2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ ಟಾಟಾ ಸ್ಪೋರ್ಟ್ ಕಾರು 'ಟಮೋ ರೆಸ್‌ಮೋ'

Written By:
Recommended Video - Watch Now!
Auto Rickshaw Explodes In Broad Daylight

ವಿಶ್ವದಾದ್ಯಂತ ಯುವಜನತೆಯಲ್ಲಿ ಸ್ಪೋರ್ಟ್ಸ್ ಕಾರುಗಳ ಕ್ರೇಜ್ ಹೆಚ್ಚುತ್ತಿರುವಂತೆಯೇ ಇದಕ್ಕೆ ಪೂರಕವಾಗಿ ಎಲ್ಲ ಆಟೋಮೊಬೈಲ್ ಸಂಸ್ಥೆಗಳು ಒಂದರ ಹಿಂದೊಂದು ವಿನೂತನ ಸ್ಪೋರ್ಟ್ಸ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಟಾಟಾ ಮೋಟಾರ್ಸ್ ಕೂಡಾ ಇದಕ್ಕೆ ಹೊರತಾಗಿಲ್ಲ.

2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ ಟಾಟಾ 'ಟಮೋ ರೆಸ್‌ಮೋ'

ಭಾರತೀಯ ಮಾರುಕಟ್ಟೆಯ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ನಿರ್ಮಾಣದ ಮೊದಲ ಸ್ಪೋರ್ಟ್ ಕಾರು ಆವೃತ್ತಿ ಟಮೋ ರೆಸ್‌ಮೋ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ನಾಳೆಯಿಂದ ಆರಂಭಗೊಳ್ಳಲಿರುವ 2018ರ ದೆಹಲಿ ಆಟೋ ಎಕ್ಸ್ ಪೋ ದಲ್ಲಿ ಹೊಸ ನಮೂನೆಯ ಟಮೋ ರೆಸ್‌ಮೋ ಅನಾವರಣಗೊಳ್ಳಲಿದೆ.

2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ ಟಾಟಾ 'ಟಮೋ ರೆಸ್‌ಮೋ'

ಇತ್ತೀಚೆಗಷ್ಟೇ ಸ್ವಿಜರ್ಲೆಂಡ್​ನ ಜೀನಿವಾದಲ್ಲಿ ನಡೆದ 87ನೇ ಮೋಟಾರ್ ವಾಹನಗಳ ಪ್ರದರ್ಶನದಲ್ಲಿ ಮೊದಲ ಬಾರಿಗೆ 'ಟಮೋ ರೇಸ್​ಮೋ ಅತ್ಯಾಧುನಿಕ ಸೋರ್ಟ್ಸ್ ಕಾರನ್ನು ಅನಾವರಣ ಮಾಡಿದ್ದ ಟಾಟಾ ಮೋಟಾರ್ಸ್ ಇದೀಗ ದೆಹಲಿ ಆಟೋ ಮೇಳದಲ್ಲೂ ಪ್ರಮುಖ ಆಕರ್ಷಣೆಯಾಗಿರಲಿದೆ.

2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ ಟಾಟಾ 'ಟಮೋ ರೆಸ್‌ಮೋ'

ರೇಸ್​ಮೋ ಕಾರು ಭಾರತದ ಮೊದಲ ಕ್ಯಾಬಿನ್ ಕನೆಕ್ಟಿವಿಟಿ ಹೊಂದಿರುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ತಂತ್ರಜ್ಞಾನವನ್ನು ಮೈಕ್ರೋಸಾಫ್ಟ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಇದರಿಂದ ಈ ಕಾರು ಸಾಗಬೇಕಾದ ಮಾರ್ಗಗಳ ಕುರಿತು ಪೂರ್ವ ಮಾಹಿತಿ ದೊರೆಯುವುದಲ್ಲದೇ ರಿಮೋಟ್ ನಿರ್ವಹಣೆ ವ್ಯವಸ್ಥೆ ಕೂಡ ಇರಲಿದೆ.

2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ ಟಾಟಾ 'ಟಮೋ ರೆಸ್‌ಮೋ'

ಇಟಲಿಯ ವಿನ್ಯಾಸ

ಟಮೋ ರೆಸ್‌ಮೋ ಕಾರುಗಳನ್ನು ಇಟಲಿಯ ಟ್ಯುರಿನ್‌ನಲ್ಲಿರುವ ಟಾಟಾ ಡಿಸೈನ್ ಸ್ಟುಡಿಯೋದಲ್ಲಿ ನಿರ್ಮಾಣ ಮಾಡಲಾಗಿದ್ದು, ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.

Trending On DriveSpark Kannada:

ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್‌ಟಿಸಿ ಬಸ್

100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ ಟಾಟಾ 'ಟಮೋ ರೆಸ್‌ಮೋ'

ಎಂಜಿನ್ ಸಾಮರ್ಥ್ಯ

1.2 ಲೀಟರ್ ಸಾಮರ್ಥ್ಯದ ಟಬೋ ಚಾರ್ಜ್ಡ್ ಹಾಗೂ ಇಂಟರ್​ಕೂಲ್ ರೆವೋಟ್ರೋನ್ ಇಂಜಿನ್ ಅಳವಡಿಸಲಾಗಿದ್ದು, 3 ಸಿಲಿಂಡರ್​ನ ಪೆಟ್ರೋಲ್ ಇಂಜಿನ್, ಪೆಡಲ್ ಶಿಫ್ಟರ್ಸ್ ಜತೆಗೆ 6-ಸ್ಪೀಡ್ ಸ್ವಯಂಚಾಲಿತ ಹಾಗೂ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಕೂಡ ಇರಲಿದೆ.

2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ ಟಾಟಾ 'ಟಮೋ ರೆಸ್‌ಮೋ'

ಈ ಕಾರು ಸಾಕಷ್ಟು ಹಗುರ ಇಂಜಿನ್ ಹೊಂದಿರುವುದರಿಂದ ಕೇವಲ 6 ಸೆಕೆಂಡ್​ಗಳಲ್ಲಿ ಗಂಟೆಗೆ 100 ಕಿ.ಮೀ. ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿರುವ ಟಮೋ ರೆಸ್‌ಮೋ ಕಾರುಗಳಲ್ಲಿ ಅಪಘಾತ ನಿರ್ವಹಣಾ ವ್ಯವಸ್ಥೆ, 7 ಏರ್​ಬ್ಯಾಗ್​ಗಳು ಮತ್ತಿತರ ಸುರಕ್ಷತಾ ವಿಧಾನಗಳನ್ನು ಅಳವಡಿಸಲಾಗಿದೆ.

2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ ಟಾಟಾ 'ಟಮೋ ರೆಸ್‌ಮೋ'

ಯಾವಾಗ ಬಿಡುಗಡೆ?

ಭಾರತದಲ್ಲೇ ಮೊದಲ ಬಾರಿಗೆ ಬಿಡುಗಡೆಯಾಗಲಿರುವ ಟಮೋ ರೇಸ್​ಮೋ ಕಾರುಗಳು ಇದೇ ವರ್ಷ 2ನೇ ತ್ರೈಮಾಸಿಕ ಅವಧಿಗೆ ಮಾರುಕಟ್ಟೆ ಪ್ರವೇಶಿಸಲಿವೆ. ಆದ್ರೆ ಟಮೋ ರೆಸ್‌ಮೋ ಕಾರುಗಳು ಸೀಮಿತ ಕಾರು ಮಾದರಿಯಾಗಿರಲಿದೆ.

2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ ಟಾಟಾ 'ಟಮೋ ರೆಸ್‌ಮೋ'

ಕಾರಿನ ಬೆಲೆಗಳು?

ಟು ಸೀಟರ್ ಸೌಲಭ್ಯ ಹೊಂದಿರುವ ಟಮೋ ರೆಸ್‌ಮೋ ಕಾರುಗಳ ಬೆಲೆ ಇತರೆ ಕಾರು ಕೂಪೆ ಮಾದರಿಗಳಿಂತ ದುಬಾರಿಯಾಗಿರಲಿದ್ದು, ಕನಿಷ್ಠ 25 ಲಕ್ಷದಿಂದ ಗರಿಷ್ಠ 35 ಲಕ್ಷ ರೂ. ನಿಗದಿಪಡಿಸುವ ಸಾಧ್ಯತೆ ಇದೆ.

2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ ಟಾಟಾ 'ಟಮೋ ರೆಸ್‌ಮೋ'

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹತ್ತು ಹಲವು ವಿಶೇಷಗಳನ್ನು ಹೊತ್ತು ಬರುತ್ತಿರುವ ಟಾಟಾ ಟಮೋ ರೆಸ್‌ಮೋ ಕಾರುಗಳು ಸ್ಪೋರ್ಟ್ ಕಾರು ಮಾದರಿಗಳಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರು ಯಾವ ರೀತಿ ಕಮಾಲ್ ಮಾಡಲಿದೆ ಎನ್ನುವುದನ್ನು ಕಾಯ್ದುನೋಡಬೇಕಿದೆ.

Trending On DriveSpark Kannada:

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

English summary
Auto Expo 2018: Tata Tamo Racemo Sportscar To Be Showcased.
Story first published: Tuesday, February 6, 2018, 17:38 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark