಕೆಯಲ್ಲಿನ ದೋಷಗಳನ್ನು ಸರಿಪಡಿಸದ ಹೊರತು ಲೆಸೆನ್ಸ್ ನವೀಕರಣ ಅಸಾಧ್ಯ ಎನ್ನಲಾಗುತ್ತಿದೆ.

ಗ್ರಾಹಕರ ಸುರಕ್ಷತೆಗೆ ಧಕ್ಕೆ- ಉಬರ್ ಸಂಸ್ಥೆಯ ಲೈಸೆನ್ಸ್‌ಗೆ ಬಿತ್ತು ಬ್ರೇಕ್..!!

ಇದರಿಂದ ದಿಢೀರ್ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಉಬರ್‌ಗೆ ಬಂದೊದಿಗಿದ್ದು, ಈ ವೇಳೆ ಸೂಕ್ತ ಕ್ರಮ ಕೈಗೊಳ್ಳವಲ್ಲಿ ವಿಫಲವಾದ್ರೆ ಡೆನ್ಮಾರ್ಕ್, ಹಂಗೇರಿ ಮಾದರಿಯಲ್ಲೇ ಲಂಡನ್‌ನಲ್ಲೂ ಉಬರ್ ನಿಷೇಧಕ್ಕೆ ಒಳಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

English summary
Read in Kannada about Uber Loses License To Operate In London. The Reason Will Shock You.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark