ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಡಿಸೆಂಬರ್ 1ರಿಂದ ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಜಾರಿಗೆ ತರಲು ಮುಂದಾಗಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಿಸೆಂಬರ್ 15ಕ್ಕೆ ಮುಂದೂಡಿಕೆ ಮಾಡಿದ್ದು, ಇದುವರೆಗೂ ಫಾಸ್ಟ್‌ಟ್ಯಾಗ್ ಹೊಂದಿರದ ವಾಹನ ಸವಾರರಿಗೆ ನಿಗದಿತ ಅವಧಿಯಲ್ಲಿ ಹೊಸ ಸೌಲಭ್ಯ ಅಳವಡಿಕೆ ಮತ್ತೊಂದು ಅವಕಾಶ ನೀಡಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಹೊಸ ಶುಲ್ಕ ಪಾವತಿ ವಿಧಾನವನ್ನು ಬಳಸದ ವಾಹನ ಮಾಲೀಕರು ದುಪ್ಪಟ್ಟು ಶುಲ್ಕ ಪಾವತಿಸಬೇಕಿದ್ದು, ಈ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ 15 ದಿನಗಳ ಕಾಲಾವಕಾಶ ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಶುಲ್ಕ ಪಾವತಿ ವಿಧಾನವನ್ನು ಬಳಸುವಂತೆ ಮನವಿ ಮಾಡಿದೆ. ಇದುವರೆಗೆ ಸುಮಾರು 80 ಲಕ್ಷ ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಅಳವಡಿಕೆ ಮಾಡಿಕೊಂಡಿದ್ದು, ಇನ್ನು ಶೇ. 60ರಷ್ಟು ವಾಹನ ಮಾಲೀಕರು ಹೊಸ ಶುಲ್ಕ ಪಾವತಿ ವಿಧಾನವನ್ನ ಅಳವಡಿಸಿಕೊಳ್ಳಬೇಕಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಫಾಸ್ಟ್‌ಟ್ಯಾಗ್ ಕಡ್ಡಾಯದ ನಂತರ ಹೊಸ ಶುಲ್ಕ ಪಾವತಿ ವಿಧಾನವನ್ನು ಬಳಸದ ವಾಹನ ಮಾಲೀಕರಿಗೆ ಶುಲ್ಕ ಹೆಚ್ಚಳ ಹೊರೆಯಾಗಲಿದ್ದು, ಈ ಕೂಡಲೇ ಅಗತ್ಯ ದಾಖಲೆಗಳೊಂದಿಗೆ ಉಚಿತವಾಗಿಯೇ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಹೊಂದಬಹುದಾಗಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಫಾಸ್ಟ್‌ಟ್ಯಾಗ್ ಬಳಕೆಯಿಂದ ವಾಹನ ಮಾಲೀಕರು ಗಂಟೆಗಟ್ಟಲೇ ಕ್ಯೂ ನಿಂತು ಟೋಲ್‌ ಶುಲ್ಕ ಕಟ್ಟುವ ತಾಪತ್ರಯ ಕಡಿಮೆಯಾಗುವುದಲ್ಲದೇ ಇದರಿಂದ ಹಲವು ಪ್ರಯೋಜನಗಳಿದ್ದು, ಅತಿ ಸುಲಭವಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಫಾಸ್ಟ್‌ಟ್ಯಾಗ್ ಎಂದರೇನು?

ಭಾರತದ ಟೋಲ್‍ಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವಾಹನಗಳ ಟೋಲ್ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಈ ವ್ಯವಸ್ಥೆಯನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಪರಿಚಯಿಸಲಾಯಿತು. ಇದನ್ನು ಭಾರತದೆಲ್ಲೆಡೆ ಜಾರಿಗೆ ತರಲಾಗುತ್ತಿದ್ದು, ಡಿಸೆಂಬರ್ 15ರಿಂದ ಕಡ್ಡಾಯಗೊಳಿಸಲಾಗಿದೆ. ಈ ಸೌಲಭ್ಯ ಹೊಂದಿರುವ ವಾಹನಗಳು ಯಾವುದೇ ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ ಗಂಟೆಗಟ್ಟಲೇ ಟೋಲ್‍‍ಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ದೇಶದಲ್ಲಿರುವ ಅನೇಕ ಬ್ಯಾಂಕುಗಳು ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್‍ ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿವೆ.

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ, ಎಸ್‌ಬಿಐ, ಹೆಚ್‌ಡಿಎಫ್‌ಸಿ, ಸಿಂಡಿಕೇಟ್, ಪೇಟಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳಲ್ಲಿ ಫಾಸ್ಟ್‌ಟ್ಯಾಗ್‍‍‍ಗೆ ಅರ್ಜಿ ಸಲ್ಲಿಸಬಹುದು. ನಂತರ ಫಾಸ್ಟ್‌ಟ್ಯಾಗ್‍ ಅನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸಲಾಗುತ್ತದೆ.

MOST READ: ದಾಖಲೆಗಳಿಲ್ಲದೇ ಶೋಕಿ ಮಾಡಲು ಹೋದ ಐಷಾರಾಮಿ ಕಾರು ಮಾಲೀಕನಿಗೆ ಬಿತ್ತು ಭಾರೀ ದಂಡ..!

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಇದರೊಂದಿಗೆ, ಫಾಸ್ಟ್‌ಟ್ಯಾಗ್‍ ಅನ್ನು ಟೋಲ್ ಪ್ಲಾಜಾ ಅಥವಾ ಅಧಿಕೃತ ಏಜೆನ್ಸಿ ಮೂಲಕವೂ ಖರೀದಿಸಬಹುದು. ಗ್ರಾಹಕರು ಆನ್‌ಲೈನ್ ಫಾರಂ ಅನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗುತ್ತದೆ.

MOST READ: ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಫಾಸ್ಟ್‌ಟ್ಯಾಗ್‍‍ಗಳನ್ನು ಎಲ್ಲಿ ಬಳಸಬೇಕು?

ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಸೇರಿದಂತೆ ದೇಶಾದ್ಯಂತವಿರುವ 560ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‍‍‍ಗಳನ್ನು ಬಳಸಬಹುದು. ಡಿಸೆಂಬರ್ 15ರಿಂದ ಬಸ್, ಟ್ರಕ್, ಟ್ರಾಕ್ಟರ್ ಹಾಗೂ ಇತರ ಕಮರ್ಶಿಯಲ್ ವಾಹನಗಳು ಸೇರಿದಂತೆ ಎಲ್ಲಾ ನಾಲ್ಕು ಚಕ್ರಗಳಿಗೆ ಫಾಸ್ಟ್‌ಟ್ಯಾಗ್‍ ಅನ್ನು ಕಡ್ಡಾಯವಾಗಿರುತ್ತದೆ.

MOST READ: ಕಲ್ಯಾಣ್ ಜ್ಯುವೆಲ್ಲರ್ಸ್ ಮಾಲೀಕನ ಬಳಿಯಿರುವ ಐಷಾರಾಮಿ ಕಾರು ಕಲೆಕ್ಷನ್ ಹೇಗಿದೆ ಗೊತ್ತಾ?

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಫಾಸ್ಟ್‌ಟ್ಯಾಗ್‍‍‍ಗಳನ್ನು ರೀಚಾರ್ಜ್ ಮಾಡುವುದು ಹೇಗೆ?

ಚೆಕ್, ಆನ್‌ಲೈನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆರ್‌ಟಿಜಿಎಸ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕವೂ ಫಾಸ್ಟ್‌ಟ್ಯಾಗ್‍‍‍ಗಳನ್ನು ರೀಚಾರ್ಜ್ ಮಾಡಬಹುದು.

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಗ್ರಾಹಕರು ರೂ.100ನಿಂದ ರೂ.1 ಲಕ್ಷದವರೆಗೆ ರೀಚಾರ್ಜ್ ಮಾಡಬಹುದು. ಗ್ರಾಹಕರು ಸುಲಭವಾಗಿ ರೀಚಾರ್ಜ್ ಮಾಡಲು ಬೇರೆ ಬೇರೆ ಏಜೆನ್ಸಿಗಳು ಬೇರೆ ಬೇರೆ ವಿಧಾನಗಳನ್ನು ಹಾಗೂ ಆಯ್ಕೆಗಳನ್ನು ನೀಡಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ಫಾಸ್ಟ್‌ಟ್ಯಾಗ್‍‍‍ಗಳನ್ನು ರೀಚಾರ್ಜ್ ಮಾಡಬಹುದು.

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಫಾಸ್ಟ್‌ಟ್ಯಾಗ್‍‍‍ನಿಂದಾಗುವ ಪ್ರಯೋಜನಗಳು

*ಸುಲಭ ಪಾವತಿ - ಟೋಲ್ ಪ್ಲಾಜಾವನ್ನು ದಾಟುವಾಗ ನೀವು ಹಣವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ.

*ಫಾಸ್ಟ್‌ಟ್ಯಾಗ್‍ ವಾಹನಗಳಲ್ಲಿದ್ದರೆ ವಾಹನಗಳನ್ನು ನಿಲ್ಲಿಸುವ ಅಗತ್ಯವಿಲ್ಲ.

*ಆನ್‌ಲೈನ್ ರೀಚಾರ್ಜ್ - ಡೆಬಿಟ್ / ಕ್ರೆಡಿಟ್ ಮತ್ತು ನೆಟ್ ಬ್ಯಾಂಕಿಂಗ್ ಬಳಸಿ ಫಾಸ್ಟ್‌ಟ್ಯಾಗ್‍ ಗ್ರಾಹಕರು ರೀಚಾರ್ಜ್ ಮಾಡಬಹುದು.

*ಎಲ್ಲಾ ಟೋಲ್ ವಹಿವಾಟುಗಳಿಗೆ ಎಸ್‍ಎಂಎಸ್ ಸಂದೇಶ ಬರಲಿದೆ.

*ಟೋಲ್ ಪಾವತಿಯ ಮೇಲೆ ಗ್ರಾಹಕರು 10%ನಷ್ಟು ರಿಯಾಯಿತಿ ಪಡೆಯಲಿದ್ದಾರೆ.

*ವೆಬ್ ಪೋರ್ಟಲ್ ಸೌಲಭ್ಯವು ವಿಶೇಷವಾಗಿ ಫಾಸ್ಟ್‌ಟ್ಯಾಗ್‍‍‍ಗಳಿವೆ ಲಭ್ಯವಿರಲಿದೆ.

*ಫಾಸ್ಟ್‌ಟ್ಯಾಗ್‍‍‍ನಿಂದಾಗಿ ಟೋಲ್‌ನಲ್ಲಿ ದಟ್ಟಣೆ ಕಡಿಮೆಯಾಗಲಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಫಾಸ್ಟ್‌ಟ್ಯಾಗ್ ಕಡ್ಡಾಯ ಮತ್ತೆ ಮುಂದೂಡಿಕೆ..!

ಫಾಸ್ಟ್‌ಟ್ಯಾಗ್‍ ಕಸ್ಟಮರ್ ಕೇರ್ ನಂಬರ್ ಹಾಗೂ ಹೆಲ್ಪ್ ಲೈನ್ ನಂಬರ್

ಈಗಾಗಲೇ ಹೇಳಿದಂತೆ, ಫಾಸ್ಟ್‌ಟ್ಯಾಗ್‍‍‍ಗಳನ್ನು ಹಲವು ಬ್ಯಾಂಕುಗಳ ಮೂಲಕ ಖರೀದಿಸಬಹುದು. ಫಾಸ್ಟ್‌ಟ್ಯಾಗ್‍ ಸಂಬಂಧಿತ ಸಮಸ್ಯೆಗಳಿಗಾಗಿ ಈ ಕೆಳಗಿನ ಟೋಲ್ ಫ್ರೀ ಸಂಖ್ಯೆಗಳನ್ನು ಸಂಪರ್ಕಿಸಬಹುದು :

1. ಐಸಿಐಸಿಐ ಬ್ಯಾಂಕ್: 1860 210 1014

2. ಎಚ್‌ಡಿಎಫ್‌ಸಿ ಬ್ಯಾಂಕ್: 1800 120 1243

3. ಆಕ್ಸಿಸ್ ಬ್ಯಾಂಕ್: 1800 103 5577

4. ಎಸ್‌ಬಿಐ ಬ್ಯಾಂಕ್: 1800 110 018

5. ಸಿಂಡಿಕೇಟ್ ಬ್ಯಾಂಕ್: 1800 425 0585

Most Read Articles

Kannada
English summary
Government extends deadline for mandatory FASTags to December 15. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X