ಹಬ್ಬದ ಸಂಭ್ರಮಕ್ಕಾಗಿ ಬಿಡುಗಡೆಗೊಂಡ ನಿಸ್ಸಾನ್ ಸನ್ನಿ ಸ್ಪೆಷಲ್ ಎಡಿಷನ್

ನಾಡಿನಾದ್ಯಂತ ಹಬ್ಬ ಹರಿದಿನಗಳು ಶುರವಾಗಿವೆ. ಹೀಗಿರುವಾಗ ವಾಹನ ಉತ್ಪಾದನಾ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಆರಂಭಿಸಿದ್ದು, ವಾಹನ ಖರೀದಿ ಯೋಜನೆಯಲ್ಲಿರುವವರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು. ಯಾಕಂದ್ರೆ ವಿವಿಧ ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಹೊಸ ಬಗೆಯ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದು, ಇದರಲ್ಲಿ ನಿಸ್ಸಾನ್ ಸಂಸ್ಥೆಯ ಸನ್ನಿ ಸ್ಪೆಷಲ್ ಎಡಿಷನ್ ಕೂಡಾ ಒಂದು.

ಹಬ್ಬದ ಸಂಭ್ರಮಕ್ಕಾಗಿ ಬಿಡುಗಡೆಗೊಂಡ ನಿಸ್ಸಾನ್ ಸನ್ನಿ ಸ್ಪೆಷಲ್ ಎಡಿಷನ್

ನಿಸ್ಸಾನ್ ಇಂಡಿಯಾ ಸಂಸ್ಥೆಯು ಹೊಸ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಸನ್ನಿ ಸೆಡಾನ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದು, ಸಾಮಾನ್ಯ ಮಾದರಿಗಿಂತ ಹೆಚ್ಚಿನ ಬದಲಾವಣೆ ಹೊಂದಿರುವ ಹೊಸ ಸನ್ನಿ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 8.48 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಹಬ್ಬದ ಸಂಭ್ರಮಕ್ಕಾಗಿ ಬಿಡುಗಡೆಗೊಂಡ ನಿಸ್ಸಾನ್ ಸನ್ನಿ ಸ್ಪೆಷಲ್ ಎಡಿಷನ್

ತಾಂತ್ರಿಕ ಸೌಲಭ್ಯಗಳನ್ನು ಹೊರತುಪಡಿಸಿ ರೆಗ್ಯುಲರ್ ಮಾದರಿಗಿಂತ ಹ ಹೊರಭಾಗದ ವೈಶಿಷ್ಟ್ಯತೆಗಳಲ್ಲಿ ಭಿನ್ನತೆ ಹೊಂದಿರುವ ಸ್ಪೆಷಲ್ ಎಡಿಷನ್ ಸನ್ನಿ ಕಾರುಗಳು, ಸ್ಟೈಲಿಷ್ ಬ್ಲ್ಯಾಕ್ ರೂಫ್ ವ್ಯಾರ್ಪ್, ಬಾಡಿ ಡಿಕಾಲ್ಸ್, ಬ್ಲ್ಯಾಕ್ ವೀಲ್ಹ್ ಕವರ್‌ಗಳು ಮತ್ತು ರಿಯರ್ ಸ್ಪಾಯ್ಲರ್ ಸೌಲಭ್ಯ ಪಡೆದುಕೊಳ್ಳುವ ಮೂಲಕ ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಹಬ್ಬದ ಸಂಭ್ರಮಕ್ಕಾಗಿ ಬಿಡುಗಡೆಗೊಂಡ ನಿಸ್ಸಾನ್ ಸನ್ನಿ ಸ್ಪೆಷಲ್ ಎಡಿಷನ್

ಜೊತೆಗೆ ನಿಸ್ಸಾನ್ ಸಂಸ್ಥೆಯ ಎಕ್ಸ್‌ಕ್ಲೂಸಿವ್ ಫೀಚರ್ಸ್‌ಗಳಾದ 'ಇಂಟಲಿಜೆಂಟ್ ನಿಸ್ಸಾನ್ ಕನೆಕ್ಟ್' ಸೌಲಭ್ಯವನ್ನು ಸ್ಪೆಷಲ್ ಎಡಿಷನ್ ಸನ್ನಿ ಕಾರುಗಳಲ್ಲಿ ನೀಡಲಾಗಿದ್ದು, ಇದು ಕಾರು ಪ್ರಯಾಣದ ವೇಳೆ ಅತಿ ಹೆಚ್ಚು ಸುರಕ್ಷತೆಯೊಂದಿಗೆ ದೂರದ ಪ್ರಯಾಣವನ್ನು ಆನಂದದಾಯಕವಾಗಿಸಲಿದೆ.

ಹಬ್ಬದ ಸಂಭ್ರಮಕ್ಕಾಗಿ ಬಿಡುಗಡೆಗೊಂಡ ನಿಸ್ಸಾನ್ ಸನ್ನಿ ಸ್ಪೆಷಲ್ ಎಡಿಷನ್

ಇನ್ನು ಕಾರುಗಳಲ್ಲಿ ಈ ಹಿಂದಿನಂತೆಯೇ 6.2-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಬ್ಲ್ಯಾಕ್ ಥೀಮ್ ಇಂಟಿರಿಯರ್, ಲೆದರ್ ಸೀಟುಗಳು, ಡ್ರೈವರ್ ಸೀಟ್ ರಿಮೆಂಡರ್, ಜೀಯೋ ಫೆನ್ಸಿಂಗ್, ಸ್ಪೀಡ್ ಅಲರ್ಟ್ ಸೇರಿದಂತೆ ಹಲವು ಐಷಾರಾಮಿ ಸೌವಲತ್ತುಗಳನ್ನು ಪಡೆದಿದೆ.

ಹಬ್ಬದ ಸಂಭ್ರಮಕ್ಕಾಗಿ ಬಿಡುಗಡೆಗೊಂಡ ನಿಸ್ಸಾನ್ ಸನ್ನಿ ಸ್ಪೆಷಲ್ ಎಡಿಷನ್

ಎಂಜಿನ್ ಸಾಮರ್ಥ್ಯ

ನಿಸ್ಸಾನ್ ಸನ್ನಿ ಸ್ಪೆಷಲ್ ಎಡಿಷನ್ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ವರ್ಷಗಳು 1.5-ಲೀಟರ್ ಎಂಜಿನ್‌ನೊಂದಿಗೆ 97-ಬಿಎಚ್‌ಪಿ ಮತ್ತು 134-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

MOST READ: ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ಹಬ್ಬದ ಸಂಭ್ರಮಕ್ಕಾಗಿ ಬಿಡುಗಡೆಗೊಂಡ ನಿಸ್ಸಾನ್ ಸನ್ನಿ ಸ್ಪೆಷಲ್ ಎಡಿಷನ್

ಹಾಗೆಯೇ ಡೀಸೆಲ್ ವರ್ಷನ್‌ಗಳು ಸಹ 1.5-ಲೀಟರ್ ಎಂಜಿನ್‌ನೊಂದಿಗೆ 88-ಬಿಎಚ್‌ಪಿ ಮತ್ತು 200-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಎರಡು ವರ್ಷನ್‌ಗಳಲ್ಲೂ ಸ್ಟ್ಯಾಂಡಂರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಹಬ್ಬದ ಸಂಭ್ರಮಕ್ಕಾಗಿ ಬಿಡುಗಡೆಗೊಂಡ ನಿಸ್ಸಾನ್ ಸನ್ನಿ ಸ್ಪೆಷಲ್ ಎಡಿಷನ್

ಸುರಕ್ಷಾ ಸೌಲಭ್ಯಗಳು

ಹೊರ ಭಾಗದ ವೈಶಿಷ್ಟ್ಯತೆಗಳಂತೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಿರುವ ನಿಸ್ಸಾನ್ ಸಂಸ್ಥೆಯು ಸನ್ನಿ ಸೆಡಾನ್ ಕಾರುಗಳಲ್ಲಿ ಡ್ಯುಯಲ್ ಏರ್‌ಬ್ಯಾಗ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಲೊಕೆಟ್ ಮೈ ಕಾರ್, ಶೇರ್ ಮೈ ಕಾರ್ ಲೋಕೆಶನ್, ಕೀ ಲೆಸ್ ಎಂಟ್ರಿ, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಸೌಲಭ್ಯ ನೀಡಲಾಗಿದೆ.

ಹಬ್ಬದ ಸಂಭ್ರಮಕ್ಕಾಗಿ ಬಿಡುಗಡೆಗೊಂಡ ನಿಸ್ಸಾನ್ ಸನ್ನಿ ಸ್ಪೆಷಲ್ ಎಡಿಷನ್

ಒಟ್ಟಿನಲ್ಲಿ ಪ್ರೈಮ್ ಸೆಡಾನ್ ಕಾರುಗಳಲ್ಲೇ ಬೆಸ್ಟ್ ಫೀಚರ್ಸ್‌ಗಳನ್ನು ಹೊಂದಿರುವ ನಿಸ್ಸಾನ್ ಸನ್ನಿ ಕಾರುಗಳು ಮಾರುತಿ ಸುಜುಕಿ ಸಿಯಾಜ್ ಮತ್ತು ಹೋಂಡಾ ಸಿಟಿ ಕಾರುಗಳಿಗೆ ತ್ರೀವ ಪೈಪೋಟಿ ನೀಡಲಿದ್ದು, ಸ್ಮಾರ್ಟ್ ಟೆಕ್ನಾಲಜಿ ಸೌಲಭ್ಯವನ್ನು ಹೊಂದಿರುವ ಹೊಸ ಕಾರು ಬಿಡುಗಡೆ ಬಗ್ಗೆ ನಿಸ್ಸಾನ್ ಮೋಟಾರ್ಸ್ ಇಂಡಿಯಾ ವಿಭಾಗದ ಮುಖ್ಯಸ್ಥ ಹರ್ದಿಪ್ ಸಿಂಗ್ ಬ್ರಾರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

MOST READ: ಟ್ರಾಫಿಕ್ ಪೊಲೀಸ್‍‍ರಿಂದ ತಪ್ಪಿಸಿಕೊಳ್ಳಬಹುದು ಆದ್ರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.!

Most Read Articles

Kannada
Read more on nissan sedan
English summary
Nissan Sunny Special Edition Launched In India; Priced At Rs 8.48 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X