ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಫೋರ್ಡ್ ಇಂಡಿಯಾ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ಅಧಿಕವಾಗಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಡಿಜೈರ್ ಕಾರುಗಳಿಗೆ ಪೈಪೋಟಿ ನೀಡಲು ತಮ್ಮ ಆಸ್ಫೈರ್ ಕಾಂಪ್ಯಾಕ್ಟ್ ಸಬ್-4ಮೀಟರ್ ಸೆಡಾನ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಅಗ್ಗದ ಬೆಲೆಯಲ್ಲಿ ಬಿಡುಗಡೆಗೊಂಡ ಹೊಸ ಆಸ್ಫೈರ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.55 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಮಾರುತಿ ಸುಜುಕಿ ಡಿಜೈರ್ ಕಾರುಗಳಿಂತಾ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಫೋರ್ಡ್ ಇಂಡಿಯಾ ಸಂಸ್ಥೆಯು ತೀರ್ಮಾನಿಸಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್
Variant Petrol Diesel
Ambiente Rs 5,55,000

Rs 6,45,000

Trend Rs 5,99,000

Rs 6,89,000

Trend + Rs 6,39,000

Rs 7,29,000

Titanium Rs 6,79,000

Rs 7,69,000

Titanium + Rs 7,24,000

Rs 8,14,000

Titanium AT Rs 8,49,000

N/A

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಹೊಸ ಕಾರಿನ ವಿನ್ಯಾಸ

ಹೊಸದಾಗಿ ಬಿಡುಗಡೆಗೊಂಡ ಫೋರ್ಡ್ ಆಸ್‍ಫೈರ್ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಗ್ರಿಲ್‍, ಅಪ್ಡೇಟೆಡ್ ಸ್ವೆಫ್ಟ್‍‍ಬ್ಯಾಕ್ ಹೆಡ್‍‍ಲ್ಯಾಂಪ್ಸ್, ಫಾಗ್ ಲ್ಯಾಂಪ್ ಹೌಸಿಂಗ್‍‍ನ ಸುತ್ತಾ ಸಿ-ಆಕಾರದ ಕ್ರೋಮ್, ಅಗಲವಾದ ಸೆಂಟ್ರಲ್ ಏರ್‍‍ಡ್ಯಾಮ್ ಮತ್ತು ಫಾಗ್ ಲ್ಯಾಂಪ್ ಅನ್ನು ಒದಗಿಸಲಾಗಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಕಾರಿನ ಬದಿಗಳಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ 15 ಇಂಚಿನ ಅಲಾಯ್ ಚಕ್ರಗಳು ಮತ್ತು ಹಿಂಭಾಗದಲ್ಲಿ ಟೈಲ್ ಲೈಟ್ ಕ್ಲಸ್ಟರ್ ಮತ್ತು ಹೊಸ ಬಂಪರ್ ಅನ್ನು ಅಳವಡಿಸಲಾಗಿದ್ದು, ಔಟ್‍‍ಗೋಯಿಂಗ್ ಮಾಡಲ್‍ಗಿಂತಾ ಹೊಸದಾಗಿ ಡಿಸೈನ್ ಮಾಡಲಾಗಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಕಾರಿನ ಒಳವಿನ್ಯಾಸ

ಫೋರ್ಡ್ ಆಸ್ಫೈರ್ ಕಾರಿನ ಒಳಭಾಗದಲ್ಲಿ ಅದೇ ಡ್ಯುಯಲ್ ಟೋನ್ ಥೀಮ್ ಮತ್ತು ಡ್ಯಾಶ್‍ಬೋರ್ಡ್ ಅನ್ನು ಒದಗಿಸಲಾಗಿದೆ. ಆದರೆ ಈ ಬಾರಿ ಹೊಸದಾಗಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಪೋರ್ಟ್ ಮಾದುವ 6.5 ಇಂಚಿನ SYNC3 ಫ್ಲೋಟಿಂಗ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒದಗಿಸಲಾಗಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಎಂಜಿನ್ ಸಾಮರ್ಥ್ಯ

ಫೋರ್ಟ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು ದೇಶದ ಶಕ್ತಿಶಾಲಿ ಕಾಂಪ್ಯಾಕ್ಟ್ ಸೆಡಾನ್ ಕಾರೆಂಬ ಹೆಸರನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ ಮತ್ತು ಹೊಸ ಕಾರಿನ ಖರೀದಿಗಾಗಿ ಇಂದಿನಿಂದ ದೇಶದಲ್ಲಿನ ಎಲ್ಲಾ ಅಧಿಕೃತ ಫೋರ್ಡ್ ಡೀಲರ್‍‍ಗಳ ಬಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಪೆಟ್ರೋಲ್ ಆಧಾರಿತ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರು ಸಂಸ್ಥೆಯಲ್ಲಿನ ಎಕೊಸ್ಪೋರ್ಟ್ ಕಾರಿನಿಂದ ಪಡೆದ 1.5 ಲೀಟರ್ 3 ಸಿಲೆಂಡರ್ ಡ್ರ್ಯಾಗನ್ ಪೆಟ್ರೋಲ್ ಎಂಜಿನ್ ಸಹಾಯದಿಂದ 123ಬಿಹೆಚ್‍‍ಪಿ ಮತ್ತು 150ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಷ್ಟೆ ಅಲ್ಲದೇ ಪ್ರತೀ ಲೀಟರ್‍‍ಗೆ 16 ಕಿಲೋಮೀಟರ್‍‍ನ ಮೈಲೇಜ್ ಅನ್ನು ನೀಡಲಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಇದಲ್ಲದೇ ಫೋರ್ಡ್ ಆಸ್‍ಫೈರ್ ಕಾರಿನಲ್ಲಿ ಇನ್ನು ಎರಡು ಎಂಜಿನ್ ಆಯ್ಕೆಗಳು ಇರಲಿದ್ದು, ಇದರಲ್ಲಿನ 1.2 ಲೀಟರ್ 3 ಸಿಲೆಂಡರ್ ಡ್ರ್ಯಾಗನ್ ಪೆಟ್ರೋಲ್ ಎಂಜಿನ್ ಸಯಾದಿಂದ 95 ಬಿಹೆಚ್‍ಪಿ ಮತ್ತು 120ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ ಮತ್ತು ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಮತ್ತೊಂದು ಎಂಜಿನ್ ಅಧಾರಿತ ಕಾರು 1.5 ಲೀಟರ್ ಡ್ರ್ಯಾಗನ್ ಸಿರೀಸ್ ಡೀಸೆಲ್ ಎಂಜಿನ್ 99 ಬಿಹೆಚ್‍‍ಪಿ ಮತ್ತು 215ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂಡಿಗೆ ಜೋಡಿಸಲಾಗಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಮೈಲೇಜ್

ಪೆಟ್ರೋಲ್ ಮಾದರಿಯ ಫೋರ್ಡ್ ಆಸ್ಫೈರ್ ಕಾರುಗಳು ಪ್ರತೀ ಲೀಟರ್‍‍ಗೆ 20.4 ಕಿಲೋಮೀಟರ್ ಮೈಲೆಜ್ ನೀಡಿದ್ದಾಲಿ, ಇನ್ನು ಡೀಸೆಲ್ ಮಾದರಿಯ ಕಾರುಗಳು ಪರ್ತೀ ಲೀಟರ್‍‍ಗೆ 26.1 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ವೈಶಿಷ್ಟ್ಯತೆಗಳು

ಇದಲ್ಲದೇ ಈ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 2 ಯುಎಸ್‍ಬಿ ಪೋರ್ಟ್ಸ್, ಏಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಎಲೆಕ್ಟ್ರೋಕ್ರೋಮಿಕ್ ಐಆರ್‍‍ವಿಎಮ್, ರೈನ್-ಸೆನ್ಸಿಂಗ್ ವೈಪರ್ಸ್ ಮತ್ತು ಆಟೋಮ್ಯಾತಿಕ್ ಹೆಡ್‍‍ಲ್ಯಾಂಪ್‍‍ಗಳನ್ನು ನೀಡಲಾಗಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಎಬಿಎಸ್, ಇಬಿಡಿಯನ್ನು ಕಾರಿನ ಎಲ್ಲಾ ವೇರಿಯಂಟ್‍ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಟಾಪ್ ಸ್ಪೆಕ್ ಟ್ರಿಕ್ ಕಾರುಗಳಲ್ಲಿ 6 ಏರ್‍‍ಬ್ಯಾಗ್‍‍ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್-ಲಾಂಚ್ ಅಸ್ಸಿಸ್ಟ್ ಅನ್ನು ನೀಡಲಾಗಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಲಭ್ಯವಿರುವ ಬಣ್ಣಗಳು

ಹೊಸ ಫೋರ್ಡ್ ಆಸ್ಫೈರ್ ಕಾರು ವೈಟ್ ಗೋಲ್ಡ್, ಮೂನ್‍‍ಡಸ್ಟ್ ಸಿಲ್ವರ್, ಸ್ಮೋಕ್ ಗ್ರೇ, ಆಬ್ಸೊಲ್ಯೂಟ್ ಬ್ಲಾಕ್, ಡೀಪ್ ಇಂಪ್ಯಾಕ್ಟ್ ಬ್ಲೂ, ರುಬಿ ರೆಡ್ ಮತ್ತು ಆಕ್ಸ್ಫಾರ್ಡ್ ವೈಟ್ ಎಂಬ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಮಾರುತಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಫೋರ್ಡ್ ಸಂಸ್ಥೆಯು ತಮ್ಮ ಜನಪ್ರಿಯ ಆಸ್ಫೈರ್ ಸೆಡಾನ್ ಕಾರ್ನ ಫೇಸ್‍‍ಲಿಫ್ಟ್ ಮಾದರಿಯನ್ನು ನವೀಕರಿಸಿ ಮತ್ತೆ ಬಿಡುಗಡೆಗೊಳಿಸಿದ್ದು, ಪ್ರಸ್ಥುತ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್, ಟಾಟಾ ಟಿಗೊರ್ ಮತ್ತು ಹ್ಯುಂಡೈ ಎಕ್ಸ್ ಸೆಂಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಬಿಡುಗಡೆಗೊಂಡ ಹೊಸ ಫೋರ್ಡ್ ಆಸ್ಫೈರ್ ಫೇಸ್‍‍ಲಿಫ್ಟ್ ಕಾರಿನ ಇನ್ನು ಹೆಚ್ಚು ಚಿತ್ರಗಳು ಇಲ್ಲಿವೆ ನೋಡಿ

Most Read Articles

Kannada
English summary
New Ford Aspire Launched In India.
Story first published: Thursday, October 4, 2018, 14:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X