ಆಟೋ ಎಕ್ಸ್ ಪೋ 2018: ಹೊಸ ಮಾದರಿಯ ಟಿಯುವಿ ಸ್ಟಿಂಗರ್ ಪ್ರದರ್ಶಿಸಿದ ಮಹೀಂದ್ರಾ

Written By:

ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಹೊಸ ಪರಿಕಲ್ಪನೆಗಳನ್ನು ಅಭಿವೃದ್ಧಿ ಮಾಡುತ್ತಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು 2018ರ ಆಟೋ ಎಕ್ಸ್ ಪೋದಲ್ಲಿ ವಿನೂತನ ಕನ್ವರ್ಟಬಲ್ ಡ್ರಾಪ್ ಟಾಪ್ ಎಸ್‌ಯುವಿ ಮಾದರಿಯೊಂದನ್ನು ಪ್ರದರ್ಶನಗೊಳಿಸಿದೆ.

ಆಟೋ ಎಕ್ಸ್ ಪೋ 2018: ಹೊಸ ಮಾದರಿಯ ಟಿಯುವಿ ಸ್ಟಿಂಗರ್ ಪ್ರದರ್ಶಿಸಿದ ಮಹೀಂದ್ರಾ

ಮಹೀಂದ್ರಾ ಪ್ರದರ್ಶಿಸಿದ ಡ್ರಾಪ್ ಟಾಪ್ ಕನ್ವರ್ಟಬಲ್ ಎಸ್‌ಯುವಿ ಟಿಯುವಿ ಸ್ಟಿಂಗರ್ ಹಲವು ಕಾರಣಗಳಿಗೆ ವಿಶೇಷವಾಗಿದ್ದು, ಆಪ್ ರೋಡ್ ಮತ್ತು ಐಷಾರಾಮಿ ಡ್ರಾಪ್ ಟಾಪ್ ಕಾರು ಖರೀದಿ ಬಯಸುವ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ವಿನೂತನ ಕಾರುನ್ನು ಅಭಿವೃದ್ಧಿ ಮಾಡಿದೆ.

ಆಟೋ ಎಕ್ಸ್ ಪೋ 2018: ಹೊಸ ಮಾದರಿಯ ಟಿಯುವಿ ಸ್ಟಿಂಗರ್ ಪ್ರದರ್ಶಿಸಿದ ಮಹೀಂದ್ರಾ

ಮಹೀಂದ್ರಾ ಹೇಳಿಕೊಂಡಿರುವ ಪ್ರಕಾರ ಎಸ್‌ಯುವಿ ಮಾದರಿಗಳಲ್ಲೇ ಇದೊಂದು ವಿಶೇಷ ಡ್ರಾಪ್ ಟಾಪ್ ಕಾರು ಆವೃತ್ತಿಗಳಾಗಿದ್ದು, ಕೇವಲ ಸೆಡಾನ್‌ ಕಾರುಗಳಲ್ಲಿ ಅಷ್ಟೇ ಅಲ್ಲದೇ ಎಸ್‌ಯುವಿ ಆವೃತ್ತಿಯಲ್ಲೂ ಡ್ರಾಪ್ ಟಾಪ್ ವರ್ಷನ್‌ಗಳನ್ನು ಹೇಗೆ ನಿರ್ಮಾಣ ಮಾಡಬಹುದು ಎಂಬುವುದು ಮಹೀಂದ್ರಾ ತೊರಿಸಿಕೊಟ್ಟಿದೆ.

ಆಟೋ ಎಕ್ಸ್ ಪೋ 2018: ಹೊಸ ಮಾದರಿಯ ಟಿಯುವಿ ಸ್ಟಿಂಗರ್ ಪ್ರದರ್ಶಿಸಿದ ಮಹೀಂದ್ರಾ

ಹೀಗಾಗಿ ಲೈಫ್ ಸ್ಟೈಲ್ ಗ್ರಾಹಕರಿಗೆ ಇದೊಂದು ಆಯ್ಕೆಯಾಗಲಿದ್ದು, ಈ ಹಿಂದಿನ ಟಿಯುವಿ ಎಸ್‌ಯುವಿ ಸರಣಿಯ ಎಂ-ಹ್ವಾಕ್ ಟರ್ಬೋ ಡೀಸೆಲ್ ಎಂಜಿನ್‌ಗಳನ್ನು ಈ ಹೊಸ ಕಾರಿನಲ್ಲೂ ಬಳಕೆ ಮಾಡಲಾಗಿದೆ.

ಆಟೋ ಎಕ್ಸ್ ಪೋ 2018: ಹೊಸ ಮಾದರಿಯ ಟಿಯುವಿ ಸ್ಟಿಂಗರ್ ಪ್ರದರ್ಶಿಸಿದ ಮಹೀಂದ್ರಾ

ಇದರಿಂದ ಟಿಯುವಿ ಸ್ಟಿಂಗರ್ ಕಾರುಗಳು 140 ಬಿಎಚ್‌ಪಿ ಮತ್ತು 320 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಗುಣಹೊಂದಿದ್ದು, ಪರ್ಫಾಮೆನ್ಸ್ ಕಾರು ಮಾದರಿಗಳೇ ಇದು ಪರ್ಯಾಯ ಆಯ್ಕೆಯಾಗಲಿದೆ.

ಆಟೋ ಎಕ್ಸ್ ಪೋ 2018: ಹೊಸ ಮಾದರಿಯ ಟಿಯುವಿ ಸ್ಟಿಂಗರ್ ಪ್ರದರ್ಶಿಸಿದ ಮಹೀಂದ್ರಾ

ಇನ್ನು ಟಿಯುವಿ ಸ್ಟಿಂಗರ್ ಕಾರುಗಳಲ್ಲಿ ನಾಲ್ಕು ಜನ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದ್ದು, ಈ ಹಿಂದಿನ ಟಿಯುವಿ 300 ಮಾದರಿಯಲ್ಲೇ ಕಾರಿನ ಮುಂಭಾಗದ ಡಿಸೈನ್‌ಗಳನ್ನು ಮುಂದುವರಿಸಲಾಗಿದೆ.

Trending On DriveSpark Kannada:

ಆಟೋ ಎಕ್ಸ್ ಪೋ 2018: ವಿನೂತನ ಸ್ವಿಫ್ಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್..

ಆಟೋ ಎಕ್ಸ್ ಪೋ 2018: ಹೊಸ ಮಾದರಿಯ ಟಿಯುವಿ ಸ್ಟಿಂಗರ್ ಪ್ರದರ್ಶಿಸಿದ ಮಹೀಂದ್ರಾ

ಎಲ್ಇಡಿ ಪ್ರೇರಿತ ಹೆಡ್ ಲ್ಯಾಂಪ್, ಟೈಲ್ ಲ್ಯಾಂಪ್, ಫಾಗ್ ಲ್ಯಾಂಪ್ ಇದ್ದು, ಕಾರಿನ ಒಳ ವಿನ್ಯಾಸಗಳು ಸೇರಿದಂತೆ ಹಲವು ಹೊಸ ಮಾದರಿಯ ಡಿಸೈನ್‌ಗಳನ್ನು ಹೊಸ ಕಾರಿನಲ್ಲಿ ಅಳವಡಿಕೆ ಮಾಡಿರುವುದು ಆಪ್ ರೋಡ್ ಎಸ್‌ಯುವಿ ಪ್ರಿಯರಿಗೆ ಹೊಸ ಥ್ರಿಲ್ ನೀಡಲಿವೆ.

ಆಟೋ ಎಕ್ಸ್ ಪೋ 2018: ಹೊಸ ಮಾದರಿಯ ಟಿಯುವಿ ಸ್ಟಿಂಗರ್ ಪ್ರದರ್ಶಿಸಿದ ಮಹೀಂದ್ರಾ

ಬಿಡುಗಡೆ ಯಾವಾಗ?

ಮಹೀಂದ್ರಾ ಹೇಳಿಕೆ ಪ್ರಕಾರ ಹೊಸ ಮಾದರಿಯ ಟಿಯುವಿ ಸ್ಟಿಂಗರ್ ಕಾರುಗಳ ಉತ್ಪಾದನಾ ಪ್ರಕ್ರಿಯೆಯು 2ನೇ ತ್ರೈಮಾಸಿಕ ಅವಧಿಗೆ ಆರಂಭವಾಗಲಿದ್ದು, ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಆಟೋ ಎಕ್ಸ್ ಪೋ 2018: ಹೊಸ ಮಾದರಿಯ ಟಿಯುವಿ ಸ್ಟಿಂಗರ್ ಪ್ರದರ್ಶಿಸಿದ ಮಹೀಂದ್ರಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇದುವರೆಗೆ ಎಲ್ಲಾ ಮಾದರಿಯಲ್ಲೂ ತನ್ನ ಕಾರು ಆವೃತ್ತಿಗಳನ್ನು ಅಭಿವೃದ್ಧಿ ಮಾಡಿರುವ ಮಹೀಂದ್ರಾ ಸಂಸ್ಥೆಯು ಆಪ್ ರೋಡ್ ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆ ನೀಡುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುವ ತವಕದಲ್ಲಿವೆ.

Read more on mahindra suv auto expo 2018
English summary
Auto Expo 2018: Mahindra TUV Stinger Revealed - Specifications, Images & Details.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark