ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ವಿದೇಶಿ ಮಾರುಕಟ್ಟೆಗಳಲ್ಲಿ ಕಾರಿನ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಿದ್ದರೆ, ಭಾರತದಲ್ಲಿ ಮಾತ್ರ ವಾಹನಗಳ ಮೈಲೇಜ್ ಹಾಗೂ ಕಡಿಮೆ ಬೆಲೆಗೆ ಲಭ್ಯವಿರುವ ಕಾರುಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಕಾರುಗಳಲ್ಲಿನ ಸುರಕ್ಷತೆಗೆ ಪ್ರಾಮುಖ್ಯತೆ ನೀಡುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ.

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ತಂತ್ರಜ್ಞಾನ ಅಭಿವೃದ್ದಿಯಿಂದಾಗಿ ಕಾರುಗಳ ಉತ್ಪಾದನೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಬದಲಾವಣೆಯಾಗುತ್ತಿದೆ. ಹಾಗೆಯೇ ಕಾರು ಖರೀದಿದಾರರ ಬೇಡಿಕೆಯಲ್ಲೂ ಗಮನಾರ್ಹ ಬದಲಾವಣೆಯಾಗುತ್ತಿದ್ದು, ಅಗ್ಗದ ಬೆಲೆಯ ಕಾರುಗಳ ಖರೀದಿಗಿಂತ ಹೆಚ್ಚು ಸುರಕ್ಷೆ ನೀಡಬಲ್ಲ ಕಾರುಗಳ ಖರೀದಿಗೆ ಗ್ರಾಹಕರು ಒತ್ತು ನೀಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಸದ್ಯದಲ್ಲೇ ಮೆಡ್ ಇನ್ ಇಂಡಿಯಾ ಕಾರುಗಳು ಸಹ ಅತಿ ಹೆಚ್ಚು ಸುರಕ್ಷತೆಯೊಂದಿಗೆ ರಸ್ತೆಗಿಳಿಯಲು ಸಜ್ಜಾಗಿವೆ.

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ಹೌದು, ದೇಶದಲ್ಲಿ ವಾಹನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಹತ್ತಕ್ಕೂ ಹೆಚ್ಚು ಜನಪ್ರಿಯ ಕಾರುಗಳು ಮೂಲೆಗುಂಪಾಗಲಿವೆ ಎಂದ್ರೆ ನೀವು ನಂಬಲೇಬೇಕು.

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ಒಂದು ವೇಳೆ ನೀವು ಕೂಡಾ ಹೊಸ ಕಾರು ಖರೀದಿ ಮಾಡುವ ಯೋಜನೆಯಲ್ಲಿದ್ದರೆ ಕಾರುಗಳ ಬೆಲೆ, ಮೈಲೇಜ್‌ಗಿಂತ ಕಾರಿನಲ್ಲಿ ಸುರಕ್ಷತೆಗಾಗಿ ಏನೆಲ್ಲಾ ಸೌಲಭ್ಯಗಳಿವೆ ಎನ್ನುವುದನ್ನು ಮೊದಲು ಅರಿತುಕೊಳ್ಳುಬೇಕಿದೆ.

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ಯಾಕೆಂದ್ರೆ, ಭಾರತದಲ್ಲಿ ಮಾರಾಟವಾಗುತ್ತಿರುವ 20ಕ್ಕೂ ಹೆಚ್ಚು ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿದ್ದು, ಅಪಘಾತದ ವೇಳೆ ಸುರಕ್ಷಾ ಸಾಧನಗಳು ಇಲ್ಲದಿರುವುದರಿಂದ ಸಾವುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವುದು ಕಟು ಸತ್ಯ.

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ಇದೇ ಕಾರಣಕ್ಕೆ 2019ರಿಂದ ನಿರ್ದಿಷ್ಟ ಮಟ್ಟದ ಸುರಕ್ಷಾ ಸಾಧನಗಳನ್ನು ಹೊಂದಿರುವ ವಾಹನಗಳ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ಪರೀಕ್ಷೆಯ ಮೂಲಕ ಕಾರುಗಳ ನಿರ್ಮಾಣದ ಶೈಲಿಯಲ್ಲಿ ಬಹುದೊಡ್ಡ ಬದಲಾವಣೆ ತರುವ ಯೋಜನೆ ಹೊಂದಿದೆ.

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

#SAFERCARSFORINDIA ಅಭಿಯಾನದಡಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾರು ಮಾದರಿಗಳ ಸುರಕ್ಷೆ ಕುರಿತಂತೆ ಕ್ರ್ಯಾಶ್ ಟೆಸ್ಟಿಂಗ್‌ಗಳನ್ನು ಹಮ್ಮಿಕೊಂಡಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಜನಪ್ರಿಯ ಸಂಸ್ಥೆಯ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿದೆ.

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ಏನಿದು ಕ್ರ್ಯಾಶ್ ಟೆಸ್ಟಿಂಗ್?

ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿಯು, ಕಾರುಗಳಲ್ಲಿನ ಸುರಕ್ಷಾ ವೈಶಿಷ್ಟ್ಯತೆಗಳಿಗೆ ರೇಟಿಂಗ್ ನೀಡುತ್ತದೆ. ಈ ವೇಳೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ವಾಸ್ತಾವವಾಗಿ ಸೊನ್ನೆ ರೇಟಿಂಗ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಲು ವಿದೇಶಿ ಮಾರುಕಟ್ಟೆಗಳಲ್ಲಿ ಅನುಮತಿಯೇ ಇಲ್ಲದಿರುವ ಸಂದರ್ಭದಲ್ಲಿ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಸಂಸ್ಥೆಗಳು ಕೆಲವು ಅಗ್ಗದ ಬೆಲೆಯ ಕಾರುಗಳನ್ನ ಹಾಟ್ ಚಿಪ್ಸ್‌ನಂತೆ ಮಾರಾಟ ಮಾಡುತ್ತಿರುವುದು ದೃಷ್ಟಕರ ಸಂಗತಿ ಅಂದ್ರೆ ತಪ್ಪಾಗುವುದಿಲ್ಲ.

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ಇದರಲ್ಲಿ ಕನಿಷ್ಠ ಮಟ್ಟದ ಸುರಕ್ಷೆತೆಯನ್ನು ನೀಡಲು ಹಿಂದೆ ಮುಂದೆ ನೋಡುವ ಮಾರುತಿ ಸುಜುಕಿಗೆ ಇದೀಗ ಸಂಕಷ್ಟ ಎದುರಾಗಿದ್ದು, 2019ರಿಂದ ಜಾರಿಗೆ ಬರಲಿರುವ ಹೊಸ ಕಾಯ್ದೆಯಿಂದಾಗಿ ಸೊನ್ನೆ ರೇಟಿಂಗ್ ಪಡೆದಿರುವ ಬರೋಬ್ಬರಿ 4 ಕಾರುಗಳು ಮೂಲೆಗುಂಪಾಬೇಕಾದ ಅನಿವಾರ್ಯತೆಗಳಿವೆ.

MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ಕಾರಣ, ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ಕನಿಷ್ಠ ಮಟ್ಟದ ಸುರಕ್ಷೆ ಇಲ್ಲದಿರುವುದರಿಂದ ಅಪಘಾತದ ತೀವ್ರತೆ ಮತ್ತಷ್ಟು ಏರಿಕೆಯಾಗಲಿದ್ದು, ಇದೇ ಕಾರಣಕ್ಕೆ ಕಠಿಣ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು ಕನಿಷ್ಠ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿ ಮಾರಾಟ ಮಾಡಿ ಇಲ್ಲವೇ ಕಳಪೆ ಗುಣಮಟ್ಟದ ಕಾರುಗಳನ್ನು ನಿಷೇದ ಮಾಡಿ ಎಂದು ಕಾರು ಉತ್ಪಾದನಾ ಸಂಸ್ಥೆಗಳಿಗೆ ಖಡಕ್ ವಾರ್ನ್ ಮಾಡಿದೆ.

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ಈ ಬಗ್ಗೆ ಮಾತನಾಡಿರುವ ಗ್ಲೋಬಲ್ ಎನ್‌ಸಿಎಪಿ ಇಂಡಿಯಾ ವಿಭಾಗದ ಮುಖ್ಯ ಕಾರ್ಯದರ್ಶಿ ಡೇವಿಡ್ ವಾರ್ಡ್ ಅವರು, 2014ರಿಂದ ಭಾರತದಲ್ಲಿ ಕಾರುಗಳ ಸುರಕ್ಷತೆ ಮಹತ್ವದ ಬದಲಾವಣೆಗಳಾಗುತ್ತಿದ್ದು, ಮುಂದಿನ 2019ರ ಆರಂಭದಿಂದ ಮೇಡ್ ಇನ್ ಇಂಡಿಯಾ ಕಾರುಗಳು 5 ಸ್ಟಾರ್ ರೇಟಿಂಗ್‌ನೊಂದಿಗೆ ರಸ್ತೆಗಿಳಿಯುವ ವಿಶ್ವಾಸ ಇದೆ ಎಂದಿದ್ದಾರೆ.

MOST READ: 5 ಸಾವಿರಕ್ಕೂ ಗತಿ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಬೆಂಟ್ಲಿ ಕಾರಿನ ಒಡೆಯ

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ಹೊಸ ನಿಯಮದ ಪ್ರಕಾರ ಕಾರಿನ ಬಾಡಿ ಕ್ವಾಲಿಟಿಯಲ್ಲಿ ಶೇ.75 ಸ್ಟಿಲ್, ಆರು ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಪಾದಚಾರಿ ಮುನ್ಸೂಚಣೆ ಕಿಟ್ ಸೇರಿದಂತೆ ಹಲವು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿರಬೇಕಿದ್ದು, ಕಾರು ಅಪಘಾತವಾದ್ರು ಕಾರಿನಲ್ಲಿರುವರಿಗೆ ಗರಿಷ್ಠ ಸುರಕ್ಷೆತೆ ನೀಡಬಲ್ಲವು.

ಇನ್ಮುಂದೆ ರಸ್ತೆಗಿಳಿಯಲಿವೆ 5 ಸ್ಟಾರ್ ರೇಟಿಂಗ್ 'ಮೆಡ್ ಇನ್ ಇಂಡಿಯಾ' ಕಾರುಗಳು..!

ಹೀಗಾಗಿ 2019ರಿಂದ ಮಾರಾಟವಾಗುವ ಕಾರುಗಳಲ್ಲಿ ನಿರ್ದಿಷ್ಟ ಮಟ್ಟದ ಸುರಕ್ಷತೆ ಇಲ್ಲ ಎನ್ನುವುದು ಕಂಡುಬಂದಲ್ಲಿ ಅಂತಹ ಕಾರುಗಳನ್ನು ನಿಷೇಧಿಸುವ ಅಧಿಕಾರ ಕೇಂದ್ರ ಸಾರಿಗೆ ಇಲಾಖೆಗೆ ಇದ್ದು, ಒಂದು ವೇಳೆ ನೀವು ಕೂಡಾ ಸುರಕ್ಷತೆಯಿಲ್ಲದ ಕಾರುಗಳನ್ನು ಖರೀದಿ ಮಾಡುತ್ತಿದ್ದಿರಾ ಎನ್ನುವ ಬಗ್ಗೆ ತಿಳಿದುಕೊಳ್ಳುವುದು ಒಳಿತು.

Most Read Articles

Kannada
Read more on crash test
English summary
Made-In-India Five-Star NCAP-Rating Cars To Come Soon — Says, Global NCAP Secretary General.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X