Subscribe to DriveSpark

1.4-ಲೀಟರ್ ಸಾಮರ್ಥ್ಯದ ಹ್ಯುಂಡೈ ವೆರ್ನಾ ಪೆಟ್ರೋಲ್ ಆವೃತ್ತಿ ಬಿಡುಗಡೆ

Written By:
Recommended Video - Watch Now!
Bangalore Bike Accident At Chikkaballapur Near Nandi Upachar - DriveSpark

ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಕಾರು ಇದೀಗ 1.4-ಲೀಟರ್ ಪೆಟ್ರೋಲ್ ಎಂಜಿನ್ ಆವೃತ್ತಿ ಬಿಡುಗಡೆಗೊಂಡಿದ್ದು, ಆರಂಭಿಕ ಕಾರು ಆವೃತ್ತಿಯ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.7.79 ಲಕ್ಷಕ್ಕೆ ಹಾಗೂ ಉನ್ನತ ಆವೃತ್ತಿಯ ಬೆಲೆಯು ರೂ.9.09 ಲಕ್ಷಕ್ಕೆ ಲಭ್ಯವಿರಲಿವೆ.

To Follow DriveSpark On Facebook, Click The Like Button
1.4-ಲೀಟರ್ ಸಾಮರ್ಥ್ಯದ ಹ್ಯುಂಡೈ ವೆರ್ನಾ ಪೆಟ್ರೋಲ್ ಆವೃತ್ತಿ ಬಿಡುಗಡೆ

ಹ್ಯುಂಡೈ ಎಕ್ಸಿಕ್ಯೂಟಿವ್ ಸೆಡಾನ್ ವೆರ್ನಾ ಕಾರು ಸದ್ಯ 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಯನ್ನು ಈಗಾಗಲೇ ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆಗೆ ಅನ್ವಯ 1.4-ಲೀಟರ್ ಪೆಟ್ರೋಲ್ ಆವೃತ್ತಿಯಲ್ಲಿ ಇ ಆ್ಯಂಡ್ ಇಎಕ್ಸ್ ಎರಡು ವಿವಿಧ ಮಾದರಿಗಳನ್ನು ಪರಿಚಯಿಸಿದೆ.

1.4-ಲೀಟರ್ ಸಾಮರ್ಥ್ಯದ ಹ್ಯುಂಡೈ ವೆರ್ನಾ ಪೆಟ್ರೋಲ್ ಆವೃತ್ತಿ ಬಿಡುಗಡೆ

ಹೀಗಾಗಿ ಹೊಸ ಮಾದರಿಯ 1.4-ಲೀಟರ್ ಪೆಟ್ರೋಲ್ ಎಂಜಿನ್ ಆವೃತ್ತಿಯು 99-ಬಿಎಚ್‌ಪಿ ಮತ್ತು 132-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಮತ್ತು 1.6-ಲೀಟರ್ ಪೆಟ್ರೋಲ್ ಎಂಜಿನ್ ಆವೃತ್ತಿಯು 121-ಬಿಎಚ್‌ಪಿ ಮತ್ತು 151-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

1.4-ಲೀಟರ್ ಸಾಮರ್ಥ್ಯದ ಹ್ಯುಂಡೈ ವೆರ್ನಾ ಪೆಟ್ರೋಲ್ ಆವೃತ್ತಿ ಬಿಡುಗಡೆ

ಹ್ಯುಂಡೈ ವೆರ್ನಾದ ಈ 1.4-ಲೀಟರ್ ಮಧ್ಯಮ ಗಾತ್ರದ ಸೆಡಾನ್ ಕಾರು ಕೈಗೆಟುಕುವ ದರದಲ್ಲಿ ತಯಾರು ಮಾಡಿರುವ ಹ್ಯುಂಡೈ ಸಂಸ್ಥೆಯ ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ಸುಮಾರು 80,000 1.4 ಎಂಜಿನ್ ವೆರ್ನಾ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡವ ಗುರಿಯನ್ನು ಹೊಂದಿದೆ.

1.4-ಲೀಟರ್ ಸಾಮರ್ಥ್ಯದ ಹ್ಯುಂಡೈ ವೆರ್ನಾ ಪೆಟ್ರೋಲ್ ಆವೃತ್ತಿ ಬಿಡುಗಡೆ

ಎರಡೂ ಮಾದರಿಯೂ ಸಹ 6-ಸ್ಪೀಡ್ ಮಾನ್ಯುಯಲ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದ್ದು, ಪೆಟ್ರೋಲ್ ಆವೃತಿಯ ಕಾರು ಲೀಟರ್‌ಗೆ 19.7 ಕಿಲೋಮೀಟರ್‌ ಮೈಲೇಜ್ ನೀಡಲಿದೆ ಹಾಗು 1.6-ಲೀಟರ್ ಪೆಟ್ರೋಲ್ ಕಾರು 17.5 ಕಿಲೋಮೀಟರ್‌ ಮೈಲೇಜ್ ನೀಡಲಿವೆ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ತನ್ನ ಯಶಸ್ವಿ ಡಿಜೈರ್ ಕಾರಿನಲ್ಲಿ ದೋಷ ಇದೆ ಎಂದ ಮಾರುತಿ ಸುಜುಕಿ

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

1.4-ಲೀಟರ್ ಸಾಮರ್ಥ್ಯದ ಹ್ಯುಂಡೈ ವೆರ್ನಾ ಪೆಟ್ರೋಲ್ ಆವೃತ್ತಿ ಬಿಡುಗಡೆ

ಜೊತೆಗೆ ಕೆ 2 ಫ್ಲ್ಯಾಟ್ ಫಾರ್ಮ್ ಆಧಾರ ಮೇಲೆ ಅಭಿವೃದ್ದಿಗೊಂಡಿರುವ 3ನೇ ಜನರೇಷನ್ ಹ್ಯುಂಡೈ ವೆರ್ನಾ ಕಾರು ಹೆಚ್ಚಿನ ಶಕ್ತಿಯ ಉಕ್ಕಿನ್ನು ಪಡೆದುಕೊಂಡಿದ್ದು, ಬಿಗಿತವನ್ನು ಹೆಚ್ಚಿಗೆ ಮಾಡಲಿದೆ ಮತ್ತು ಕಾರಿನ ಕ್ರ್ಯಾಶ್‌ವರ್ತಿನೆಸ್ ಹೆಚ್ಚಿಗೆಗೊಳಿಸಲಿದೆ.

1.4-ಲೀಟರ್ ಸಾಮರ್ಥ್ಯದ ಹ್ಯುಂಡೈ ವೆರ್ನಾ ಪೆಟ್ರೋಲ್ ಆವೃತ್ತಿ ಬಿಡುಗಡೆ

ಇ ಮತ್ತು ಇಎಕ್ಸ್ ಆವೃತಿಗಳ ಒಳಭಾಗದಲ್ಲಿ, 7 ಇಂಚಿನ ಟಚ್ ಸ್ಕ್ರೀನ್ ಟಿವಿ ವ್ಯವಸ್ಥೆ ಹೊಂದಿರುತ್ತದೆ. ಈ 7 ಇಂಚಿನ ಟಚ್ ಸ್ಕ್ರೀನ್ ಪರದೆಯು ಆಂಡ್ರಾಯ್ಡ್ ಆಟೊ, ಆಪಲ್ ಕಾರ್‌ಪ್ಲೇ ಮತ್ತು ಮಿರರ್ ಲಿಂಕ್ ಕನೆಕ್ಟಿವಿಟಿ ವ್ಯವಸ್ಥೆ ಹೊಂದಿದೆ.

1.4-ಲೀಟರ್ ಸಾಮರ್ಥ್ಯದ ಹ್ಯುಂಡೈ ವೆರ್ನಾ ಪೆಟ್ರೋಲ್ ಆವೃತ್ತಿ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ನಿರ್ಮಾಣದ ಸೆಡಾನ್ ಆವೃತ್ತಿಗಳಲ್ಲಿ ಉತ್ತಮ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುವ ಉದ್ದೇಶದಿಂದ ಮಧ್ಯಮ ಗಾತ್ರದ 1.4-ಲೀಟರ್ ಪೆಟ್ರೋಲ್ ಆವೃತ್ತಿಯನ್ನು ಹೊರತಂದಿದೆ ಎನ್ನಬಹುದು.

English summary
Hyundai Verna With 1.4-litre Petrol Engine Launched In India.
Story first published: Thursday, January 11, 2018, 11:35 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark