ಬಹುನೀರಿಕ್ಷಿತ ಫೆರಾರಿ 812 ಸೂಪರ್ ಫಾಸ್ಟ್ ಕಾರು ಭಾರತದಲ್ಲಿ ಬಿಡುಗಡೆ

Written By:

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಸದ್ದು ಮಾಡಿದ್ದ ಬೆರ್ಲಿನೆಟ್ಟಾ ಸೂಪರ್ ಕಾರು ಮಾದರಿಯ ಉತ್ಪಾದನೆಯನ್ನು ಕೈಬಿಟ್ಟಿರುವ ಫೆರಾರಿ ಸಂಸ್ಥೆಯು ಇದೀಗ ಸುಧಾರಿತ ತಂತ್ರಜ್ಞಾನ ಪ್ರೇರಿತ 812 ಸೂಪರ್ ಫಾಸ್ಟ್ ಎನ್ನುವ ಹೊಸ ಕಾರು ಮಾದರಿಯನ್ನು ಬಿಡುಗಡೆಗೊಳಿಸಿದೆ.

ಬಹುನೀರಿಕ್ಷಿತ ಫೆರಾರಿ 812 ಸೂಪರ್ ಫಾಸ್ಟ್ ಕಾರು ಭಾರತದಲ್ಲಿ ಬಿಡುಗಡೆ

ಸೂಪರ್ ಸ್ಪೋರ್ಟ್ಸ್ ಕಾರು ಮಾದರಿಗಳಿಂದಲೇ ವಿಶ್ವ ಪ್ರಸಿದ್ದಿಯಾಗಿರುವ ಫೆರಾರಿ ಸಂಸ್ಥೆಯು ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಆಯ್ಕೆಯನ್ನು ನೀಡುತ್ತಿದ್ದು, ಬಿಡುಗಡೆಗೊಳಿಸಲಾಗಿರುವ 812 ಸೂಪರ್ ಫಾಸ್ಟ್ ಕಾರಿನ ಬೆಲೆಯನ್ನು ರೂ.5.20 ಕೋಟಿ ನಿಗದಿಮಾಡಿದೆ.

ಬಹುನೀರಿಕ್ಷಿತ ಫೆರಾರಿ 812 ಸೂಪರ್ ಫಾಸ್ಟ್ ಕಾರು ಭಾರತದಲ್ಲಿ ಬಿಡುಗಡೆ

ಎಫ್12 ಬೆರ್ಲಿನೆಟ್ಟಾ ಸೂಪರ್ ಕಾರು ಮಾದರಿಗಿಂತಲೂ 812 ಸೂಪರ್ ಫಾಸ್ಟ್ ಮಾದರಿಯಲ್ಲಿ ಹಲವಾರು ಹೊಸತನಗಳನ್ನು ಪರಿಚಯಿಸಲಾಗಿದ್ದು, ಉದ್ದವಾದ ಬಾನೆಟ್ ಮತ್ತು ಕಿರಿದಾದ ಬೂಟ್ ಸ್ಪೆಸ್ ಪಡೆದುಕೊಂಡಿವೆ.

ಬಹುನೀರಿಕ್ಷಿತ ಫೆರಾರಿ 812 ಸೂಪರ್ ಫಾಸ್ಟ್ ಕಾರು ಭಾರತದಲ್ಲಿ ಬಿಡುಗಡೆ

ಇದರಿಂದ ಕಾರಿನ ಲುಕ್ ಹಳೆಯ ಮಾದರಿಗಿಂತ ಹೆಚ್ಚು ಆಕರ್ಷಣೆಯಾಗಿದ್ದು, ಶಾರ್ಪ್ ಹೆಡ್‌ಲ್ಯಾಂಪ್, ಬ್ಯಾನೆಟ್ ಮೇಲೆ ಸಿಗ್ನಿಚರ್ ಗ್ರಿಲ್ ಮತ್ತು ಕಾರಿನ ಹಿಂಬದಿಯಲ್ಲಿ ಫೈಟರ್ ಜೆಟ್ ಪ್ರೇರಿತ ಕ್ವಾರ್ಡ್ ಟ್ರಯಲ್‌ಪೈಪ್ ಜೋಡಣೆ ಹೊಂದಿದೆ.

ಬಹುನೀರಿಕ್ಷಿತ ಫೆರಾರಿ 812 ಸೂಪರ್ ಫಾಸ್ಟ್ ಕಾರು ಭಾರತದಲ್ಲಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

6.5 ಲೀಟರ್ ವಿ12 ಎಂಜಿನ್ ಹೊಂದಿರುವ 812 ಸೂಪರ್ ಫಾಸ್ಟ್ ಕಾರುಗಳು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸಹಾಯದೊಂದಿಗೆ 789ಬಿಎಚ್‌ಪಿ ಮತ್ತು 718ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಬಹುನೀರಿಕ್ಷಿತ ಫೆರಾರಿ 812 ಸೂಪರ್ ಫಾಸ್ಟ್ ಕಾರು ಭಾರತದಲ್ಲಿ ಬಿಡುಗಡೆ

ಈ ಮೂಲಕ ಕೇವಲ 2.9 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮಿ ವೇಗಸಾಧಿಸುವುದಲ್ಲದೇ ಪ್ರತಿ ಗಂಟೆಗೆ 340 ಕಿಮಿ ಟಾಪ್ ಸ್ಪೀಡ್ ತುಲುಪುತ್ತವೆ.

ಲಂಬೋರ್ಗಿನಿ ಕಾರಿನ ಫ್ಯಾನ್ಸಿ ನಂಬರ್‌ಗಾಗಿ 7 ಲಕ್ಷ ತೆತ್ತ ಮಾಲಿವುಡ್ ನಟ

ಬಹುನೀರಿಕ್ಷಿತ ಫೆರಾರಿ 812 ಸೂಪರ್ ಫಾಸ್ಟ್ ಕಾರು ಭಾರತದಲ್ಲಿ ಬಿಡುಗಡೆ

ಇದರ ಜೊತೆಗೆ ಫೆರಾರಿಯ ಸ್ಲೈಡ್ ಸ್ಲಿಪ್ ಕಂಟ್ರೋಲ್ ತಂತ್ರಜ್ಞಾನದೊಂದಿಗೆ ಪವರ್ ಸ್ಟೀರಿಂಗ್ ಅಭಿವೃದ್ಧಿಪಡಿಸಲಾಗಿದ್ದು, ಹೆಚ್ಚುವರಿಯಾಗಿ 812 ಸೂಪರ್ ಫಾಸ್ಟ್‌ನಲ್ಲಿ ಎರಡನೇ ತಲೆಮಾರಿನ ವರ್ಚುವಲ್ ಶಾರ್ಟ್ ವೀಲ್‍ಬೇಸ್ ಅನ್ನು ಒಳಗೊಂಡಿದೆ. ಇದು F12 ನಲ್ಲಿ ಬಳಸಿದ ಮೊದಲ-ಪೀಳಿಗೆಯ ವ್ಯವಸ್ಥೆಯ ವಿಕಸನವಾಗಿದೆ.

ಬಹುನೀರಿಕ್ಷಿತ ಫೆರಾರಿ 812 ಸೂಪರ್ ಫಾಸ್ಟ್ ಕಾರು ಭಾರತದಲ್ಲಿ ಬಿಡುಗಡೆ

ಹೊಸ ಎಲ್ಎಡಿ ಲೈಟ್ಸ್, ಗ್ರಿಲ್ ಮತ್ತು ಏರೋಡಿನಮೈಟ್ ಫೀಚರ್‍‍ಗಳನ್ನು ಪಡೆದಿದ್ದು, 812 ಸೂಪರ್ಫಾಸ್ಟ್ ನ ಆಕ್ಟಿವ್ ಏರೋಡೈನಾಮೈಟ್ ಅವಶ್ಯಕತೆಯ ಆಧಾರದ ಮೇಲೆ ಡೌನ್‍‍ಫೋರ್ಸ್ ಹೆಚ್ಚಿಸಲು ಅಥವಾ ಡ್ರ್ಯಾಗ್ ಅನ್ನು ಕಡಿಮೆ ಮಾಡಲು ಮುಂಭಾಗದಲ್ಲಿ ಜೋಡಿಸಲ್ಪಟ್ಟಿರುತ್ತದೆ.

ಬಹುನೀರಿಕ್ಷಿತ ಫೆರಾರಿ 812 ಸೂಪರ್ ಫಾಸ್ಟ್ ಕಾರು ಭಾರತದಲ್ಲಿ ಬಿಡುಗಡೆ

ಹೀಗಾಗಿ ಫೆರಾರಿಯ ಹೊಸ ಕಾರು 812 ಸೂಪರ್ ಫಾಸ್ಟ್ ಮಾದರಿಯು ಎಸ್ಟ್ರೋನ್ ಮಾರ್ಟಿನ್ ಡಿಬಿ11, ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಮತ್ತು ಲ್ಯಾಂಬೋರ್ಗಿನಿ ಅವೆಂಟಡೊರ್ ಎಸ್ ಕಾರುಗಳಿಗೆ ತೀರ್ವ ಪೈಪೋಟಿಯಾಗಿ ನಿಲ್ಲಲಿದೆ.

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

English summary
Ferrari 812 Superfast Launched In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark