ಶಾಲಾ ಬಾಲಕಿಗೆ ಗುದ್ದಿ ತಪ್ಪಿಸಿಕೊಳ್ಳಲು ಹೋಗಿದ್ದ ಕಾರು ಚಾಲಕನಿಂದ ಭೀಕರ ಅಪಘಾತ

Written By:

ರಸ್ತೆ ದಾಟುತ್ತಿದ್ದ ಶಾಲಾ ಬಾಲಕಿಗೆ ಡಿಕ್ಕಿ ಹೊಡೆದ ಕಾರು ಚಾಲಕನೊಬ್ಬ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಕಾರು ಅಪಘಾತಕ್ಕಿಡಾಗಿದ್ದು, ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಶಾಲಾ ಬಾಲಕಿಗೆ ಗುದ್ದಿ ತಪ್ಪಿಸಿಕೊಳ್ಳಲು ಹೋಗಿದ್ದ ಕಾರು ಚಾಲಕನಿಂದ ಭೀಕರ ಅಪಘಾತ

ಛತ್ತಿಸ್‌ಗಢದ ದಾಂತೇವಾಡ್ ಜಿಲ್ಲೆಯ ರಾಯಕೋಟ್ ಬಳಿ ಈ ಘಟನೆ ನಡೆದಿದ್ದು, ಹಿಟ್ ಆ್ಯಂಡ್ ರನ್ ಸಂದರ್ಭದಲ್ಲಿ ಕಾರು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಈ ಅವಘಡ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ಅಪಘಾತ ಮಾಡಿದ್ದ ಚಾಲಕನೂ ಕೂಡಾ ತೀವ್ರ ಗಾಯಗೊಂಡಿದ್ದಾನೆ.

Recommended Video - Watch Now!
New Maruti Swift Launch: Price; Mileage; Specifications; Features; Changes
ಶಾಲಾ ಬಾಲಕಿಗೆ ಗುದ್ದಿ ತಪ್ಪಿಸಿಕೊಳ್ಳಲು ಹೋಗಿದ್ದ ಕಾರು ಚಾಲಕನಿಂದ ಭೀಕರ ಅಪಘಾತ

ಇಂದು ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದ್ದು, ರಾಯಕೋಟ್ ಶಾಲೆಯ ಮುಂಭಾಗದಲ್ಲಿ ಹಾಯ್ದು ಹೋಗುವಾಗ ಮಾರುತಿ ಸುಜುಕಿ ಡಿಜೈರ್ ಕಾರು ರಸ್ತೆ ದಾಟುತ್ತಿದ್ದ ಶಾಲಾ ಬಾಲಕಿಗೆ ಡಿಕ್ಕಿ ಹೊಡೆದಿದೆ.

ಶಾಲಾ ಬಾಲಕಿಗೆ ಗುದ್ದಿ ತಪ್ಪಿಸಿಕೊಳ್ಳಲು ಹೋಗಿದ್ದ ಕಾರು ಚಾಲಕನಿಂದ ಭೀಕರ ಅಪಘಾತ

ಕಾರು ಗುದ್ದಿದ ಪರಿಣಾಮ ಬಾಲಕಿ ನೆಲಕ್ಕೆ ಬಿದ್ದಿದ್ದು, ಕಾರಿನಿಂದ ಇಳಿದು ಹೋದರೆ ಸ್ಥಳೀಯರು ಹಲ್ಲೆ ಮಾಡಬಹುದು ಎಂಬ ಭಯದಿಂದ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದ್ರೆ ಕಾರು ಜೋರಾಗಿ ಓಡಿಸುವ ಭರದಲ್ಲಿ ಭೀಕರ ಅಪಾಘಾತ ನಡೆದಿದೆ.

ಶಾಲಾ ಬಾಲಕಿಗೆ ಗುದ್ದಿ ತಪ್ಪಿಸಿಕೊಳ್ಳಲು ಹೋಗಿದ್ದ ಕಾರು ಚಾಲಕನಿಂದ ಭೀಕರ ಅಪಘಾತ

ಶಾಲೆಯಿಂದ 2 ಕಿಮಿ ಅಂತರದಲ್ಲಿ ಕಾರು ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಖಾಸಗಿ ಸಂಸ್ಥೆಯ ನೌಕರನೊಬ್ಬ ಸ್ಥಳದಲ್ಲೇ ಪ್ರಾಣಾಬಿಟ್ಟಿದ್ದಾನೆ. ಜೊತೆಗೆ ಕಾರು ಚಾಲನೆ ಮಾಡುತ್ತಿದ್ದ ತಪಸ್ ಎಂಬಾತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲಾ ಬಾಲಕಿಗೆ ಗುದ್ದಿ ತಪ್ಪಿಸಿಕೊಳ್ಳಲು ಹೋಗಿದ್ದ ಕಾರು ಚಾಲಕನಿಂದ ಭೀಕರ ಅಪಘಾತ

ಇನ್ನು ಕಾರು ರಸ್ತೆ ಬದಿ ಉಳಿಬಿದ್ದಿದ್ದರಿಂದ ಡಿಜೈರ್ ಸೆಡಾನ್ ಕಾರು ಸಂಪೂರ್ಣ ಜಖಂಗೊಂಡಿದ್ದು, ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಘಟನೆ ನಿಖರ ಕಾರಣ ಎನ್ನುವ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Trending On DriveSpark Kannada:

20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್ ಮಾಡಿಸುತ್ತಿದ್ದಾನೆ ಈ ಉದ್ಯಮಿ...

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

Read more on accident
English summary
maruti suzuki dzire accident in chhattisgarh.
Story first published: Thursday, February 15, 2018, 19:33 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark