ಹೈ ಸ್ಪೀಡ್‌ನಲ್ಲಿದ್ದ ಕಾರು ಪಲ್ಟಿ- ಆಮೇಲೇನಾಯ್ತು ನೀವೇ ನೋಡಿ....

Written By:

ದೇಶಾದ್ಯಂತ ದಿನಂಪ್ರತಿ ಹತ್ತಾರು ಅಪಘಾತ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಆದರೂ ವಾಹನ ಚಾಲನೆ ವೇಳೆ ಕೆಲವರು ಮುಂಜಾಗ್ರತೆ ವಹಿಸುವುದೇ ಇಲ್ಲಾ. ಪರಿಣಾಮ ಸಣ್ಣಪುಟ್ಟ ತಪ್ಪುಗಳೇ ದುರಂತಗಳಿಗೆ ಎಡೆಮಾಡಿಕೊಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೈ ಸ್ಪೀಡ್‌ನಲ್ಲಿದ್ದ ಕಾರು ಪಲ್ಟಿ-ಆಮೇಲೇನಾಯ್ತು ನೀವೇ ನೋಡಿ....

ಅತಿಯಾದ ವೇಗ ಜೀವಕ್ಕೆ ಅಪಾಯ ಅಂತಾ ಗೊತ್ತಿದ್ರು ಜನಕ್ಕೆ ಮಾತ್ರ ಸ್ಪೀಡ್​ನ ಹುಚ್ಚು ಕಡಿಮೆಯಾಗುವುದೇ ಇಲ್ಲ. ಕೆಲವರು ತಮ್ಮ ಶೋಕಿಗಾಗಿ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಲ್ಲೂ ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನ ಚಾಲನೆ ಮಾಡ್ತಾರೆ.

Recommended Video - Watch Now!
[Kannada] Maruti Swift 2018 - Full Specifications, Features, Price, Mileage, Colours - DriveSpark
ಹೈ ಸ್ಪೀಡ್‌ನಲ್ಲಿದ್ದ ಕಾರು ಪಲ್ಟಿ-ಆಮೇಲೇನಾಯ್ತು ನೀವೇ ನೋಡಿ....

ಹೀಗೆ ಅತಿಯಾದ ವೇಗದಲ್ಲಿ ಕಾರು ಚಾಲನೆ ಮಾಡಿಕೊಂಡು ಬಂದವರಿಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿರುವ ಘಟನೆ ಗುಜರಾತಿನ ಮೊರ್ಬಿ ನಗರದಲ್ಲಿ ನಡೆದಿದೆ.

ಹೈ ಸ್ಪೀಡ್‌ನಲ್ಲಿದ್ದ ಕಾರು ಪಲ್ಟಿ-ಆಮೇಲೇನಾಯ್ತು ನೀವೇ ನೋಡಿ....

ಮಾರುತಿ ಸುಜುಕಿ ಡಿಜೈರ್‌ ಕಾರಿನಲ್ಲಿ ಇಬ್ಬರು ಯುವಕರು ಫುಲ್ ಸ್ಪೀಡ್ ಆಗಿ ಡ್ರೈವ್ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ ರಸ್ತೆ ತಿರುವಿನಲ್ಲಿ ಬಂದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯ ಡಿವೈಡರ್​ಗೆ ಗುದ್ದಿ ಪಲ್ಟಿ ಹೊಡೆದಿದೆ.

ಹೈ ಸ್ಪೀಡ್‌ನಲ್ಲಿದ್ದ ಕಾರು ಪಲ್ಟಿ-ಆಮೇಲೇನಾಯ್ತು ನೀವೇ ನೋಡಿ....

ಈ ವೇಳೆ ಎರಡು ಬಾರಿ ಪಲ್ಟಿ ಹೊಡೆದ ಕಾರು ನಡು ರಸ್ತೆಯಲ್ಲಿ ಮೊಗಚಿ ಬಿದ್ದಿದ್ದು, ಕೂಡಲೇ ಕಾರಿನಲ್ಲಿದ್ದ ಇಬ್ಬರೂ ಕಾರಿನಿಂದ ಹೊರ ಬಂದಿದ್ದಾರೆ. ಅದೃಷ್ಟವಶಾತ್ ಘಟನೆ ನಡೆದ ರಸ್ತೆಯ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಸಹ ಇದ್ದು, ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಭಾರೀ ಅನಾಹುತವಾಗಿರುತ್ತಿತ್ತು.

ಹೈ ಸ್ಪೀಡ್‌ನಲ್ಲಿದ್ದ ಕಾರು ಪಲ್ಟಿ-ಆಮೇಲೇನಾಯ್ತು ನೀವೇ ನೋಡಿ....

ಅದಲ್ಲದೇ ಅಪಘಾತ ಸ್ಥಳದಲ್ಲಿ ಯಾರು ಕೂಡಾ ಎನ್ನುವುದೇ ಸಮಾಧಾನಕರ ಸಂಗತಿ. ಒಂದು ವೇಳೆ ಬೇರೆ ವಾಹನಗಳಾಗಲಿ ಇಲ್ಲವೇ ಜನಸಾಮಾನ್ಯರು ಅಡ್ಡ ಬಂದಿದ್ದರೇ ಅಪಘಾತದ ತೀವ್ರತೆಯನ್ನು ಊಹೆ ಮಾಡಿಕೊಳ್ಳುಲು ಅಸಾಧ್ಯ.

ಹೈ ಸ್ಪೀಡ್‌ನಲ್ಲಿದ್ದ ಕಾರು ಪಲ್ಟಿ-ಆಮೇಲೇನಾಯ್ತು ನೀವೇ ನೋಡಿ....

ಇನ್ನು ಕಾರು ಪಲ್ಟಿ ಆಗ್ತಿದ್ದಂತೆ ಯುವಕರಿಬ್ಬರು ಕಾರಿನಿಂದ ಹೊರ ಬರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಗಿದೆ.

Source: ANI

ಹೈ ಸ್ಪೀಡ್‌ನಲ್ಲಿದ್ದ ಕಾರು ಪಲ್ಟಿ-ಆಮೇಲೇನಾಯ್ತು ನೀವೇ ನೋಡಿ....

ಇಂಹತ ಭೀಕರ ಅಪಘಾತಗಳ ಹೊರತಾಗಿಯು ಕೆಲವರು ಜನದಟ್ಟಣೆ ಪ್ರದೇಶಗಳಲ್ಲೂ ಹೈ ಸ್ಪೀಡ್ ಕಾರು ಚಾಲನೆ ಮಾಡುತ್ತಿರುವುದು ದುರಂತಗಳಿಗೆ ಎಡೆಮಾಡಿಕೊಡುತ್ತಿದ್ದು, ಯಾವುದೇ ಕಾರಣಕ್ಕೂ ಮುಂಜಾಗ್ರತಾ ಕ್ರಮಗಳಿಲ್ಲದೇ ವೇಗದ ವಾಹನ ಚಾಲನೆ ಮಾಡಲೇಬೇಡಿ.

Trending On DriveSpark Kannada:

ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದ ಫೋರ್ಡ್ ಮಾಡೆಲ್ ಟಿ ಕಾರುಗಳು...

ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

Read more on accident video
English summary
Speeding car loses control, hits the pavement and turns upside down.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark