Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಹುಕೋಟಿ ಬೆಲೆಯ ಲಗ್ಷುರಿ ಎಸ್‍ಯುವಿ ಖರೀದಿಸಿದ ಸ್ಟೈಲಿಶ್ ಸ್ಟಾರ್
ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಎಂದೇ ಕರೆಯಲಾಗುವ ಅಲ್ಲು ಅರ್ಜುನ್ ಬಹು ಕೋಟಿ ಬೆಲೆ ಬಾಳುವ ರೇಂಜ್ ರೋವರ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಈ ಬಗ್ಗೆ ಅಲ್ಲು ಅರ್ಜುನ್ ತಮ್ಮ ಟ್ವಿಟರ್ ಹಾಗೂ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಆದರೆ ಯಾವ ಮಾದರಿಯನ್ನು ಖರೀದಿಸಿದ್ದಾರೆ ಎಂದು ಹೇಳಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯನ್ನು ಹೊಂದಿರುವ ಲ್ಯಾಂಡ್ ರೋವರ್ ಕಂಪನಿಯ ರೇಂಜ್ ರೋವರ್ ಎಸ್‍ಯುವಿಯನ್ನು ಹಲವು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಸ್‍ಯುವಿಯು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍ಗಳಲ್ಲಿ ಲಭ್ಯವಿದೆ. ಇವುಗಳ ಪೈಕಿ ಜನಪ್ರಿಯವಾದುದೆಂದರೆ 3 ಲೀಟರಿನ, ವಿ6 ಟರ್ಬೊ ಡೀಸೆಲ್ ಎಂಜಿನ್.

ರೇಂಜ್ ರೋವರ್ ಎಸ್‍ಯುವಿಯಲ್ಲಿ 5 ಲೀಟರಿನ ವಿ8 ಸೂಪರ್‍ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಹ ಲಭ್ಯವಿದೆ. ರೇಂಜ್ ರೋವರ್ ಸರಣಿಯ ಮೂಲ ಮಾದರಿಯ ಕಾರುಗಳ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.2.14 ಕೋಟಿಗಳಿಂದ ಶುರುವಾಗುತ್ತದೆ.

ಲಾಂಗ್ ವ್ಹೀಲ್ ಬೇಸ್ ಹೊಂದಿರುವ ಟಾಪ್ ಎಂಡ್ ಮಾದರಿಯ ಆಟೋ ಬಯೊಗ್ರಾಫಿ ಮಾದರಿಯ ಬೆಲೆಯು ರೂ.4.64 ಕೋಟಿಗಳಿಂದ ಶುರುವಾಗುತ್ತದೆ. ಬಹುತೇಕ ಚಿತ್ರ ತಾರೆಯರು ಲಾಂಗ್ ವ್ಹೀಲ್ ಬೇಸ್ ಮಾದರಿಯನ್ನು ಖರೀದಿಸುತ್ತಾರೆ.

ಅಲ್ಲು ಅರ್ಜುನ್‍ರವರ ಬಳಿಯಿರುವ ಕಾರುಗಳ ಕಲೆಕ್ಷನ್ ಅನ್ನು ನೋಡಿದರೆ, ಅವರು ಟಾಪ್ ಎಂಡ್ ಮಾದರಿಯನ್ನು ಖರೀದಿಸಿರುವ ಸಾಧ್ಯತೆಗಳಿವೆ. ಇನ್ನು ಭಾರತದ ಶ್ರೀಮಂತರು ಹಾಗೂ ಸೆಲೆಬ್ರಿಟಿಗಳು ಹೆಚ್ಚಾಗಿ ಇಷ್ಟ ಪಡುವ ಈ ಲಗ್ಷುರಿ ಎಸ್‌ಯುವಿಯಲ್ಲಿ ನೀಡಲಾಗುವ ವಿವಿಧ ಎಂಜಿನ್ ಹಾಗೂ ಗೇರ್‌ಬಾಕ್ಸ್ ಆಯ್ಕೆಗಳನ್ನು ನೋಡುವುದಾದರೆ, ರೇಂಜ್ ರೋವರ್ ಸರಣಿಯು 3 ಲೀಟರಿನ ವಿ6 ಟರ್ಬೊ ಡೀಸೆಲ್ ಎಂಜಿನ್‌ನಿಂದ ಶುರುವಾಗುತ್ತದೆ.

ಈ ಎಂಜಿನ್ 258 ಬಿಎಚ್‌ಪಿ ಪವರ್ ಹಾಗೂ 600 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಟಾಪ್ ಎಂಡ್ ಮಾದರಿಗಳಲ್ಲಿ 4.4 ಲೀಟರಿನ ವಿ8 ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಡೀಸೆಲ್ ಎಂಜಿನ್ 440 ಬಿಎಚ್‌ಪಿ ಪವರ್ ಹಾಗೂ 700 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಇನ್ನು ಈ ಎಸ್‍ಯುವಿಯಲ್ಲಿರುವ ಪೆಟ್ರೋಲ್ ಎಂಜಿನ್ ಬಗ್ಗೆ ಹೇಳುವುದಾದರೆ, ಎಂಟ್ರಿ ಲೆವೆಲ್‍ನ ಪೆಟ್ರೋಲ್ ಎಂಜಿನ್ 3 ಲೀಟರಿನ ವಿ6 ಸೂಪರ್‌ಚಾರ್ಜ್ಡ್ ಯುನಿಟ್ ಆಗಿದೆ. ಈ ಎಂಜಿನ್ 335 ಬಿಎಚ್‌ಪಿ ಪವರ್ ಹಾಗೂ 450 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಹೆಚ್ಚಿನ ಪರ್ಫಾಮೆನ್ಸ್ ಬಯಸುವವರಿಗಾಗಿ, 5 ಲೀಟರಿನ ವಿ8 ಸೂಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆ ಇದೆ. ಈ ಎಂಜಿನ್ 543 ಬಿಎಚ್‌ಪಿ ಪವರ್ ಹಾಗೂ 625 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲ್ಲಾ ಎಂಜಿನ್‌ಗಳಲ್ಲಿ 8 ಸ್ಪೀಡಿನ ಝಡ್‌ಎಫ್ ಟಾರ್ಕ್ ಕನ್ವರ್ಟರ್‍ನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಈ ಎಸ್‍ಯುವಿಯಲ್ಲಿರುವ ಟೆರೈನ್ ಮೋಡ್‌ನ ಆಲ್ ವ್ಹೀಲ್ ಡ್ರೈವ್ ಸಿಸ್ಟಂ, ಕಠಿಣ ರಸ್ತೆ ಹಾಗೂ ಆಫ್ ರೋಡ್ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ರೇಂಜ್ ರೋವರ್‌ನಲ್ಲಿರುವ ಏರ್ ಸಸ್ಪೆಂಷನ್ ಭೂಪ್ರದೇಶಗಳಲ್ಲಿ ಸವಾರಿ ಮಾಡುವಾಗ ಗುಣಮಟ್ಟದ ಕಾರ್ಪೆಟ್‍ನಂತಹ ಅನುಭವವನ್ನು ನೀಡುತ್ತದೆ.
MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಈ 5 ಆಸನಗಳ ಎಸ್‌ಯುವಿಯು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿರುವುದಕ್ಕೆ ಇದೂ ಸಹ ಒಂದು ಕಾರಣವಾಗಿದೆ. ಏಕೆಂದರೆ ಏರ್ ಸಸ್ಪೆಂಷನ್ ನೀಡುವ ಆರಾಮದಾಯಕ ಅನುಭವವನ್ನು ಸೆಲೆಬ್ರಿಟಿಗಳು ಹೆಚ್ಚು ಇಷ್ಟ ಪಡುತ್ತಾರೆ.

ದೇಶಿಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್‍ನ ರೆಗ್ಯುಲರ್ ವ್ಹೀಲ್‌ಬೇಸ್ ಹಾಗೂ ಲಾಂಗ್ ವ್ಹೀಲ್‌ಬೇಸ್ ಮಾದರಿಗಳು ಮಾರಾಟವಾಗುತ್ತವೆ. ಭಾರತದಲ್ಲಿನ ಬಹುತೇಕ ಮಂದಿ ಹಿಂಬದಿಯಲ್ಲಿರುವ ಪ್ರಯಾಣಿಕರಿಗೆ ಹೆಚ್ಚಿನ ಸ್ಪೇಸ್ ನೀಡುವ ಕಾರಣ ಲಾಂಗ್ ವ್ಹೀಲ್‍ಬೇಸ್ ಮಾದರಿಯನ್ನು ಖರೀದಿಸಲು ಬಯಸುತ್ತಾರೆ.

ರೇಂಜ್ ರೋವರ್ ಎಸ್‍ಯುವಿಗಳು ಆರಾಮದಾಯಕ ಅನುಭವವನ್ನು ನೀಡುತ್ತವೆ. ಈ ಎಸ್‌ಯುವಿಯಲ್ಲಿ ಲೆದರ್ ಕ್ಲಾಡ್ ಸೀಟ್‍ಗಳನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿ ವಿಮಾನಗಳಲ್ಲಿರುವಂತಹ ಟ್ವಿನ್ ಸೀಟುಗಳನ್ನು ಅಳವಡಿಸಲಾಗಿದೆ.

ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ, ರಣಬೀರ್ ಕಪೂರ್, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಆಲಿಯಾ ಭಟ್ ಹಾಗೂ ಶಾರುಖ್ ಖಾನ್‍ರವರಂತಹ ಸೆಲೆಬ್ರಿಟಿಗಳು ಈ ಎಸ್‍ಯುವಿಯನ್ನು ಹೊಂದಿದ್ದಾರೆ. ಸೆಲೆಬ್ರಿಟಿಗಳು ಈಗ ಆಡಿ ಕ್ಯೂ 7 ಎಸ್‌ಯುವಿಯ ಬದಲಿಗೆ ರೇಂಜ್ ರೋವರ್ ಎಸ್‍ಯುವಿಯನ್ನು ಖರೀದಿಸುತ್ತಿದ್ದಾರೆ.