ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

ನಮ್ಮ ದೇಶದಲ್ಲಿಯಾಗಲ್ಲಿ ಅಥವಾ ಬೇರೆ ದೇಶಗಳಲ್ಲಾಗಲಿ ತಪ್ಪೆಂದು ತಿಳಿದಿದ್ದರೂ ಸಹ ಅಂತಹ ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ. ಅಂತವುಗಳಲ್ಲಿ ಕುಡಿದು ವಾಹನ ಚಾಲನೆ ಮಾಡುವುದು ಕೂಡಾ ಒಂದು. ಇದನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪೊಲೀಸರು ಮತ್ತು ಸರ್ಕಾರವು ಹಲವಾರು ರೂಲ್ಸ್ ಗಳನ್ನು ತಂದರೂ ಸಹ ಅಧಿಕವಾಗುತ್ತಿದೆಯೆ ಹೊರತು ಕಡಿಮೆಯಾಗುತ್ತಿಲ್ಲ.

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

ದೇಶದಲ್ಲಿ ಪ್ರತಿದಿನ ನೂರಾರು ರಸ್ತೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇದರಲ್ಲಿ ಶೇ.40ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ಡ್ರಂಕ್ ಅಂಡ್ ಡ್ರೈವ್‌ನಿಂದಲೇ ಸಂಭವಿಸುತ್ತಿದ್ದು, ಈ ಹಿನ್ನೆಲೆ ಕುಡಿದು ವಾಹನ ಚಾಲನೆ ಮಾಡುವರರ ವಿರುದ್ಧ ಕೇಂದ್ರ ಸಾರಿಗೆ ಇಲಾಖೆಯು ಹಲವಾರು ಕಠಿಣ ಕಾನೂನು ಜಾರಿ ಮಾಡಲು ಮುಂದಾಗುತ್ತಿದೆ.

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

ಕಳೆದ ಎರಡು ವರ್ಷಗಳಿಂದ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ಹೆಚ್ಚುತ್ತಿದ್ದು, ಕುಡಿದು ವಾಹನ ಮಾಡಿದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ತಪ್ಪು ಮಾಡಿದವರಿಗಿಂತ ಅಮಾಯಕರೇ ಹೆಚ್ಚು ಬಲಿಯಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಸದ್ಯ ಹೈದೆರಾಬಾದ್ ನಗರದ ಪೊಲೀಸರು ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಿದ್ದಾರೆ.

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

ಹೈದೆರಾ‍‍ಬಾದ್ ಟ್ರಾಫಿಕ್ ಪೊಲೀಸರು ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಿಕೊಂಡ ಉದ್ಯೋಗಿಗಳ ಕಂಪೆನಿಗಳಿಗೆ ಪತ್ರಗಳನ್ನು ಕಳುಹಿಸುವ ಕಾರ್ಯವನ್ನು ಶುರು ಮಾಡಿಕೊಂಡಿದೆ. ಪೊಲೀಸರು ಕಳುಹಿಸುವ ಪತ್ರದಲ್ಲಿ, ನಿಮ್ಮ ಆಫೀಸಿನ ಉದ್ಯೋಗಿಯು ಹೀಗೆ ರಸ್ತೆಯಲ್ಲಿ ಕುಡಿದು ವಾಹನ ಚಾಲನೆ ಮಾದುವ ವೇಳೆ ಸಿಕ್ಕಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿರುತ್ತದೆ.

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

ಹೌದು, ಈಗಾಗಲೆ ಹಲವರು ಈ ರೀತಿಯ ನೊಟೀಸ್‍‍ಗಳನ್ನು ಸ್ವೀಕರಿಸಲಾಗಿದ್ದು, ಇದನ್ನು ಕಂಪೆನಿಯ ಹ್ಯೂಮನ್ ರೊಸೌರ್ಸ್ (ಹೆಚ್ಆರ್) ವಿಭಾಗಕ್ಕೆ ನೇರವಾಗಿ ರವಾನಿಸಲಾಗುತ್ತದೆ. ಆ ಪತ್ರದಲ್ಲಿ ಉದ್ಯೋಗಿಯು ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಿಕೊಂಡ ಸ್ಥಳ ಮತ್ತು ಸಮಯವನ್ನು ಸಹ ಉಲ್ಲೇಖಿಸಲಾಗಿರುತ್ತದೆ.

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

ಈ ಯೋಜನೆಯ ಕುರಿತಾಗಿ ಸಿಕಿಂದ್ರಾಬಾದ್ ಟ್ರಾಫಿಕ್ ಡಿಸಿಪಿರವರು. ನೌಕರನನ್ನು ತೊಂದರೆ ಮಾಡುವುದು ಅಥವಾ ಅವರ ವಿರುದ್ಧ ಈ ರೀತಿಯ ಕ್ರಮ ತೆಗೆದುಕೊಳ್ಳಲು ನಮ್ಮ ಉದ್ದೇಶವಲ್ಲ, ಆದರೆ ಉದ್ಯೋಗಿಗಳು ತಾವು ವೀಕೆಂಡ್ ಅಥವಾ ಮಧ್ಯ ಸೇವಿಸಿ ವಾಹನ ಚಾಲನೆ ಮಾಡುವುದು ತಪ್ಪು ಎಂದು ಅರಿವು ಮೂಡಿಸಲು ಹೀಗೆ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

ವಿದ್ಯಾವಂತರಾಗಿದ್ದು ಕೂಡಾ ಕುಡಿದು ವಾಹನವನ್ನು ಚಲಯಿಸಿದರೆ ಆಡೂ ಮೂರ್ಖತನವೇ ಎನ್ನಬಹುದು. ನಾವು ಮತ್ತೊಬ್ಬರಿಗೆ ಟ್ರಾಫಿಕ್ ನಿಯಮಗಳನ್ನು ಹೇಳಿಕೊಡಬೇಕಾದಿಯೆ ಹೊರತು ನಾವು ಬೇರೊಬ್ಬರಿಂದ ಹೇಳಿಸಿಕೊಳ್ಳುವುದು ಸರಿಯಲ್ಲ. ಹೀಗಾಗಿ ಕುಡಿದು ವಾಹನ ಚಾಲನೆ ಮಾಡಿ ನಿಮ್ಮ ಆಫೀಸಿಗೆ ನೋಟಿಸ್ ಕಳುಹಿಸುವ ಸಂಧರ್ಭ ಬಾರದಿರಲಿ ಮತ್ತು ಆ ನೋಟಿಸ್‍‍ನಿಂದ ನಿಮ್ಮ ಕೆಲಸವು ಹೋಗದಿರಲಿ ಎಂಬುದು ನಮ್ಮ ಭಾವನೆ.

READ MORE: ಪಾರ್ಟಿ ಮಾಡಕ್ಕೆ ಗೋವಾನಲ್ಲಿ ಹಣ ಸಾಕಾಗಿಲ್ಲಾಂದ್ರೆ ಹೀಗೆ ಮಾಡಿ ಹಣ ಸಂಪಾದಿಸಿ...

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

ಈಗಾಗಲೆ ನೋಟಿಸ್ ಪಡೆದ ಉದ್ಯೋಗಿಗಳು

ಇದು ಕೇವಲ ಮಾರುಗಾರಿಕೆಯ ಕೆಲಸವಲ್ಲ. ಏಕೆಂದರೆ ಈಗಾಗಲೆ ಈ ಯೋಜನೆಯನ್ನು ಹೈದೆರಾಬಾದ್‍ ನಗರದಲ್ಲಿ ಶುರು ಮಾಡಲಾಗಿದ್ದು, ಮೊದಲನೆಯೆ ನೋಟಿಸ್ ಅನ್ನು ಹೈದೆರಾಬಾದ್‍‍ನಲ್ಲಿರುವ ಗಚ್ಚಿಬೌಲಿಯಲ್ಲಿನ ತಂತ್ರಜ್ಞಾನ ಸಂಸ್ಥೆಗೆ ಕಳುಹಿಸಲಾಗಿದ್ದು, ಮದ್ಯ ಸೇವಿಸಿ ವಾಹನ ಸವಾರಿ ಮಾಡುತ್ತಿದ್ದ ಉದ್ಯೋಗಿಗಳನ್ನು 4 ದಿನದ ವರೆಗು ಜೈಲಿನಲ್ಲಿ ಇರಿಸಲಾಗಿದೆ.

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

2018ರ ವರ್ಷದಲ್ಲಿ ಈ ವರೆಗು ಮಧ್ಯಸೇವಿಸಿ ವಾಹನ ಚಲಾಯಿಸುತ್ತಿರುವವರು ನಗರ ಬೀದಿಗಳಲ್ಲಿ ಗರಿಷ್ಠ ರಕ್ತವನ್ನು ಚೆಲ್ಲುತ್ತಿದ್ದಾರೆ ಎಂದು ತೋರುತ್ತದೆ. ಟ್ರಾಫಿಕ್ ಪೋಲೀಸರ ಅಂಕಿ ಅಂಶಗಳ ಪ್ರಕಾರ, 2017 ರಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದರೆ ಇನ್ನು 2018ರಲ್ಲಿ ಈ ಸಂಖ್ಯೆಯು 17ಕ್ಕೆ ಏರಿದೆ.

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

2018ರ ಜನವರಿ ಇಂದ ಸೆಪ್ಟೆಂಬರ್ ಅವಧಿಯಲ್ಲಿ ಬೆಂಗಳೂರು ನಗರದ ಟ್ರಾಫಿಕ್ ಪೊಲೀಸರು ಸುಮಾರು 33,234 ಮಂದಿಯನ್ನು ಡ್ರಿಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ದಾಖಲು ಮಾಡಿದ್ದಾರೆ. 2017ರ ವರ್ಷದಲ್ಲಿ 73,741 ಮಂದಿಯನ್ನು ದಾಖಲು ಮಾಡಲಾಗಿದೆ. ಅಂದರೆ ಕಳೆದ ವರ್ಷಕ್ಕಿಂತಾ ಈ ವರ್ಷ ಕುಡಿದು ವಾಹನ ಚಲಾಯಿಸುವವರ ಸಂಖ್ಯೆಯು ಕೊಂಚ ಕಡಿಮೆಯಾಗಿದೆ ಎಂದು ಹೇಳಬಹುದು.

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

ದಯವಿಟ್ಟು ಕುಡಿದು ವಾಹನ ಚಾಲನೆ ಮಾಡಬೇಡಿ

ಇಡೀ ಜಗತ್ತಿನಲ್ಲಿ ನಡೆಯುವ ಹೆಚ್ಚಿನ ವಾಹನ ಅಪಘಾತಗಳ ಹಿಂದಿರುವ ಪ್ರಮುಖ ಶಕ್ತಿ ಆಲ್ಕೋಹಾಲ್. ನಿಶೆಯಲ್ಲಿ ವಾಹನ ಚಲಾಯಿಸಿ ಸಾವಿರಾರು ಜನರು ರಸ್ತೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

ಕುಡಿದಿದ್ದರೆ ಖಂಡಿತವಾಗಿಯೂ ಸ್ಟಿಯರಿಂಗ್ ಮುಟ್ಟಬೇಡಿ. ಬಾರ್ ಅಥವಾ ಪಬ್ ಗೆ ಹೋಗಿದ್ದರೆ ಕುಡಿಯದ ವ್ಯಕ್ತಿಯೊಬ್ಬ ನಿಮ್ಮ ಜೊತೆಗಿರಲಿ. ಆತ ನಿಮ್ಮನ್ನು ಮನೆಯವರೆಗೆ ಸುರಕ್ಷಿತವಾಗಿ ತಲುಪಿಸಬಲ್ಲ. ಅದು ಸಾಧ್ಯವಾಗದಿದ್ದರೆ ಕಾರನ್ನು ಅಲ್ಲೇ ಬಿಟ್ಟು ಟ್ಯಾಕ್ಸಿ ಹತ್ತಿ.

MOST READ: ಹೈವೇನಲ್ಲಿ ಅಪ್ಪಿತಪ್ಪಿಯೂ ಎಡದಿಂದ ಓವರ್ ಟೇಕ್ ಮಾಡಲೇಬೇಡಿ. ಯಾಕೆ ಗೊತ್ತಾ.?

ಡ್ರಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಾಕೊಂಡ್ರೆ ನಿಮ್ಮ ಆಫೀಸಿಗೆ ಹೋಗುತ್ತೆ ನೋಟಿಸ್..!

ಇನ್ನು ಹೈದೆರಾಬಾದಿನಲ್ಲಿ ಶುರುವಾದ ಈ ಯೋಜನೆಯ ಹಾಗೆ ನಮ್ಮ ಬೆಂಗಳೂರಿನಲ್ಲಿಯು ಶುರುವಾಗಬೇಕು ಎಂಬುದು ಕೆಲವರ ಅಭಿಪ್ರಾಯ, ಹಾಗದರೆ ಈ ಕುರಿತಾಗಿ ನಿಮ್ಮ ಅಭಿಪ್ರಾಯವನ್ನು ಸಹ ಕೇಳಗಿರುವ ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ...

Source: CarToq

Most Read Articles

Kannada
English summary
Drunk And Drive Notice Will Be Send To Your Office. Read In Kannada
Story first published: Tuesday, January 22, 2019, 11:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X