ಡಟ್ಸನ್ ಗೋ ಮತ್ತು ಗೋ ಪ್ಲಸ್ ರಿಮಿಕ್ಸ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

Written By: Rahul TS

ಜನಪ್ರಿಯ ಡಟ್ಸನ್ ಸಂಸ್ಥೆಯು ತನ್ನ ಡಟ್ಸನ್ ಗೋ ಮತ್ತು ಗೋ ಪ್ಲಸ್ ರಿಮಿಕ್ಸ್ ಕಾರಿನ ಲಿಮಿಟೆಡ್ ಎಡಿಷನ್ ಮಾದರಿಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಕೈಗೆಟುವ ಬೆಲೆಯಲ್ಲಿ ಉತ್ತಮ ಮಾದರಿಯ ಕಾರುಗಳನ್ನು ಮಾಡಲು ಮತ್ತೊಂದು ವೇದಿಕೆ ನಿರ್ಮಿಸಿದೆ.

ಡಟ್ಸನ್ ಗೋ ಮತ್ತು ಗೋ ಪ್ಲಸ್ ರಿಮಿಕ್ಸ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಹೊಸ ಕಾರಿನ ಬೆಲೆಗಳು

ದೆಹಲಿ ಎಕ್ಸ್ ಶೋರುಂ ಪ್ರಕಾರ ಡಟ್ಸನ್ ಗೊ ಲಿಮಿಟೆಡ್ ಎಡಿಷನ್ ರೂ.4.21ಲಕ್ಷ ಹಾಗು ಗೊ ಪ್ಲಸ್ ಲಿಮಿಟೆಡ್ ಎಡಿಷನ್ ಮಾದರಿಯನ್ನು ರೂ.4.99 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಹಳೆಯ ಮಾದರಿಗಿಂತ ಹೊಸ ಬ್ಯಾನೆಟ್, ರೂಫ್ ವ್ರಾಪ್ಸ್ ಮತ್ತು ಡ್ಯುಯಲ್ ಟೋನ್ ಬ್ಲಾಕ್ ಇಂಟೀರಿಯರ್ ಅನ್ನು ಪಡೆದುಕೊಂಡಿವೆ.

ಡಟ್ಸನ್ ಗೋ ಮತ್ತು ಗೋ ಪ್ಲಸ್ ರಿಮಿಕ್ಸ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಡಟ್ಸನ್ ಗೋ ರೀಮಿಕ್ಸ್ ಕಾರು ಆಕರ್ಷಕ ONYX ಬ್ಲಾಕ್ ಬಣ್ಣ ಮತ್ತು ಆರೆಂಜ್ ಡಿಕಲ್ಸ್ ಬಣ್ಣವನ್ನು ಪಡೆದುಕೊಂಡಿದ್ದು, ಡಟ್ಸನ್ ಗೋ ಪ್ಲಸ್ ಡ್ಯುಯಲ್ ಟೋನ್ ಸ್ಟೋರ್ಮ್ ವೈಟ್ ನೊಂದಿಗೆ ಬ್ಲಾಕ್ ಮತ್ತು ಆರೆಂಜ್ ಡಿಕಲ್ಸ್ ಬಣ್ಣವನ್ನು ಹೊಂದಿದೆ. ಇದಲ್ಲದೆ ಡಟ್ಸನ್ ಗೊ ಮತ್ತು ಗೋ ಪ್ಲಸ್ ರಿಮಿಕ್ಸ್ ಸ್ಟೋರ್ಮ್ ವೈಟ್ ಮತ್ತು ಡ್ಯುಯಲ್ ಟೋನ್ ಸಿಲ್ವರ್ ಬಣ್ಣಗಳನ್ನು ಪಡೆದುಕೊಂಡಿವೆ.

ಡಟ್ಸನ್ ಗೋ ಮತ್ತು ಗೋ ಪ್ಲಸ್ ರಿಮಿಕ್ಸ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಕಾರಿನ ವೈಶಿಷ್ಟ್ಯತೆಗಳು

ಹೊಸ ಲಿಮಿಟೆಡ್ ಎಡಿಷನ್ ಕಾರುಗಳು ರಿಮೋಟ್ ಕೀ ಲೆಸ್ ಎಂಟ್ರಿ, ಹ್ಯಾಂಡ್ಸ್-ಫ್ರೀ ಬ್ಲೂಟೂತ್ ಆಡಿಯೊ, ಟ್ರೆಂಡಿಯಾಗಿರುವ ಸೀಟ್ ಕವರ್, ಸಂಪೂರ್ಣ ಬ್ಲಾಕ್ ಫ್ರಂಟ್ ಗ್ರಿಲ್, ಸ್ಟೈಲಿಶ್ ಬ್ಲಾಕ್ ವೀಲ್ ಕವರ್ಸ್, ಪಿಯಾನೊ ಬ್ಲಾಕ್ ಇಂಟೀರಿಯರ್, ಸ್ಪೋರ್ಟಿ ರೀರ್ ಸ್ಪಾಯ್ಲರ್, ಸ್ಟೈಲಿಶ್ ಕ್ರೋಮ್ ಎಕ್ಸಾಸ್ಟ್ ಫಿನಿಶರ್ ಮತ್ತು ಬಂಪರ್ ಬೆಜೆಲ್ ಎಂಬ ಒಂಬತ್ತು ವೈಶಿಷ್ಟ್ಯತೆಗಳನ್ನು ಪಡೆದಿಕೊಂಡಿದೆ.

ಡಟ್ಸನ್ ಗೋ ಮತ್ತು ಗೋ ಪ್ಲಸ್ ರಿಮಿಕ್ಸ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಇದಲ್ಲದೆ ಫಾಲೊ ಮಿ ಹೆಡ್‍ಲ್ಯಾಂಪ್ಸ್, ಸ್ಪೀಡ್ ಸೆನ್ಸಿಟಿವ್ ಎಲೆಕ್ಟ್ರಿಕ್ ಪವರ್ ಸ್ಟೇರಿಂಗ್, ಪವರ್‍‍ಫುಲ್ ಏರ್ ಕಂಡೀಷನಿಂಗ್, ಫ್ರಂಟ್ ಪವರ್ ವಿಂಡೋಸ್, ಆಕ್ಸಿಲರಿ-ಇನ್ , ಚಾರ್ಜರ್ ಪಾಯಿಂಟ್ ಮಾತ್ತು ಸೆಂಟ್ರಲ್ ಲಾಕಿಂಗ್ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಡಟ್ಸನ್ ಗೋ ಮತ್ತು ಗೋ ಪ್ಲಸ್ ರಿಮಿಕ್ಸ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಎಂಜಿನ್ ಸಾಮರ್ಥ್ಯ

ಡಟ್ಸನ್ ಗೊ ಮತ್ತು ಗೋ ಪ್ಲಸ್ ರೀಮಿಕ್ಸ್ ಲಿಮಿಟೆಡ್ ಎಡಿಷನ್‌ಗಳು 1.2 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 67ಬಿಹೆಚ್‍ಪಿ ಮತ್ತು 104ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ.

ಡಟ್ಸನ್ ಗೋ ಮತ್ತು ಗೋ ಪ್ಲಸ್ ರಿಮಿಕ್ಸ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಹೊಸದಾಗಿ ಬಿಡುಗಡೆಗೊಂಡಂತಹ ಈ ಎರಡೂ ಕಾರುಗಳು ಹೊಸ ಪೆಯಿಂಟ್ ಮತ್ತು ಹಲವು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಮಧ್ಯಮ ವರ್ಗದ ಗ್ರಾಹಕರಿಗೆ ಅನುಕೂಲವಾಗುವಂತೆ ವಿನ್ಯಾಸಗೊಂಡಿದೆ.

ಡಟ್ಸನ್ ಗೋ ಮತ್ತು ಗೋ ಪ್ಲಸ್ ರಿಮಿಕ್ಸ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಡಟ್ಸಾನ್ ಗೊ ಹ್ಯಾಚ್‍ಬ್ಯಾಕ್ ಕಾರಾಗಿದ್ದು, ಗೋ ಪ್ಲಸ್ 7 ಆಸನವುಳ್ಳ ವಿನ್ಯಾಸವನ್ನು ಹೊಂದಿದೆ. ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಕುಟುಂಬದೊಂದಿಗೆ ಹೊರ ಸಂಚಾರ ಮಾಡಲು ಹೇಳಿ ಮಾಡಿಸಿದ ಕಾರು ಎನ್ನಬಹುದು.

English summary
Datsun GO And GO+ Remix Limited Edition Launched In India.
Story first published: Monday, March 12, 2018, 16:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark