ಇನ್ಮುಂದೆ ಹೋಂಡಾ ಬ್ರಿಯೋ ಕಾರುಗಳನ್ನು ಖರೀದಿ ಮಾಡೋಕೆ ಆಗೋದಿಲ್ಲ..

ಸಣ್ಣ ಗಾತ್ರದ ಕಾರು ಮಾರಾಟದಲ್ಲಿ ಈ ಹಿಂದೆ ಜನಪ್ರಿಯತೆ ಸಾಧಿಸಿದ್ದ ಹೋಂಡಾ ಬ್ರಿಯೋ ಹ್ಯಾಚ್‌ಬ್ಯಾಕ್ ಕಾರುಗಳು ಇನ್ಮುಂದೆ ಭಾರತೀಯ ಮಾರುಕಟ್ಟೆಯಿಂದ ಮರೆಯಾಗುವ ಬಗ್ಗೆ ಮಹತ್ತರ ಸುಳಿವು ಸಿಕ್ಕಿದ್ದು, ಇತ್ತೀಚೆಗೆ ನಡೆದ ವಿದ್ಯಮಾನಗಳೇ ಇಂತದೊಂದು ನಿ

By Praveen

ಸಣ್ಣ ಗಾತ್ರದ ಕಾರು ಮಾರಾಟದಲ್ಲಿ ಈ ಹಿಂದೆ ಜನಪ್ರಿಯತೆ ಸಾಧಿಸಿದ್ದ ಹೋಂಡಾ ಬ್ರಿಯೋ ಹ್ಯಾಚ್‌ಬ್ಯಾಕ್ ಕಾರುಗಳು ಇನ್ಮುಂದೆ ಭಾರತೀಯ ಮಾರುಕಟ್ಟೆಯಿಂದ ಮರೆಯಾಗುವ ಬಗ್ಗೆ ಮಹತ್ತರ ಸುಳಿವು ಸಿಕ್ಕಿದ್ದು, ಇತ್ತೀಚೆಗೆ ನಡೆದ ವಿದ್ಯಮಾನಗಳೇ ಇಂತದೊಂದು ನಿರ್ಧಾರಕ್ಕೆ ಕಾರಣವಾಗಿದೆ.

ಭಾರತೀಯ ಮಾರುಕಟ್ಟೆಯಿಂದ ಮರೆಯಾಗಲಿದೆ ಹೋಂಡಾ ಬ್ರಿಯೋ...

ಸದ್ಯ ದೇಶಿಯ ಮಾರುಕಟ್ಟೆಯ ಕಾರು ಮಾರಾಟದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಹೋಂಡಾ ಕಾರು ವಿಭಾಗವು ಬ್ರಿಯೋ ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಇದೇ ಕಾರಣಕ್ಕೆ ಬೇಡಿಕೆಯಲ್ಲಿರುವ ಪ್ರಿಮಿಯಂ ಎಸ್‌ಯುವಿ ಕಾರುಗಳತ್ತ ಹೆಚ್ಚಿನ ಗಮನಹರಿಸುತ್ತಿದೆ.

Recommended Video

New Maruti Swift Launch: Price; Mileage; Specifications; Features; Changes
ಭಾರತೀಯ ಮಾರುಕಟ್ಟೆಯಿಂದ ಮರೆಯಾಗಲಿದೆ ಹೋಂಡಾ ಬ್ರಿಯೋ...

ಹೋಂಡಾ ನಿರ್ಮಾಣದ ಎಸ್‌ಯುವಿಗಳು ದಿನದಿಂದ ದಿನಕ್ಕೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಾರಾಟದಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ಬ್ರಿಯೋ ಮತ್ತು ಬಿಆರ್-ವಿ ಕಾರುಗಳ ಉತ್ಪಾದನೆಯನ್ನು ಭಾರತದಲ್ಲಿ ಕೈಬಿಡುವ ಯೋಚನೆಯಲ್ಲಿದೆ.

ಭಾರತೀಯ ಮಾರುಕಟ್ಟೆಯಿಂದ ಮರೆಯಾಗಲಿದೆ ಹೋಂಡಾ ಬ್ರಿಯೋ...

ಈ ಬಗ್ಗೆ ಹೋಂಡಾ ಕಾರ್ಸ್ ಇಂಡಿಯಾ ಎಂಡಿ ಒಯಿಚಿರೊ ಯುನೊ, ಭಾರತೀಯ ಕಾರು ಖರೀದಿದಾರರು ಪ್ರಿಮಿಯಂ ಎಸ್‌ಯುವಿ ಖರೀದಿದತ್ತ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಈ ವಿಫುಲ ಅವಕಾಶ ಬಳಸಿಕೊಳ್ಳಲು ಹೋಂಡಾ ಸದ್ಯದಲ್ಲೇ ಬೃಹತ್ ಯೋಜನೆ ಹಮ್ಮಿಕೊಳ್ಳುತ್ತಿದೆ' ಎಂದಿದ್ದಾರೆ.

ಭಾರತೀಯ ಮಾರುಕಟ್ಟೆಯಿಂದ ಮರೆಯಾಗಲಿದೆ ಹೋಂಡಾ ಬ್ರಿಯೋ...

ಇನ್ನು ಬ್ರಿಯೋ ಹ್ಯಾಚ್‌ಬ್ಯಾಕ್ ಮತ್ತು ಬಿಆರ್-ವಿ ಮಾರಾಟವನ್ನು ಭಾರತದಲ್ಲಿ ಸ್ಥಗಿತಗೊಳಿಸುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿರುವ ಒಯಿಚಿರೊ ಯುನೊ, ಹೊಸ ಮಾದರಿಯ ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಆವೃತ್ತಿಯನ್ನು ಹೊರತರುವ ಬಗ್ಗೆ ಸುಳಿವು ನೀಡಿದ್ದಾರೆ.

ಭಾರತೀಯ ಮಾರುಕಟ್ಟೆಯಿಂದ ಮರೆಯಾಗಲಿದೆ ಹೋಂಡಾ ಬ್ರಿಯೋ...

ಇದರ ಜೊತೆ ಸದ್ಯ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಸಿಟಿ ಸೆಡಾನ್, ಡಬ್ಲ್ಯುಆರ್-ವಿ, ಝಾಜ್ ಹ್ಯಾ‌ಚ್‌ಬ್ಯಾಕ್, ನ್ಯೂ ಅಮೇಜ್ ಸೆಮಿ ಸೆಡಾನ್, ಹೈ ಎಂಡ್ ಕಾರು ಸಿಆರ್-ವಿ ಕಾರುಗಳ ವೈಶಿಷ್ಟ್ಯತೆಗಳನ್ನು ಉನ್ನತಿಕರಿಸುವ ಮೂಲಕ ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲಾಗುತ್ತಿದೆ.

ಭಾರತೀಯ ಮಾರುಕಟ್ಟೆಯಿಂದ ಮರೆಯಾಗಲಿದೆ ಹೋಂಡಾ ಬ್ರಿಯೋ...

ಒಟ್ಟಿನಲ್ಲಿ ಎಂಟ್ರಿ ಲೆವಲ್ ಕಾರು ಮಾದರಿಯಾಗಿದ್ದ ಬ್ರಿಯೋ ಕೈಬಿಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿರುವ ಹೋಂಡಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯನ್ನು ಹೊರತುಪಡಿಸಿ ಬ್ರಿಯೋ ಫೇಸ್‌ಲಿಫ್ಟ್ ಆವೃತ್ತಿಯನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುವ ಉದ್ದೇಶವನ್ನು ಕೂಡಾ ಹೊಂದಿದೆ.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ಶಾಲಾ ಬಾಲಕಿಗೆ ಗುದ್ದಿ ತಪ್ಪಿಸಿಕೊಳ್ಳಲು ಹೋಗಿದ್ದ ಕಾರು ಚಾಲಕನಿಂದ ಭೀಕರ ಅಪಘಾತ

Most Read Articles

Kannada
English summary
New-Generation Honda Brio Not Coming To India Anytime Soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X