ಕ್ರ್ಯಾಶ್ ಟೆಸ್ಟಿಂಗ್ ವೇಳೆ ಫುಲ್ ಮಾರ್ಕ್ಸ್ ಪಡೆದ ಮರ್ಸಿಡೀಸ್ ಜಿ ಕ್ಲಾಸ್ ಕಾರು..

ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಮರ್ಸಿಡೀಸ್-ಬೆಂಝ್ ತಮ್ಮ ಎಎಂಜಿ ಜಿ63 ಕಾರನ್ನು ನವೀಕರಿಸಿ ಮತ್ತು ಹೊಸ ವೈಶಿಷ್ಟ್ಯತೆಗಳೊಂದಿಗೆ ಇಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.2.19 ಕೋಟಿಗೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ಇದೀಗ 2019ರ ಹೊಸ ಮರ್ಸಿಡೀಸ್ ಎಎಂಜಿ ಜಿ63 ಕಾರನ್ನು ಕ್ರ್ಯಾಶ್ ಟೆಸ್ಟಿಂಗ್‍ಗೆ ಕಳುಹಿಸಲಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್ ವೇಳೆ 5ಕ್ಕೆ 5 ಅಂಕಗಳನ್ನು ಪಡೆದುಕೊಂಡಿದೆ. ಅಂದರೆ ಖರೀದಿಸಲು ಹೂಡಿದ ಹಣಕ್ಕೆ ಸೇಫ್ಟಿ ಪರವಾಗಿ ಮತ್ತು ಸಾಮರ್ಥ್ಯದ ಪರವಾಗಿ ಯಾವುದೆ ಹಾನಿಯಿಲ್ಲವೆಂದು ಹೇಳಬಹುದು. ಯುರೋ ಎನ್‍ಸಿಎಪಿಯಲ್ಲಿ ವಯಸ್ಕರು ಮತ್ತು ಮಕ್ಕಳು ಪ್ರಯಾಣಿಸುವುದು ಸುರಕ್ಷಿತ ಎಂದು ತಿಳಿದಿದೆ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ಫುಲ್ ಮಾರ್ಕ್ಸ್ ಪಡೆದ ಮರ್ಸಿಡೀಸ್ ಜಿ ಕ್ಲಾಸ್ ಕಾರು..

2019ರ ಮರ್ಸಿಡೀಸ್ ಎಎಂಜಿ ಜಿ63 ಕಾರು ಹೊಸ ಅಲ್ಯೂಮೀನಿಯಂ ದೇಹವನ್ನು ಪಡೆದುಕೊಂಡಿದ್ದು, ಹಿಂದಿನ ತಲೆಮಾರಿನ ಕಾರಿಗಿಂತಾ ಫ್ರಂಟ್ ಗ್ರಿಲ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಹಾಗು ಅಗಲವಾದ ಏರ್‍‍ಡ್ಯಾಮ್‍‍ಗಳನ್ನು ಒದಗಿಸಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ಫುಲ್ ಮಾರ್ಕ್ಸ್ ಪಡೆದ ಮರ್ಸಿಡೀಸ್ ಜಿ ಕ್ಲಾಸ್ ಕಾರು..

ಮರ್ಸಿಡೀಸ್ ಬೆಂಜ್ ಎಎಂಜಿ ಜಿ63 ಕಾರಿನಲ್ಲಿ ಅಳವಡಿಸಲಾದ ಪೂರ್ಣ ಎಲ್ಇಡಿ ಹೆಡ್‍ಲ್ಯಾಂಪ್ ಅನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದ್ದು, ಬೋನೆಟ್ ಮೌಂಟೆಡ್ ಇಂಡಿಕೇಟರ್ಸ್ ಮತ್ತು ಸೈಡ್ ಬೆಡ್ಡಿಂಗ್‍‍ಗಳನ್ನು ಒದಗಿಸಿ ಆಫ್-ರೋಡಿಂಗ್ ಕಾರಿಗೆ ಬೇಕಾದ ವಿನ್ಯಾಸದಲ್ಲಿ ಇದನ್ನು ತಯಾರಿಸಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ಫುಲ್ ಮಾರ್ಕ್ಸ್ ಪಡೆದ ಮರ್ಸಿಡೀಸ್ ಜಿ ಕ್ಲಾಸ್ ಕಾರು..

ಇನ್ನು ಕಾರಿನ ಹಿಂಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ ವಿನೂತನ ಟೈಲ್‍‍ಗೇಟ್ ಮೌಂಟೆಡ್ ಸ್ಪೇರ್ ಅನ್ನು ನೀಡಲಾಗಿದ್ದು, ಜಿ63 ಎಎಂಜಿ ಎಂಬ ಚಿಹ್ನೆಯನ್ನು ನೀಡಲಾಗಿದ್ದು, ವ್ಹೀಲ್ ಆರ್ಚ್‍‍ಗಳು ಸಹ ಮಾರುಕಟ್ಟೆಯಲ್ಲಿರುವ ಇನ್ನಿತರೆ ಆಫ್ರೋಡಿಂಗ್ ಕಾರುಗಳಿಗೊಂತಾ ವಿಭಿನ್ನವಾಗಿದೆ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ಫುಲ್ ಮಾರ್ಕ್ಸ್ ಪಡೆದ ಮರ್ಸಿಡೀಸ್ ಜಿ ಕ್ಲಾಸ್ ಕಾರು..

ಆಫ್-ರೋಡಿಂಗ್ ಕೌಶಲ್ಯದ ಅನುಗುಣವಾಗಿ ಮರ್ಸಿಡೀಸ್-ಎಎಂಜಿ ಗಿ63 ಕಾರು 21 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಪಡೆದುಕೊಂಡಿದ್ದು, 241ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಕೂಡಾ ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ಫುಲ್ ಮಾರ್ಕ್ಸ್ ಪಡೆದ ಮರ್ಸಿಡೀಸ್ ಜಿ ಕ್ಲಾಸ್ ಕಾರು..

ಕಾರಿನ ಒಳಭಾಗದಲ್ಲಿ ಡ್ಯುಯಲ್ 12.3 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರೂಮೆಂಟ್ ಕಂಸೋಲ್ ಅನ್ನು ನೀಡಲಾಗಿದ್ದು, ಲೆಧರ್, ಅಲ್ಕಾಂಟ್ರಾ, ಮೆಟಲ್ ಮತ್ತು ಕಾರ್ಬನ್-ಫೈಬರ್ ಅನ್ನು ಒದಗಿಸುರುವು ಕಾರಿನ ಒಳಭಾಗದ ಹೈಲೈತ್ ಎಂದೇ ಹೇಳಬಹುದು.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ಫುಲ್ ಮಾರ್ಕ್ಸ್ ಪಡೆದ ಮರ್ಸಿಡೀಸ್ ಜಿ ಕ್ಲಾಸ್ ಕಾರು..

ಎಂಜಿನ್ ಸಾಮರ್ಥ್ಯ

2018ರ ಮರ್ಸಿಡೀಸ್-ಎಎಂಜಿ ಜಿ63 ಕಾರಿ 4.0 ಲೀಟರ್ ಬೈಟರ್ಬೋ ವಿ8 ಎಂಜಿನ್ ಸಹಾಯದಿಂದ 585ಬಿಹೆಚ್‍ಪಿ ಮತ್ತು 850ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 9 ಸ್ಪೀಡ್ ಎಎಂಜಿ ಸ್ಪೀಡ್ ಶಿಫ್ತ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ಫುಲ್ ಮಾರ್ಕ್ಸ್ ಪಡೆದ ಮರ್ಸಿಡೀಸ್ ಜಿ ಕ್ಲಾಸ್ ಕಾರು...

ಕಂಫರ್ಟ್, ಸ್ಪೋರ್ಟ್ ಮತ್ತ್ ಸ್ಪೋರ್ಟ್+ ಎಂಬ ಮೂರು ವಿವಿಧ ರೈಡಿಂಗ್ ಮೋಡ್‍ಗಳನ್ನು ಪಡೆದುಕೊಂಡಿರುವ ಮರ್ಸಿಡೀಸ್-ಎಎಂಜಿ ಜಿ63 ಕಾರು, ಇದನ್ನು ಸೆಂಟ್ರಲ್ ಕಂಸೋಲ್‍ನಿಂದ ಕಂಟ್ರೋಲ್ ಮಾಡಬಹುದಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿನ ರೇಂಜ್ ರೋವರ್ ಸ್ಪೋರ್ಟ್ ಎಸ್‍ವಿಆರ್, ಪೋರ್ಷೆ ಕಯೆನ್ನೆ ಟರ್ಬೋ ಮತು ಬಿಎಮ್‍ಡಬ್ಲ್ಯೂ ಎಕ್ಸ್5ಎಂ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
2019 Mercedes G Class crash tested on video – Gets 5 star safety rating. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X