ಭಾರತದಲ್ಲಿ ಬಿಡಗಡೆಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ವಿಶೇಷತೆ ಏನು.?

Written By: Rahul TS

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ತನ್ನ ಕ್ಯಾಮ್ರಿ ಹೈಬ್ರಿಡ್ ಕಾರನ್ನು ಬಿಡಗಡೆಗೊಳಿಸಿದೆ. ಎಕ್ಸ್ ಶೋರಂ ಪ್ರಕಾರ ಹೊಸ ಕಾರುಗಳ ಬೆಲೆಯನ್ನು ರೂ 37.22 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಔಟ್ ಗೋಯಿಂಗ್ ಮಾಡಲ್‍‍ಗಿಂತ ಹೊಸ ವೈಶಿಷ್ಟ್ಯತೆಗಳು ಹಾಗು ನವೀಕರಿಸಲಾದ ಒಳವಿನ್ಯಾಸವನ್ನು ಪಡೆದಿದೆ.

ಭಾರತದಲ್ಲಿ ಬಿಡಗಡೆಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರೀಡ್ ಕಾರಿನ ವಿಶೇಷತೆ ಏನು.?

ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಸೆಡಾನ್ ಕಾರು ಪ್ರೋಮಿನಂಟ್ ಕ್ರೋಮ್ ಗ್ರಿಲ್, ವೃತ್ತಾಕಾರದ ಫಾಗ್ ಲ್ಯಾಂಪ್‍‍ಗಳನ್ನು ಒಳಗೊಂಡ ಅಗಲವಾದ ಏರ್ ಡ್ಯಾಮ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಹಾಗು ಬಂಪರ್‌ಗಳಲ್ಲಿ ಟರ್ನ್ ಇಂಡಿಕೇಟರ್‍‍ಗಳನ್ನು ಪಡೆದುಕೊಂಡಿವೆ.

ಭಾರತದಲ್ಲಿ ಬಿಡಗಡೆಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರೀಡ್ ಕಾರಿನ ವಿಶೇಷತೆ ಏನು.?

ಕಾರಿನ ಹಿಂಭಾಗದ ವಿನ್ಯಾಸವು ವ್ರ್ಯಾಪ್ ಅರೌಂಡ್ ಟೈಲ್ ಲ್ಯಾಂಪ್ ಕ್ಲಸ್ಟರ್, ಕ್ರೋಮ್ ಗಾರ್ನಿಷ್ ಟೈಲ್‍‍ಗೇಟ್, 17 ಇಂಚಿನ ಅಲಾಯ್ ಚಕ್ರಗಳನ್ನು ಪಡೆದಿದ್ದು, ಹೊರವಿನ್ಯಾಸದಲ್ಲಿ ಔಟ್ ಗೋಯಿಂಗ್ ಮಾದರಿಯನ್ನೇ ಆಧರಿಸಿದೆ.

ಭಾರತದಲ್ಲಿ ಬಿಡಗಡೆಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರೀಡ್ ಕಾರಿನ ವಿಶೇಷತೆ ಏನು.?

ಟೊಯೊಟಾ ಕ್ಯಾಮ್ರಿ ಕಾರಿನ ಒಳಾವಿನ್ಯಾಸದ ಬಗ್ಗೆ ಹೇಳುವುದಾದರೇ, ನವೀಕರಿಸಲಾದ ಕ್ಯಾಬಿನ್, ಟ್ಯಾನ್ ಅಪ್ ಹೋಲ್ಸ್ಟ್ರಿ ಮತ್ತು ಡ್ಯಾಶ್‍‍ಬೋರ್ಡ್ ಫೌಕ್ಸ್ ಟ್ರಿಮ್‍, ಸ್ಟೀರಿಂಗ್ ವೀಲ್ಹ್, ಆರ್ಮ್‍ರೆಸ್ಟ್ ಮತ್ತು ಸೆಂಟರ್ ಕಂಸೋಲ್ ಜೊತೆಗೆ ನಾಲ್ಕು-ಸ್ಪೋಕ್ ಯೂನಿಟ್‍ಗೆ ವಿರುದ್ಧವಾಗಿ ಮೂರು-ಸ್ಪೋಕ್ ಸ್ಟೀರಿಂಗ್ ವೀಲ್ಹ್ ಗಳನ್ನು ಸಹ ಪಡೆದಿದೆ.

ಭಾರತದಲ್ಲಿ ಬಿಡಗಡೆಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರೀಡ್ ಕಾರಿನ ವಿಶೇಷತೆ ಏನು.?

ಹೊಸದಾಗಿ ಬಿಡುಗಡೆಗೊಂಡ 2018ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಸೆಡಾನ್ ಕಾರು ನವೀಕರಿಸಲಾದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 12 ಸ್ಪೀಕರ್ ಆಡಿಯೊ ಸಿಸ್ಟಂ, ಹೆಡ್ಸ್ ಅಪ್ ಡಿಸ್ಪ್ಲೇ, ವೈರ್‍‍ಲೆಸ್ ಚಾರ್ಜಿಂಗ್ ಪ್ಯಾಡ್, ಮೂರು ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪವರ್ ರಿಕ್ಲೈನಿಂಗ್ ರೀರ್ ಸೀಟ್ಸ್, ಕೊಲಾಪ್ಸಿಬಲ್ ಹೆಡ್‍ರೆಸ್ಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‍‍ಗಳಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡಗಡೆಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರೀಡ್ ಕಾರಿನ ವಿಶೇಷತೆ ಏನು.?

ಕ್ಯಾಮ್ರಿ ಹೈಬ್ರಿಡ್ ಕಾರು 2.5 ಲೀಟರ್ ನಾಲ್ಕು ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 159 ಬಿಹೆಚ್‍ಪಿ ಹಾಗು 213 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ಎಲೆಕ್ಟ್ರಾನಿಕಲ್ ಕಂಟ್ರೋಲ್ಡ್ ಸಿವಿಟಿ (E-CVT) ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡಗಡೆಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರೀಡ್ ಕಾರಿನ ವಿಶೇಷತೆ ಏನು.?

ಪ್ರಯಾಣಿಕರ ರಕ್ಷಣೆಗಾಗಿ ಒಂಭತ್ತು ಏರ್‌ಬ್ಯಾಗ್‍ಗಳು, ಇಬಿಡಿಯೊಂದಿಗೆ ಎಬಿಎಸ್, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸ್ಸಿಸ್ಟ್, ವಿದ್ಯುತ್ ಸಹಾಯದಿಂದ ನಿಯಂತ್ರಿಸಬಲ್ಲ ಬ್ರೇಕಿಂಗ್ ಸಿಸ್ಟಂ (ಇಸಿಬಿ) ಮತ್ತು ಐಎಸ್ಓ ಫಿಕ್ಸ್ ಚೈಲ್ಡ್ ಸೇಫ್ಟಿ ಸೀಟ್ ಮೌನ್ಟಿಂಗ್ ಪಾಯಿಂಟ್‍‍ಗಳನ್ನು ಪಡೆದಿದೆ.

ಭಾರತದಲ್ಲಿ ಬಿಡಗಡೆಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರೀಡ್ ಕಾರಿನ ವಿಶೇಷತೆ ಏನು.?

ಬಿಡಗಡೆಗೊಂಡ ಹೊಸ ಟೊಯೊಟಾ ಹೈಬ್ರಿಡ್ ಕಾರು ತನ್ನ ಔಟ್ ಗೋಯಿಂಗ್ ಮಾದರಿಯಿಂದ ಹೊರವಿನ್ಯಾಸವನ್ನು ಆಧರಿಸಿದ್ದು, ನವೀಕರಿಸಲಾದ ಒಳವಿನ್ಯಾಸದಿಂದ ಸಜ್ಜುಗೊಂಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕಾರ್ಬನ್ ಎಮಿಷನ್ ಅನ್ನು ನಿಯಂತ್ರಿಸಲು ಹೈಬ್ರಿಡ್ ವಾಹನಗಳು ಸಹಾಯಕವಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಹೊಸ ಫೋರ್ಡ್ ಎಂಡೀವರ್...

ಇನೋವಾ ಮತ್ತು ಲಾರಿ ನಡುವೆ ಭೀಕರ ಅಪಘಾತ- 7 ಮಂದಿ ದುರ್ಮರಣ

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Read more on toyota sedan
English summary
2018 Toyota Camry Hybrid Launched In India; Priced At Rs 37.22 Lakh.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark