ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಭಾರತದ ರಸ್ತೆಗಳು ಬಹುತೇಕ ಹದಗೆಟ್ಟಿರುತ್ತವೆ. ಈ ಕಾರಣಕ್ಕಾಗಿ ಭಾರತದ ಗ್ರಾಹಕರು ಕಾರುಗಳನ್ನು ಖರೀದಿಸುವ ಮುನ್ನ ಭಾರತದ ರಸ್ತೆಗಳಿಗೆ ಸರಿಹೊಂದುವಂತಹ ಕಾರುಗಳಿಗೆ ಆದ್ಯತೆ ನೀಡುತ್ತಾರೆ. ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುವಾಗ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗುತ್ತದೆ.

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿರುವ ಕಾರುಗಳು ಹೆಚ್ಚು ಮಾರಾಟವಾಗುತ್ತಿವೆ. ಹೆಚ್ಚು ಪರ್ಫಾಮೆನ್ಸ್ ಹಾಗೂ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಕಾರಣಕ್ಕೆ ಗ್ರಾಹಕರೂ ಸಹ ಎಸ್‍‍ಯುವಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಹದಗೆಟ್ಟ ಭಾರತದ ರಸ್ತೆಗಳೂ ಸಹ ಎಸ್‍‍ಯುವಿಗಳ ಜನಪ್ರಿಯತೆಗೆ ಕಾರಣವಾಗಿವೆ.

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಸೆಡಾನ್ ಸೆಗ್‍‍ಮೆಂಟ್ ಸಹ ಭಾರತದಲ್ಲಿ ಜನಪ್ರಿಯವಾಗಿರುವ ಸೆಗ್‍‍ಮೆಂಟ್‍‍ಗಳಲ್ಲಿ ಒಂದಾಗಿದೆ. ಎಸ್‍‍ಯುವಿಗಳ ನಂತರ ಸೆಡಾನ್ ಕಾರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಎಸ್‍‍ಯುವಿಗಳಂತೆ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್‍‍ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಟಾಟಾ ಟಿಗೋರ್

ಟಾಟಾ ಟಿಗೋರ್ ಭಾರತದಲ್ಲಿ ಮಾರಾಟವಾಗುತ್ತಿರುವ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್‍‍ಗಳಲ್ಲಿ ಒಂದಾಗಿದೆ. ಸಬ್ 4 ಮೀಟರ್ ಸೆಡಾನ್ ಟಿಗೋರ್ ಕಾರಿನಲ್ಲಿ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗುತ್ತದೆ.

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಟಿಯಾಗೋ ಹ್ಯಾಚ್‍‍ಬ್ಯಾಕ್ ಕಾರು ತಯಾರಾಗಿರುವ ಪ್ಲಾಟ್‍‍ಫಾರಂನಲ್ಲಿಯೇ ತಯಾರಾಗಿರುವ ಟಿಗೋರ್ ಪರ್ಫಾಮೆನ್ಸ್ ಆಧಾರಿತ ಜೆ‍‍ಟಿ‍ಪಿ ಮಾದರಿಯಾಗಿದೆ. ಟಿಗೋರ್, ಟಿಯಾಗೋ ಹ್ಯಾಚ್‍‍ಬ್ಯಾಕ್‍‍ನಲ್ಲಿರುವ ಎಂಜಿನ್ ಅನ್ನು ಹೊಂದಿದೆ. 1.2 ಲೀಟರಿನ ಈ ಪೆಟ್ರೋಲ್ ಎಂಜಿನ್ 84 ಬಿ‍ಹೆಚ್‍‍ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಟಾಟಾ ಜೆಸ್ಟ್

ಟಾಟಾ ಜೆಸ್ಟ್ ಕಾರ್ ಅನ್ನು 2014ರಲ್ಲಿ ಕಾಂಪ್ಯಾಕ್ಟ್ ಸೆಡಾನ್ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಕಾರು ಟಿಗೋರ್ ಕಾರಿಗಿಂತ ಹೆಚ್ಚು ಅಂದರೆ 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಜೆಸ್ಟ್ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಮೂಲ ಮಾದರಿಯ ಎಕ್ಸ್ ಇ ಪೆಟ್ರೋಲ್ ಆವೃತ್ತಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.5.82 ಲಕ್ಷಗಳಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಫೋರ್ಡ್ ಫಿಗೊ ಆಸ್ಪೈರ್

ಅಮೇರಿಕಾ ಮೂಲದ ಫೋರ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುವ ಫಿಗೊ ಆಸ್ಪೈರ್ ಕಾರು 174 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಫೋರ್ಡ್ ಕಂಪನಿಯ ಈ ಕಾಂಪ್ಯಾಕ್ಟ್ ಸೆಡಾನ್ ಕಾರ್ ಅನ್ನು 1.2 ಲೀಟರಿನ ಪೆಟ್ರೋಲ್, 1.5 ಲೀಟರಿನ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಫೋರ್ಡ್ ಕಂಪನಿಯು ಕಳೆದ ವರ್ಷ ಆಸ್ಪೈರ್ ಕಾರಿನ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಈ ಹೊಸ ಕಾರಿನಲ್ಲಿದ್ದ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್‍‍ಗಳನ್ನು ಹೊಸ ಫೀಚರ್‍‍ಗಳೊಂದಿಗೆ ಅಪ್‍‍ಡೇಟ್‍‍ಗೊಳಿಸಲಾಗಿದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಮಾರುತಿ ಸುಜುಕಿ ಸಿಯಾಜ್

ಮಾರುತಿ ಸುಜುಕಿ ಕಂಪನಿಯ ಸಿ - ಸೆಗ್‍‍ಮೆಂಟಿನಲ್ಲಿದ್ದ ಎಸ್‍ಎಕ್ಸ್ 4 ವಿಫಲವಾದ ನಂತರ, ಮಾರುತಿ ಸುಜುಕಿ ಕಂಪನಿಯು ಸಿಯಾಜ್ ಕಾರಿನ ಬಿಡುಗಡೆಯ ಮೂಲಕ ಮತ್ತೆ ಈ ಸೆಗ್‍‍ಮೆಂಟಿಗೆ ಕಾಲಿಟ್ಟಿತು.

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಸಿಯಾಜ್ ಕಾರು ತನ್ನ ಆಕರ್ಷಕ ವಿನ್ಯಾಸ, ಫೀಚರ್ಸ್ ಹಾಗೂ ಆರಾಮದಾಯಕ ಕ್ಯಾಬಿನ್‍‍ನಿಂದಾಗಿ ಹೆಚ್ಚು ಜನಪ್ರಿಯವಾಗಿದೆ. ಇವುಗಳ ಜೊತೆಗೆ ಸಿಯಾಜ್ ಕಾರಿನಲ್ಲಿರುವ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಸಹ ಸಿಯಾಜ್ ಕಾರು ಜನಪ್ರಿಯವಾಗಲು ಕಾರಣವಾಗಿದೆ.

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಟೊಯೊಟಾ ಕರೊಲಾ ಆಲ್ಟೀಸ್

ಟೊಯೊಟಾ ಕರೊಲಾ ಸೆಡಾನ್ ಕಾರುಗಳ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳ ಪೈಕಿ ಒಂದಾಗಿದೆ. ಕರೊಲಾ ಆಲ್ಟೀಸ್ ಕಾರು ಸ್ಕೋಡಾ ಆಕ್ಟೀವಿಯಾ, ಹ್ಯುಂಡೈ ಎಲಾಂಟ್ರಾ ಹಾಗೂ ಹೋಂಡಾ ಸಿವಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಎಸ್‍‍ಯುವಿಗಳಂತೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು

ಆಕ್ಟೀವಿಯಾ, ಎಲಾಂಟ್ರಾ, ಸಿವಿಕ್ ಕಾರುಗಳಲ್ಲಿ ಹೆಚ್ಚು ಫೀಚರ್ಸ್‍‍ಗಳಿದ್ದರೂ, ಕರೊಲಾ 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. 2,700 ಎಂಎಂ ಉದ್ದದ ವ್ಹೀಲ್ ಬೇಸ್ ಹಾಗೂ 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಕರೊಲಾ ಕಾರು ಕಠಿಣ ರಸ್ತೆಗಳಲ್ಲಿ ಕಾರು ಹಾಳಾಗದಂತೆ ತಡೆಯುತ್ತದೆ.

Most Read Articles

Kannada
English summary
Five sedans with suv like ground clearance - Read in Kannada
Story first published: Wednesday, November 13, 2019, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X