ಭಾರತಕ್ಕೂ ಬರಲಿದೆ ಸುಜುಕಿ ನಿರ್ಮಾಣದ ಸ್ವಿಫ್ಟ್ ಸ್ಪೋರ್ಟ್ ವರ್ಷನ್?

Written By:

ಜಪಾನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಸುಜುಕಿಯು ಭಾರತದಲ್ಲಿ ಅಷ್ಟೇ ಅಲ್ಲದೇ ಜಾಗತಿಕ ಮಾರುಕಟ್ಟೆಯ ಪ್ರಮುಖ ರಾಷ್ಟ್ರಗಳಲ್ಲೂ ಅನೇಕ ಕಾರು ಉತ್ಪನ್ನಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇದೀಗ ತನ್ನ ತವರು ನೆಲೆಯಲ್ಲಿ ಸ್ಪಿಫ್ಟ್ ಸ್ಪೋರ್ಟ್ ವರ್ಷನ್ ಆಟೋ ಸಲೂನ್ ಎನ್ನುವ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ.

To Follow DriveSpark On Facebook, Click The Like Button
ಭಾರತಕ್ಕೂ ಬರಲಿದೆ ಸುಜುಕಿ ನಿರ್ಮಾಣದ ಸ್ವಿಫ್ಟ್ ಸ್ಪೋರ್ಟ್ ವರ್ಷನ್?

ಭಾರತದಲ್ಲಿ ಮಾರುತಿ ಜೊತೆ ಕಾರು ಉತ್ಪಾದನೆ ಮೂಲಕ ನಂ.1 ಸ್ಥಾನ ಕಾಯ್ದುಕೊಂಡಿರುವ ಸುಜುಕಿ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದೀಗ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿರುವ ಸ್ವಿಫ್ಟ್ ಸ್ಪೋರ್ಟ್ ಆಟೋ ಸಲೂನ್ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

Recommended Video - Watch Now!
Shocking Car Accident That Happened In Karunagappally, Kerala
ಭಾರತಕ್ಕೂ ಬರಲಿದೆ ಸುಜುಕಿ ನಿರ್ಮಾಣದ ಸ್ವಿಫ್ಟ್ ಸ್ಪೋರ್ಟ್ ವರ್ಷನ್?

ಮುಂಬರುವ ಫೆಬ್ರುವರಿಯಲ್ಲಿ 2018ರ ಟೊಕಿಯೋ ಆಟೋ ಸಲೂನ್ ಮೇಳ ನಡೆಯುತ್ತಿದ್ದು, ಇದರ ವಿಶೇಷವಾಗಿಯೇ ಈ ಹೊಸ ಕಾರನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ಆಟೋ ಮೇಳದ ಹೆಸರನ್ನೇ ಬಿಡುಗಡೆ ಮಾಡಲಿರುವ ಕಾರಿಗೆ ನಾಮಕರಣ ಮಾಡಲಾಗಿದೆ.

ಭಾರತಕ್ಕೂ ಬರಲಿದೆ ಸುಜುಕಿ ನಿರ್ಮಾಣದ ಸ್ವಿಫ್ಟ್ ಸ್ಪೋರ್ಟ್ ವರ್ಷನ್?

ಇದೇ ಕಾರಣಕ್ಕೆ ಸ್ವಿಫ್ಟ್ ಸ್ಪೋರ್ಟ್ ವರ್ಷನ್‌ಗೆ ಆಟೋ ಸಲೂನ್ ಎಂದೇ ಕರೆಯಲಾಗುತ್ತಿದ್ದು, ಹಾಟ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಬ್ಲ್ಯಾಕ್ ಪೇಂಟಿಂಗ್ ವಿನ್ಯಾಸವನ್ನು ಪಡೆದಿರುವುದು ಕಾರ್ ರೇಸ್ ಪ್ರಿಯರನ್ನು ಸೆಳೆಯಲು ಸಿದ್ಧವಾಗಿದೆ.

ಭಾರತಕ್ಕೂ ಬರಲಿದೆ ಸುಜುಕಿ ನಿರ್ಮಾಣದ ಸ್ವಿಫ್ಟ್ ಸ್ಪೋರ್ಟ್ ವರ್ಷನ್?

ಇದರ ಜೊತೆಗೆ 2018ರಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಮತ್ತು ಸುಜುಕಿ ಸ್ಪಿಫ್ಟ್ ಸ್ಪೋರ್ಟ್ ವರ್ಷನ್ ಆಟೋ ಸಲೂನ್ ಒಂದೇ ಪ್ಲ್ಯಾಟ್ ಫಾರ್ಮ್ ಮೇಲೆ ನಿರ್ಮಾಣವಾಗಿದ್ದು, ಎರಡು ಕಾರುಗಳ ಮಧ್ಯೆ ಸಾಕಷ್ಟು ಸ್ವಾಮತ್ಯೆ ಹೊಂದಿದೆ.

Trending On DriveSpark Kannada:

ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಭಾರತಕ್ಕೂ ಬರಲಿದೆ ಸುಜುಕಿ ನಿರ್ಮಾಣದ ಸ್ವಿಫ್ಟ್ ಸ್ಪೋರ್ಟ್ ವರ್ಷನ್?

ಭಾರತದಲ್ಲಿ ಬಿಡುಗಡೆ ಯಾವಾಗ?

ಮೂಲಗಳ ಪ್ರಕಾರ ಜಪಾನ್‌ ಮಾರುಕಟ್ಟೆಗೆ ಸ್ಪಿಫ್ಟ್ ಸ್ಪೋರ್ಟ್ ವರ್ಷನ್ ಬಿಡುಗಡೆ ಮಾಡಿದ ನಂತರ ಗ್ರಾಹಕರ ಪ್ರಕ್ರಿಯೆ ಆಧಾರದ ಮೇಲೆ ಭಾರತದಲ್ಲೂ ಬಿಡುಗಡೆ ಸಾಧ್ಯತೆಗಳಿದ್ದು, ಟೊಕಿಯೋದಲ್ಲಿ ನಡೆಲಿರುವ ಆಟೋ ಮೇಳದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ.

ಭಾರತಕ್ಕೂ ಬರಲಿದೆ ಸುಜುಕಿ ನಿರ್ಮಾಣದ ಸ್ವಿಫ್ಟ್ ಸ್ಪೋರ್ಟ್ ವರ್ಷನ್?

ಎಂಜಿನ್ ಸಾಮರ್ಥ್ಯ

1.4-ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಹೊಂದುರುವ ಸ್ಪಿಫ್ಟ್ ಸ್ಪೋರ್ಟ್ ವರ್ಷನ್ ಮಾದರಿಯು 138-ಬಿಎಚ್‌ಪಿ ಮತ್ತು 230-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಅಂತಯೇ ಟರ್ಬೋ ಚಾಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯು 6-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆ ಹೊಂದಿದೆ.

ಭಾರತಕ್ಕೂ ಬರಲಿದೆ ಸುಜುಕಿ ನಿರ್ಮಾಣದ ಸ್ವಿಫ್ಟ್ ಸ್ಪೋರ್ಟ್ ವರ್ಷನ್?

ಆದ್ರೆ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರುಗಳಲ್ಲಿ ಡಿಸೇಲ್ ಮಾದರಿಯು 82-ಬಿಎಚ್‌ಪಿ ಮತ್ತು ಪೆಟ್ರೋಲ್ ಮಾದರಿಯು 74-ಬಿಎಚ್‌ಪಿ ಮಾತ್ರ ಉತ್ಪಾದನೆ ಮಾಡಲಿವೆ.

ಭಾರತಕ್ಕೂ ಬರಲಿದೆ ಸುಜುಕಿ ನಿರ್ಮಾಣದ ಸ್ವಿಫ್ಟ್ ಸ್ಪೋರ್ಟ್ ವರ್ಷನ್?

ಹೀಗಾಗಿ ಜಪಾನ್‌ನಲ್ಲಿ ಬಿಡುಗಡೆಯಾಗಲಿರುವ ಸ್ವಿಫ್ಟ್ ಸ್ಪೋರ್ಟ್ ವರ್ಷನ್ ಮಾದರಿಗೂ ಭಾರತದಲ್ಲಿ ಬಿಡುಗಡೆಯಾಗುವ ಮಾರುತಿ ಸುಜುಕಿ ಸ್ಪಿಫ್ಟ್ ಸ್ಪೋರ್ಟ್ ಆವೃತ್ತಿಗೂ ಭಾರೀ ವ್ಯತ್ಯಾಸಗಳಿದ್ದು, ಈ ಹಿನ್ನೆಲೆಯಲ್ಲಿ ಜಪಾನ್ ಆವೃತ್ತಿಯನ್ನು ಭಾರತದಲ್ಲೂ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಭಾರತಕ್ಕೂ ಬರಲಿದೆ ಸುಜುಕಿ ನಿರ್ಮಾಣದ ಸ್ವಿಫ್ಟ್ ಸ್ಪೋರ್ಟ್ ವರ್ಷನ್?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸುಜುಕಿ ನಿರ್ಮಾಣ ಮಾಡಿರುವ ಸ್ಪೆಷಲ್ ಎಡಿಷನ್ ಸ್ವಿಫ್ಟ್ ಸ್ಪೋರ್ಟ್ ವರ್ಷನ್ ಆಟೋ ಸಲೂನ್ ಮಾದರಿಯು ವರ್ಲ್ಡ್ ಕ್ಲಾಸ್ ಸೌಲಭ್ಯಗಳೊಂದಿಗೆ ಅಭಿವೃದ್ದಿಯಾಗಿದ್ದು, ಭಾರತದಲ್ಲಿ ಬಿಡುಗಡೆಯಾಗಿದ್ದೆ ಆದಲ್ಲಿ ಹೊಸ ಸಂಚಲನ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Trending On DriveSpark Kannada:

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಭಾರತದ ಮೊಟ್ಟ ಮೊದಲ ಮೆಕ್‌ಲರೇನ್ 720ಎಸ್ ದುಬಾರಿ ಕಾರನ್ನು ಖರೀದಿಸಿದ ಬೆಂಗಳೂರಿಗ

Read more on suzuki sport car
English summary
Suzuki Swift Sport Salon Version Revealed.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark