IPL ಸಮರಕ್ಕೆ ದಿನಗಣನೆ- ಅಭಿಮಾನಿಗಳಿಗೆ ಟಾಟಾದಿಂದ ಬಂಪರ್ ಆಫರ್...

Written By:

ಏಪ್ರಿಲ್ 7ರಿಂದ ಐಪಿಎಲ್‌ನ 11ನೇ ಆವೃತ್ತಿ ಆರಂಭವಾಗುತ್ತಿದ್ದು, ಇದಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾಯ್ದು ಕುಳಿತಿದ್ದಾರೆ. ಹೌದು ಇಡೀ ದೇಶವೇ ಐಪಿಎಲ್ ಆಟವನ್ನು ಎದುರು ನೋಡುತ್ತಿದ್ದು, ಇದೇ ವೇಳೆ ಜನಪ್ರಿಯ ವಾಹನ ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ಐಪಿಎಲ್ ಪಂದ್ಯಗಳಲ್ಲಿ ಭಾಗಿಯಾಗುವ ಅಭಿಮಾನಿಗಳಿಗೆ ವಿನೂತನ ಆಫರ್ ಒಂದನ್ನು ನೀಡುತ್ತಿದೆ.

IPL ಸಮರಕ್ಕೆ ದಿನಗಣನೆ- ಅಭಿಮಾನಿಗಳಿಗೆ ಟಾಟಾದಿಂದ ಬಂಪರ್ ಆಫರ್...

11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಪಂದ್ಯಾವಳಿಗಳು ಏಪ್ರಿಲ್ 7ರಿಂದ ಆರಂಭಗೊಳ್ಳಲಿದ್ದು, ಮೇ 27ರ ವರೆಗೂ ನಡೆಯಲಿದೆ. ಏ.6ರಂದು ಮುಂಬೈನಲ್ಲೇ ಅದ್ಧೂರಿ ಉದ್ಘಾಟನಾ ಸಮಾರಂಭ ಸಹ ಆಯೋಜಿಸಲಾಗಿದ್ದು, ಐಪಿಎಲ್‌ನ ಅಧಿಕೃತ ಪಾಲುದಾರ ಕಾರ್ ಬ್ರಾಂಡ್ ಆಗಿ ಟಾಟಾ ಮೋಟಾರ್ಸ್ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ.

IPL ಸಮರಕ್ಕೆ ದಿನಗಣನೆ- ಅಭಿಮಾನಿಗಳಿಗೆ ಟಾಟಾದಿಂದ ಬಂಪರ್ ಆಫರ್...

ಕೇವಲ ಆಟಗಾರರಿಗೆ ಅಷ್ಟೇ ಅಲ್ಲದೇ ಈ ಬಾರಿ ಐಪಿಎಲ್ ಪಂದ್ಯಗಳಲ್ಲಿ ಭಾಗಿಯಾಗುವ ಅಭಿಮಾನಿಗಳಿಗೂ ಹೊಸ ಆಫರ್ ನೀಡುತ್ತಿರುವ ಟಾಟಾ ಮೋಟಾರ್ಸ್, ನೆಕ್ಸಾನ್ ಎಸ್‌ಯುವಿ ತಮ್ಮದಾಗಿಸಿಕೊಳ್ಳುವ ಅವಕಾಶ ಒದಗಿಸುತ್ತಿದೆ.

IPL ಸಮರಕ್ಕೆ ದಿನಗಣನೆ- ಅಭಿಮಾನಿಗಳಿಗೆ ಟಾಟಾದಿಂದ ಬಂಪರ್ ಆಫರ್...

ಅಭಿಮಾನಿಗಳಿಗಾಗಿ ಟಾಟಾ ಸಂಸ್ಥೆಯು ನೆಕ್ಸಾನ್ ಫ್ಯಾನ್ ಕ್ಯಾಚ್ ಸ್ಪರ್ಧೆಯನ್ನು ಆಯೋಜಿಸಿದ್ದು, ಒಂದು ಬಾರಿ ಕ್ಯಾಚ್ ಹಿಡಿದಲ್ಲಿ 1 ಲಕ್ಷ ಬಹುಮಾನ ಮತ್ತು ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಅಭಿಮಾನಿಗಳಿಗೆ ನೆಕ್ಸಾನ್ ಕಾರು ಅನ್ನು ಗಿಫ್ಟ್ ಆಗಿ ನೀಡಲಿದೆ.

IPL ಸಮರಕ್ಕೆ ದಿನಗಣನೆ- ಅಭಿಮಾನಿಗಳಿಗೆ ಟಾಟಾದಿಂದ ಬಂಪರ್ ಆಫರ್...

ಸೂಪರ್ ಸ್ಟ್ರೈಕರ್‌ನಲ್ಲಿ ಕ್ಯಾಚ್ ಹಿಡಿಯುವ ಅಭಿಮಾನಿಗಳು ನೆಕ್ಸಾನ್ ಎಸ್‌ಯುವಿ ಕಾರ್ ಅನ್ನು ತಮ್ಮದಾಗಿಸಿಕೊಳ್ಳಬಹುದಾಗಿದ್ದು, ಪಂದ್ಯದ ಅವಧಿಯಲ್ಲಿ ಕ್ಯಾಚ್ ಹಿಡಿಯುವ ಎಲ್ಲಾ ಅಭಿಮಾನಿಗಳು ಲಕ್ಕಿ ವಿನ್ನರ್ಸ್ ಆಗಲಿದ್ದಾರೆ.

IPL ಸಮರಕ್ಕೆ ದಿನಗಣನೆ- ಅಭಿಮಾನಿಗಳಿಗೆ ಟಾಟಾದಿಂದ ಬಂಪರ್ ಆಫರ್...

ನೆಕ್ಸಾನ್ ಬ್ರಾಂಡ್ ಉತ್ತೇಜಿಸಲು ಈ ಆಫರ್ ನೀಡುತ್ತಿರುವ ಟಾಟಾ ಮೋಟಾರ್ಸ್ ಮುಂದಿನ ಮೂರು ವರ್ಷಗಳ ತನಕ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಎಸ್‌ಯುವಿ ಪ್ರಿಯರಿಗೆ ನೆಕ್ಸಾನ್ ತಮ್ಮದಾಗಿಸಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ ಎನ್ನಬಹುದು.

IPL ಸಮರಕ್ಕೆ ದಿನಗಣನೆ- ಅಭಿಮಾನಿಗಳಿಗೆ ಟಾಟಾದಿಂದ ಬಂಪರ್ ಆಫರ್...

ಇನ್ನು ಎಸ್‌ಯುವಿ ವಿಭಾಗದಲ್ಲಿ ಜನಪ್ರಿಯಗೊಳ್ಳುತ್ತಿರುವ ಟಾಟಾ ನೆಕ್ಸಾನ್ ಕಾರುಗಳು ಪೆಟ್ರೋಲ್ ಮತ್ತು ಡೀಸಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಹೊಸ ಬಗೆಯ ವಿನ್ಯಾಸಗಳೊಂದಿಗೆ ಗ್ರಾಹಕರನ್ನು ಮೋಡಿ ಮಾಡುತ್ತಿದೆ.

IPL ಸಮರಕ್ಕೆ ದಿನಗಣನೆ- ಅಭಿಮಾನಿಗಳಿಗೆ ಟಾಟಾದಿಂದ ಬಂಪರ್ ಆಫರ್...

ಇದಲ್ಲದೇ ಸಬ್ ಕಂಪಾಂಕ್ಟ್ ಟಾಟಾ ನೆಕ್ಸಾನ್ ಕಾರುಗಳು XE, XM, XT ಮತ್ತು XZ+ ಎಂಬ ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದ್ದು, ಗ್ರಾಹಕರು ತಮಗಿಷ್ಟವಾದ ಮಾದರಿಯನ್ನು ಆಯ್ದುಕೊಳ್ಳಬಹುದಾಗಿದೆ.

IPL ಸಮರಕ್ಕೆ ದಿನಗಣನೆ- ಅಭಿಮಾನಿಗಳಿಗೆ ಟಾಟಾದಿಂದ ಬಂಪರ್ ಆಫರ್...

ಈ ಕಾರು ರಿವರ್ಸ್ ಕ್ಯಾಮೆರಾ ಸೇರಿದಂತೆ 6.5 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಎಚ್‌ಡಿ ಡಿಸ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯಗಳನ್ನು ಹೊಂದಿದ್ದು, ಈ ಕಾರಿನಲ್ಲಿ ಹೆಚ್ಚು ಸುರಕ್ಷತೆ ಆಯ್ಕೆಗಳನ್ನು ನೀಡಲಾಗಿದೆ. ಡ್ಯುಯಲ್-ಫ್ರಂಟ್ ಏರ್ ಬ್ಯಾಗ್ ಮತ್ತು ಆಬಿಎಸ್ ಜೊತೆ ಇಬಿಡಿ ಸ್ಟ್ಯಾಂಡರ್ಡ್ ಒದಗಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ಜಾಲತಾಣದಲ್ಲಿನ ವೈರಲ್ ಸ್ಟೋರಿಗಳು:

01. ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

02. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

03.ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ?

04. ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

Read more on tata motors cricket
English summary
Tata Ties Up With IPL; Cricketers, Fans Stand A Chance To Win Nexon.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark