ಮಾರುತಿ ಸುಜುಕಿ ಕಾರುಗಳ ಬೆಲೆ ಇನ್ಮುಂದೆ ಸಿಕ್ಕಾಪಟ್ಟೆ ದುಬಾರಿ

Written By:
Recommended Video - Watch Now!
Bangalore Bike Accident At Chikkaballapur Near Nandi Upachar - DriveSpark

ದೇಶಿಯ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಕಾರು ತಯಾರಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದ್ದು, ಯಾವ ಕಾರಿನ ಬೆಲೆ ಎಷ್ಟು ಹೆಚ್ಚಳವಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ಕಾರುಗಳ ಬೆಲೆ ಇನ್ಮುಂದೆ ಸಿಕ್ಕಾಪಟ್ಟೆ ದುಬಾರಿ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರುಗಳನ್ನು ಉತ್ಪಾದನೆ ಮಾಡುವಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾರಾಟದಲ್ಲೂ ಮುಂಚೂಣಿಯಲ್ಲಿದ್ದು, ಹೊಸ ಕಾರುಗಳ ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ.

ಮಾರುತಿ ಸುಜುಕಿ ಕಾರುಗಳ ಬೆಲೆ ಇನ್ಮುಂದೆ ಸಿಕ್ಕಾಪಟ್ಟೆ ದುಬಾರಿ

ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಹೊಸ ದರಗಳ ಪ್ರಕಾರ ಪ್ರವೇಶ ಮಟ್ಟದ ಕಾರುಗಳಿಂದ ಹಿಡಿದು ಉನ್ನತ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಲಾಗಿದ್ದು, ಕಾರುಗಳ ಬೆಲೆಗೆ ಅನುಗುಣವಾಗಿ ಕನಿಷ್ಠ 2 ಸಾವಿರದಿಂದ 18 ಸಾವಿರ ರೂಪಾಯಿ ತನಕ ದರ ಹೆಚ್ಚಿಸಲಾಗಿದೆ.

ಮಾರುತಿ ಸುಜುಕಿ ಕಾರುಗಳ ಬೆಲೆ ಇನ್ಮುಂದೆ ಸಿಕ್ಕಾಪಟ್ಟೆ ದುಬಾರಿ

ಮಾರುತಿ ಸುಜುಕಿ ಪ್ರವೇಶ ಮಟ್ಟದ ಆಲ್ಟೋ 800 ಕಾರಿನಿಂದ ಉನ್ನತ ಮಾದರಿಯಾದ ಎಸ್ ಕ್ರಾಸ್ ಫೇಸ್‌ಲಿಫ್ಟ್‌ವರೆಗೂ ಪ್ರಸ್ತುತ ದರಕ್ಕೆ ಅನ್ವಯಿಸಿ ಕಾರಿನ ಬೆಲೆ ಹೆಚ್ಚಳ ಮಾಡಲಾಗಿದ್ದು, ಪರಿಸ್ಕೃತ ದರವು ಇಂದಿನಿಂದಲೇ ಜಾರಿಯಾಗಿರಲಿದೆ.

ಮಾರುತಿ ಸುಜುಕಿ ಕಾರುಗಳ ಬೆಲೆ ಇನ್ಮುಂದೆ ಸಿಕ್ಕಾಪಟ್ಟೆ ದುಬಾರಿ

ಇದಕ್ಕೆ ಕಾರಣ ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಕಾರುಗಳ ಉತ್ಪಾದನೆ ಮೇಲಿನ ಸೆಸ್ ಪ್ರಮಾಣವನ್ನು ಶೇ. 18ಕ್ಕೆ ಹೆಚ್ಚಳ ಮಾಡಿದ್ದು, ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಆಟೋ ಉತ್ಪಾದಕರು ಬೆಲೆ ಹೆಚ್ಚಳ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಮಾರುತಿ ಸುಜುಕಿ ಕಾರುಗಳ ಬೆಲೆ ಇನ್ಮುಂದೆ ಸಿಕ್ಕಾಪಟ್ಟೆ ದುಬಾರಿ

ಹ್ಯುಂಡೈ ಕೂಡಾ ತನ್ನ ಪ್ರಮುಖ ಕಾರುಗಳ ಬೆಲೆಯನ್ನು ಶೇ.3ರಷ್ಟು ಹೆಚ್ಚಳ ಮಾಡಿದ್ದು, ಸ್ಯಾಂಟ್ರೋ, ಐ10, ಐ20, ವೆರ್ನಾ, ಕ್ರೇಟಾ, ಎಕ್ಸೆಂಟ್ ಕಾರುಗಳ ಬೆಲೆಯು ಪ್ರಸ್ತುತ ದರಗಳಿಂತ ಗರಿಷ್ಠ ಮಟ್ಟದಲ್ಲಿ ರೂ. 35 ಸಾವಿರ ದುಬಾರಿಯಾಗಲಿವೆ.

ಮಾರುತಿ ಸುಜುಕಿ ಕಾರುಗಳ ಬೆಲೆ ಇನ್ಮುಂದೆ ಸಿಕ್ಕಾಪಟ್ಟೆ ದುಬಾರಿ

ಇನ್ನು ಟಾಟಾ ಮೋಟಾರ್ಸ್ ಉತ್ಪಾದಿತ ಕಾರುಗಳ ಬೆಲೆಯು ಕೂಡಾ 10 ಸಾವಿರದಿಂದ 30 ಸಾವಿರ ತನಕ ಹೆಚ್ಚಳವಾಗಿದ್ದು, ಜನಪ್ರಿಯ ಫೋಕ್ಸ್‌ವ್ಯಾಗನ್ ಜಿಟಿ ಕಾರುಗಳ ಬೆಲೆಯು ಬರೋಬ್ಬರಿ 20 ಸಾವಿರ ಹೆಚ್ಚಳವಾಗಿದೆ.

ಮಾರುತಿ ಸುಜುಕಿ ಕಾರುಗಳ ಬೆಲೆ ಇನ್ಮುಂದೆ ಸಿಕ್ಕಾಪಟ್ಟೆ ದುಬಾರಿ

ಇದೇ ರೀತಿಯಾಗಿ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ಹೋಂಡಾ ನಿರ್ಮಾಣದ ಉತ್ಪನ್ನಗಳ ಬೆಲೆಯು ಏರಿಕೆಯಾಗಿದ್ದು, ಸದ್ಯಕ್ಕೆ 6 ಸಾವಿರದಿಂದ 32 ಸಾವಿರದವರೆಗೆ ಬೆಲೆ ಹೆಚ್ಚಳ ಮಾಡಲಾಗಿದೆ. ಆದರೂ ಇನ್ನಷ್ಟು ಪ್ರಮಾಣದ ಬೆಲೆ ಹೆಚ್ಚಳ ಮಾಡುವ ಬಗ್ಗೆ ಹೋಂಡಾ ಸುಳಿವು ನೀಡಿದೆ.

ಮಾರುತಿ ಸುಜುಕಿ ಕಾರುಗಳ ಬೆಲೆ ಇನ್ಮುಂದೆ ಸಿಕ್ಕಾಪಟ್ಟೆ ದುಬಾರಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸೆಸ್ ಪ್ರಮಾಣ ಹೆಚ್ಚಳ ಹಿನ್ನೆಲೆ ಬಹುತೇಕ ಆಟೋ ಉತ್ಪಾದಕರು ಬೆಲೆ ಹೆಚ್ಚಳ ಮಾಡಿದ್ದು, ಇನ್ಮುಂದೆ ಕಾರು ಖರೀದಿ ಮಾಡುವ ಗ್ರಾಹಕರಿಗೆ ಬೆಲೆ ಬಿಸಿ ತಟ್ಟಲಿದೆ ಎನ್ನಬಹುದು. ಆದ್ರೆ ರಾಷ್ಟ್ರೀಯ ವರಮಾನ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸೆಸ್ ಹೆಚ್ಚಳ ಮಾಡುವುದು ಅನಿವಾರ್ಯವಾಗಿತ್ತು.

Trending On DriveSpark Kannada:

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಜಗತ್ತಿನ ಶ್ರೀಮಂತ ರಕ್ಷಣಾ ಇಲಾಖೆ ಯಾವುದು ಗೊತ್ತೇ?

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Maruti Suzuki Announces Increase In Car Prices.
Story first published: Thursday, January 11, 2018, 15:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark