ಪೊಲೊ, ಅಮಿಯೊ ಮತ್ತು ವೆಂಟೊ ವಿಶೇಷ ಆವೃತ್ತಿಗಳನ್ನು ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

Written By:

ಈ ವರ್ಷ ಭಾರತದಲ್ಲಿ ಫೋಕ್ಸ್‌ವ್ಯಾಗೆನ್ ಸಂಸ್ಥೆಯು ತನ್ನ ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸುವ ಸಲುವಾಗಿ ಫೋಕ್ಸ್ ಫೆಸ್ಟ್ ಆರಂಭಿಸಿರುವುದಾಗಿ ಘೋಷಣೆ ಮಾಡಿದೆ.

ಪೊಲೊ, ಅಮಿಯೊ ಮತ್ತು ವೆಂಟೊ ವಿಶೇಷ ಆವೃತ್ತಿಗಳನ್ನು ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗೆನ್

ಈ ಫೆಸ್ಟ್‌ನಲ್ಲಿ ತನ್ನ ವೆಂಟೊ ಆಲ್‌ಸ್ಟಾರ್, ಪೊಲೊ ಜಿಟಿ ಸ್ಪೋರ್ಟ್, ವಾರ್ಷಿಕೋತ್ಸವ ಆವೃತ್ತಿಯಾದ ಪೊಲೊ ಮತ್ತು ಅಮಿಯೊ ಕಾರುಗಳ ಸೀಮಿತ ಆವೃತಿಯನ್ನು ಮಾಡೆಲ್‌ಗಳನ್ನು ಅನಾವರಣಗೊಳಿಸಿದೆ ಹಾಗು ಗ್ರಾಹಕರೂ ಸಹ ಆಕರ್ಷಕವಾದ ಕೊಡುಗೆಗಳನ್ನು ಪಡೆಯಬಹುದಾಗಿದೆ.

ಪೊಲೊ, ಅಮಿಯೊ ಮತ್ತು ವೆಂಟೊ ವಿಶೇಷ ಆವೃತ್ತಿಗಳನ್ನು ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗೆನ್

ಫೋಕ್ಸ್‌ವ್ಯಾಗೆನ್ ಸಂಸ್ಥೆಯು ಈ ಸಮಯದಲ್ಲಿ, ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಅತ್ಯಾಕರ್ಷಕ ಸೇವಾ ಪ್ರಯೋಜನಗಳನ್ನು ನೀಡಲಿದೆ ಮತ್ತು ದೇಶದಲ್ಲಿ ಇರುವಂತಹ ಎಲ್ಲಾ ವಿತರಕರಲ್ಲಿ ಭರವಸೆಯ ಉಡುಗೊರೆಗಳನ್ನು ಪಡೆಯಬಹುದು ಎಂದು ಹೇಳಿದೆ.

ಪೊಲೊ, ಅಮಿಯೊ ಮತ್ತು ವೆಂಟೊ ವಿಶೇಷ ಆವೃತ್ತಿಗಳನ್ನು ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗೆನ್

ಜಿಟಿ ಟಿಎಸ್ಐ ಮತ್ತು ಜಿಟಿ ಟಿಡಿಐ ರೂಪಾಂತರಗಳನ್ನು ಆಧರಿಸಿದೆ ಪೋಲೊ ಜಿಟಿ ಸ್ಪೋರ್ಟ್ ಕಾರನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಹ್ಯಾತ್ಚ್ ಬ್ಯಾಕ್ ಕಾರು 16 ಇಂಚಿನ ಪೋರ್ಟಗೊ ಅಲಾಯ್ ವೀಲ್ ಪಡೆದುಕೊಂಡಿದೆ.

ಪೊಲೊ, ಅಮಿಯೊ ಮತ್ತು ವೆಂಟೊ ವಿಶೇಷ ಆವೃತ್ತಿಗಳನ್ನು ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗೆನ್

ಪೋಲೊ ವಾರ್ಷಿಕೋತ್ಸವ ಆವೃತ್ತಿಯು, 15 ಇಂಚಿನ ಡುಯಲ್ ರೇಜರ್ ಅಲಾಯ್ ಚಕ್ರಗಳು ಮತ್ತು ಡೈಮಂಡ್ ಕಪ್ಪು ಬಣ್ಣದ ಸೀಟ್ ಕವರ್‌ಗಳು, ಸೈಡ್ ಗ್ರಾಫಿಕ್ಸ್ ಮತ್ತು ಹೊಸ ಸ್ಪಾಯ್‌ಲರ್ ಆಯ್ಕೆಗಳನ್ನು ಹೊಂದಿರಲಿದೆ.

ಪೊಲೊ, ಅಮಿಯೊ ಮತ್ತು ವೆಂಟೊ ವಿಶೇಷ ಆವೃತ್ತಿಗಳನ್ನು ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗೆನ್

ಅಮಿಯೊ ವಾರ್ಷಿಕೋತ್ಸವ ಆವೃತ್ತಿಯು 15 ಇಂಚಿನ ಟೋಸಾ ಮಿಶ್ರಲೋಹದ ಚಕ್ರಗಳು ಮತ್ತು ಜೇನುಗೂಡು ವಿನ್ಯಾಸದ ಆಸನ ಕವರ್‌ಗಳನ್ನು ಒಳಗೊಂಡಿದೆ. ಮತ್ತೊಂದು ಮಾದರಿಯಾದ ವೆಂಟೊ ಆಲ್‌ಸ್ಟಾರ್ ಕಾರು, ಹೊಸ ಲೀನಾಸ್ ಮಿಶ್ರಲೋಹದ ಚಕ್ರಗಳು, ಅಲ್ಯೂಮಿನಿಯಂ ಪೆಡಲ್‌ಗಳು, ಸುಲಾವೆ ಕಪ್ಪು ಮತ್ತು ಬೂದು ಬಣ್ಣದ ಒಳಾಂಗಣ ಮತ್ತು ಅಸ್ಕರ್ ಆಲ್‌ಸ್ಟಾರ್ ಬ್ಯಾಡ್ಜ್ ಪಡೆಯುತ್ತದೆ.

ಪೊಲೊ, ಅಮಿಯೊ ಮತ್ತು ವೆಂಟೊ ವಿಶೇಷ ಆವೃತ್ತಿಗಳನ್ನು ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗೆನ್

ಫೋಕ್ಸ್‌ವ್ಯಾಗೆನ್ ಸಮಸ್ಥೆಯು ಭಾರತದ ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಈ ನಿಟ್ಟಿನಲ್ಲಿ ತನ್ನ ನಾಲ್ಕು ಹೊಸ ಸೀಮಿತ ಆವೃತ್ತಿಯ ಮಾದರಿಗಳನ್ನು ಪರಿಚಯಿಸಿದೆ. ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನೂ ಸಹ ನೀಡುತ್ತಿದ್ದು, ನೀವೇನಾದರೂ ಫೋಕ್ಸ್‌ವ್ಯಾಗೆನ್ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಇದು ಉತ್ತಮ ಸಮಯವಾಗಿದೆ.

English summary
Volkswagen India has announced the commencement of Volksfest 2017. To celebrate the tenth anniversary of the brand in India, the automaker has also introduced four limited edition models.
Story first published: Friday, September 8, 2017, 17:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark