ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಟಾಟಾದ ಹೊಸ ಎಸ್‌ಯುವಿ ಕಾರು

Written By: Rahul

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಹೊಸ ಎಸ್‌ಯುವಿ ನೆಕ್ಸಾನ್ ಏರೊ ಕಾರನ್ನು 2018ರ ಆಟೋ ಎಕ್ಸ್ ಪೋನಲ್ಲಿ ಪ್ರದರ್ಶನಗೊಳಿಸಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಟಾಟಾದ ಹೊಸ ಎಸ್‌ಯುವಿ ಕಾರು

ಟಾಟಾ ಸಂಸ್ಥೆಯು ಎರಡು ಮಾದರಿಯ 'ಏರೊ' ಸ್ಟೈಲಿಂಗ್ ಮತ್ತು 'ಆಕ್ಟಿವ್' ಸ್ಟೈಲಿಂಗ್ ಕಿಟ್ ರೂಪದಲ್ಲಿ ನೆಕ್ಸಾನ್ ಕಾರನ್ನು ಪ್ರದ್ರರ್ಶನಗೊಳಿಸಲಾಗಿದ್ದು, ನೆಕ್ಸಾನ್ 'ಏರೊ' ಕಾರು ಸೈಡ್ ಸ್ಕರ್ಟ್ಸ್, ವಾಹನದ ಮುಂದೆ ಹಾಗು ಹಿಂದೆ ಬಂಪರ್, ರೆಡ್ ಆಸ್ಸೆಂಟ್ಸ್, ಲಿಕ್ವಿಡ್ ಸಿಲ್ವರ್ ಬಣ್ಣ ಮತ್ತು ಪಿಯಾನೊ ಬ್ಲಾಕ್ ಫಿನಿಶ್ ರೂಫ್ ಕಾಂಬಿನೇಶನ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಟಾಟಾದ ಹೊಸ ಎಸ್‌ಯುವಿ ಕಾರು

ಟಾಟಾ ನೆಕ್ಸಾನ್ ಏರೊ ಕಾರಿನ ಒಳಗೆ ಮತ್ತು ಮಧ್ಯದಲ್ಲಿ ಗ್ಲೋಸಿ ಪ್ಲಾಸ್ಟಿಕ್ಸ್, ಸ್ಟೀರಿಂಗ್ ವೀಲ್ ಮತ್ತು ಡ್ಯಾಶ್ ಬೋರ್ಡ್ ಅನ್ನು ಹೊಂದಿದ್ದು, ನೆಕ್ಸಾನ್ ಆಕ್ಟಿವ್ ಪ್ಯಾಕೇಜ್ ಏರೊಗಿಂತ ವಿಭಿನ್ನವಾದ ರೂಪವನ್ನು ಹೊಂದಿರಲಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಟಾಟಾದ ಹೊಸ ಎಸ್‌ಯುವಿ ಕಾರು

ಈ ಎರಡು ಪ್ಯಾಕೇಜ್ ಗಳ ಹೊರತಾಗಿ, ಟಾಟಾ ತಮ್ಮ ರೆಗ್ಯುಲರ್ ನೆಕ್ಸಾನ್ ಕಾರುಗಳಿಂತ ಹೊಸ ಕಾರುಗಳನ್ನು ವಿಭಿನ್ನವಾಗಿ ರಚನೆ ಮಾಡಿದ್ದು, ಕಾರಿನ ಕಾನ್ಫಿಗ್ರೆಟರ್ ಅನ್ನು ಒದಗಿಸುತ್ತಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಟಾಟಾದ ಹೊಸ ಎಸ್‌ಯುವಿ ಕಾರು

ನೆಕ್ಸಾನ್ ಏರೊ ಕಾರು ಪೆಟೋಲ್ ಹಾಗು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದ್ದು, ಪೆಟ್ರೋಲ್ ಆವೃತ್ತಿಯು 1.2 ಲೀಟರಿನ ಟರ್ಬೋಚಾರ್ಜ್ಡ್ ಎಂಜಿನ್ 108.5 ಬಿಹೆಚ್ ಪಿ ಮತ್ತು 170ಎನ್ಎಂ ಟಾರ್ಕನ್ನು ಉತ್ಪಾದಿಸುತ್ತದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಟಾಟಾದ ಹೊಸ ಎಸ್‌ಯುವಿ ಕಾರು

ಹಾಗೆಯೆ ಡೀಸೆಲ್ ಆವೃತ್ತಿಯು 1.5 ಲೀಟರ್ ಎಂಜಿನ್ ಹೊಂದಿದ್ದು, 108.5 ಬಿಹೆಚ್ ಪಿ, 260 ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊದಿದೆ. ಎರಡೂ ಯೂನಿಟ್ ಗಳು 6 ಸ್ಪೀಡ್ ಗೇರ್ ಬಾಕ್ಸಿಗೆ ಜೋಡಿಸಲಾಗಿದೆ.

ಆಟೋ ಎಕ್ಸ್‌ಪೋ 2018: ಪ್ರದರ್ಶನಗೊಂಡ ಟಾಟಾದ ಹೊಸ ಎಸ್‌ಯುವಿ ಕಾರು

ನೆಕ್ಸಾನ್ ಏರೊ ಕಾರಿನ ಬೆಲೆಯನ್ನು ಬಿಡುಗಡೆಗೊಳಿಸಲಿಲ್ಲವಾದರೂ ರೆಗ್ಯುಲರ್ ಆವೃತ್ತಿಗಿಂತಲೂ ಅಂದಾಜು 30,000 ರೂ ಅಧಿಕವಾಗಿರಲಿವೆ ಎನ್ನಲಾಗಿದ್ದು, ಕಾರನ್ನು 2018ರ ದ್ವಿತಿಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲು ಸಂಸ್ಥೆ ಯೋಚಿಸುತ್ತಿದೆ.

English summary
Tata Nexon Aero Showcased; Expected Launch Date & Price, Features & More.
Story first published: Monday, February 12, 2018, 12:13 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark