ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ಕುಡಿದು ವಾಹನ ಚಲಾಯಿಸುವುದು ತಮಗೆ ಮಾತ್ರವಲ್ಲದೇ ಬೇರೆಯವರಿಗೂ ತೊಂದರೆ ಎಂದು ತಿಳಿದಿದ್ದರೂ ಸಹ ದೇಶದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೇ ಕಾರಣಕ್ಕೆ ಇಲ್ಲೊಂದು ಘಟನೆಯಲ್ಲಿ ಕುಡುಕ ಚಾಲಕನೊಬ್ಬನ ಅವಾಂತರದಿಂದಾಗಿ ವ್ಯಕ್ತಿಯೊಬ್ಬ ತನ್ನ ಜೀವನವನ್ನೇ ಕಳೆದುಕೊಂಡಿದ್ದಾನೆ.

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ವೀಕೆಂಡ್ ಆದ್ರು ಸಾಕು ಕೆಲಸ ಮುಗಿಸಿ ಮನೆಗೆ ಹೋಗುವಾಗ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಅಂತಾ ಗೊತ್ತಿದ್ದರು ಸಹ ಬಹುತೇಕ ವಾಹನ ಸವಾರರು ಮಧ್ಯ ಸೇವಿಸಿ ಚಾಲನೆ ಪ್ರವೃತ್ತಿ ಹೆಚ್ಚುತ್ತಿದ್ದು, ಇದೇ ಕಾರಣಕ್ಕೆ ದಿನಂಪ್ರತಿ ನೂರಾರು ಅಪಘಾತಗಳು ನಡೆಯುತ್ತಲೇ ಇವೆ.

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿರುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ರೆ ಜೈಲು ಶಿಕ್ಷೆ ಅನುಭವಿಸಬೇಕು ಮತ್ತು ಲೈಸೆನ್ಸ್ ಅನ್ನು ರದ್ದುಗೊಳಿಸಬೇಕಾಗುವ ಪರಿಸ್ಥಿತಿ ಬರಬಹುದು ಎಂದು ತಿಳಿದಿದ್ದರೂ ಸಹ ಇನ್ನೂ ಕುಡಿದು ವಾಹನ ಚಲಾಯಿಸುವ ಚಾಲಕರು ಕಡಿಮೆಯಾಗುತ್ತಿಲ್ಲ.

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ತಮಿಳುನಾಡಿನ ಚೆನ್ನೈ ಬಳಿ ನಡೆದ ಈ ಘಟನೆಯಿಂದಾದರೂ ಕೆಲವರು ಮದ್ಯ ಸೇವಿಸಿ ಡ್ರೈವಿಂಗ್ ಮಾಡುವುದನ್ನು ನಿಲ್ಲಿಸಲೇಬೇಕು. ಏಕೆಂದರೆ ಇಲ್ಲಿ ಒಬ್ಬ ತಂದೆ ತನ್ನ ಮಡದಿ ಮತ್ತು ಮಗಳ ಮೇಲೆ ಎಸ್‍ಯುವಿ ಕಾರೊಂದು ಗುದ್ದಲು ಬಂದಾಗ ಅವರನ್ನು ಕಾಪಾಡಲು ಹೋಗಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಉಬಾಯ್ಯತುಲ್ಲಾ ಎಂದು ಗುರುತಿಸಲಾಗಿದ್ದು, ದಿಂಡುಕ್ಕಲ್ ನಿವಾಸಿಯಾಗಿದ್ದು, ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಹಾಜರಾಗಲು ಬಂದಿದ್ದಾಗ ಈ ಘಟನೆ ನಡೆದಿದೆ. ಅಂತ್ಯಕ್ರಿಯೆ ಮುನ್ನ ಮಗಳು ಮತ್ತು ಪತ್ನಿ ಜೊತೆ ರಸ್ತೆ ದಾಟುತ್ತಿದ್ದಾಗಲೇ ಈ ದುರಂತ ನಡೆದಿದೆ.

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ಉಬಾಯ್ಯತುಲ್ಲಾ ಮತ್ತು ತನ್ನ ಕುಟುಂಬದವರು ಚೆನ್ನೈ ನಗರದಲ್ಲಿನ ತಿರುಮಂಗಳಂ ಜಂಕ್ಷನ್‍ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸ್ಕಾರ್ಪಿಯೋ ಎಸ್‍ಯುವಿ ಕಾರಿನ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಉಬಯ್ಯತುಲ್ಲಾ ಅವರ ಮಗಳು ಮತ್ತು ಪತ್ನಿಯತ್ತ ನುಗ್ಗಿಬಂದಿದೆ.

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ಆದ್ರೆ ಈ ವೇಳೆ ಮಗಳು ಮತ್ತು ಪತ್ನಿಯನ್ನು ರಕ್ಷಿಸಲು ಮುಂದಾದ 38 ವರ್ಷದ ಉಬಾಯ್ಯತುಲ್ಲಾ ತಕ್ಷಣವೇ ಅವರನ್ನು ಬೇರೆಡೆ ತಳ್ಳಿ ತಾನು ಕಾರಿನ ರಭಸಕ್ಕೆ ಸಿಲುಕಿದ್ದಾನೆ.

MOST READ: ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ಮದ್ಯ ಸೇವಿಸಿ ಸ್ಕಾರ್ಪಿಯೊ ಎಸ್ಯುವಿ ಕಾರನ್ನು ಚಲಿಸುತ್ತಿದ್ದ ಚಾಲಕ ನಿಯಂತ್ರಣ ತಪ್ಪಿ ಉಬಾಯ್ಯತುಲ್ಲಾ ಅವರ ಕುಂಟುಂಬದವರನ್ನು ಗುದ್ದಲು ಹೋಗಿದ್ದ, ಆದರೆ ಆ ಕಾರನ್ನು ಕಂಡ ಉಬಯ್ಯತುಲ್ಲಾ ತಕ್ಷಣವೇ ತನ್ನ ಮಡದಿ ಮತ್ತು ಮಗಳನ್ನು ಪಕ್ಕಕ್ಕೆ ತಳ್ಳಿ ಆ ಕುಡುಕ ಡ್ರೈವರ್‍‍ನ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾನೆ. ಎಂದು ಪೊಲೀಸರು ಹೇಳಿದ್ದಾರೆ.

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ಕುಡಿದ ವಾಹನ ಚಾಲನೆ ಮಾಡುತ್ತಿದ್ದ ಡ್ರೈವರ್‍‍ನನ್ನು ಸತೀಶ್‍ ಕುಮಾರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಶುರು ಮಾಡಿದ್ದಾರೆ ಎಂದು ಹೇಳಲಾಗಿದೆ.

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಚಾಲಕ ಸತೀಶ್ ಕುಮಾರ್ ಕೂಡಾ ಉಬಯ್ಯತುಲ್ಲಾ ಅವರಿಗೆ ಗುದ್ದಿದ ನಂತರ ರಸ್ತೆ ಬದಿಯ ಕಲ್ಲು ಬಂಡೆಗೆ ಡಿಕ್ಕಿ ಹೊಡೆದಿದ್ದು, ಈಗ ಕಾಲು ಮುರಿದುಕೊಂಡು ಆಸ್ಪತ್ರೆಯ ಪಾಲಾಗಿದ್ದಾನೆ.

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ಕುಡಿದು ವಾಹನ ಚಾಲನೆಯಲ್ಲಿ ಹಿಂದೆ ಬಿದ್ದಿಲ್ಲ ನಮ್ಮ ಬೆಂಗಳೂರು..!

2018ರ ವರ್ಷದಲ್ಲಿ ಈ ವರೆಗು ಮಧ್ಯಸೇವಿಸಿ ವಾಹನ ಚಲಾಯಿಸುತ್ತಿರುವವರು ನಗರದ ಬೀದಿಗಳಲ್ಲಿ ಗರಿಷ್ಠ ರಕ್ತವನ್ನು ಚೆಲ್ಲುತ್ತಿದ್ದಾರೆ ಎಂದು ತೋರುತ್ತದೆ. ಟ್ರಾಫಿಕ್ ಪೋಲೀಸರ ಅಂಕಿ ಅಂಶಗಳ ಪ್ರಕಾರ, 2017ರಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದರೆ ಇನ್ನು 2018ರಲ್ಲಿ ಈ ಸಂಖ್ಯೆಯು 17ಕ್ಕೆ ಏರಿಕೆಯಾಗಿದೆ.

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ದಯವಿಟ್ಟು ಕುಡಿದು ವಾಹನ ಚಾಲನೆ ಮಾಡಬೇಡಿ

ಇಡೀ ಜಗತ್ತಿನಲ್ಲಿ ನಡೆಯುವ ಹೆಚ್ಚಿನ ವಾಹನ ಅಪಘಾತಗಳ ಹಿಂದಿರುವ ಪ್ರಮುಖ ಶಕ್ತಿ ಆಲ್ಕೋಹಾಲ್. ನಶೆಯಲ್ಲಿ ವಾಹನ ಚಲಾಯಿಸಿ ಸಾವಿರಾರು ಜನರು ರಸ್ತೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

ಕುಡಿದಿದ್ದರೆ ಖಂಡಿತವಾಗಿಯೂ ಸ್ಟಿರಿಂಗ್ ಮುಟ್ಟಬೇಡಿ. ಬಾರ್ ಅಥವಾ ಪಬ್ ಗೆ ಹೋಗಿದ್ದರೆ ಕುಡಿಯದ ವ್ಯಕ್ತಿಯೊಬ್ಬ ನಿಮ್ಮ ಜೊತೆಗಿರಲಿ. ಆತ ನಿಮ್ಮನ್ನು ಮನೆಯವರೆಗೆ ಸುರಕ್ಷಿತವಾಗಿ ತಲುಪಿಸಬಲ್ಲ. ಅದು ಸಾಧ್ಯವಾಗದಿದ್ದರೆ ಕಾರನ್ನು ಅಲ್ಲೇ ಬಿಟ್ಟು ಟ್ಯಾಕ್ಸಿ ಹತ್ತಿ. ಆದ್ರೆ ನಿಮ್ಮ ಜೀವದ ಬೇರೆಯವರ ಜೀವಕ್ಕೂ ಆಪತ್ತು ತರಬೇಡಿ.

ಸೇಫ್ ಡ್ರೈವ್

Source: Timesnow

Kannada
Read more on accident traffic rules
English summary
Man sacrifices self to save wife, daughter from speeding SUV.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more