ಬಿಡುಗಡೆಯಾಯ್ತು ಆಡಿ ಎ6 ಟೀಸರ್ ವೀಡಿಯೊ

ಜರ್ಮನ್ ವಾಹನ ತಯಾರಕ ಕಂಪನಿಯಾದ ಆಡಿ ತನ್ನ ಐಷಾರಾಮಿ ಮತ್ತು ಸ್ಪೋರ್ಟಿ ಎ6 ಸೆಡಾನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೇ ತಿಂಗಳು 24 ರಂದು ಬಿಡುಗಡೆಯಾಗಲಿರುವ ಆಡಿ ಎ6 ಸೆಡಾನ್ ಹೊಸ ಟೀಸರ್ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಆಡಿ ಎ6 ಟೀಸರ್ ವೀಡಿಯೊ

ಟೀಸರ್ ವೀಡಿಯೊದಲ್ಲಿ ಆಡಿ ಎ6 ಸೆಡಾನ್ ಟೈಲ್ ಲ್ಯಾಂಪ್ ವಿನ್ಯಾಸದೊಂದಿದೆ ಡೈನಾಮಿಕ್ ಇಂಡಿಕೇಟರ್ ಅನ್ನು ಟೀಸರಲ್ಲಿ ಪ್ರಮುಖವಾಗಿ ಪ್ರದರ್ಶನ ಪಡಿಸಿದ್ದಾರೆ. ಭಾರತದಲ್ಲಿ ಆಡಿ ಎ6 ಬಿಡುಗಡೆಯು 5ನೇ ಜನರೇಷನ್ ಮಾದರಿಯು ನವೀಕರಿಸಿದ ತಂತ್ರಜ್ಞಾನದ ಜೊತೆಗೆ ಕಾರಿನ ಗಾತ್ರವನ್ನು ಹೆಚ್ಚಿಸಿದೆ.

ಬಿಡುಗಡೆಯಾಯ್ತು ಆಡಿ ಎ6 ಟೀಸರ್ ವೀಡಿಯೊ

ಹೊಸ ಜನರೇಷನ್ ಆಡಿ ಎ6 ಸೆಡಾನ್ 4,939 ಮಿ.ಮೀ ಉದ್ದ, 886 ಮಿ.ಮೀ ಅಗಲ ಮತ್ತು 1,457 ಮಿ.ಮೀ ಎತ್ತರವನ್ನು ಹೊಂದಿದೆ. ಹಿಂದಿನ ಜನರೇಷನ್‍ ಸೆಡಾನ್‍‍ಗೆ ಹೋಲಿಸಿದರೆ ಹೊಸ ಜನರೇಷನ್ ಎ6 ಸೆಡಾನ್ 7 ಮಿ.ಮೀ ಉದ್ದ, 12 ಮಿ.ಮೀ ಅಗಲ ಮತ್ತು 2 ಮಿ.ಮೀ ಎತ್ತರವು ಹೆಚ್ಚಿದೆ.

ಬಿಡುಗಡೆಯಾಯ್ತು ಆಡಿ ಎ6 ಟೀಸರ್ ವೀಡಿಯೊ

ಆಡಿ ಎ6 ಹೊಸ ಆಕರ್ಷಕ ಗ್ರಿಲ್ ಮತ್ತು ಆಡಿಯ ಸಿಗ್ನೆಚರ್ ಶೈಲಿಯ ನಾಲ್ಕು ರಿಂಡ್ ಬ್ಯಾಡ್ಜ್ ನೊಂದಿಗೆ ಆಡಿ ಎ6 ಆಕರ್ಷಕ ಲುಕ್ ಅನ್ನು ಹೊಂದಿದೆ. ಹೆಡ್‍‍ಲ್ಯಾಂಪ್‍‍ಗಳ ವಿನ್ಯಾಸವು ಆಡಿಯ ಹೆಚ್‍‍ಡಿ ಮ್ಯಾಟ್ರಿಕ್ಸ್ ವಿನ್ಯಾಸ ಮತ್ತು ಎಲ್‍ಇಡಿ ಹೆಡ್‍‍ಲೈಟ್‍‍ಗಳನ್ನು ಡೈನಾಮಿಕ್ ಇಂಡಿಕೇಟರ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಆಡಿ ಎ6 ಟೀಸರ್ ವೀಡಿಯೊ

ಹೆಡ್‌ಲ್ಯಾಂಪ್‌ಗಳು ಹೈ-ಬೀಮ್ ಅಸಿಸ್ಟೆಂಟ್ ವಿನ್ಯಾಸವನ್ನು ಸಹ ಹೊಂದಿವೆ. ಎ6 ಮುಂಭಾಗ ಮತ್ತು ಹಿಂಭಾಗದಲ್ಲಿ ಡೈನಾಮಿಕ್ ಸಿಗ್ನಿಲ್‍ಗಳೊಂದಿಗೆ ಹೊಸ 3 ಡಿ ಎಲ್‍ಇಡಿ ಟೈಲ್ ಲ್ಯಾಂಪ್ ವಿನ್ಯಾಸವು ಹೊಂದಿದೆ. ಆಡಿ ಎ6 ಸೆಡಾನ್ 18 ಇಂಚಿನ ಡ್ಯುಯಲ್ ಟೋನ್‍ ಅಲಾಯ್ ವ್ಹೀಲ್ ವಿನ್ಯಾಸವು ಹೊಂದಿರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ಬಿಡುಗಡೆಯಾಯ್ತು ಆಡಿ ಎ6 ಟೀಸರ್ ವೀಡಿಯೊ

ಸೆಡಾನ್‍‍ನ ಇಂಟಿರಿಯರ್‍‍ನಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಆಡಿಯ ವರ್ಚುವಲ್ ಕಾಕ್‍‍ಪಿಟ್ ವಿನ್ಯಾಸದೊಂದಿಗೆ 12.3 ಇಂಚಿನ ಇನ್ಸೂ ಟ್ರೋಮೆಂಟ್ ಕ್ಲಸ್ಟರ್‍ ಅನ್ನು ಹೊಂದಿದೆ. ಇದರೊಂದಿಗೆ ಆ್ಯಪಲ್ ಕಾರ್‍‍ಪ್ಲೆ ಮತ್ತು ಆಂಡ್ರಾಯ್ಡ್ ಆಟೋ ಸರ್ಪೋಟ್ ಆಗಿ 10.1 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‍‍ಪ್ಲೇ ಹೊಂದಿದೆ. ಕಾರಿನಲ್ಲಿ ಕ್ಲೈಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಆಡಿ ಎ6 ಟೀಸರ್ ವೀಡಿಯೊ

ಆಡಿ ಎ6 ಐಷಾರಾಮಿ ಸೆಡಾನ್ ಆಕರ್ಷಕ ಸೀಟ್‍‍ಗಳು, ಕ್ಯಾಬಿನ್‍‍ನಾದ್ಯಂತ ಆಂಬಿಯೆಂಟ್ ಮೋಡ್ ಲೈ‍ಟಿಂಗ್ ಮತ್ತು ಹೀಟ್ಡ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ. ಆಡಿ ಎ6 ಪ್ರೀಮಿಯಂ ಬ್ಯಾಂಗ್ ಮತ್ತು ಒಲುಫ್ಸೆನ್ 3 ಡಿ ಸೌಂಡ್ ಸಿಸ್ಟಂ ಅನ್ನು 15-ಚಾನೆಲ್ ಆಂಪ್ಲಿಫಯರ್ ಮತ್ತು 16 ಸ್ಪೀಕರ್‌ಗಳನ್ನು ಕ್ಯಾಬಿನ್‌ನಾದ್ಯಂತ ಇರಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆಡಿ ಎ6 ಸೆಡಾನ್‍‍ನಲ್ಲಿ ಸುರಕ್ಷತಗೆ ಹೆಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸುರಕ್ಷತೆಗಾಗಿ 360 ಡಿಗ್ರಿ ಕ್ಯಾಮೆರಾ ಮತ್ತು ಸೈಡ್ ಏ‍‍ರ್‍‍ಬ್ಯಾಗ್, ಎ‍‍ಬಿಎಸ್ (ಆಂಟಿ-ಲಾಕ್ ಬ್ರೇಕ್ ಸಿಸ್ಟಂ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಹೊಸ ಜನರೇಷನ್ ಆಡಿ ಎಸ್6 ಸೆಡಾನ್ ಫೀಚರ್ಸ್ ಗಳನ್ನು ನಿಯಂತ್ರಿಸಲು 'ಮೈ ಆಡಿ' ಅಪ್ಲಿಕೇಷನ್ ಅನ್ನು ಹೊಂದಿದೆ. ಈ ಅಪ್ಲಿಕೇಷನ್ ಅನ್ನು ನಿಮ್ಮ ಸ್ಮಾರ್ಟ್ ಪೋನ್‍‍ನಲ್ಲಿ ಜೋಡಣೆ ಮಾಡಬಹುದು.

ಬಿಡುಗಡೆಯಾಯ್ತು ಆಡಿ ಎ6 ಟೀಸರ್ ವೀಡಿಯೊ

ಹೊಸ ಜನರೇಷನ್ ಆಡಿ ಎ6 2.0 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು. ಈ ಎಂಜಿನ್ 245 ಬಿಎಚ್‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸೆಡಾನ್ ಕೇವಲ 6.1 ಸೆಕೆಂಡ್‍‍ಗಳಲ್ಲಿ ಪ್ರತಿಗಂಟೆಗೆ 0 ದಿಂದ 100 ವೇಗದಲ್ಲಿ ಸಾಗುತ್ತದೆ. ಎಂಜಿ‍ನ್‍ನೊಂದಿಗೆ 7 ಸ್ಪೀಡ್ ಎಸ್‍ ಟ್ರೋನಿಕ್ ಡ್ಯುಯಲ್ ಕ್ಲಚ್ ಗೇರ್‍‍ಬಾಕ್ಸ್ ಅನ್ನು ಹೊಂದಿದೆ. 2.0 ಪೆಟ್ರೋಲ್ ಎಂಜಿನ್ ಬಿಎಸ್-6 ಪ್ರೇರಿತ ಎಂಜಿನ್ ಹೊಂದಿರಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ಆಡಿ ಎ6 ಟೀಸರ್ ವೀಡಿಯೊ

ಆಡಿ ಎ6 ಪ್ರೀಮಿಯಂ ಸೆಡಾನ್ ಆಗಿದ್ದು ಗರಿಷ್ಠ ಕಾರ್ಯಕ್ಷಮತೆ ಹೊಂದಿದೆ ಮತ್ತು ಐಷಾರಾಮಿ ಸೆಡಾನ್ ಆಗಿದೆ. ಹೊಸ ಜನರೇಷನ್ ಆಡಿ ಎ6 ಸೆಡಾನ್ ಮರ್ಸಿಡಿಸ್ ಇ-ಕ್ಲಾಸ್ ಮತ್ತು ಬಿಎಂಡಬ್ಲ್ಯು 5-ಸೀರಿಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಆಡಿ audi
English summary
Audi A6 Teaser Video Released Ahead Of India Launch On October 24th - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X