ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಸೂಪರ್ ಕಾರುಗಳ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಇಷ್ಟು ದಿನಗಳ ಕಾಲ ವಿದೇಶಿ ಮಾರುಕಟ್ಟೆಗಳಲ್ಲಿ ಮಾತ್ರ ಮಾರಾಟಗೊಳ್ಳುತ್ತಿದ್ದು ಹೈ ಆಕ್ಟೇನ್( 99-ಆಕ್ಟೇನ್) ಪೆಟ್ರೋಲ್ ಮಾದರಿಯು ಇದೀಗ ದೇಶಿಯ ಮಾರುಕಟ್ಟೆಗೂ ಲಗ್ಗೆಯಿಟ್ಟಿದೆ.

By Praveen Sannamani

ಸೂಪರ್ ಕಾರುಗಳ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಇಷ್ಟು ದಿನಗಳ ಕಾಲ ವಿದೇಶಿ ಮಾರುಕಟ್ಟೆಗಳಲ್ಲಿ ಮಾತ್ರ ಮಾರಾಟಗೊಳ್ಳುತ್ತಿದ್ದ ಹೈ ಆಕ್ಟೇನ್( 99-ಆಕ್ಟೇನ್) ಪೆಟ್ರೋಲ್ ಮಾದರಿಯನ್ನು ಇದೀಗ ದೇಶಿಯ ಮಾರುಕಟ್ಟೆಗೂ ಪರಿಚಯಿಸಲಾಗಿದೆ.

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯು ದೇಶದಲ್ಲೇ ಮೊದಲ ಬಾರಿಗೆ ಮುಂಬೈನ ಎನ್ಎಸ್ ರಸ್ತೆಯಲ್ಲಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯ ಚಿಲ್ಲರೆ ವ್ಯಾಪರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು ರೂ.100 ಗಳಿಗೆ ನಿಗದಿ ಮಾಡಲಾಗಿದೆ. ಇದು ಸಾಮಾನ್ಯ ಮಾದರಿಯ ಪೆಟ್ರೋಲ್‌ಗಿಂತ ಹೆಚ್ಚಿನ ಗುಣಮಟ್ಟ ಹೊಂದಿರಲಿದ್ದು, ಕಾರಿನ ಎಂಜಿನ್ ಕಾರ್ಯಕ್ಷಮತೆಗೆ ಸಹಕಾರಿಯಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯು ಆಟೋ ಮೊಬೈಲ್ ಉದ್ಯಮದಲ್ಲಿ 'ಪವರ್ 99' ಎಂದೇ ಜನಪ್ರಿಯವಾಗಿದ್ದು, ಬೆಂಗಳೂರು ಮತ್ತು ಪುಣೆಯಲ್ಲಿ ಈಗಾಗಲೇ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯು ಆಯ್ದ ಹಿಂದೂಸ್ತಾನ್ ಪೆಟ್ರೋಲ್ ಬಂಕ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಇಷ್ಟು ದಿನಗಳ ಕಾಲ ಬೇಡಿಕೆ ಆಧಾರದ ಮಾತ್ರ ಹೈ-ಆಕ್ಟೇನ್ ಫ್ಯೂಲ್ ಮಾದರಿಯನ್ನು ಮಾರಾಟ ಮಾಡುತ್ತಿದ್ದ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯು ಇದೀಗ ಚಿಲ್ಲರೆ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿರುವುದು ಸೂಪರ್ ಕಾರುಗಳು ಮತ್ತು ಸೂಪರ್ ಬೈಕ್ ಪ್ರಿಯರಿಗೆ ಖುಷಿಯ ವಿಚಾರವೇ ಸರಿ.

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಇದಕ್ಕೆ ಕಾರಣ ಹೈ-ಆಕ್ಟೇನ್ ಫ್ಯೂಲ್ ಮಾದರಿಯು ದುಬಾರಿ ಬೆಲೆಯ ಕಾರುಗಳ ಮತ್ತು ದುಬಾರಿ ಬೆಲೆಯ ಬೈಕ್‌ಗಳ ಎಂಜಿನ್ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಎಂಜಿನ್ ಆಯಷ್ಯ ಕೂಡಾ ಹೆಚ್ಚಲು ಸಹಕರಿಸಲಿದೆ.

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯನ್ನು ಬಳಕೆ ಮಾಡುತ್ತಾ ಬಂದಲ್ಲಿ ಎಂಜಿನ್ ಡ್ಯಾಮೇಜ್ ಸಮಸ್ಯೆಯಿಂದ ಮುಕ್ತಿ ಸಿಗಲಿದ್ದು, ವಾಹನಗಳಿಂದ ಇಂಗಾಲದ ಹೊರಸೂಸುವಿಕೆಯ ಪ್ರಮಾಣವು ಸಾಮಾನ್ಯ ಪೆಟ್ರೋಲ್‌ಗಿಂತ ಅಧಿಕ ಮಟ್ಟದಲ್ಲಿ ಇಳಿಕೆ ಇರುತ್ತೆ.

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಇನ್ನು ದೇಶಾದ್ಯಂತ ದಿನದಿಂದ ದಿನಕ್ಕೆ ಸೂಪರ್ ಕಾರುಗಳ ಸಂಖ್ಯೆ ಏರುತ್ತೆ ಇದ್ದು, ಕಾರು ಮಾಲೀಕರ ಒತ್ತಾಯದ ಮೆರೆಗೆ ಹೈ-ಆಕ್ಟೇನ್ ಫ್ಯೂಲ್ ಮಾದರಿಯ ಚಿಲ್ಲರೆ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಹೀಗಾಗಿ ಸೂಪರ್ ಕಾರು ಪ್ರಿಯರು ತಮ್ಮ ಕಾರಿನ ಇಂಧನ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳಲು ಹೈ-ಆಕ್ಟೇನ್ ಪೆಟ್ರೋಲ್‌ನತ್ತ ಮುಖಮಾಡುತ್ತಿದ್ದು ಅದು ಕೂಡಾ ಮುಂಬರುವ ದಿನಗಳಲ್ಲಿ ಬೆಲೆ ದುಪ್ಪಟ್ಟು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯಿಂದ ಕಾರಿನ ಮೈಲೇಜ್ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬದಲಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಇತರೆ ಕಾರುಗಳಿಂತ ಉತ್ತಮವಾಗಿದೆ.

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಜೊತೆಗೆ ಹೈ-ಆಕ್ಟೇನ್ ಪೆಟ್ರೋಲ್ ಮಾದರಿಯನ್ನು ಕೇವಲ ಸೂಪರ್ ಕಾರುಗಳಿಗೆ ಮಾತ್ರವಲ್ಲದೇ ಇತರೆ ಸಾಮಾನ್ಯ ಪೆಟ್ರೋಲ್ ಕಾರುಗಳಲ್ಲೂ ಸಹ ಬಳಕೆ ಮಾಡಬಹುದಾಗಿದ್ದು, ಕುತೂಹಲ ಇದ್ದಲ್ಲಿ ನೀವು ಕೂಡಾ ಒಂದು ಬಾರಿ ಹೈ-ಆಕ್ಟೇನ್ ಪೆಟ್ರೋಲ್ ಬಳಕೆ ಮಾಡಿ ನಮ್ಮೊಂದಿಗೆ ಅನುಭವ ಹಂಚಿಕೊಳ್ಳಿ....

ಪ್ರತಿ ಲೀಟರ್‌ಗೆ ರೂ.100 ಹೊಂದಿರುವ ಹೈ-ಆಕ್ಟೇನ್ ಪೆಟ್ರೋಲ್ ಮಾರಾಟಕ್ಕೆ ಅಧಿಕೃತ ಚಾಲನೆ

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕೇವಲ 9 ನಿಮಿಷದಲ್ಲಿ 100 ಲೀಟರ್ ಇಂಧನ ಖಾಲಿ ಮಾಡುತ್ತೆ ಈ ಬುಗಾಟಿ ಕಾರು..!!

ಮಿನಿ ಫಾರ್ಚೂನರ್ ಖ್ಯಾತಿಯ ಟೊಯೊಟಾ ರಷ್ ಸುರಕ್ಷಾ ರೇಟಿಂಗ್ ಎಷ್ಟು ಗೊತ್ತಾ?

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

Most Read Articles

Kannada
Read more on auto news petrol diesel
English summary
99 Octane Petrol Priced At Rs. 100/Litre In India — Availability & More Details.
Story first published: Saturday, May 12, 2018, 20:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X