ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಭಾರತೀಯ ಆಟೋ ಉದ್ಯಮದಲ್ಲಿ ಹೊಸ ವಾಹನಗಳಲ್ಲಿ ಸುರಕ್ಷತೆಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದ್ದು, ದೇಶದ ಆಟೋ ಉತ್ಪಾದನಾ ಸಂಸ್ಥೆಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾಲಕ್ಕೆ ತಕ್ಕಂತೆ ಹೊಸ ಹೊಸ ಬದಲಾವಣೆಗಳನ್ನು ಮಾಡುತ್ತಿವೆ. ಇವುಗಳಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯು ಸಹ ತನ್ನ ಕಾರುಗಳಲ್ಲಿ ಸುರಕ್ಷತೆಯ ವಿಚಾರಕ್ಕೆ ಇಂದು ವಿಶ್ವಮಟ್ಟದಲ್ಲಿ ಗಮನಸೆಳೆಯುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಹೌದು, ಭಾರತದಲ್ಲಿ ಈ ಹಿಂದೆ ಹೊಸ ವಾಹನಗಳ ಖರೀದಿ ವೇಳೆ ಬಹುತೇಕ ಗ್ರಾಹಕರು ಸುರಕ್ಷತೆಗಿಂತ ಹೆಚ್ಚಾಗಿ ಮೈಲೇಜ್ ಮತ್ತು ಕಡಿಮೆ ಬೆಲೆಗೆ ಲಭ್ಯವಿರುವ ವಾಹನಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ಆದ್ರೆ ಕಾಲ ಬದಲಾಗಿದೆ ಮೈಲೇಜ್ ಮತ್ತು ಕಡಿಮೆ ಬೆಲೆ ಹೊರತು ಪಡಿಸಿ ಹೊಸ ವಾಹನಗಳಲ್ಲಿ ಲಭ್ಯವಿರುವ ಸುರಕ್ಷಾ ಸೌಲಭ್ಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರ ಫಲವಾಗಿಯೇ ಇಂದು ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಭಾರತದಲ್ಲಿ ಸದ್ಯ ಮಾರಾಟವಾಗುತ್ತಿರುವ 20ಕ್ಕೂ ಹೆಚ್ಚು ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿದ್ದು, ಅಪಘಾತದ ವೇಳೆ ಸುರಕ್ಷಾ ಸಾಧನಗಳು ಇಲ್ಲದಿರುವುದರಿಂದ ಸಾವುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವುದು ಕಟು ಸತ್ಯ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಇದೇ ಕಾರಣಕ್ಕೆ 2019ರಿಂದ ನಿರ್ದಿಷ್ಟ ಮಟ್ಟದ ಸುರಕ್ಷಾ ಸಾಧನಗಳನ್ನು ಹೊಂದಿರುವ ವಾಹನಗಳ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ಪರೀಕ್ಷೆಯ ಮೂಲಕ ಕಾರುಗಳ ನಿರ್ಮಾಣದ ಶೈಲಿಯಲ್ಲಿ ಬಹುದೊಡ್ಡ ಬದಲಾವಣೆ ತರುವ ಯೋಜನೆ ಹೊಂದಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

#SAFERCARSFORINDIA ಅಭಿಯಾನದಡಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾರು ಮಾದರಿಗಳ ಸುರಕ್ಷೆ ಕುರಿತಂತೆ ಕ್ರ್ಯಾಶ್ ಟೆಸ್ಟಿಂಗ್‌ಗಳನ್ನು ಹಮ್ಮಿಕೊಂಡಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಜನಪ್ರಿಯ ಸಂಸ್ಥೆಯ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಇದರಲ್ಲಿ 2017ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಟಾಟಾ ಜನಪ್ರಿಯ ನೆಕ್ಸಾನ್ ಎಸ್‌ಯುವಿ ಕಾರುಗಳು ಸದ್ಯ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸುತ್ತಿದ್ದು, ಇದರೊಂದಿಗೆ ಸುರಕ್ಷತೆಯಲ್ಲೂ ಹೊಸ ಭರವಸೆ ಮೂಡಿಸುವ ಮೂಲಕ ಪ್ರತಿಷ್ಠಿತ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ ತನ್ನದಾಗಿಸಿಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಹೊಸ ಕಾರುಗಳ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಮ್ (ಎನ್‌ಸಿಎಪಿ) ಏಜೆನ್ಸಿಯು ನಡೆಸುವ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಖರೀದಿಗೆ ಅತ್ಯುತ್ತಮ ಎನಿಸಿರುವ ಟಾಟಾ ನೆಕ್ಸಾನ್ ಎಸ್‌ಯುವಿ ಕಾರುಗಳು ಪೂರ್ಣ ಪ್ರಮಾಣದ 5 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಸದ್ಯ ಹೊಸ ಮೈಲಿಗಲ್ಲಿಗೆ ಕಾರಣವಾಗಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಇದು ಭಾರತೀಯ ಆಟೋ ಉತ್ಪಾದನಾ ಸಂಸ್ಥೆಯೊಂದು ನಿರ್ಮಾಣ ಮಾಡಿದ ಕಾರೊಂದು 5 ಸ್ಟಾರ್ ರೇಟಿಂಗ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಐಷಾರಾಮಿ ಕಾರುಗಳನ್ನು ಹೊರತುಪಡಿಸಿ ಮಧ್ಯಮ ಗಾತ್ರದ ಕಾರುಗಳಲ್ಲಿ ಪೂರ್ಣ ಪ್ರಮಾಣದ ಸುರಕ್ಷಾ ರೇಟಿಂಗ್ ಬಂದಿದ್ದು ನೆಕ್ಸಾನ್ ಕಾರಿಗೆ ಮಾತ್ರ ಎನ್ನುವುದು ಬಹುಮುಖ್ಯ ವಿಚಾರ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಏನಿದು ಕ್ರ್ಯಾಶ್ ಟೆಸ್ಟಿಂಗ್?

ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿ ಮತ್ತು ಏಷಿಯಾ ಎನ್‌ಸಿಎಪಿ ಹಾಗೂ ಲ್ಯಾಟಿನ್ ಎನ್‌ಸಿಎಪಿ ಸಂಸ್ಥೆಗಳು ಹೊಸ ಕಾರುಗಳಲ್ಲಿನ ಸುರಕ್ಷಾ ವೈಶಿಷ್ಟ್ಯತೆಗಳಿಗೆ ರೇಟಿಂಗ್ ನೀಡುತ್ತವೆ.

MOST READ: ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 4, 3, 2, 1, 0 ಸ್ಟಾರ್ ರೇಟಿಂಗ್ ಬಂದಲ್ಲಿ ಅನುಕ್ರಮವಾಗಿ ಉತ್ತಮ, ಖರೀದಿಗೆ ಯೋಗ್ಯ, ಸಾಧರಣ, ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಇದೀಗ ಟಾಟಾ ನೆಕ್ಸಾನ್ ಕಾರು ಮಾದರಿಗಳು ಸಹ 5 ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಹೊಸ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಅಪಘಾತ ಸಂದರ್ಭಗಳಲ್ಲಿ ಚಾಲಕನಿಗೆ ಹೆಚ್ಚಿನ ಸುರಕ್ಷತೆ ನೀಡುವಲ್ಲಿ ಶಕ್ತವಾಗಿದೆ. ಜೊತೆಗೆ ತನ್ನ ಪ್ರತಿಸ್ಪರ್ಧಿ ಕಾರುಗಳಿಗೆ ತೀವ್ರ ಪೈಪೋಟಿ ನೀಡಲು ಇದು ಮತ್ತಷ್ಟು ಸಹಕಾರಿಯಾಗಲಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಪ್ರತಿ ಹೊಸ ಕಾರು ಮಾದರಿಗಳಿಗೂ ಸುರಕ್ಷೆ ವಿಚಾರವಾಗಿ ಜಾಗತಿಕ ಪ್ರಮಾಣ ಪತ್ರದ ಅವಶ್ಯಕತೆಯಿದ್ದು, ಟಾಟಾ ನೆಕ್ಸಾನ್ ಕಾರುಗಳು ಪಡೆದುಕೊಂಡಿರುವ ಉತ್ತಮ ರೇಟಿಂಗ್‌ನಿಂದಾಗಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುವುದು ಖಾತ್ರಿಯಾಗಿದೆ.

MOST READ: ದರೋಡೆಕೋರರ ಹೆಡೆಮುರಿ ಕಟ್ಟಲು ಡಿಸಿಪಿ ಅಣ್ಣಾಮಲೈ ಮಾಡಿದ ಪ್ಲ್ಯಾನ್ ಹೇಗಿತ್ತು ಗೊತ್ತಾ?

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ವಿಶಿಷ್ಟ ವಿನ್ಯಾಸಗಳೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಗಳು ಇಂಪ್ಯಾಕ್ಟ್ 2.0 ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಬೃಹತ್ತಾದ ಸೆಂಟ್ರಲ್ ಕನ್ಸಾಲ್ ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ನೆಕ್ಸಾನ್ ಕಾರುಗಳಲ್ಲಿ ಚಾಲಕ ಮತ್ತು ಪ್ರಯಾಣಿಕ ಸೀಟುಗಳ ಕಡೆಗೆ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಐಸೋಫೆಕ್ಸ್ ಚೈಲ್ಡ್ ಮೌಟೆಂಡ್ ಸೀಟುಗಳು ಮತ್ತು ಬಲಿಷ್ಠ ಬಾಡಿ ಕಿಟ್ ಹೊಂದಿರುವುದು ಕಾರಿನ ಮೌಲ್ಯವನ್ನ ಹೆಚ್ಚಿಸಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಇನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದೆ. ಈ ಮೂಲಕ ಯುವ ಸಮುದಾಯ ನೆಚ್ಚಿನ ಆಯ್ಕೆಯಾಗಿರುವ ನೆಕ್ಸಾನ್ ಕಾರುಗಳು ಇದೀಗ ಸುರಕ್ಷತೆಯಲ್ಲೂ ಮುನ್ನಡೆ ಸಾಧಿಸಿವೆ ಎನ್ನಬಹುದು.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

ಇದಲ್ಲದೇ ಮೊದಲ ಬಾರಿಗೆ ಮೆಡ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಾಣವಾದ ಪ್ರಮುಖ ಕಾರುಗಳಲ್ಲಿ ಟಾಟಾ ನೆಕ್ಸಾನ್ ಕೂಡಾ ಒಂದಾಗಿದ್ದು, ದೇಶಿಯ ಮಾರುಕಟ್ಟೆಯ ಕಾರು ಮಾದರಿಯೊಂದು ಉತ್ತಮ ರೇಟಿಂಗ್ ಗಳಿಸಿರುವುದು ಇದೇ ಮೊದಲು ಅಂದ್ರೆ ನೀವು ನಂಬಲೇಬೇಕು.

ಟಾಟಾ ನೆಕ್ಸಾನ್ ಸುರಕ್ಷತೆ ಬಗ್ಗೆ ನಡೆಸಲಾದ ಕ್ರ್ಯಾಶ್ ಟೆಸ್ಟಿಂಗ್ ವಿಡಿಯೋ ಇಲ್ಲಿದೆ ವೀಕ್ಷಿಸಿ..

Most Read Articles

Kannada
English summary
Tata Nexon Crash Test — Five Stars And Officially Becomes The Safest Car In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X