ದೇಶದ ಮೊದಲ ಪೋರ್ಷೆ 911 ಜಿಟಿ2 ಆರ್‌ಎಸ್ ಖರೀದಿಸಿದ ಬೆಂಗಳೂರು ಉದ್ಯಮಿ

ಕಳೆದ ಜುಲೈನಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿರುವ ಪೋರ್ಷೆ ದುಬಾರಿ ಸೂಪರ್ ಕಾರು 911 ಜಿಟಿ2 ಆರ್‌ಎಸ್ ಮಾದರಿಗಳಿಗೆ ಇದೀಗ ಉತ್ತಮ ಬೇಡಿಕೆ ಸೃಷ್ಠಿಯಾಗಿದ್ದು, ನಮ್ಮ ಬೆಂಗಳೂರಿನಲ್ಲೂ ಸಹ ದೇಶದ ಮೊದಲ ಪೋರ್ಷೆ 911 ಜಿಟಿ2 ಆರ್‌ಎಸ್ ಕಾರು ಮಾರಾಟವಾಗಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ದೇಶದ ಮೊದಲ ಪೋರ್ಷೆ 911 ಜಿಟಿ2 ಆರ್‌ಎಸ್ ಖರೀದಿಸಿದ ಬೆಂಗಳೂರು ಉದ್ಯಮಿ

ಬೆಂಗಳೂರಿನಲ್ಲಿ ಮಾರಾಟಗೊಂಡ ಪೋರ್ಷೆ 911 ಜಿಟಿ2 ಆರ್‌ಎಸ್ ಕಾರುಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.3.88 ಕೋಟಿ ಬೆಲೆ ಹೊಂದಿದ್ದು, ಈ ಹಿಂದಿನ 911 ಜಿಟಿ3 ಕಾರುಗಳಿಂತಲೂ ಇದು ಹೆಚ್ಚಿನ ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿರುವುದು ಈ ಕಾರಿನ ಮತ್ತೊಂದು ವಿಶೇಷ.

ದೇಶದ ಮೊದಲ ಪೋರ್ಷೆ 911 ಜಿಟಿ2 ಆರ್‌ಎಸ್ ಖರೀದಿಸಿದ ಬೆಂಗಳೂರು ಉದ್ಯಮಿ

ಬೆಂಗಳೂರು ಮೂಲದ ಉದ್ಯಮಿ ಭೂಪೇಶ್ ರೆಡ್ಡಿ ಎಂಬುವವರೇ ಭಾರತದಲ್ಲಿ ಮೊದಲ ಪೋರ್ಷೆ 911 ಜಿಟಿ2 ಆರ್‌ಎಸ್ ಕಾರಿನ ಮಾಲೀಕ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೇ ಈಗಾಗಲೇ ಇವರ ಬಳಿ ಹಲವು ಜನಪ್ರಿಯ ಐಷಾರಾಮಿ ಕಾರುಗಳನ್ನ ಸಹ ಹೊಂದಿದ್ದಾರೆ ಎನ್ನಲಾಗಿದೆ.

ದೇಶದ ಮೊದಲ ಪೋರ್ಷೆ 911 ಜಿಟಿ2 ಆರ್‌ಎಸ್ ಖರೀದಿಸಿದ ಬೆಂಗಳೂರು ಉದ್ಯಮಿ

ಇನ್ನು ಮೊದಲ ಬಾರಿಗೆ ಪೋರ್ಷೆ ಜಿಟಿ2 ಆರ್‍ಎಸ್ ಕಾರುಗಳು ಎರಡನೇ ತಲೆಮಾರಿನ ವೈಶಿಷ್ಟ್ಯೆತೆಗಳೊಂದಿಗೆ 2017ರಲ್ಲಿ ನಡೆದ ಗುಡ್‍ ವುಡ್ ಫೆಸ್ಟಿವಲ್‍ ಆಫ್ ಸ್ಪೀಡ್‍‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಪೋರ್ಷೆ ಕಾರುಗಳ ಲೈನ್‍ಅಪ್‍‍ನಲ್ಲೇ ಅತಿ ಹೆಚ್ಚು ಸಾಮರ್ಥ್ಯದ ಸೂಪರ್ ಕಾರು ಮಾದರಿಯಾಗಿ ಮನ್ನಣೆ ಗಳಿಸಿತ್ತು.

ದೇಶದ ಮೊದಲ ಪೋರ್ಷೆ 911 ಜಿಟಿ2 ಆರ್‌ಎಸ್ ಖರೀದಿಸಿದ ಬೆಂಗಳೂರು ಉದ್ಯಮಿ

ಕಾರಿನ ಎಂಜಿನ್ ಸಾಮರ್ಥ್ಯ

ಪೋರ್ಷೆ ಜಿಟಿ2 ಆರ್‍ಎಸ್ ಕಾರುಗಳು 3.8 ಲೀಟರ್ ಫ್ಲಾಕ್ಸ್-ಸಿಕ್ಸ್, ಟ್ವಿನ್ ಟರ್ಬೋ ಚಾರ್ಜ್ಡ್ ಎಂಜಿನ್ ಹೊಂದಿದ್ದು, ಜೆಡ್‌ಎಫ್ ಆಧರಿತ 7-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್‌ನೊಂದಿಗೆ 686-ಬಿಹೆಚ್‍‍ಪಿ ಮತ್ತು 750-ಎನ್ಎಮ್ ಟಾರ್ಕ್ ಉತ್ಪಾದಿಸಬಲ್ಲವು.

ದೇಶದ ಮೊದಲ ಪೋರ್ಷೆ 911 ಜಿಟಿ2 ಆರ್‌ಎಸ್ ಖರೀದಿಸಿದ ಬೆಂಗಳೂರು ಉದ್ಯಮಿ

ಈ ಮೂಲಕ ಗಂಟೆಗೆ ಗರಿಷ್ಠವಾಗಿ 340 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿರುವ ಪೋರ್ಷೆ 911 ಜಿಟಿ2 ಆರ್‌ಎಸ್ ಕಾರುಗಳು, ಕೇವಲ 3 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮೀ ಸ್ಪೀಡ್ ವೇಗ ಪಡೆಯುವ ಗುಣ ಹೊಂದಿವೆ.

ದೇಶದ ಮೊದಲ ಪೋರ್ಷೆ 911 ಜಿಟಿ2 ಆರ್‌ಎಸ್ ಖರೀದಿಸಿದ ಬೆಂಗಳೂರು ಉದ್ಯಮಿ

ಇದಕ್ಕೆ ಕಾರಣ, ಪೋರ್ಷೆ ಜಿಟಿ2 ಆರ್‍ಎಸ್ ಸ್ಟ್ಯಾಂಡರ್ಡ್ ಮಾದರಿಯ ಸಾಮಾನ್ಯ ಮಾದರಿಯ 911 ಕಾರಿಗಿಂತ ತೂಕದಲ್ಲಿ ಕಡಿಮೆಯಿದ್ದು, ಕಾರಿನ ತೂಕ ಕಡಿತ ಮಾಡಲು ಕಾರ್ಬನ್ ಫೈಬರ್ ಬ್ಯಾನೆಟ್, ಫ್ರಂಟ್ ವಿಂಗ್ಸ್, ಒಆರ್‍‍ವಿಎಮ್ ಮತ್ತು ಡಕ್ಟ್ ಸರ್ರೌಂಡ್ಸ್ ಅನ್ನು ಅಳವಡಿಸಲಾಗಿದೆ.

ದೇಶದ ಮೊದಲ ಪೋರ್ಷೆ 911 ಜಿಟಿ2 ಆರ್‌ಎಸ್ ಖರೀದಿಸಿದ ಬೆಂಗಳೂರು ಉದ್ಯಮಿ

ಜೊತೆಗೆ ಪೋರ್ಷೆ 911 ಜಿಟಿ2 ಆರ್‌ಎಸ್ ಕಾರುಗಳಲ್ಲಿ ಟ್ರ್ಯಾಕ್ ಕೇಂದ್ರಿತ ಟೈಟಾನಿಯಂ ಎಕ್ಸಾಸ್ಟ್ ಸಿಸ್ಟಮ್ ಅಳವಡಿಸಲಾಗಿದ್ದು, ಇದು ಸಾಮಾನ್ಯ ಎಕ್ಸಾಸ್ಟ್‌ಗಳಿಂತಲೂ 7ಕೆ.ಜಿ ಹಗುರವಾದವಾಗಿರಲಿದೆ. ಇದಲ್ಲದೇ ಕಾರಿನಲ್ಲಿ ಮೆಗ್ನೀಶಿಯಮ್ ಮೇಲ್ಛಾವಣಿ ಸ್ಟ್ಯಾಂಡರ್ಡ್ ಆಗಿರುವುದು ಕಾರಿನ ಗುಣಮಟ್ಟ ಹೆಚ್ಚಿಸಿದೆ.

ದೇಶದ ಮೊದಲ ಪೋರ್ಷೆ 911 ಜಿಟಿ2 ಆರ್‌ಎಸ್ ಖರೀದಿಸಿದ ಬೆಂಗಳೂರು ಉದ್ಯಮಿ

ಹೀಗಾಗಿಯೇ ಪೋರ್ಷೆ ಜಿಟಿ2 ಆರ್‍ಎಸ್ ಕಾರುಗಳು ಒಟ್ಟು ತೂಕ 1,470 ಕೆಜಿ ಇದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಬಿಡಿಭಾಗಗಳನ್ನು ಬಳಕೆ ಮಾಡಿರುವುದರಿಂದ ಕಾರಿನ ತೂಕದಲ್ಲಿ ಬರೋಬ್ಬರಿ 30 ಕೆ.ಜಿ ಕಡಿಮೆಗೊಳಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

Most Read Articles

Kannada
English summary
Porsche Centre Bengaluru Sells India’s First 911 GT2 RS – The Most Insane Modern Porsche 911.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X