ನ್ಯೂಯಾರ್ಕ್ ಆಟೋ ಮೇಳದಲ್ಲಿ ಬಹಿರಂಗಗೊಂಡ ಆಡಿ ಹೊಸ ಆರ್‍ಎಸ್5..

Written By: Rahul TS

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಆಡಿ ತನ್ನ ಹೊಸ ಆರ್‍ಎಸ್5 ಸ್ಪೋರ್ಟ್‍ಬ್ಯಾಕ್ ಕಾರನ್ನು 2018ರ ನ್ಯೂಯಾರ್ಕ್ ಇಂಟರ್‍‍ನ್ಯಾಷನಲ್ ಆಟೋ ಶೋನಲ್ಲಿ ಬಹಿರಂಗಗೊಳಿಸಿದ್ದು, 5 ಡೋರ್ ಕೌಪ್ ವಿನ್ಯಾಸ ಮತ್ತು ಬೆಸ್ಟ್ ಪರ್ಫಾರ್ಮೆನ್ಸ್ ಅನ್ನು ಪಡೆದಿರಲಿದೆ.

ನ್ಯೂಯಾರ್ಕ್ ಆಟೋ ಮೇಳದಲ್ಲಿ ಬಹಿರಂಗಗೊಂಡ ಆಡಿ ಹೊಸ ಆರ್‍ಎಸ್5..

ಕಾರಿನ ಒಟ್ಟಾರೆ ವಿನ್ಯಾಸವು ಆಡಿ 90 ಕ್ವಾಟ್ರೋ ಐಎಂಎಸ್ಎ ಜಿಟಿಒ ರೇಸಿಂಗ್ ಕಾರಿನಿಂದ ಆಧರಿಸಿದ್ದು, ಇದರ ಫ್ರಂಟ್ ಪ್ರೊಫೈಲ್ ಸಿಂಗಲ್ ಫ್ರೇಮ್ ಗ್ರಿಲ್, ಹನಿಕೊಂಬ್ ಏರ್ ಇಂಟೆಕ್ಸ್ ಮತ್ತು ಮೇಟ್ ಅಲ್ಯುಮಿನಿಯಂ ಆಪ್ಟಿಕ್ ಫ್ರಂಟ್ ಸ್ಪೈಲರ್‍‍ಗಳಿಂದ ಅಳವಡಿಸಲಾಗಿದೆ.

ನ್ಯೂಯಾರ್ಕ್ ಆಟೋ ಮೇಳದಲ್ಲಿ ಬಹಿರಂಗಗೊಂಡ ಆಡಿ ಹೊಸ ಆರ್‍ಎಸ್5..

ಜೊತೆಗೆ ಆಡಿ ಆರ್‍ಎಸ್5 ಸ್ಫೋರ್ಟ್ಸ್ ಬ್ಯಾಕ್ ಕಾರುಗಳನ್ನು ಅಲ್ಯುಮಿನಿಯಂ ಆಪ್ಟಿಕ್ ಎಕ್ಸ್ಟೀರಿಯರ್ ಮಿರರ್ ಹೋಲ್ಡಿಂಗ್ಸ್ ಮತ್ತು ಹೈ ಗ್ಲಾಸ್ ಬ್ಲಾಕ್ ಸೈಡ್ ಸಿಲ್ಟ್ಸ್‌ಗಳನ್ನು ಪಡೆದುಕೊಂಡಿದೆ. ಕಾರಿನ ರಿಯರ್ ಡಿಫ್ಯೂಸರ್, ಆರ್‍ಎಸ್ ಎಕ್ಸಾಸ್ಟ್ ಪೈಪ್ಸ್ ಮತ್ತು ಗ್ಲಾಸಿ ರಿಯರ್ ಲಿಪ್ ಸ್ಪಾಯ್ಲರ್‍‍ಗಳನ್ನು ಹೊಂದಿವೆ.

ನ್ಯೂಯಾರ್ಕ್ ಆಟೋ ಮೇಳದಲ್ಲಿ ಬಹಿರಂಗಗೊಂಡ ಆಡಿ ಹೊಸ ಆರ್‍ಎಸ್5..

ಇದಲ್ಲದೇ ಕಾರಿನ ಒಳಭಾಗದಲ್ಲಿ ಆಡಿ ಸ್ಮಾರ್ಟ್‍‍ಫೋನ್ ಇಂಟರ್‍‍‍ಫೇಸ್, ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಸಂಪೂರ್ಣ ಹೆಡ್ಸ್ ಅಪ್ ಡಿಸ್ಪ್ಲೇ ಮತ್ತು ವರ್ಚುವಲ್ ಕಾಕ್‍ಪಿಟ್ ಅನ್ನು ಪಡೆದಿದ್ದು, ಇದರ ಆರ್‍ಎಸ್ ಡಿಸ್ಪ್ಲೇ ಟೈರ್ ಒತ್ತಡ, ಟಾರ್ಕ್ ಮತ್ತು ಜಿ ಫೋರ್ಸ್ ಮಾಹಿತಿಗಳನ್ನು ತೆರೆದಿಡಲಿದೆ.

ನ್ಯೂಯಾರ್ಕ್ ಆಟೋ ಮೇಳದಲ್ಲಿ ಬಹಿರಂಗಗೊಂಡ ಆಡಿ ಹೊಸ ಆರ್‍ಎಸ್5..

ಹಾಗೆಯೇ ಅಡಿ ಆರ್‍ಎಸ್5 ಕಾರಿನ ಸೇಫ್ಟಿ ಬಗ್ಗೆ ಹೇಳುವುದಾದರೇ, ಆಡಿ ಪ್ರೀಸೆನ್ಸ್ ಬೇಸಿಕ್, ಆಡಿ ಪ್ರೀಸೆನ್ಸ್ ಸಿಟಿ, ಆಡಿ ಸೈಡ್ ಅಸ್ಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಸ್ಸಿಸ್ಟ್ ಮತ್ತು ಆಡಿ ಪ್ರಿಸೆನ್ಸ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಟ್ರಾಫಿಕ್ ಸೈನ್ ರೆಕಗ್ನೆಷನ್, ಆಡಿ ಸರ್ವಿಸ್ ಆಕ್ಟೀವ್ ಲೇನ್ ಅಸ್ಸಿಸ್ಟ್ ಹಾಗು ಹೈ ಬೀಮ್ ಅಸ್ಸಿಸ್ಟಂಟ್ ಅನ್ನು ಅಳವಡಿಸಲಾಗಿದೆ.

ನ್ಯೂಯಾರ್ಕ್ ಆಟೋ ಮೇಳದಲ್ಲಿ ಬಹಿರಂಗಗೊಂಡ ಆಡಿ ಹೊಸ ಆರ್‍ಎಸ್5..

ಎಂಜಿನ್ ಸಾಮರ್ಥ್ಯ

ಈ ಸ್ಪೋರ್ಟ್ಸ್ ಕಾರಿನ ಏಂಜಿನ್ 2.9 ಲೀಟರ್ ವಿ6 ಟ್ವಿನ್ ಟರ್ಬೊ ಎಂಜಿನ್ ಪಡಿದಿದ್ದು, 444-ಬಿಹೆಚ್‍ಪಿ ಮತ್ತು 600-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಈ ಮೂಲಕ ನಾಲ್ಕು ಸೇಕೆಂಡಿಗಳಲ್ಲಿ ಸೊನ್ನೆಯಿಂದ 100 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದಾದ ಸಾಮರ್ಥ್ಯವನ್ನು ಪಡೆದಿದೆ.

ನ್ಯೂಯಾರ್ಕ್ ಆಟೋ ಮೇಳದಲ್ಲಿ ಬಹಿರಂಗಗೊಂಡ ಆಡಿ ಹೊಸ ಆರ್‍ಎಸ್5..

ಆಡಿ ಆರ್‍ಎಸ್ ಸರಣಿಯಲ್ಲಿ ತಯಾರಾಗುತ್ತಿರುವ ಹೊಸ ಆರ್‍ಎಸ್5 ಕಾರು ಹೊಸ ವಿನ್ಯಾಸ ಹಾಗು ಸ್ಪೋರ್ಟ್ಸ್ ವೈಶಿಷ್ಟ್ಯತೆಯನ್ನು ಪಡಿದಿದ್ದು, ಮರ್ಸಿಡಿಸ್ ಎಎಂಜಿ ಸಿ63 ಹಾಗು ಬಿಎಂಡಬ್ಲ್ಯು ಎಂ3 ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ..

2. ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

3. ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋರ್ಡ್ ಫ್ರೀ ಸ್ಟೈಲ್.

4. ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

5. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Read more on audi sports car
English summary
2018 New York Auto Show: New Audi RS5 Sportback Revealed; Specifications, Features & Images.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark